Author: admin

“ಐಕಳ ಹರೀಶ್ ಶೆಟ್ಟಿಯವರು ಹೊರನಾಡಿನ ಪ್ರತಿಸೂರ್ಯ. ಮುಂಬೈನ ತುಳು  ಕನ್ನಡಿಗರ ಧೀಮಂತ ನಾಯಕ. ಅವರು  ತಾರಾಮೌಲ್ಯ ಇರುವ ಕೆಲವೇ ಕೆಲವು ಸಂಘಟಕರಲ್ಲಿ ಒಬ್ಬರು. ಕ್ರಿಯಾಶೀಲ,  ಚಿಂತನಶೀಲ, ಸಹನಶೀಲ ಮತ್ತು ಆಧ್ಯಾತ್ಮಶೀಲಗಳನ್ನು ಮೈಗೂಡಿಸಿಕೊಂಡ ಮಹಾನಾಯಕ. ಇಂತಹ ಅಪರೂಪದ ದಣಿವರಿಯದ ಚೇತನ, ಸಂಘಟನ ಸೀಮಾಪುರುಷ, ಸಾಹಸಪುರುಷನನ್ನು ಗೌರವಿಸುವುದು ವಿಶ್ಕವಿದ್ಯಾಲಯದ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂಬುದಾಗಿ ಮುಂಬೈ ವಿಶ್ಕವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆದ ಡಾ ಜಿ ಎನ್ ಉಪಾಧ್ಯ ಅವರು ಅಭಿಪ್ರಾಯಪಟ್ಟರು. ಐಕಳ ಒಂದು ಸಣ್ಣ ಊರು. ತಮ್ಮ ಕರ್ತೃತ್ವ ಶಕ್ತಿಯಿಂದ ಐಕಳ ಇಂದು ವಿಶ್ವದ ಸಾಂಸ್ಕೃತಿಕ ನಕಾಶೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದೆ. ಸಹಕಾರ,  ಸಮಾಜಸೇವೆ ಒಂದು ಮಹೋನ್ನತ ತತ್ವ ಎಂದು ದೀನದಲಿತರ ಏಳಿಗೆಗೆ ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿಯವರು ನಾಡಿಗೆ ಮಾದರಿ ಎಂದು ಡಾ. ಜಿ ಎನ್ ಉಪಾಧ್ಯ ಅವರು ನುಡಿದರು. ಅವರು ಸೆಪ್ಟೆಂಬರ್ 10 ರಂದು ಸಾಂತಕ್ರೂಜ್ ಕಲೀನಾ ಕ್ಯಾಂಪಸ್ ನ ಮುಂಬೈ ವಿಶ್ಕವಿದ್ಯಾನಿಲಯದ ಕವಿ ಕುಸುಮಾಗ್ರಜ ಮರಾಠಿ…

Read More

ವಿದ್ಯೆಯ ಜತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಜೀವನ ಹಸನಾಗಲಿದೆ. ಭವಿಷ್ಯವನ್ನು ಉನ್ನತೀಕರಣಗೊಳಿಸುವಲ್ಲಿ ಕ್ರೀಡೆ ಒಳ್ಳೆ ರೀತಿಯಾದ ಮಾರ್ಗದರ್ಶಿ ಸೂತ್ರವನ್ನು ಒದಗಿಸಿಕೊಡುತ್ತದೆ ಎಂದು ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಹೇಳಿದರು. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನಡೆದ 28 ನೇ ವರ್ಷದ ಅಂಬಾ ಪ್ರೀಮಿಯರ್ ಲೀಗ್, ರಾಘು ಟ್ರೋಫಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಕ್ಲಾಡಿ ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಯಳೂರು ಮಾತನಾಡಿ, ಕ್ರಿಕೆಟ್ ಎನ್ನುವುದು ಕೇವಲ ಪಂದ್ಯಾಟಕ್ಕೆ ಮಾತ್ರ ಸೀಮಿತವಾಗಿರಿಸದೆ ಅಂಬಾ ಕ್ರಿಕೆಟರ್ಸ್ ತಂಡ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತಾ ಬಂದಿದೆ ಎಂದು ಶ್ಲಾಘೀಸಿದರು. ಮಂಜಯ್ಯ ಶೆಟ್ಟಿ ಪಾತ್ರಿಗಳು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಘುರಾಮ ಶೆಟ್ಟಿ, ಅಜಿತ್, ಅಮರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಹಣಿನಮಕ್ಕಿ, ಸತೀಶ್ ದೇವಾಡಿಗ, ಜೀವನ್ ಶೆಟ್ಟಿ, ಸುತನ್ ಶೆಟ್ಟಿ ಉಪಸ್ಥಿತರಿದ್ದರು. ವಿಘ್ನೇಶ ಸ್ವಾಗತಿಸಿದರು. ಅಜಿತ್ ವಂದಿಸಿದರು.

Read More

ಬಂಟರ ಸಂಘ ಮುಂಬಯಿ ಇದರ 2023-26 ರ ಮೂರು ವರ್ಷಗಳ ಅವಧಿಗೆ ನವೆಂಬರ್ 30 ರಂದು ಸಂಜೆ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ ಭಂಡಾರಿ ಸಭಾಗೃಹದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಬಂಟರ ಸಂಘ ಮುಂಬಯಿಯ 31ನೇ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಈಗಾಗಲೇ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಾಬಾ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಉದ್ಯಮಿ ಗಿರೀಶ್ ಶೆಟ್ಟಿ, ತೆಳ್ಳಾರ್, ಜೊತೆ ಕೋಶಾಧಿಕಾರಿಯಾಗಿ ಉದ್ಯಮಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮತ್ತು ಯುವ ವಿಭಾಗದ ಕಾರ್ಯಧ್ಯಕ್ಷರಾಗಿ ಸವಿನ್ ಜೆ. ಶೆಟ್ಟಿಯವರು ಮುಂದಿನ 3 ವರ್ಷಗಳ ಅವಧಿಗೆ ಆಯ್ಕೆಯಾದರು. ವೇದಿಕೆಯಲ್ಲಿ ನಿರ್ಗಮನ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಉಪಾಧ್ಯಕ್ಷ ರತ್ನಾಕರ…

