ಕನ್ನಡ ಸಂಘ ಬಹರೈನ್ ನ ಹಿರಿಯ ಸದಸ್ಯ ದಿವಂಗತ ದಿನಕರ್ ಶೆಟ್ಟಿ ಯು.ಎಂ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಯಿತು. ಅವರು ಕಳೆದ ನವೆಂಬರ್ 30 ರಂದು ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು. ಈ ಸಂದರ್ಭ ಕನ್ನಡ ಸಂಘ ಮತ್ತು ಬಂಟರ ಸಂಘ ಅವರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಳೆದ ಶನಿವಾರ ಡಿಸೆಂಬರ್ 6, 2025 ರಂದು ಕನ್ನಡ ಭವನ ಕ್ರೀಡಾ ಕೇಂದ್ರದಲ್ಲಿ ದಿವಂಗತ ದಿನಕರ್ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ಸಂಘದ ಸದಸ್ಯರು, ಆತ್ಮೀಯರು ಮತ್ತು ಸಮುದಾಯದ ಪ್ರಮುಖರು ಹಾಜರಾಗಿ ತಮ್ಮ ಶೋಕವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಂಟ್ಸ್ ಬಹರೈನ್ ಅಧ್ಯಕ್ಷ ಡಾ. ಮಿಥುನ್ ಭಂಡಾರಿ, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಅಮರನಾಥ್ ರೈ, ಪ್ರದೀಪ್ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ, ಸದಸ್ಯರಾದ ನಾಗೇಶ್ ಶೆಟ್ಟಿ, ಕಮಲಾಕ್ಷ ಅಮೀನ್, ಪ್ರದೀಪ್ ಆರ್. ಶೆಟ್ಟಿ ಮತ್ತು ಉಪಾಧ್ಯಕ್ಷ ನಿತಿನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಹಿರಿಯ ಹಾಗೂ ಕಿರಿಯ ಸದಸ್ಯರು ದಿವಂಗತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂಘದ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರೂ ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ರಾಮ ಪ್ರಸಾದ್ ಅಮ್ಮೆನಡ್ಕ ನಿರ್ವಹಿಸಿದರು.











































































































