Author: admin

ಮಂಜುನಾಥ ಸಭಾಭವನದಲ್ಲಿ ಬಂಟರ ಸಂಘ (ರಿ.) ಹಾವಂಜೆ ಇದರ ವತಿಯಿಂದ ಆಟಿದ ತಮ್ಮನ ಕಾರ್ಯಕ್ರಮವು ಜಯಕರ ಶೆಟ್ಟಿ ಇಂದ್ರಾಳಿ ಇವರ ಕೈಯಿಂದ ಉದ್ಘಾಟನೆಗೊಂಡು, ಶ್ರೀಮತಿ ವಿಜೇತ ಯಸ್ ಶೆಟ್ಟಿ ಇವರು ಆಟಿದ ದಿನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಬ್ರಹ್ಮಾವರ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಾವಂಜೆ ಬಂಟರ ಸಂಘದ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ ಉಜಂಗಾರು, ಕಾರ್ಯದರ್ಶಿ ವಿಶಾಕ್ ಜಿ ಶೆಟ್ಟಿ, ಕೋಶಾಧಿಕಾರಿ ರಕ್ಷಿತ್ ಶೆಟ್ಟಿ, ಗೌರವಾಧ್ಯಕ್ಷರಾದ ಅನಿಲ್ ಬಿ ಶೆಟ್ಟಿ, ಭಾಸ್ಕರ್ ಶೆಟ್ಟಿ, ಉಪಾಧ್ಯಕ್ಷರಾದ ಶಲ್ಮಾ ಎನ್ ಹೆಗ್ಡೆ ಉಪಸ್ಥಿತರಿದ್ದರು. ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ವಿಕಾಸ್ ವಿ ಶೆಟ್ಟಿ ವಂದಿಸಿದರು.

Read More

ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ರೀತಿಯ ‘ಪುಳಿ ಮುಂಚಿ’ ತುಳು ಸಿನಿಮಾ ಸೆಟ್ಟೇರಿದ್ದು, ಇದರ ಪೋಸ್ಟರ್, ಟ್ರೇಲರ್ ಬಿಡುಗಡೆ ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾದಲ್ಲಿ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಅವರು ಪುಳಿಮುಂಚಿ ಟೀಸರ್, ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ದ.ಕ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸಿನಿಮಾದ ನಿರ್ಮಾಪಕ ಹರಿಪ್ರಸಾದ್ ರೈ, ಸಹ ನಿರ್ಮಾಪಕ ದೇವಿಪ್ರಸಾದ್ ಜಿ.ಎಸ್., ಪೂರ್ಣಿಮಾ, ಮೇಘನಾಥ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಅ.27ರಂದು ತೆರೆಗೆ: ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ತ್ರಿಶೂಲ್ ಶೆಟ್ಟಿ, ನಾನು ಕನ್ನಡ, ತುಳು ಭಾಷೆಗಳಲ್ಲಿ ಹಲವು ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಪುಳಿಮುಂಚಿ ತುಳುವಿನಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಹಾಸ್ಯದ ಜತೆಗೆ ಹೆಸರಿಗೆ ತಕ್ಕಂತೆ ಪ್ರೇಕ್ಷಕರಿಗೆ ಹೊಸತನ, ವೈವಿಧ್ಯತೆಯನ್ನು ನೀಡಲಿದೆ ಎಂದರು.…

