Author: admin
83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೇಟಿಕ್ಸ್ ಕ್ರೀಡಾಕೂಟ ಪದಕ ಮುಡಿಗೇರಿಸಿಕೊಂಡ ಆಳ್ವಾಸ್, ಮಂಗಳೂರು ವಿ.ವಿ. ಚಾಂಪಿಯನ್ಸ್
ವಿದ್ಯಾಗಿರಿ: 83ನೇ ಅಖಿಲ ಭಾರತ ಅಂತರ್‍ವಿವಿ ಪುರುಷ ಹಾಗೂ ಮಹಿಳೆಯರ ಅಥ್ಲೇಟಿಕ್ಸ್ ಚಾಂಪಿಯನ್‍ಷಿಪ್‍ನಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್‍ಷಿಪ್ ಪಟ್ಟ ಪಡೆದುಕೊಂಡಿತು. ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿವಿ 48(ಪುರುಷ) ಹಾಗೂ 56(ಮಹಿಳೆಯರ) ಅಂಕಗಳೊಂದಿಗೆ ಒಟ್ಟು 104 ಅಂಕ ಪಡೆದರೆ, ಕ್ಯಾಲಿಕಟ್ ವಿವಿ ಪುರುಷರಲ್ಲಿ 53 ಅಂಕ ಹಾಗೂ ಮಹಿಳೆಯರಲ್ಲಿ 41 ಅಂಕ ಪಡೆದು ಒಟ್ಟು 94 ಅಂಕ ಗಳಿಸಿ ರನ್ನರ್ಸ್‍ಅಪ್ ಸ್ಥಾನ ಪಡೆಯಿತು. ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು 4 ಚಿನ್ನ, 3 ಬೆಳ್ಳಿ, 7 ಕಂಚಿನ ಪದಕ ಪಡೆದುಕೊಂಡಿತು. ಪದಕ ಪಡೆದ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಪುರುಷ ಹಾಗೂ ಮಹಿಳೆಯರ ಮಂಗಳೂರು ವಿವಿ ತಂಡದ ಒಟ್ಟು 72 ಜನರ ಆಟಗಾರರಲ್ಲಿ 59 ಕ್ರೀಡಾಪಟುಗಳು ಆಳ್ವಾಸ್‍ನ ವಿದ್ಯಾರ್ಥಿಗಳಾಗಿದ್ದರು. ಚೆನ್ನೈನ ತಮಿಳನಾಡು ಫಿಸಿಕಲ್ ಎಜ್ಯೂಕೇಷನ್ ಆ್ಯಂಡ್ ಸ್ಪೋಟ್ರ್ಸ ವಿವಿಯಲ್ಲಿ ಶನಿವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಪುರುಷರ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 48…
ಭಾರತವು ಒಂದು ವೈವಿಧ್ಯಮಯ ರಾಷ್ಟ್ರ. ವೈವಿಧ್ಯತೆಯಲ್ಲಿ ಏಕತೆಯು ಇಲ್ಲಿನ ವೈಶಿಷ್ಟ್ಯವಾಗಿದೆ. ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಕಂಡರಿಯದಷ್ಟು ಜಾತಿ, ಧರ್ಮ, ಭಾಷೆ, ಮತ್ತು ಜೀವನ ವೈವಿಧ್ಯಗಳು ಈ ದೇಶದಲ್ಲಿದೆ. ಆದರೂ ಕೂಡ ಇಂದು ನಾವು ಭಾರತವನ್ನು ಒಂದು ರಾಷ್ಟ್ರವೆಂದೇ ಗುರುತಿಸುತ್ತೇವೆ. ಈ ರೀತಿಯ ರಾಷ್ಟ್ರದಲ್ಲಿ ಜನರನ್ನು ಸಂಘಟಿಸಿ ಆಡಳಿತ ನಡೆಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಭಾರತವು ಜಾತ್ಯಾತೀತ ರಾಷ್ಟ್ರವೆಂದು ಕರೆಯಲ್ಪಟ್ಟರೂ ಜಾತೀಯತೆಯು ಇಂದು ಎಲ್ಲಾ ಕಡೆ ಗೋಚರಿಸುತ್ತಿದೆ. ವೈಜ್ಞಾನಿಕ ಪ್ರಗತಿಯಲ್ಲಿ ಮುನ್ನಡೆಯುತ್ತಿರುವ ಈ ರಾಷ್ಟ್ರದಲ್ಲಿಂದು ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಮನೆ ಮಾಡಿಕೊಂಡಿದೆ. ದೇಶದ ಹಿತ ಚಿಂತನೆಯ ಜನರ ಕೊರತೆ ಎದ್ದು ಕಾಣುತ್ತಿದೆ. ಆದುದರಿಂದ ರಾಷ್ಟ್ರವನ್ನು