Author: admin
ವಿಶೇಷ ಲೇಖನ: ಆರೂರು ಸುಕೇಶ್ ಶೆಟ್ಟಿ, ವಕೀಲರು, ಉಡುಪಿ ಸಮಾಜದಲ್ಲಿ ಜನರೊಂದಿಗೆ ಬೆರೆಯುವಲ್ಲಿ ಸುಲಭವಾಗಿ ಲಭ್ಯವಾಗಿರುವುದು ವಕೀಲರು. ಅವರು ಜನರೊಂದಿಗೆ ನಿರಂತರ ಒಡನಾಟವನ್ನು ಹೊಂದಿರುತ್ತಾರೆ. ಸಮಾಜವನ್ನು ತಿದ್ದುವಲ್ಲಿ ವಕೀಲರ ಸಲಹೆ ತುಂಬಾ ಉಪಯುಕ್ತವಾಗಿರುತ್ತದೆ. ಸಮಾಜವನ್ನು ಉತ್ತಮಗೊಳಿಸಲು, ತಿದ್ದುವಲ್ಲಿ ವಕೀಲರು ಮೊದಲಿಗರಾಗಿರುತ್ತಾರೆ. ಕಾನೂನಿನ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಿದರೆ ಸಮಾಜವು ಉತ್ತಮ ಸ್ವಾಸ್ಥ್ಯದಿಂದ ಕೂಡಿರುತ್ತದೆ. ವಕೀಲರು, ಜನಸಾಮಾನ್ಯರಿಗೆ ಇತ್ತೀಚಿನ ಹೊಸ ಕಾನೂನುಗಳಾದ ಸೈಬರ್ ಪ್ರಕರಣ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಕ್ಕಳ ಹಕ್ಕು ಮತ್ತು ರಕ್ಷಣೆ, ಮಹಿಳೆಯರ ಸಂರಕ್ಷಣೆಗಳ ಬಗ್ಗೆ ಹಾಗೂ ಇತರ ಪ್ರಕರಣಗಳ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿದಲ್ಲಿ ಸಮಾಜದಲ್ಲಿ ಅಪರಾಧಗಳನ್ನು ಕಡಿಮೆ ಮಾಡುವಲ್ಲಿ, ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ. ವಕೀಲರು ಕಾನೂನು ಸೇವೆಗಳ ಪ್ರಾಧೀಕಾರದ ವತಿಯಿಂದ ನಡೆಸುವ ಲೋಕ ಅದಲಾತ್ನ ಬಗ್ಗೆ ಜನರಿಗೆ ಅರಿವು ಮೂಡಿಸಿದಲ್ಲಿ ಅದರ ಉಪಯೋಗವನ್ನು ಜನರು ಪಡೆಯುವ ಬಗ್ಗೆ ತಿಳಿಸಿದಲ್ಲಿ ಹೆಚ್ಚಿನ ವಿವಿಧ ರೀತಿಯ ಪ್ರಕರಣಗಳು ರಾಜಿ ಸಂದಾನದಲ್ಲಿ ಮುಕ್ತಾಯವಾಗಿ ಸಮಾಜವು ನೆಮ್ಮದಿಯಿಂದ ಇರಲು…
ಮುಂಬಯಿ (ಆರ್ಬಿಐ), ನ.28: ಮುಂಬಯಿಯ ಹೇರಂಬ ಇಂಡಸ್ಟ್ರೀಸ್ನ ಸಿಎಸ್ಆರ್ ನಿಧಿಯಡಿಯಲ್ಲಿ ಉಪ್ಪಳ ಕೊಂಡೆವೂರು ಇಲ್ಲಿನ ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠಕ್ಕೆ ಶಾಲಾ ಬಸ್ ಅನ್ನು ಇಂದು ಹೇರಂಬ ಇಂಡಸ್ಟ್ರೀಸ್ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ.ಕುಳೂರು, ಕನ್ಯಾನ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುರಾಮ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದರು. ಶಾಲಾ ಸಮಿತಿ ಅಧ್ಯಕ್ಷ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದಾನಿಗಳನ್ನು ಸನ್ಮಾನಿಸಿ, ಅವರ ಕುಟುಂಬದವರನ್ನು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳ ಕುಟುಂಬದವರು, ಆಶ್ರಮದ ಭಕ್ತರು ಹಾಗೂ ಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಮಚಂದ್ರ ಚೆರುಗೋಳಿ ಅತಿಥಿಗಳು