Read More

ಕರಿಮಣಿ ಕರಿಮಣಿ ಕಪ್ಪು ಮಣಿ ದಾಂಪತ್ಯ ಜೀವನದ ದಿವ್ಯಮಣಿ ಹಿರಿಯರು ನಡೆಸಿ ಬಂದ ಸತ್ಯಮಣಿ ಸ್ತ್ರೀಯರ ಕೊರಳಿನ ಭಾಗ್ಯಮಣಿ!! ಮಾಂಗಲ್ಯವೇ ಸ್ತ್ರೀಯರ ಗರಿಮೆ ಪತಿಯೇ ಅವಳ ಹಿರಿಮೆ ಸ್ತ್ರೀಯೇ ಮನೆಮನೆಯ ಹೆಮ್ಮೆ ಅವಳೇ ಸುಖದುಃಖದ ಸಂಗಮೆ!! ಮಂಗಳಸೂತ್ರ ಆದರ್ಶದ ಸಾರ ಅದಾಗಿರಬಾರದು ಬರೇ ಬಂಗಾರ ಸ್ತ್ರೀಯರ ಮನಸಿನ ಸುವಿಚಾರ ಇದರಿಂದಾಗುವುದು ಬಹಳ ಉಪಕಾರ!! ಹಿಂದಿನದು ಇಂದಿನದು ನಿಜವಲ್ಲ ಡಿಸೈನ್ ಫ್ಯಾಶನ್ ಗಳು ಸ್ಥಿರವಲ್ಲ ಜೀವನವು ಕೇವಲ ಭೋಗವಲ್ಲ ಸರಳತೆಗೆ ಸರಿಸಾಟಿ ಇನ್ನೊಂದಿಲ್ಲ!! -ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ

Read More

ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲದ ನೂತನ ಧ್ವಜಸ್ತಂಭ ಶೋಭಾಯಾತ್ರೆಗೆ ಚಾಲನೆ ಕಾರ್ಯಕ್ರಮ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ನಡೆಯಿತು. ಚಾಲನೆ ನೀಡಿದ ಶ್ರೀ ಕಾಣಿಯೂರು ಶ್ರೀಪಾದರು ಮಾತನಾಡಿ, 1.41 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ದೇಗುಲದ ಕಾರ್ಯ ಶೀಘ್ರವಾಗಿ ವ್ಯವಸ್ಥಿತವಾಗಿ ನೆರವೇರಲಿ ಎಂದು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಜ್ವಲ್‌ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಆರ್ಕಿಟೆಕ್ಟ್ ಶ್ರೀನಾಗೇಶ್‌ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‌, ಕಾಪು ಹೊಸ ಮಾರಿಗುಡಿ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಮಟ್ಟು ಶ್ರೀ ವಿಷ್ಣುಮೂರ್ತಿ ದೇಗುಲದ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್‌, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಅಧ್ಯಕ್ಷ ಸಾಧು ಸಾಲ್ಯಾನ್‌, ಕಾರ್ತಿಕ್‌ ಎಸ್ಟೇಟ್‌ನ ಹರಿಯಪ್ಪ ಕೋಟ್ಯಾನ್‌, ಸ್ವರ್ಣೋದ್ಯಮಿ ಮುರಹರಿ ಕೆ. ಆಚಾರ್ಯ, ಉದ್ಯಮಿ   ಗಳಾದ ರಂಜನ್‌ ಕಲ್ಕೂರ್‌, ತೋನ್ಸೆ ಮನೋಹರ ಶೆಟ್ಟಿ, ನಗರಸಭೆ…

Read More

ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರು ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿ ಆಗಮಿಸಿರುವುದು ಸಂತಸದ ವಿಚಾರವಾಗಿದೆ. ಡಾ. ಪ್ರೀತಿಕಾ ಶೆಟ್ಟಿಯಂತಹ ಸಂಪನ್ಮೂಲ ಮಹಿಳೆಯರು ನಮ್ಮ ಸಮಾಜದಲ್ಲಿ ಮಾದರಿಯಾಗಿ ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಾಕ್ಟರ್, ಇಂಜಿನಿಯರ್ ಗಳಾಗಿ ಜೀವನದಲ್ಲಿ ಹೇಗೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಬಹುದೆಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ, ಮಕ್ಕಳು ಇವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದಾಗಿದೆ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೆಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ಮಾ ೧೯ ರಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಿನಿ ಸಭಾಗೃಹದಲ್ಲಿ ನಡೆದ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿಯವರಿಂದ ಮಹಿಳಾ ಆರೋಗ್ಯದ ಬಗ್ಗೆ…

