Author: admin
ಶ್ರೀ ಕ್ಷೇತ್ರ ಮುದ್ದುಮನೆಯಲ್ಲಿ ಡಿಸೆಂಬರ್ 2 ರಂದು ಶನಿವಾರ ಬೈಲುಮನೆ ಕುಟುಂಬಿಕರು ಅನಾದಿ ಕಾಲದಿಂದಲೂ ಪ್ರತಿ ವರ್ಷ ನಡೆಸಿಕೊಂಡು ಬರುವ ಸಾಂಪ್ರದಾಯಿಕ, ಧಾರ್ಮಿಕ ಕಂಬಳ ಮಹೋತ್ಸವ ನಡೆಯಲಿದೆ. ಕಂಬಳಕ್ಕೆ ಡಿಸೆಂಬರ್ 30 ರಂದು ಉಕ್ಕಿ ಹೂಡುವ ಕ್ರಮದೊಂದಿಗೆ ಗದ್ದೆಯನ್ನು ಹದಗೊಳಿಸಿ ಕಂಬಳಕ್ಕೆ ನಾಂದಿ ಹಾಡಲಿದ್ದಾರೆ. ಭಕ್ತಿ ಹಾಗೂ ಸಮೃದ್ಧಿಯ ಪ್ರತೀಕವಾದ ಕಂಬಳಗದ್ದೆಯ ಅಂಚು ಸೇಡಿ, ಜಾಜಿ ಹಾಕಿ ಶೃಂಗರಿಸಿ ಕಂಬಳಕ್ಕೆ ಗದ್ದೆ ಅಣಿಗೊಳಿಸಲಾಗಿದೆ. ಮುದ್ದುಸ್ವಾಮಿ ಕಂಬಳ ನಡೆಸುವ ಬೈಲುಮನೆಯವರು ಭಯ, ಭಕ್ತಿಯಿಂದ ಈ ಆಚರಣೆಯಲ್ಲಿ ತೊಡಗಿಕೊಂಡಿದ್ದು ಈ ವರ್ಷ ಡಿಸೆಂಬರ್ 2 ರಂದು ನಡೆಯುವ ಕಂಬಳ ಅಕ್ಕಯ್ಯ ಆನಂದ ಶೆಟ್ಟಿಯವರ ಪಾಲಿನ ಸೇವೆಯಾಗಿದ್ದು ಆನಂದ ಶೆಟ್ಟಿ, ಭಾಗ್ಯಪ್ರಸಾದ್ ಶೆಟ್ಟಿ, ಲತಾ ಸಂತೋಷ್ ಶೆಟ್ಟಿ, ಮಂಜುಳ ರೈ ಅವರು ವ್ಯವಸ್ಥಾಪಕರಾಗಿ ಕುಟುಂಬಿಕರ ಮಾರ್ಗದರ್ಶನದಲ್ಲಿ ಗ್ರಾಮಸ್ಥರ ಸಹಕಾರದಿಂದ ಕಂಬಳ ನೆರವೇರಿಸಲಿದ್ದಾರೆ. ಡಿಸೆಂಬರ್ 2 ರಂದು ಕಂಬಳದ ದಿನ ಮುರ್ಹೂತದ ಕೋಣಗಳನ್ನು ಬೆಳಿಗ್ಗೆ 10.30 ರಿಂದ 12 ಗಂಟೆಯ ಒಳಗೆ ಕಂಬಳ ಗದ್ದೆಗೆ ಕೊಂಡೊಯ್ಯುವ ಕ್ರಮ…
ಬಂಟೆರೆಂಕುಲು…ಬಂಟೆರ್.. ಉಡಲ್ ಡ್ ಪರಪುಂಡ್ ಕ್ಷತ್ರಿಯ ನೆತ್ತೆರ್… ಗುತ್ತು, ಗರಡಿ, ಬಾವ, ಬೂಡ್, ಬರ್ಕೆದ ಗುರ್ಕ್ರಾರ್ಲೆಂಕುಲ್.. ಬಗ್ಗ್ ದ್ ಜ ಏರೆಗ್ಲಾ.. ಬಗ್ಗಯ ದುಂಬಗೊಲಾ ತಂಕೊಗ್ ನನೊಂಜಿ ಪುದರ್ಬಂಟೆರೆಂಕುಲು… ಬಂಟೆರ್.. ಪಿರಾಕ್ ದ ಕಾಲೋಡಿಂಚಿ ಗತ್ತ್ ಡ್ ಮೆರೆಯಿನವು ನಮ್ಮ ಬಂಟ ಸಮುದಾಯ. ಸಾಮಾಜೊಡ್ ನಾಲ್ ಜನತ್ತ ಎದುರ್ ದೆರ್ತ್ ತೋಜುನಾಯೆ ಬಂಟೆ. ಪೊಕ್ಕಡೆಗ್ ನಮನ್ ಬಂಟೆರ್ ಪಂದ್ ಪನ್ಪುಜೆರ್. ನಮನ ಆಚಾರ ವಿಚಾರೊಲೆನ್ ತೂನಗನೇ ಗೊತ್ತಾವು ನಮ್ಮ ಛಾತಿ ದಾದ ಪಂಡ್ದ್. ಬಂಟೆರೆನ್ ಕ್ಷತ್ರಿಯೆ ಪಂದ್ ಪನ್ಪೆರ್. ಬಂಟಡ ಕ್ಷಾತ್ರ ತೇಜ ಮಾತ್ರ ಅತ್ತ್ ಗುಣಲಾ ಉಂಡು. ಒರಿ ಕ್ಷತ್ರಿಯೆ ಏಪೊಗುಲಾ ಏರೆಗ್ಲಾ ಪೋಡ್ಯುಜೆ ಅಂಚನೆ ತನ್ನ ಕೈತಲ್ ಸಹಾಯ ನಟ್ಟೊಂದು ಬತ್ತಿನಕ್ಲೆನ್ ಬರಿಕೈಟ್ ಕಡಪುಡುಜೆ. ಗುರು ಹಿರಿಯೆರೆಗ್, ದೈವ ದೇವೆರೆಗ್ ತರೆ ತಗ್ಗಾದ್ ನಡಪುನಾಯೆನೆ ಕ್ಷತ್ರಿಯೆ. ಈ ಗುಣಕುಲ್ ಬಂಟಡ ಇತ್ತಿನವೆಡಾತ್ರನೆ ಆಯನ್ ಕ್ಷತ್ರಿಯೆ ಪನ್ಪಿನಿ. ಗುತ್ತು-ಬರಿಕೆ, ಬಾವ-ಬೂಡುಲೆಡ್ ಗುರ್ಕಾರ್ಮೆ ಮಲ್ತೋಂದು ಸಮಾಜೋದ ಮಾತ ಸಮುದಾಯೊಲೆನ್ ಸಮಾನವಾದ್ ತೂದ್…