Read More

ಯಾವಾಗ ಗಂಡ-ಹೆಂಡತಿ, ಮಕ್ಕಳೇ ಪರಿವಾರ ಎಂಬ ಸಂಸ್ಕೃತಿ ಹುಟ್ಟಿತೋ ಅಲ್ಲಿಂದ ಮದುವೆಯಲ್ಲಿ  ಸ್ವಾರ್ಥ ಪ್ರಾರಂಭವಾಗಿ ಪರಿವಾರದ ಘನತೆ ಹಾಗೂ ಸಂಸ್ಕಾರ ಮಾಯವಾಯಿತು. ತಂದೆ- ತಾಯಿ; ಅಕ್ಕ-ತಂಗಿ; ಅಣ್ಣ-ತಮ್ಮ; ಸೋದರ ಮಾವ -ಅತ್ತೆ ಹೀಗೆ ಇವರೊಡನಿದ್ದ ಅನ್ಯೋನ್ಯತೆ ಮಾಯವಾಗಿ ಪರಿವಾರ ಎಂಬ ಮೂಲ ಸಂಸ್ಕಾರಯುತ ಪದ್ಧತಿ ಸವಕಳಿಯಾಯಿತು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಪಾದನೆಗಾಗಿ ಬೋಧನೆ ವಿನಹ ವಿಶಾಲ ತಿಳುವಳಿಕೆಗೆ ಆಸ್ಪದ ಇಲ್ಲ. ಎಲ್ಲಿ ದೂರದೃಷ್ಠಿ, ತ್ಯಾಗ, ಸಮರ್ಪಣಾ ಮನೋಭಾವನೆ ಇರುತ್ತದೆಯೋ ಅಲ್ಲಿ ಪರಿವಾರದ ಬೇರುಗಳು ಬಲವಾಗಿರುತ್ತದೆ. ಸಂಸಾರದ ದೀರ್ಘ ಬಾಳಿಕೆಗೆ ಬುನಾದಿ ಈ ಅನುಭವ ಸಂಪನ್ನ ಪರಿವಾರದಿಂದ ಸಾಧ್ಯ ಹಾಗೂ ಅದರ ಅವಶ್ಯವಿದೆ. ಇಂದು ಅಂತಹ ವಾತಾವರಣವೇ ಇಲ್ಲವಾಗಿದೆ. ಕೇವಲ ಸೊಬಗು, ಪ್ರಲೋಭನೆ, ಸಂಭ್ರಮ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಬದುಕನ್ನು ಪರಿವಾರದಿಂದ ದೂರ ಮಾಡಿಕೊಳ್ಳುತ್ತಾ ಸಮಸ್ಯೆಗೆ ಒಳಗಾಗಲು ಸಮೃದ್ಧ ಪರಿವಾರದ ಮಾರ್ಗದರ್ಶನದ ಕೊರತೆಯು ಕಾರಣ ಎಂದು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 02.07.2023 ರವಿವಾರ ಕನ್ನಡ ವೆಲ್ಫೇರ್ ಸೊಸಾಯಿಟಿ ಸಭಾಗೃಹ ಫಾಟ್ಕೋಪರ್ ಇಲ್ಲಿ…

Read More

ಚಿಕ್ಕಂದಿನಿಂದಲೇ ವಿಜಯಕುಮಾರ್ ಶೆಟ್ಟಿ ಅವರು ಬಹುಮುಖ ಪ್ರತಿಭಾವಂತರು. ಇವರು ನಮ್ಮೂರಿನವರು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಅದ್ಭುತ ನಟನಾಗಿರುವ ವಿಜಯಕುಮಾರ್ ಶೆಟ್ಟಿಯವರು ಚಿತ್ರರಂಗದ ಹೀರೋ ಆಗಿ ಮೆರೆಯಬೇಕಿತ್ತು. ಆದರೆ ನಾಟಕ ರಂಗವನ್ನೇ ನೆಚ್ಚಿಕೊಂಡ ವಿಜಯಕುಮಾರ್ ಶೆಟ್ಟಿ ಅವರು ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯ. ಕಲಾ ಜಗತ್ತು ಎಂಬ ಕಲಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಕಳೆದ 44 ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯನ್ನು ಮಾಡುತ್ತಾ ಬಂದಿರುವರು. ಅದೆಷ್ಟೋ ಕಲಾವಿದರನ್ನು ರೂಪುಗೊಳಿಸಿ ಅವರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಕಲಾಕ್ಷೇತ್ರದಲ್ಲಿ ಸಾಧನೆಯ ಮೂಲಕ ಈಗಾಗಲೇ ಲಿಮ್ಕಾ ಬುಕ್ ಆಫ್ ದಾಖಲೆಗೆ ವಿಜಯಕುಮಾರ್ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ 70ರ ಹರೆಯದಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನ ಶೀಲರಾಗಿದ್ದಾರೆ. ಇದರಲ್ಲಿ ಅವರಿಗೆ ಜಯವಾಗಲಿ. ನಮ್ಮ ನಾಡಿನ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆ ಹಾಗೂ ಸಾಧನೆಯನ್ನು ಮಾಡಿರುವ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸುವಂತಾಗಲಿ ಎಂಬುದೇ…