Read More

ಕೊರ್ಗಿ ವಿಠಲ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದಲೂ ಸಹಾಯ, ಸಹಕಾರ ಹಾಗೂ ಸಮ್ಮಿಲನದೊಂದಿಗೆ ವಿಶಿಷ್ಟ ಕಾರ್ಯ ವೈಖರಿಯ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿವುದು ನಿಜಕ್ಕೂ ಹೆಮ್ಮೆಯ ವಿಚಾರ. ನಮ್ಮ ದೇಹದ ಯಾವುದೇ ಭಾಗಕ್ಕೂ ಕೂಡಾ ನೋವಾದರೂ ಪಂಚೇಂದ್ರಿಯಗಳೊಂದಿಗೆ ಇಡೀ ದೇಹವೇ ಆ ಯಾವ ಭಾಗವನ್ನು ಕೇಂದ್ರೀಕರಿಸಿ ,ಶಮನಗೊಳಿಸುವ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವಂತೆ, ಅದೇ ರೀತಿಯಲ್ಲಿ ಸಮಾಜದ ನೋವು ನಲಿವುಗಳಿಗೆ ಟ್ರಸ್ಟ್ ಮೂಲಕ ಸದಾ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹೇಳಿದರು. ಅವರು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.)ಕುಂಭಾಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ವಿಶೇಷ ಚೇತನ ವಿದ್ಯಾರ್ಥಿಗಳ ಪರಿಕರ ವಿತರಣೆ, ಕ್ರೀಡೆ ಹಾಗೂ ಕಲಿಕೆಯಲ್ಲಿ ಸಾಧನೆಗೈದ ಸಾರ್ಥಕ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಸಮನ್ವಯ ಸಾಂಗತ್ಯ -2023…

Read More

ಭಾರತ್‌ ಫೌಂಡೇಶನ್‌ ವತಿಯಿಂದ ಐದನೇ ಆವೃತ್ತಿಯ ಮಂಗಳೂರು ಲಿಟ್‌ಫೆಸ್ಟ್‌ ನ ಎರಡನೇ ದಿನದ ಕಾರ್ಯಕ್ರಮಗಳು ರವಿವಾರ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಭವನದಲ್ಲಿ ನಡೆಯಿತು. ಬೆಳಗ್ಗಿನಿಂದ ಸಂಜೆಯ ವರಗೆ ವಿವಿಧ ಗೋಷ್ಠಿಗಳು ಆಯೋಜನೆಗೊಂಡು ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ರಜಾ ದಿನವಾದ್ದ ರಿಂದ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಂಡು ಬಂತು. ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ. ಹರಟೆ ಕಟ್ಟೆಯಲ್ಲಿ ತಮ್ಮ ದಕ್ಕಲ ಜಾಂಬವ ಪುರಾಣದ ಕುರಿತು ಮಾತನಾಡಿದರು. ದಕ್ಕಲ ಮುನಿಸ್ವಾಮಿ ಅವರ ಒಡನಾಡಿಯಾಗಿರುವ ಘನಶ್ಯಾಮ್‌ ಅವರು ವಿವರಣೆ ನೀಡಿ, ಊರಿಂದ ಊರಿಗೆ ಹೋಗಿ ದಕ್ಕಲ ಜಾಂಬವ ಪುರಾಣವನ್ನು ಜನರಿಗೆ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Read More