ಒಗ್ಗೂಡಿಸುವಂತಹ ಏಕತಾ ಸೂತ್ರವೊಂದನ್ನು ನಾವಿಂದು ಗುರುತಿಸಬೇಕಾಗಿದೆ. ಇಲ್ಲದೆ ಇದ್ದರೆ ದೇಶಕೆ ಮುಂದೆ ಅಪಾಯ ತಪ್ಪಿದ್ದಲ್ಲ. ಆ ಬಗ್ಗೆ ನಮ್ಮ ಚಿಂತನೆ ಅಗತ್ಯವಲ್ಲವೇ? ನಮ್ಮ ದೇಶದಲ್ಲಿ ಏಕತಾ ಮನೋಭಾವನೆಯನ್ನು ಪ್ರಚೋದಿಸಬೇಕಾದ ಧರ್ಮದ ವಿಚಾರಗಳು ಇಂದು ವ್ಯಕ್ತಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆಯನ್ನು ಉಂಟು ಮಾಡುವ ಅನುಚಿತ ಸಾಧನವಾಗಿದೆ.…
ಅಮೇರಿಕಾದ ಪ್ರತಿಷ್ಠಿತ ತುಳು ಸಂಸ್ಥೆ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ರಿ) AATA ದ ನೂತನ ಅಧ್ಯಕ್ಷರಾಗಿ ಫ್ಲೋರಿಡಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. AATA ಸಂಸ್ಥೆಯ ವಾರ್ಷಿಕ ಬಿಸು ಪರ್ಬದ-2023 ಸಂದರ್ಭಕ್ಕೂ ಮುನ್ನ ಈ ಆಯ್ಕೆ ಪ್ರಕ್ರಿಯೆಯನ್ನು ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ ಅಂತಿಮಗೊಳಿಸಲಾಯಿತು. ಅಂತರ್ಜಾಲ ತಾಣ ವೇದಿಕೆಯಲ್ಲಿ ನಡೆದ ಬಿಸು ಪರ್ಬ-2023 ಆಚರಣೆಯ ನೆನಪಲ್ಲಿ ಗೌರವ ಅತಿಥಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಮುಖ್ಯಸ್ಥೆ ಡಾ. ಸಾಯೀಗೀತ ಅವರು ಅಬ್ಬಕ್ಕ ಗೇನದ ಚಾವಡಿ ಹೆಸರಿನಲ್ಲಿ ತುಳು ಅಂತರ್ಜಾಲ ಗ್ರಂಥಾಲಯವನ್ನು ಉದ್ಘಾಟಿಸಿ ”ಜ್ಞಾನಸುಧೆಯು ದಶದಿಕ್ಕುಗಳಿಂದ ಹರಿದು ಬರಲಿ , ತುಳುವಿನ ಶ್ರೇಷ್ಠ ಜ್ಞಾನವು ವಿಶ್ವದೆಲ್ಲೆಡೆ ಪಸರಿಸಲಿ” ಎಂದು ಹಾರೈಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಾಫ್ಟ್ವೇರ್ ಉದ್ಯಮಿ, ಎಂ ರಿಸಲ್ಟ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಶೇಖರ್ ನಾಯ್ಕ್ ಮಾತನಾಡಿ, ”ಕಠಿಣ ಶ್ರಮ ಹಾಗೂ ಧ್ರಡ ನಿರ್ಧಾರ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ” ಎಂದರು. ಪ್ರಖ್ಯಾತ ಸಂಶೋಧಕ ಹಾಗೂ…
ವಕೀಲ ವೃತ್ತಿಯ ಜತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿಯೋರ್ವರನ್ನು ನಾವು ಪರಿಚಯಿಸುತ್ತಿದ್ದೇವೆ. ಸಾಮಾಜಿಕ ಸಂಘಟಕ, ಯಕ್ಷಸಾಧಕ, ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಹಾಗೂ ಸದ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಮಜಿಬೈಲ್ ನ ಹಿರಿಮೆಯ ಗರಿ ನ್ಯಾಯವಾದಿ ಯಂ. ದಾಮೋದರ ಶೆಟ್ಟಿಯವರು ಮಂಜೇಶ್ವರದ ಮೂಡಂಬೈಲು ದಿ. ಲಕ್ಷಣ ಮತ್ತು ದಿ.