ಮೊಗ್ಗುಂದು ಚಿಗುರಿತ್ತು ಕಾನನದೊಳು
ಅರಳುತ್ತಾ ಅರಳುತ್ತಾ ತನ್ನೊಳಗೆ ಖುಷಿಪಟ್ಟಿತ್ತು ||
ತನ್ನ ಅಂದ ಚಂದಕ್ಕೆ ತನ್ನ ಮಾಧುರ್ಯಕ್ಕೆ
ತಾನೊಂದು ದಿನ ದೇವರಮುಡಿ ಸೇರುವೆಂಬ ನಂಬಿಕೆ ಅದಕ್ಕಿತ್ತು ||
ಎಲ್ಲರಂತೆ ಅರಳುತ್ತಾ ಖುಷಿಪಟ್ಟಿತ್ತು ನಾನು ಕೂಡ ಅರಳಿದೆ ಇನ್ನೀಗ ದೇವರ ಮುಡಿ ಸೇರಲಿರುವೆನೆಂದು ನಲಿದಾಡಿತ್ತು ಸಂಭ್ರಮಿಸಿತ್ತು ||

ಮಾಲಿಯಿಂದು ಬಂದ ಹೂವ ಕೊಯ್ದ ಎಲ್ಲಾ ಹೂಗಳೊಡನೆ ಅದನ್ನು ಒಯ್ದ ಪೇಟೆಯೊಳಗಣ ಮಾರಾಟಕ್ಕಿಟ್ಟ ||
ಯಾರೋ ಬಂದರೂ ಬಿಡಿ ಹೂಗಳಲ್ಲಿ ಅದನ್ನೋಯಿದರು ||
ದೇವರ ಮುಡಿ ಸೇರುವೆನೆಂದು ನಂಬಿದ್ದ ಆ ಪುಟ್ಟ ಹೂವು ಮರಣದ ಮನೆ ಸೇರಿತು ಹೆಣದ ಕೊರಳೇರಿತು ಮಸಣದ ಕಡೆ ಹೊರಟಿತು ಬೆಂಕಿಯ ಅಟ್ಟಕೇರಿತು ||
ತಾನೂ ಹೆಣವಾಯಿತು ತನ್ನ ಕನಸಿನೊಂದಿಗೆ ಸುಟ್ಟು ಕರಕಲಾಯಿತು ||
ತಾನೊಂದು ನೆನೆದರೆ ದೈವ ಇನ್ನೇನೋ ಬರೆದಿತ್ತು ಕನಸು ಕನಸಾಗಿಯೇ ಉಳಿಯಿತು.
ಲೇಖಕಿ : ಸಮೀಪ ಶೆಟ್ಟಿ
















































































































