ಬೆಂಗಳೂರಿನಲ್ಲಿ 2003ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ‘ಚಾರ್ಜ್ ಶೀಟ್ 03/08’. ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಜೀವನಾನುಭವ ಹಾಗೂ ಅವರು ಬರೆದ ಕಾದಂಬರಿಯೇ ಈ ಸಿನಿಮಾದ ಕಥಾಹಂದರ. ಸತ್ಯದ ಹುಡುಕಾಟ, ವ್ಯವಸ್ಥೆಯೊಳಗಿನ ಸಂಘರ್ಷ ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟವನ್ನು ಈ ಸಿನಿಮಾ ಚಿತ್ರಿಸುವುದರ ಜೊತೆಗೆ ಉತ್ತಮ ಸಂದೇಶವನ್ನೂ ನೀಡಲಿದೆ.
ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ನೈಜ ಕಥೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, 2000ದ ದಶಕದ ಆರಂಭದ ಬೆಂಗಳೂರಿನ ವಾತಾವರಣವನ್ನು ಇಲ್ಲಿ ನೈಜವಾಗಿ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಸುಂದರ್ ರಾಜ್, ಹರ್ಶ್ ಅರ್ಜುನ್, ಅಮರ್, ಸತೆಯಾ, ರಾಮ್, ಚೇತನ ಖೋಟ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾ. ಸುಧಾಕರ ಶೆಟ್ಟಿಯವರ ಮೊದಲ ಚಿತ್ರ ವೆಂಕಟ್ ಭಾರಧ್ವಜ್ ನಿರ್ದೇಶನದ ಹೇ ಪ್ರಭು, ಎರಡನೆ ಚಿತ್ರ ಚಾರ್ಜ್ ಶೀಟ್, ಮೂರನೇ ಚಿತ್ರ ರಕ್ಕಿ, ನಾಲ್ಕನೇ ಚಿತ್ರ ಡಾ. ಮೋಹನ್ ಎಂ.ಬಿ.ಬಿ.ಯಸ್. ಇದು ತುಳು ಮತ್ತು ಮರಾಠಿ ಚಿತ್ರವಾಗಿದ್ದು, ಡಾ. ಸುಧಾಕರ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಸಮರ್ಪಿತ ಮತ್ತು ಪ್ರಾಮಾಣಿಕ ವೈದ್ಯರ ಕಥೆಯನ್ನು ಆಧರಿಸಿದೆ.


















































































