ತಿಮ್ಮಕ್ಕ ದಂಪತಿಗಳ ಸುಪುತ್ರನಾಗಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲ್ ಶಾಲೆ, ಪ್ರೌಡ ಶಿಕ್ಷಣವನ್ನು ಮೀಯಪದವು ಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆನರಾ ಕಾಲೇಜು ಉರ್ವ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜಿನಲ್ಲಿ ಪೂರೈಸಿದರು. ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ದುಡಿದು ನಂತರ ಕಲಿತಂತಹ ಕಾನೂನು ಪದವಿಯನ್ನು ಸದುಪಯೋಗಪಡಿಸುವ ಉದ್ದೇಶದಿಂದ ವಕೀಲ ವೃತ್ತಿಯನ್ನು ತೊಡಗಿಸಿಕೊಂಡು ಓರ್ವ ಆದರ್ಶ ಕಾನೂನು ತಜ್ಞರಾಗಿ ಸೇವಾಕೈಂಕರ್ಯವನ್ನು ಮುಂದುವರಿಸುತ್ತಿದ್ದಾರೆ. ಯಕ್ಷ ಸಾಧನೆ : ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಕಾಲೇಜು…
ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿದಿನ ಸಂಜೆ ರೋಗಿಗಳ ಜೊತೆಗಾರರಿಗೆ ಊಟ ನೀಡುವ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತೀ ವರ್ಷ ಒಂದು ತಿಂಗಳ 2,25,000 ರೂ. ದೇಣಿಗೆ ನೀಡುತ್ತಿದ್ದು, 2021ನೇ ಸಾಲಿನ ದೇಣಿಗೆಯ ಎರಡನೇ ಕಂತಿನ 1,75,000/- ರೂ. ಮೊತ್ತದ ಚೆಕ್ಕನ್ನು ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಹಸ್ತಾಂತರಿಸಿದರು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಕರುಣಾಕರ್ ಶೆಟ್ಟಿ ಮಧ್ಯಗುತ್ತು, ಆದರ್ಶ್ ಶೆಟ್ಟಿ, ಅಶೋಕ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ ಮತ್ತು ಗಣ್ಯರು ಉಪಸ್ಥಿತರಿದ್ದರು. ಮೊಹಮ್ಮದ್ ಆರಿಫ್ ಮತ್ತು ಹಮೀದ್ ಅತ್ತೂರು ಚೆಕ್ ಸ್ವೀಕರಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಎಂ.ಆರ್.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ ಕೆ. ಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಎಮ್‌ಆರ್‌ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಇವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈಯವರು ಹಾಗೂ ಎ ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ ಜೆ ಶೆಟ್ಟಿ, ಮುಂಬಯಿ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕನ್ಯಾನ ಸಧಾಶಿವ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ರವಿ ಎಸ್ ಶೆಟ್ಟಿ ಸಾಯಿರಾಧ ಮುಂಬಯಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,…