ಮತ್ತು ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಮುಂಬಯಿಯಲ್ಲಿ ನಡೆದ ನಡೆದ ‘ಮಿಸ್ ದಿವಾ ಯೂನಿವರ್ಸ್ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ ರನ್ನರ್ ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು (Diwita Rai) ಅವರು ‘ಮಿಸ್ ದಿವಾ ಯೂನಿವರ್ಸ್ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿದೆ. ‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಚಂಡೀಗಢದ ಬೆಡಗಿ ಶ್ವೇತಾ ಶಾರದಾ (Shwetha Sharda) ಅವರ ಪಾಲಾಗಿದೆ. ಕಳೆದ ವರ್ಷದ ವಿಜೇತೆ ದಿವಿತಾ ರೈ ಅವರು ಈ ಕಿರೀಟವನ್ನು ಈ ಸಾಲಿನ ವಿಜೇತೆ ಶ್ವೇತಾ ಶಾರದಾ ಅವರಿಗೆ ತೊಡಿಸಿದರು. ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ಕರ್ನಾಟಕದಿಂದ ಬಂದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತ್ರಿಶಾ ಶೆಟ್ಟಿ ಅವರ ಕುರಿತು ಹೇಳುವುದಾದರೆ, 22 ನೇ ವಯಸ್ಸಿನಲ್ಲಿ, ತ್ರಿಶಾ ಮನೋವಿಜ್ಞಾನದಲ್ಲಿ ಪದವೀಧರರಾಗಿ, ಮಾಡೆಲ್ ಮತ್ತು ನಟಿಯಾಗಿ ನಿಂತಿದ್ದಾರೆ. ಈಕೆ ನೃತ್ಯಗಾತಿ. ಭರತನಾಟ್ಯ,…
ಕನ್ನಡ ಶಾಲೆಯಲ್ಲಿ ಇಂದು ಸಮವಸ್ತ್ರ ವಿತರಣೆ ಮಾಡಿದ್ದೇವೆ, ಮುಂದೆಯೂ ಕೂಡ ಪ್ರತಿ ವರ್ಷವೂ ಕೂಡ ನಾನೇ ಈ ಕನ್ನಡ ಶಾಲೆಗಳಿಗೆ ಸಮವಸ್ತ್ರ ವಿತರಿಸುತ್ತೇನೆ. ಕನ್ನಡ ಶಾಲೆಗಳು ಉಳಿಯಬೇಕು ಈ ನಿಟ್ಟಿನಲ್ಲಿ ನಾವು ಕನ್ನಡ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕಲಂಗುಟ್ ಕನ್ನಡ ಸಂಘದ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನುಡಿದರು. ಕನ್ನಡ ಸಂಘ ಜುವಾರಿನಗರ ಹಾಗೂ ಕಲಂಗುಟ್ ಕನ್ನಡ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜುವಾರಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 120 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು. ಕೊರ್ಟಾಲಿಂ ಕ್ಷೇತ್ರದ ಶಾಸಕ ಅಂಥೋನಿ ವಾಜ್ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ಶಾಲೆ ಮತ್ತು ಕನ್ನಡಿಗರ ಮೇಲೆ ನನಗೆ ಅಪಾರ ಗೌರವವಿದೆ. ಈ ಭಾಗದ ಕನ್ನಡಿಗರೇ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕನ್ನಡಿಗರೊಂದಿಗೆ ನಾನು ಸದಾ ಇರುತ್ತೇನೆ, ಕನ್ನಡ ಶಾಲೆಯ ದುರಸ್ತಿ ಕಾರ್ಯಕ್ಕಾಗಿ ಕೂಡಲೇ 15 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು.…