ಥಾಣೆ ಜಿಲ್ಲೆಯ ಅವಳಿ ನಗರ ಮೀರಾ ಭಾಯಂದರ್ ಇಂದು ಮಹಾರಾಷ್ಟ್ರದ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಜೊತೆಗೆ ಇದು ಥಾಣೆ ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವೆಂಬ ಹೆಗ್ಗಳಿಕೆ ಪಡೆದಿದ್ದು ಮಹಾರಾಷ್ಟ್ರದಲ್ಲೊಂದು ಮಿನಿ ಮಂಗಳೂರು ಎಂಬ ಗೌರವ ಸ್ಥಾನ ಹೊಂದಿರುತ್ತದೆ. ಇಲ್ಲಿ ಎಲ್ಲಾ ಜಾತಿ ಜನಾಂಗದ ಜನರು ಅನ್ಯೋನ್ಯತೆಯಿಂದ ಬಾಳುತ್ತಿರುವುದೇ ಅಲ್ಲದೇ ತಮ್ಮ ಸಾಂಘಿಕ, ಸಾರ್ವಜನಿಕ ಸೇವಾ ಚಟುವಟಿಕೆಗಳಿಂದ ಅನ್ಯ ಜನಾಂಗದ ಮುಖ್ಯವಾಗಿ ಮರಾಠಿ ಗುಜರಾತಿಗಳ ಸ್ನೇಹ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದು ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ವೈವಿಧ್ಯಮಯ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದ್ದು ಪ್ರತಿದಿನ ಒಂದಿಲ್ಲೊಂದು ಕಾರ್ಯಕ್ರಮಗಳಿಂದ ಜನರು ಉತ್ಸಾಹದಿಂದ ಉತ್ಸವದ ವಾತಾವರಣದಲ್ಲೇ ಇರುತ್ತಾರೆ. ಇಲ್ಲಿ ಹೆಸರಾಂತ ಸಂಘಟಕರು, ರಾಜಕೀಯ ಮುಖಂಡರು, ಕಲಾವಿದರು, ಕವಿಗಳು, ಪತ್ರಕರ್ತರು, ಉದ್ಯಮಿಗಳು ಎಲ್ಲರೂ ವಾಸ್ತವ್ಯ ಹೊಂದಿ ನೆಲೆಯಾಗಿದ್ದು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ಇಲ್ಲಿನ ಅತ್ಯಂತ ಹಳೆಯ ಬಂಟರ ಸಂಘಟನೆ ಎಂದು ಗುರುತಿಸಲ್ಪಡುವ ಬಂಟ್ಸ್ ಫೋರಂ ಮೀರಾ ಭಾಯಂದರ್ ತನ್ನ ನಿರಂತರ ಚಟುವಟಿಕೆಗಳಿಂದ ಗುರುತಿಸಲ್ಪಡುತ್ತಿದೆ. ಉಮೇಶ್ ಶೆಟ್ಟಿ ಎಂಬವರು…
ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷ ಸ್ಥಾನವನ್ನು ನಿಷ್ಠೆಯಿಂದ ನಿರ್ವಹಿಸಿದ ಅಭಿಮಾನ ನನಗಿದೆ. ಸಂಘದ ಪದಾಧಿಕಾರಿಗಳ ಅಚಲ ಬೆಂಬಲ, ಸಮರ್ಪಣೆ ಮತ್ತು ಬದ್ಧತೆ ನಮ್ಮ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಅವಿರತವಾಗಿ ಶ್ರಮಿಸಿದ್ದೇವೆ. ನನ್ನವಧಿಯ ಮೂರು ವರ್ಷಗಳು ವೇಗವಾಗಿ ಕಳೆದವು ಮತ್ತು ನಾನು ಈ ಪ್ರತಿಷ್ಠಿತ ಸ್ಥಾನದ ಗಮನಾರ್ಹ ಪ್ರಯಾಣವನ್ನು ಪ್ರತಿಬಿಂಬಿಸುವಾಗ, ನಾವು ಒಟ್ಟಾಗಿ ಸಾಧಿಸಿದ ಎಲ್ಲವುಗಳ ಬಗ್ಗೆ ನಮ್ಮ ತಂಡದ ಸಾಧನೆ ಹೆಮ್ಮೆಯ ಭಾವದಿಂದ ತುಂಬಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು. ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಂಟರ ಸಂಘದ 95ನೇ ವಾರ್ಷಿಕ ಮಹಾಸಭೆಗೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿದರು. ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ…
One of Great Doctor ಜಗವೇ ಝಣ ಝಣ ಕಾಂಚಾಣದ ಬೆನ್ನತ್ತಿ ಹಣವೇ ಬದುಕೆನ್ನುವ ರೀತಿಯಲ್ಲಿ ದುಡ್ಡಿನ ಹಿಂದೋಡುವ ಕಾಲಮಾನದಲ್ಲಿ, ಸೇವೆಯ ಉದ್ದೇಶವೇ ಹೆಸರು ಮಾಡುವುದೆಂಬ ತಪ್ಪು ಕಲ್ಪನೆಯೇ ವಾಸ್ತವಕ್ಕೆ ಪೈಪೋಟಿ ನೀಡುವ ಈ ಹೊತ್ತಿನಲ್ಲಿ, ನಮ್ಮ ನಡುವೆ ಯಾವುದೇ ಹಣದ ಫಲಾಪೇಕ್ಷೆಯಿಲ್ಲದೆ “ವೈದ್ಯೋ ನಾರಾಯಣೋ ಹರಿಃ” ಎನ್ನುವ ಉಕ್ತಿಗೆ ಪುನರ್ಜೀವ ತುಂಬುವಂತೆ ನಿಜವಾದ ಅರ್ಥದಲ್ಲಿ ಜನ ಸೇವೆಗೈಯ್ಯುತ್ತಿರುವ ಆ ವ್ಯಕ್ತಿಯೇ ಡಾ.ಸನ್ಮಾನ್ ಶೆಟ್ಟಿ ಅವರು. ಮೂಲತಃ ನೈಲಾಡಿ ಗ್ರಾಮದವರಾದ ಇವರು 24.04.1974ರಲ್ಲಿ ಎನ್. ಸರಸ್ವತಿ ಶೆಟ್ಟಿ ನೈಲಾಡಿ ಹಾಗೂ ಹೆಚ್. ಶ್ರೀಧರ್ ಶೆಟ್ಟಿ ಹೊಸ್ಮಠ ಇವರ ಜ್ಯೇಷ್ಠ ಪುತ್ರರಾಗಿ ಜನಿಸಿದರು. ಎಮ್.ಬಿ.ಬಿ.ಎಸ್ ಪೂರ್ಣಗೊಳಿಸಿದ ನಂತರ ಇವರು 2000 ನೇ ಇಸವಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿಯಲ್ಲಿ ವೈದ್ಯಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸರಳ ವ್ಯಕ್ತಿತ್ವ, ಸಹಾನುಭೂತಿ ತುಂಬಿದ ಇವರ ಮಾತುಗಳು ಇವರ ಬಳಿ ಬರುವ ರೋಗಿಗಳ ಆತ್ಮಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ತಮ್ಮ ಪ್ರೀತಿಭರಿತ ಸೇವೆಯಿಂದ ಮುಲ್ಕಿಯಲ್ಲಿ ಮನೆಮಾತಾದ ಈ ಮಹನೀಯರ…