ಜಗತ್ತು ಎಷ್ಟೇ ಆಧುನೀಕತೆಯಲ್ಲಿ ತುಂಬಿ ತುಳುಕಿದರೂ ಜನರು ತಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈಗಲೂ ಬ್ರಹ್ಮ ಹಾಗೂ ಕೋಟಿ ಋಷಿಗಳಿಗೆ ಶಿವನು ದರ್ಶನ ಕೊಟ್ಟ ಶುಭ ದಿನದಂದು ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದಾಗಿರುವ ಧ್ವಜಪುರ ಖ್ಯಾತಿಯ ಕೋಟೇಶ್ವರ ಮಹತೋಬಾರ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಏಳು ದಿನಗಳ ಕಾಲ ನಡೆಯುವ ಕೊಡಿಹಬ್ಬ ಅಥವಾ ಭುವನೋತ್ಸವ ಹರ್ಷೋಲ್ಲಾಸದ ಸಂಕೇತಕ್ಕೆ ಸಾಕ್ಷಿಯಾಗಿ ಊರ ಪರಊರ ಜನರೆಲ್ಲಾ ಜಾತಿ ಭೇದವಿಲ್ಲದೆ ಒಗ್ಗೂಡಿ ದರ್ಶನ ಪಡೆಯುತ್ತಾರೆ. ಕೋಟಿ ಸಂಖ್ಯೆಯ ಪಾಪಗಳನ್ನು ತೊಳೆಯತಕ್ಕಂತಹ ದಿವ್ಯ ಕ್ಷೇತ್ರ ಎಂಬ ಹಿರಿಮೆಯಿಂದಾಗಿ ಕೋಟೇಶ್ವರ “ದಕ್ಷಿಣ ಕಾಶಿ”ಎಂದು ಕೋಟಿಲಿಂಗೇಶ್ವರನೆಂದು ಜನ ಜನಿತವಾಗಿದೆ. ಕುಂದಾಪುರದಿಂದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕಿಮೀ ದೂರದವರೆಗೆ ಸಾಗುವಾಗ ಸಿಗುವ ಪುಣ್ಯ ಕ್ಷೇತ್ರವಿದು. ಭಾವೈಕ್ಯತಯ ಸಂಗಮ ಕೊಡಿಹಬ್ಬ : ಇಲ್ಲಿನ ಬೃಹ್ಮರಥವನ್ನು ನಿರ್ಮಿಸುವಲ್ಲಿ ಸ್ಥಳೀಯ ಮುಸ್ಲಿಮರು ಅತ್ಯಂತ ಭಯ ಭಕ್ತಿಯಿಂದ ತಮ್ಮ ಜವಾಬ್ದಾರಿ ನೆರವೇರಿಸುತ್ತಾರೆ. ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದ…
ನವರಾತ್ರಿ,ದಸರಾ, ಮಹಾನವಮಿ, ನಾಡಹಬ್ಬ, ವಿಜಯದಶಮಿ ಎಂದೆಲ್ಲಾ ಕರೆಯುವ ನವೋಲ್ಲಾಸದ ನವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯ ಸಂಭ್ರಮದೊಂದಿಗೆ ದೇಶದ ಹೆಚ್ಚಿನ ಕಡೆಗಳಲ್ಲಿ ಆಚರಿಸಲಾಗುತ್ತದೆ. ಅಶ್ವಯುಜ ಶುದ್ದ ಪ್ರತಿಪದೆಯಂದು ದೇವಿ ಆರಾಧನೆಯ ಕಲಶ ಸ್ಥಾಪನೆಯಾಗುತ್ತದೆ. ಜಗದ ಉದ್ದಾರಕ್ಕೆ ಕಾರಣೀಭೂತಳಾದ ಆದಿಶಕ್ತಿ, ಆದಿಮಾಯೆಯನ್ನು ಭಕ್ತಿಯಿಂದ ಪೂಜಿಸಿ ಮಾತೆಗೆ ದಿನಕ್ಕೊಂದು ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿ, ಒಂಬತ್ತು ದಿನ ಆರಾಧಿಸಲ್ಪಡುವ ದುರ್ಗೆ ಇಚ್ಚಾಶಕ್ತಿ, ಕ್ರಿಯಾಶಕ್ತಿ, ಪ್ರೇರಕ ಶಕ್ತಿಯಾಗಿದ್ದಾಳೆ. ಪ್ರಥಮ ದಿನ ಶೈಲಾ ಪುತ್ರಿಯನ್ನು, ಎರಡನೆಯ ದಿನ ಬ್ರಹ್ಮಚಾರೀಣಿ ಪೂಜೆ, ತೃತೀಯ ದಿನ ಚಂದ್ರಘಂಟಾ, ಚತುರ್ಥ ದಿನ ಕೂಪ್ಮಾಂಡಾ ಸ್ವರೂಪವನ್ನು, ಪಂಚಮದಂದು ಸ್ಕಂದ ಮಾತಾ, ಆರನೆ ದಿನ ಷಷ್ಠಿ ಕಾತ್ಯಾಯಿನಿ, ಏಳನೆ ದಿನ ಸಪ್ತಮಿ ಕಾಳರಾತ್ರಿ, ಅಷ್ಟಮಿ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಯುದ್ಧದಲ್ಲಿ ವಿಜಯಿಯಾದುದರ ನೆನಪಿಗಾಗಿ ಗಜ, ಅಶ್ವಗಳ ಪೂಜೆ ನಡೆಸಲಾಗುತ್ತದೆ. ನವರಾತ್ರಿಯ ಆಚರಣೆಯಲ್ಲಿ ದಸರಾ ಉತ್ಸವದ ಸೊಬಗನ್ನು, ಸಾಂಸ್ಕೃತಿಕ ಮೆರುಗನ್ನು ಇನ್ನಷ್ಟು ಸಂಭ್ರಮದಿಂದ ಆಸ್ವಾದಿಸಲು ವೈಶಿಷ್ಟ್ಯ ರೀತಿಯಲ್ಲಿ ಶಕ್ತಿ ದೇವತೆಗಳ ಪೂಜೆ ಈ ದಿನಗಳಲ್ಲಿ ನಡೆಯುವುದು. ದುರ್ಗೆಯ ಪ್ರಾರ್ಥನೆ…