ಕಾಪು ಕ್ಷೇತ್ರದಿಂದ ಗೆಲುವು ಸಾಧಿಸಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮವು ಶಿರ್ವ ಮಂಚಕಲ್ಪೇಟೆಯಲ್ಲಿ ನಡೆಯಿತು. ಪಡುಕೆರೆಯಿಂದ ಪ್ರಾರಂಭಗೊಂಡ ವಿಜಯೋತ್ಸವ ಯಾತ್ರೆಯು ಕಟಪಾಡಿ, ಕುರ್ಕಾಲು, ಬಂಟಕಲ್, ಶಿರ್ವ ಮಂಚಕಲ್ ಪೇಟೆಗೆ ಆಗಮಿಸಿದ್ದು, ಪಕ್ಷದ ಪ್ರಮುಖರು, ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಿರ್ವ ಮಂಚಕಲ್ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯ ಬಳಿಯ ಮಹಿಳಾ ಸೌಧದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಲಾಲಾಜಿ ಆರ್. ಮೆಂಡನ್ ಮತ್ತು ಕಾರ್ಯಕರ್ತರೊಂದಿಗೆ ಮಧ್ಯಾಹ್ನದ ಭೋಜನ ಸವಿದರು. ಬಳಿಕ ವಿಜಯೋತ್ಸವ ಯಾತ್ರೆಯು ಕುತ್ಯಾರುವಿಗಾಗಿ ಮುದರಂಗಡಿಗೆ ತೆರಳಿತು. ವಿಜಯೋತ್ಸವದಲ್ಲಿ ಲಾಲಾಜಿ ಆರ್.ಮೆಂಡನ್, ಶ್ಯಾಮಲಾ ಕುಂದರ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ಸುಮಾ ಯು. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕುತ್ಯಾರು ನವೀನ್ ಶೆಟ್ಟಿ, ಗಂಗಾಧರ ಸುವರ್ಣ, ಮತ್ತಿತರ ಪಕ್ಷದ ಪ್ರಮುಖರು, ರಾಜೇಶ್ ನಾಯ್ಕ,…
ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾಗಿ 30 ವರ್ಷಗಳನ್ನು ಪೂರೈಸಿರುವ ಆದಿತ್ಯ ಮುಕ್ಕಾಲ್ದಿಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಮೇ 12ರಂದು ಶ್ರೀ ಕ್ಷೇತ್ರದಲ್ಲಿ ಜರುಗಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಪಣಿಯೂರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ಗಂಟೆ 7.00ಕ್ಕೆ ಚಂಡಿಕಾಯಾಗ ನಡೆಯಲಿದ್ದು, ಮಧ್ಯಾಹ್ನ ಗಂಟೆ 11.00ಕ್ಕೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಭಕ್ತಿಗಾನ ಸುಧೆ” ಜರುಗಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ಖಂಡಿಗೆಬೀಡಿನಿಂದ ಅದಿತ್ಯ ಮುಕ್ಕಾಲ್ದಿಯವರೊಂದಿಗೆ, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಅತಿಥಿಗಣ್ಯರು ಹಾಗೂ ಎಲ್ಲಾ ಕ್ಷೇತ್ರದ ಗಡಿಪ್ರಧಾನರು ಭವ್ಯ ಮೆರವಣಿಗೆಯೊಂದಿಗೆ ಕ್ಷೇತ್ರದ ಬೂಬ ಮುಕ್ಕಾಲ್ಲಿ ವೇದಿಕೆಗೆ ಬಂದು ಸಂಜೆ ಗಂಟೆ 5ಕ್ಕೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಜರುಗಲಿರುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ…
