ಒಂದು ಕಾಲದಲ್ಲಿ ಮಾಸ್ ಫಿಲಂ, ಲಾಂಗು ಮಚ್ಚಿಗೆ ಮಣೆ ಹಾಕ್ತಿದ್ದ ಸಿನಿಮಾಗೆ ಜೈಕಾರ ಹಾಕ್ತಿದ್ದಾಗ, ಎಮೋಷನ್ಸ್ ಇರುವ ಅದರಲ್ಲೂ ಕರಾವಳಿ ಭಾಗದ ಭಾಷೆಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿ ಅದರಲ್ಲೂ ವಿಭಿನ್ನವಾಗಿ ಕಥೆಯಿದೆ ಅಂತ ತೋರಿಸಿದ ಹೆಗ್ಗಳಿಕೆ ನಮ್ಮ ಶೆಟ್ಟಿ ಗ್ಯಾಂಗ್ ಗೆ ಸೇರಬೇಕು. ಶಿವಣ್ಣ, ರವಿಚಂದ್ರನ್, ಕಿಚ್ಚ ಸುದೀಪ್, ದರ್ಶನ್ ಇವರೆನ್ನೆಲ್ಲಾ ಇಂತದ್ದೇ ವರ್ಗದವರು ಐ ಮೀನ್ ಈ ಜಿಲ್ಲೆಯವರು ಅಂತ ಹೆಸರಿಸೋಕೆ ಆಗಲ್ಲ ಕಾರಣ ಅವರು ಎಲ್ಲಾ ಕಡೆಯೂ ಸಲ್ಲುವಂಥವರು. ಇತ್ತೀಚೆಗೆ ಇವರನ್ನೆಲ್ಲಾ ಬೀಟ್ ಮಾಡಿ ಮುಂದೆ ಹೆಜ್ಜೆ ಇಟ್ಟಿದ್ದು ಇದೇ RRR ಎಂದೇ ಪ್ರಸಿದ್ಧಿ ಪಡೆದ ಶೆಟ್ಟಿ ಗ್ಯಾಂಗ್. ಒಬ್ಬರಿಗಿಂತ ಒಬ್ಬೊರು ಮೇಲು ಎನ್ನುವ ಹಾಗೆ ಕಥೆ ಬರೆದು ಅದನ್ನ ಅಚ್ಚು ಕಟ್ಟಾಗಿ ಮಾರ್ಕೆಟಿಂಗ್ ಮಾಡಿ ಜನರಿಗೆ ತಲುಪಿಸ್ತಿದ್ದ ಆ ಗ್ಯಾಂಗ್ ಈಗ ಕಾಣೆಯಾಗಿದೆ. ಒಬ್ಬೊರಿಗೊಬ್ಬರ ಸಿನಿಮಾ ಬಂದಾಗ ತಮ್ಮ ಮನೆಯವರ ಸಿನಿಮಾ ಎನ್ನುವಂತೆ ಪೋಸ್ಟ್ ಮಾಡಿ, ಪ್ರೀಮಿಯರ್ ಶೋ ಅಥವಾ ಫಸ್ಟ್ ಡೇ ಫಸ್ಟ್ ಶೋ ನೋಡಿ ಅವರದ್ದೇ ರೀತಿಯಲ್ಲಿ ಬೆನ್ನು ತಟ್ಟುತ್ತಿದ್ದರು. ಆದ್ರೆ ಅದ್ಯಾಕೊ ಈ ಗ್ಯಾಂಗ್ ನಲ್ಲಿ ವೈಮನಸ್ಸುಂಟಾಯಿತಾ? ಅನಿಸ್ತಿದ್ದೆ.

ರಾಜ್ ಬಿ ಶೆಟ್ಟಿ ಕಾಂತಾರದಿಂದ ದೂರ ಉಳಿದಿದ್ದು, ರಕ್ಷಿತ್ ಶೆಟ್ಟಿ ನಾಪತ್ತೆಯಾಗಿರುವುದು, ರಿಷಭ್ ಶೆಟ್ಟಿ ಏಕಾಂಗಿಯಾಗಿ (ಗ್ಯಾಂಗ್ ಬಿಟ್ಟು) ಸಿನಿಮಾ ಕಡೆ ಸೀರಿಯಸ್ ಆಗಿ ಮುಖ ಮಾಡಿರುವುದು ಇದಕ್ಕೆ ಸಾಕ್ಷಿ. ವಿಷಯ ಏನಂದ್ರೆ ಈ ಹಿಂದೆ ಥಿಯೇಟರ್ ಗೆ ಜನ ಬರ್ತಿಲ್ಲ ಸಿನಿಮಾ ಸರಿ ಇಲ್ಲ, ಕಥೆ ಚೆನ್ನಾಗಿಲ್ಲ, ಕನ್ನಡ ಆಡಿಯನ್ಸ್ ಗೆ ಬೋರ್ ಹೊಡಿತಿದೆ, ಈ ರೀತಿ ಅನೇಕ ಮಾತುಗಳು ಬಂದಾಗ ವಿಶ್ವ ಮಟ್ಟದಲ್ಲೇ ಕನ್ನಡ ಚಿತ್ರರಂಗವನ್ನ ಎತ್ಕೊಂಡ್ ಹೋದ ಈ ಶೆಟ್ಟಿ ಗ್ಯಾಂಗ್ ಆದಷ್ಟು ಬೇಗ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ನನ್ನ ವೈಯುಕ್ತಿಕವಾದದ್ದು. ಏನೂ ಆಗದೆ ಅವರವರ ಕೆಲಸದಲ್ಲಿ ಬ್ಯುಸಿ ಇದ್ದಾರೆ ಅಂದ್ರೆ ಓಕೆ ಬಟ್ ವೈಮನಸ್ಸಿದ್ರೆ…..!!!

















































































