ಹೊಸತನ್ನು ಕಲಿಯುವ, ಸಾಧಿಸುವ ಹಂಬಲವಿರುವವರಿಗೆ ಕೃತಕ ಬುದ್ಧಿಮತ್ತೆ ಹೊಸ ಹೊಸ ಉದ್ಯೋಗಾವಕಾಶ ನೀಡಬಲ್ಲುದು ಎಂದು ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಮ್ಯಾನೇಜ್ ಮೆಂಟ್ ಸಂಸ್ಥೆಯ ಪ್ಲೇಸ್ ಮೆಂಟ್ ಮತ್ತು ಅಡ್ಮಿಷನ್ ಮುಖ್ಯಸ್ಥ ಗುರುಪ್ರಶಾಂತ್ ಭಟ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಘದ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಸಾಕ್ಷಾತ್ಕಾರ ತರಬೇತಿ ಕಾರ್ಯಕ್ರಮದ 11ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ 12ನೇ ಬ್ಯಾಚಿನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಉದ್ಯಮಿ ಮಧುಕರ ಶೆಟ್ಟಿ, ಬೆಳ್ಮಣ್ ಹ್ಯುಮ್ಯಾನಿಟಿ ಸಂಸ್ಥೆಯ ನವೀನ್, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ…
ಬಂಟ ಸಮಾಜದಲ್ಲಿ ಹುಟ್ಟಿ ಬಡತನದ ಬೇಗುದಿಯಲ್ಲಿ ದಿನ ಕಳೆಯುತ್ತಿರುವ ಬಡಕುಟುಂಬ ಪ್ರಸ್ತುತ ಕಟಪಾಡಿ ಏಣಗುಡ್ಡೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ಶ್ರೀಮತಿ ಮೂಕಾಂಬಿಕಾ ಶೆಟ್ಟಿ ದಂಪತಿಗಳು ಬದುಕಿನ ಕ್ಷಣಕ್ಷಣವೂ ಕಷ್ಟದಲ್ಲಿ ಕಾಲ ಕಳೆಯುತ್ತಿತ್ತು. ಈ ಕುಟುಂಬ ಪರಿಸರದ ಮನೆಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಕಷ್ಟದ ಬದುಕನ್ನು ಕಟ್ಟಿಕಕೊಂಡಿದ್ದರು. ಹೀಗಿರುವಾಗ ಚಂದ್ರಶೇಖರ ಶೆಟ್ಟಿ ಅವರು ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬಿದ್ದು ಮೊಣಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಬಲುದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭ ಒದಗಿ ಬಂತು. ಅಂತೂ ಇಂತೂ ಇದ್ದವರನ್ನು ಕಾಡಿ-ಬೇಡಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವ ಕುಟುಂಬದ ಪರಿಸ್ಥಿತಿಯನ್ನು ಕಂಡವರು ಈ ವಿಷಯ ಮತ್ತು ಪರಿಸ್ಥಿತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಹರೀಶ್ ಶೆಟ್ಟರು ಮನೋಹರ ಶೆಟ್ಟಿ ತೋನ್ಸೆ ಇವರನ್ನು ಸಂಪರ್ಕಿಸಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದರು. ಮನೋಹರ್ ಶೆಟ್ಟಿಯವರು…