Read More

ಎಲ್ಲರಿಗೂ ತಿಳಿದಿರುವಂತೆ ಸಮಯವು ಯಾರಿಗೂ ಕಾಯುವುದಿಲ್ಲ. ಮತ್ತು ಅದು ಹಿಂದಕ್ಕೂ ಬರುವುದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ನಾವು ಸಾಗಬೇಕು. “ನಾವು ಸಮಯವನ್ನು ಗೌರವಿಸದಿದ್ದರೆ, ಸಮಯವು ನಮ್ಮನ್ನು ಗೌರವಿಸುವುದಿಲ್ಲ”. ಸಮಯಕ್ಕೆ ಸರಿಯಾಗಿ ಏಳುವುದು, ಊಟ ಮಾಡುವುದು, ಓದುವುದು ಮತ್ತು ನಿದ್ದೆ ಮಾಡುವುದು ಹೀಗೆ ಎಲ್ಲಾ ಕೆಲಸವನ್ನು ಮಾಡುವುದೇ ಉತ್ತಮ. ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ-ವಿಚಾರ ಮಾತ್ರ. ಎಲ್ಲರೂ ಕಾಲಕ್ಕೆ ತಕ್ಕಂತೆ ಸಾಗಬೇಕು ಮತ್ತು ಬದಲಾಗಬೇಕು. ಸಮಯ ಬರುತ್ತದೆ ಹಾಗೇ ಹೋಗುತ್ತೆ ಯಾರಿಗಾಗಿಯೂ ನಿಲ್ಲುವುದಿಲ್ಲ. ಇದನ್ನು ಯಾರಿಂದಲೂ ಮಾರಲು ಸಾಧ್ಯವಿಲ್ಲ ಹಾಗೇ ಖರೀದಿಸಲೂ ಸಾಧ್ಯವಿಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಲೀ ಅಥವಾ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಾಗಲೀ ಎಲ್ಲರಿಗೂ ಒಂದೇ ಸಮಯ ಅದುವೇ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ಇದರ ಬಗ್ಗೆ ತಿಳಿದವರು ಎಂದಿಗೂ ಜೀವನದಲ್ಲಿ ಮುಂದೆ ಸಾಗುತ್ತಾರೆ. “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಗಾದೆ ನೂರಕ್ಕೆ ನೂರು ಸತ್ಯ. ಹಾಗೆಯೇ…

Read More

ಮಂಗಳೂರು: ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಸಮಾಜದ ಎಲ್ಲರೊಂದಿಗೆ ಬೆರೆಯುವ ವಿಶಾಲ ಮನೋಭಾವ ಹೊಂದಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಶ್ತೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಸಿಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಕ್ರಿಯಾಶೀಲರಾದರೆ ಸಾಧನೆ ಸಾಧ್ಯ. ಪ್ರತಿಭಾ ಪುರಸ್ಕಾರದಿಂದ ಪ್ರತಿಭಾ ಪಲಾಯನ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಮಾತನಾಡಿ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಪ್ರಶಂಸನೀಯ ಎಂದರು. ಆರ್ಥೊಪೆಡಿಕ್ಸ್ ಸರ್ಜನ್ ಡಾ. ಬಿ. ಸಚ್ಚಿದಾನಂದ ರೈ ಆವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು…