ಕುಟುಂಬದ ತರವಾಡು ಎಂದರೆ ನಮ್ಮ ಶರೀರದಲ್ಲಿರುವ ಹೃದಯವಿದ್ದಂತೆ.ಹೃದಯ ಆರೋಗ್ಯವಾಗಿದ್ದರೆ ಮಾತ್ರ ಶರೀರ ಸ್ವಸ್ಥ ವಾಗಿರುತ್ತದೆ. ಆದುದರಿಂದ ತರವಾಡು ಮನೆಯನ್ನು ನಿರ್ಮಿಸಿ ದೈವಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬರಬೇಕು . ಕುಟುಂಬದ ತಾಯಿಬೇರೆಂದರೆ ಅದು ತರವಾಡು.ಬೇರಿಗೆ ನೀರೆರೆದು ಪೋಷಿಸಿದರೆ ಮಾತ್ರ ಕುಟುಂಬವೆಂಬ ವಟವೃಕ್ಷ ಸಮೃದ್ಧಿಯಿಂದಿರಲು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಪೂಜ್ಯರಾದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಕಳಿಯೂರು ದೇವಸ್ಯಗುತ್ತು ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡುತ್ತಾ ನಮ್ಮಲ್ಲಿ ಆತ್ಮಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ಆಗಬೇಕಾಗಿದೆ. ನಮ್ಮ ವರ್ತಮಾನ ಸುಸ್ಥಿತಿಯಲ್ಲಿದ್ದರೆ ಭವಿಷ್ಯ ಸುಂದರವಾಗುತ್ತದೆ. ವಿಶ್ವದಲ್ಲಿ ಧರ್ಮ ಚಾವಡಿಯಿದ್ದರೆ ಅದು ಭಾರತ. ಭಾರತದೊಳಗೊಂದು ಧರ್ಮ ಚಾವಡಿಯಿದ್ದರೆ ಅದು ನಮ್ಮ ತುಳುನಾಡು. ಇಲ್ಲಿರುವಷ್ಟು ದೈವಗಳ ಆರಾಧನೆ ಬೇರೆಲ್ಲೂ ನಡೆಯುವುದಿಲ್ಲ. ತುಳುವ ಸಂಸ್ಕೃತಿ ನಮ್ಮ ಮಾತೃ ಸಂಸ್ಕೃತಿಯಾಗಿದೆ. ಸಂಸ್ಕೃತಿಯ ಉಳಿವು ಇಂತಹ ಧರ್ಮಾಚರಣೆಗಳಿಂದ ಮಾತ್ರ ಸಾಧ್ಯ. ದೈವಿಕವಾದ ಕಲೆ – ಕಾರಣಿಕದ ತಾಣವೇ “ದೇವಸ್ಯ”. ಇಲ್ಲಿ ಒಂದು ಆದರ್ಶಯುತ…
ವಿಶ್ವ ವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಹುಟ್ಟಿದ ದಿನ ಎಪ್ರಿಲ್ 23 ನ್ನು ಅವರ ಸ್ಮರಣಾರ್ಥ ವಿಶ್ವ ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ 52 ವರ್ಷ ಬದುಕಿದರೂ ಮಾನವ ಜನಾಂಗ ಮರೆಯದ ಉತ್ತಮ ಸಾಹಿತ್ಯ ಕೃಷಿಯಲ್ಲಿ ಪಳಗಿ ಅನೇಕ ನುಡಿ ಮತ್ತುಗಳನ್ನು ಅಜರಾಮರವಾಗಿಸಿದ ಹೆಗ್ಗಳಿಕೆ ಇವರದು. ಜ್ಞಾನದ ಕಣಜವಾಗಿರುವ ಶೇಕ್ಸ್ಪಿಯರ್ ಅವರ ಪ್ರತಿಯೊಂದು ಶಬ್ದವು ವೇದಾಂತಸಾರದ ಅನುಭವವನ್ನು ತಿಳಿಸುವಂತದ್ದು. ಜೀವನವನ್ನು ಅರ್ಥೈಸುವ ಹಾಗೂ ಅದರ ಇತಿಮಿತಿಗಳನ್ನು ಪರಾಮರ್ಶಿಸುವ ಬದುಕಿನ ವಿವಿಧ ಮಜಲುಗಳ ಅರ್ಥವನ್ನು ಸಾರುವ ಅನೇಕ ಸುನೀತಗಳು ವಿಶಿಷ್ಟವಾದ ಶಬ್ದ ಮಾಧುರ್ಯ, ಅರ್ಥ ಗಾಂಭೀರ್ಯ ಬರಹ ಶೈಲಿ ಮನಮುಟ್ಟುವಂತದ್ದು ಅಂತಹ ಮಹಾನ್ ನಾಟಕಕಾರರ ಸ್ಮರಣಾರ್ಥ ವಿಶ್ವ ಪುಸ್ತಕದಿನಾಚರಣೆ ನಡೆಯುತ್ತಿರುವುದು ಅರ್ಥ ಗರ್ಭಿತ. ಅತ್ಯಂತ ನೆಮ್ಮದಿಯ ಕ್ಷಣಗಳನ್ನು ಓದಿನಿಂದ ಪಡೆಯಬಹುದು. ಓದುವ ಹವ್ಯಾಸ ಹೆಚ್ಚಾದಂತೆ ಪುಸ್ತಕ ಹುಡುಕಿ ಓದುವ ಚಟವೂ ಹೆಚ್ಚಾಗುತ್ತದೆ. ಪುಸ್ತಕ ಭಂಡಾರ ಜ್ಞಾನ ದೇಗುಲ, ಜ್ಞಾನ ಜೋತಿ ದೊರೆಯುವ ಸುಂದರ ಆಲಯವೇ ಗ್ರಂಥಾಲಯ. ಓದುಗರ ಅಭಿರುಚಿಗೆ ಅನುಗುಣವಾಗಿ ಬುದ್ದಿಯನ್ನು…