ಬಂಟ್ವಾಳ ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ವಲಯಗಳ ಬಂಟರ ಸಂಘಗಳ ಸಹಯೋಗದಿಂದ ತುಂಬೆ ವಲವೂರಿನಲ್ಲಿರುವ ಬಂಟವಾಳದ ಬಂಟರ ಭವನದ ವಠಾರದಲ್ಲಿ ನಡೆದ ಜಿಲ್ಲಾ ಮಟ್ಟದ ಬಂಟರ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾಜದ ಸಾಧಕರನ್ನು ಗೌರವಿಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಓಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಂಘದ ಅಧ್ಯಕ್ಷ ಸುರೇಶ್ ರೈ, ದ. ಕ. ಶಾಮಿಯಾನ ಮಾಲಕರ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಸಾಧಕರಾದ ಉಮೇಶ್ ಶೆಟ್ಟಿ ಸಾಗು ಹೊಸಮನೆ, ಆಸ್ನಾ ರೈ, ಚಂದ್ರಶೇಖರ ರೈ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು. ಬಂಟ್ವಾಳ ಬಂಟರ ಸಂಘದ ಮಾಜಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು, ಉದ್ಯಮಿ ಉಲ್ಲಾಸ್ ರೈ, ವಿವಿಧ ತಾಲೂಕು ಸಂಘಗಳ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ರತ್ನಾಕರ್…
ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಜರಗಿದ ತ್ರಿರಂಗ ಸಂಗಮ ಸಂಯೋಜನೆಯ ಪಟ್ಲ ಸತೀಶ್ ಶೆಟ್ಟಿ ಯವರ ಸಾರಥ್ಯದ ಪಾವಂಜೆ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಜರಗಿದ ಅದ್ಧೂರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಯಶಸ್ಸಿಗೆ ಸೇವೆಗೈದ ಎಲ್ಲಾ ಸೇವಕರಿಗೆ ಧನ್ಯವಾದಗೈಯುವ ಧನ್ಯೋಸ್ಮಿ ಕಾರ್ಯಕ್ರಮವು ಮೀರಾ ಭಯಂದರ್ ನ ಹೋಟೆಲ್ ಕ್ರೌನ್ ಸಭಾಂಗಣದಲ್ಲಿ ಜರಗಿತು. ಈ ಸಮಾರಂಭದಲ್ಲಿ ಯುವ ಬ್ರಿಗೇಡ್ ನ ಅಧ್ಯಕ್ಷ ಅರುಣ್ ಶೆಟ್ಟಿ ಪಣಿಯೂರು, ಉದ್ಯಮಿ, ಸಮಾಜಸೇವಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಉದ್ಯಮಿ ಭಾಸ್ಕರ್ ಶೆಟ್ಟಿ, ಉದ್ಯಮಿ ಉದಯ್ ಶೆಟ್ಟಿ ಪೆಲತ್ತೂರು, ಉದ್ಯಮಿ ಅರುಣೋದಯ ರೈ, ಸಮಾಜಸೇವಕ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಉದ್ಯಮಿ ಶಿವರಾಮ್ ಶೆಟ್ಟಿ ಡೆಲ್ಟ, ಉದ್ಯಮಿ ದಿನೇಶ್ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಗಂಧರ್ವ ಉಪಸ್ಥಿತರಿದ್ದರು.