ಪುಣೆ : ಮನುಷ್ಯ ತನ್ನ ದಿನ ನಿತ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವ ಅರೋಗ್ಯವನ್ನು ಬಯಸುತ್ತಾನೆ ,ಆದರೆ ಈಗಿನ ದೈಹಿಕ ,ಮಾನಸಿಕ ,ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರು ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ .ಇದರಿಂದ ಯಾವುದೇ ನಿಯಂತ್ರಣ ಹೊಂದಿರದ ಚಲನೆ ಮತ್ತು ಪ್ರಕ್ರಿಯೆಯಿಂದ ಮಾನಸಿಕ ಆರೋಗ್ಯಕ್ಕೆ ತೊಂದರೆ ಯಾಗುತ್ತದೆ .ಇಂತಹ ಸಂದರ್ಭದಲ್ಲಿ ಮೊದಲಾಗಿ ನಾವು ಡಾಕ್ಟರ್ಸ್ ನವರ ಸಲಹೆಯಂತೆ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಜೀವನ ಸುಖಮಯವಾಗಬಹುದು,ಮತ್ತು ದೈಹಿಕ,ಮಾನಸಿಕ ,ಸಾಮಾಜಿಕ ಸುಸ್ಥಿತಿಯಿಂದ ಅರೋಗ್ಯ ಪೂರ್ಣ ಜೀವನವನ್ನು ಪಡೆಯಲು ಸಾದ್ಯ . ಆರೋಗ್ಯದ ಬಗ್ಗೆ ಕಾಳಜಿ ಮತ್ತು ತಪಾಸಣೆ ಮಾಡಿಸುವ ಉದ್ದೇಶದೊಂದಿಗೆ ನಮ್ಮ ಅಸೋಸಿಯೇಷನ್ ವತಿಯಿಂದ ಸಮಾಜ ಭಾಂದವರಿಗೆ ಈ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ .ಇದಕ್ಕೆ ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು , ಗುರುನಾನಕ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ .ಡಾ ಸುಧಾಕರ್ ಶೆಟ್ಟಿ ಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು…

Read More

ಕರ್ನಾಟಕ ಸಂಪದ್ಭರಿತ ಕಾನನ ಹಾಗೂ ಜೀವ ಜಂತುಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅದರಲ್ಲೂ ಹಾವುಗಳಂತೂ ರೈತ ಸ್ನೇಹಿ ಜೀವಿಗಳು. ಪ್ರಕೃತಿ ‌ನಮಗೆ ಕೊಟ್ಟ ಉಡುಗೊರೆ. ದುರಾದೃಷ್ಟವೆಂದರೆ ಹಲವು ವರ್ಷಗಳಿಂದ ಹಾವುಗಳ ಪ್ರಬೇಧಗಳು ನಶಿಸಿದೆ. 2024 ರ ಹೊತ್ತಿಗೆ ಮತ್ತಷ್ಟು ಹದಗೆಡುವ ಸಾಧ್ಯತೆಯ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ನಿಸರ್ಗ ಸ್ನೇಹಿಯಾಗಿದ್ದ ಮಾನವ ಬದುಕು ಬದಲಾಗಿ ಪರಿಸರ ಸಮತೋಲನದ‌ ಸ್ಥಿತಿಯ ಲಯ ತಪ್ಪಲು ಕಾರಣವಾಗುತ್ತಿದೆ. ಮನುಷ್ಯನ ಸ್ವಾರ್ಥ, ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣದ ಅಬ್ಬರ, ಕಾಡು ನಾಶ, ಶರವೇಗದಲ್ಲಿ ನಡೆಯುತ್ತಿರುವ ನಗರೀಕರಣ, ಹಸಿರನ್ನು ನುಂಗಿ ಜೀವ ವೈವಿಧ್ಯತೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಾವುಗಳ ಸೂಕ್ತ ರಕ್ಷಣೆ ಅನಿವಾರ್ಯ ಹಾಗೂ ಅವುಗಳ ಸಂತತಿ ಉಳಿಸಿ ನಿಸರ್ಗ ಸ್ನೇಹಿ ಬದುಕನ್ನು ರೂಪಿಸಿಕೊಳ್ಳಲು ನಾವಿಂದು ದಾಪುಗಾಲು ಇಡ ಬೇಕಾಗಿದೆ. ಈಗಾಗಲೇ ಕಾಲ ಮೀರಿದೆ. ಮತ್ತಷ್ಟು ವಿಳಂಬವಾದರೆ‌ ಪ್ರಕೃತಿ ಮುನಿದು ಸೇಡು ತೀರಿಸಿಕೊಳ್ಳಲು ಅಣಿಯಾಗ‌ಬಹುದು.…

Read More