ಮಂಗಳೂರು ವಿಶ್ವವಿದ್ಯಾಲಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್ 2025-26ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ್ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಸತತ 19ನೇ ಬಾರಿ ಹಾಗೂ ಮಹಿಳೆಯರ ತಂಡ ಹೆಚ್.ವಿ ಕಮಲೇಶ್ ರೋಲಿಂಗ್ ಟ್ರೋಫಿಯನ್ನು ಸತತ 16ನೇ ಬಾರಿ ಪಡೆದು ಅವಳಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋ-ಖೋ ತಂಡ 17-3 ಅಂಕಗಳ ಅಂತರದಿಂದ ಬ್ರಹ್ಮಾವರದ ಎಸ್.ಎಮ್.ಎಸ್ ಕಾಲೇಜಿನ ವಿರುದ್ಧ 14 ಅಂಕ ಹಾಗೂ ಇನ್ನಿಂಗ್ಸ್ ನೊಂದಿಗೆ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ತಂಡ 17-2 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿ.ಎಫ್.ಜಿ.ಸಿ ಕಾಲೇಜು ವಿರುದ್ಧ 15 ಅಂಕ ಹಾಗೂ ಇನ್ನಿಂಗ್ಸ್ ನೊಂದಿಗೆ ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ “ಸಮಗ್ರ ಪ್ರಶಸ್ತಿ”ಗೆ ಭಾಜನವಾಯಿತು.

ವೈಯಕ್ತಿಕ ಪುರುಷರ ಚಾಂಪಿಯನ್ಶಿಪ್ ನಲ್ಲಿ “ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ”ಯನ್ನು ಆಳ್ವಾಸ್ ಕಾಲೇಜಿನ ರಮೇಶ್ ಹಾಗೂ ವೈಯಕ್ತಿಕ ಮಹಿಳೆಯರ ಚಾಂಪಿಯನ್ಶಿಪ್ ನಲ್ಲಿ “ಬೆಸ್ಟ್ ಚೇಸರ್” ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಶ್ರೆಯಾಂಕಾ ಪಡೆದುಕೊಂಡರು. ವಿಜೇತರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.














































































