ಸುಕುಮಾರ ಶೆಟ್ಟರ ರಾಜಕೀಯ ಇನ್ನಿಂಗ್ಸ್ ಮುಗಿದಿದೆ. ಆದರೆ ಅವರ ಜೋರು, ಅವರ ಅಬ್ಬರ, ಅವರ ಸ್ಪೀಡು ಇದಕ್ಕೆ ಯಾರೆಂದರೆ ಯಾರಿಂದಲೂ ಬ್ರೇಕ್ ಹಾಕುವುದು ಸಾಧ್ಯವಿಲ್ಲ. ತನ್ನ ಸುತ್ತ ಇರುವವರೆಲ್ಲಾ ನನ್ನ ಅಭ್ಯುದಯಕ್ಕೇ ದುಡಿಯುತ್ತಿದ್ದಾರೆ ಎಂದು ಭಾವಿಸಿದ್ದು ಶೆಟ್ಟರ ದೊಡ್ಡ ತಪ್ಪು, ಮಗುವಿನಂತೆ ಕೆಲವರನ್ನ ನಂಬಿದ್ದು ಅವರ ಮತ್ತೊಂದು ತಪ್ಪು. ಕೆಲವು ದುಡುಕು ನಿಲುವು, ನೇರ ನಿಷ್ಠೂರ ಮಾತು, ಜೊತೆಗೆ ಪ್ರಬುದ್ಧರ ಸಲಹೆ ಇಲ್ಲದ ನಿರ್ಧಾರಗಳು ಶೆಟ್ಟರಿಗೆ ಟಿಕೇಟ್ ತಪ್ಪಿಸುವ ಹಂತಕ್ಕೆ ತಂದು ನಿಲ್ಲಿಸಿತೇ ಹೊರತು ಅವರ ವಿರುದ್ಧ ತಲೆ ಹೋಗುವಂತಹ ಆರೋಪಗಳೇನೂ ಇದ್ದಿರಲಿಲ್ಲ. ಶೆಟ್ಟರು ಹಿಂದೂ ಸಂಘಟನೆಯ ಪೋಷಕ ಶಕ್ತಿಯಾಗಿ ನಿಂತಿದ್ದರು, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಜೆಲ್ಲಿ ಕಾಣದ ರಸ್ತೆಗಳನ್ನ ಕಾಂಕ್ರೀಟಿಕರಣ ಮಾಡಿಸಿದ್ದರು, ಸರಿಯಾದ ಬಸ್ಸುಗಳೇ ಓಡಾಡದ ಊರಿನಲ್ಲಿ ನಿಂತು ವಿಮಾನ ನಿಲ್ದಾಣದ ಕನಸು ಕಟ್ಟಿದ್ದರು, ತಪ್ಪೋ ಆಮೇಲಿನ ಪ್ರಶ್ನೆ ಕೊಲ್ಲೂರಿನಿಂದ ಕೊಡಚಾದ್ರಿಗೆ ಕೇಬಲ್ ಕಾರುಗಳು ಓಡಾಡುವ ಕನಸು ಹರವಿದ್ದರು, ಇಲ್ಲಿಗೇ ತರ್ತೀನಿ ಮೆಡಿಕಲ್ ಕಾಲೇಜು ಎಂದು ಹುಬ್ಬು ಮೇಲೆ…
ಕುಗ್ರಾಮದ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿ.ಪ್ರಾ. ಶಾಲೆಗೆ ಬೆಂಗಳೂರಿನ “ಬೆಳಕು’ ತಂಡವು ಸುಣ್ಣ – ಬಣ್ಣ ಬಳಿಯುವ ಮೂಲಕ ಹೊಸತೊಂದು ರೂಪವನ್ನು ನೀಡಿದೆ. ಈಗ ಈ ಶಾಲೆಯ ಗೋಡೆಯಲ್ಲಿ ಚಿತ್ರಗಳ ಚಿತ್ತಾರ, ಕಟ್ಟಡದ ಗೋಡೆ, ಆವರಣ ಗೋಡೆಗೆ ಅಂದದ ಬಣ್ಣದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಬೆಳಕು ತಂಡದ 21 ಮಂದಿ ಸ್ವಯಂಸೇವಕರು ಕಳೆದ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಹಾಗೂ ರವಿವಾರ 2 ದಿನಗಳ ಕಾಲ ಶಾಲೆಯ ಸೌಂದರ್ಯ ವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು. ಹೊರಭಾಗದ ಆವರಣ ಗೋಡೆ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ. ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ, ಈ…