ತುಳುನಾಡಿನ ಇಂದಿನ ಪ್ರಗತಿಗೆ ನಮ್ಮ ಹಿರಿಯರ ಶ್ರಮ ಕಾರಣ. ಆಟಿ ಆಚರಣೆ ಮೊದಲಾದ ಕಾರ್ಯಕ್ರಮಗಳ ಮೂಲಕ ಹಿರಿಯರ ಕಷ್ಟದ ದಿನಗಳನ್ನು ಸ್ಮರಿಸಿ ನಾವು ತಿದ್ದಿಕೊಳ್ಳೋಣ ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ಚೇಳಾರು ಖಂಡಿಗೆ ಶ್ರೀ ಉಳ್ಳಾಯ ದೈವಸ್ಥಾನದ ವಠಾರದಲ್ಲಿ ನಡೆದ ಆಟಿದ ಪೊರ್ಲು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಿಥುನ್ ರೈ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ದೇವಾನಂದ ಎಂ. ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸುರತ್ಕಲ್ ಮಾತಾ ಡೆವಲಪರ್ಸ್ ನ ಮಾಲಕ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆ ಮಣಿಪಾಲದ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ, ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನ ಆದಿತ್ಯ ಮುಕ್ಕಾಲ್ದಿ, ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಬಂಟರ…
ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ” ನಾಟಕದ 555 ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಜ.11ರಂದು ಸಂಜೆ 5ಕ್ಕೆ ನಗರದ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಮಾತನಾಡಿ, ತುಳು ರಂಗಭೂಮಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರದರ್ಶನ ಕಂಡು, ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿ ಚಾರಿತ್ರಿಕ ದಾಖಲೆ ನಿರ್ಮಿಸಿದ ನಾಟಕ ಶಿವದೂತೆ ಗುಳಿಗೆ ದೇಶ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ತುಳು ಹಾಗೂ ಕನ್ನಡ ಪ್ರದರ್ಶನ ನಡೆಯುತ್ತಿದ್ದು, ಸದ್ಯದಲ್ಲಿ ಮಲಯಾಳ ಹಾಗೂ ಇತರ ಭಾಷೆಯಲ್ಲಿಯೂ ನಾಟಕ ಪ್ರದರ್ಶನವಾಗಲಿದೆ ಎಂದರು. ಈ ಸಂಭ್ರಮ ಕಾರ್ಯಕ್ರಮದಲ್ಲಿ ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ. ಸಾಲಿಯಾನ್ ಅವರಿಗೆ 2024ನೇ ವರ್ಷದ ದಿ. ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ವಿನಯ ಗುರೂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಐಕಳ ಹರೀಶ್ ಶೆಟ್ಟಿ,…
ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಲಿ ವಿದ್ಯಾಗಿರಿ: ‘ವೈಯಕ್ತಿಕ ಕಲಿಕೆಯಲ್ಲೂ ವಿಸ್ತøತ ಚಿಂತನೆ ಇರಬೇಕು. ಒಳಿತು ಬದುಕಿನ ಧ್ಯೇಯವಾಗಬೇಕು’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ವಿಜ್ಞಾನ ಪದವಿಯ ಅನಿಮೇಶನ್ ವಿಭಾಗದ ಸಹಯೋಗದಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ಬಿವೊಕ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ’10 ದಿನಗಳ ಅನಿಮೇಶನ್ ಮತ್ತು ಆಫ್ಟರ್ ಎಫೆಕ್ಟ್ ಪ್ರಶಿಕ್ಷಣಾರ್ಥಿ ಶಿಬಿರ’ದಲ್ಲಿ ಅವರು ಮಾತನಾಡಿದರು. ‘ಬದುಕಿನಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಚಿಂತನೆ ಇದ್ದಾಗ, ತಂತ್ರಜ್ಞಾನದಲ್ಲೂ ಒಳಿತನ್ನೇ ಮಾಡಬಹುದು. ಅತಿ ಬಳಕೆಯಿಂದ ಉಪಯುಕ್ತ ವಸ್ತುವೂ ಅಪಾಯಕಾರಿ ಆಗಬಹುದು. ಈ ಕುರಿತ ಎಚ್ಚರಗಳು ನಮ್ಮೊಳಗೆ ಸದಾ ಇರಬೇಕು’ ಎಂದರು. ‘ಮೊಬೈಲ್ನ ಗುಣಾವಗುಣಗಳು ಅದರ ಬಳಕೆಯ ಮೇಲೆ ನಿಂತಿದೆ. ಅಂತೆಯೇ ಬದುಕು ಕೂಡಾ’ ಎಂದು ವಿವರಿಸಿದರು. ‘ಹಾಸ್ಟೆಲ್ ಎಂದರೆ ಕೇವಲ ಊಟ-ವಾಸ್ತವ್ಯದ ಗೂಡಲ್ಲ. ಹಾಸ್ಟೆಲ್ ಜೀವನ ಕಲಿಕೆಯ ಕೇಂದ್ರ. ಬದುಕಿನ ಪ್ರಗತಿಯ ತಾಣ’ ಎಂದು ಬಣ್ಣಿಸಿದರು. ‘ಒಳ್ಳೆಯ ವಿದ್ಯಾರ್ಥಿಗಳನ್ನು ಸೃಜಿಸುವುದೇ ಶಿಕ್ಷಣ…