Read More

ಆಧುನಿಕ ಜೀವನ ಶೈಲಿಯ ಇಂದಿನ ದಿನಗಳಲ್ಲಿ ಎಳೆಯ ಮಕ್ಕಳು ಆಗಾಗ ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಬಡ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಕೆಲವು ಮಾರಕ ವಿಚಿತ್ರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಮಾನವಾಂತಕರಣ ಹೊಂದಿರುವ ಅಪರೂಪದ ವೈದ್ಯರೇ ಡಾ. ಸುಧಾಕರ ಶೆಟ್ಟರು. ಪುಣೆಯ ಎಫ್ ಸಿ ರೋಡ್ ಹಾಗೂ ಎಂ ಜಿ ರೋಡ್ ನಲ್ಲಿ “ಬೇಬಿ ಫ್ರೆಂಡ್ ಕ್ಲಿನಿಕ್” ಹೊಂದಿರುವ ಇವರು ಇಂಥಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಕಾಯಿಲೆ ಕುರಿತ ಅಧ್ಯಯನ ನಡೆಸಿ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿ ಅದೃಷ್ಟೋ ಅಮೂಲ್ಯ ಜೀವ ಉಳಿಸಿದ ಪುಣ್ಯಾತ್ಮರು. ವೈದ್ಯೋ ನಾರಾಯಣ ಹರಿ: ಎಂಬ ಉಕ್ತಿ ಇವರ ಪಾಲಿಗೆ ಅನ್ವರ್ಥ ಎನಿಸಿದೆ. ರೋಗ ನಿರೋಧಕ ಲಸಿಕೆಗಳಿರಲಿ, ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಮುನ್ನೆಚ್ಚರಿಕೆ…

Read More

ವಿದ್ಯಾಗಿರಿ (ಮೂಡುಬಿದಿರೆ): ‘ವಿದ್ಯಾರ್ಥಿಗಳು ಕಾಕಚೇಷ್ಟ, ಬಕ ಧ್ಯಾನ, ಶ್ವಾನ ನಿದ್ರೆ, ಅಲ್ಪಾಹಾರಿ ಹಾಗೂ ಗೃಹ ತ್ಯಾಗಿ ಎಂಬ ಪಂಚಗುಣಗಳನ್ನು ರೂಢಿಸಿಕೊಳ್ಳಬೇಕು’ ಎಂದು ಮಂಗಳೂರಿನ ಅಲೋಷಿಯಸ್ ಕಾಲೇಜು (ಸ್ವಾಯತ್ತ) ಕುಲಸಚಿವ, ಇಂಗ್ಲಿಷ್ ಸಹ ಪ್ರಾಧ್ಯಾಪಕ ಆಲ್ವಿನ್ ವಿನ್ಸೆಂಟ್ ಡೇಸಾ ಹೇಳಿದರು. ವಿದ್ಯಾಗಿರಿಯ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ – ಕೃಷಿ ಸಿರಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಕೇಂದ್ರೀಯ (ಸಿಬಿಎಸ್‍ಸಿ) ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಯತ್ನ, ಶ್ರದ್ಧೆ, ಎಚ್ಚರ, ಇಂದ್ರಿಯಗಳ ನಿಯಂತ್ರಣ ಹಾಗೂ ಔದಾಸೀನದ ಚೌಕಟ್ಟಿನಿಂದ ಹೊರಬರುವುದೇ ಈ ಪಂಚ ಗುಣಗಳು’ ಎಂದು ಅವರು ವಿವರಿಸಿದರು. ಡಾ.ಎಂ. ಮೋಹನ ಆಳ್ವ ಅವರು ಬಿತ್ತಿದ ಶೈಕ್ಷಣಿಕ ಬೀಜ ಇಂದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದೆ ಎಂದು ಶ್ಲಾಘಿಸಿದರು. ನೀವು ಕಲಿತ ಶಾಲೆಯನ್ನು ಎಂದೂ ಮರೆಯಬೇಡಿ. ಶಾಲೆಗೆ ಮರಳಿ ಕೊಡುಗೆ ನೀಡಿ ಎಂದು ಹಿತವಚನ ಹೇಳಿದರು. ಆಳ್ವಾಸ್ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಶೈಕ್ಷಣಿಕ ಆಡಳಿತಕ್ಕೆ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಮಕ್ಕಳೊಂದಿಗೆ…

Read More

ದಸರಾ ಹತ್ತಿರಬರುತ್ತಿದೆ. ಮಂಗಳೂರು ಮಧುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ನವರಾತ್ರಿ ನವಶಕ್ತಿಯನ್ನು ವಿಶೇಷ ರೀತಿಯಲ್ಲಿ ಆರಾಧಿಸಿ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವ ಪರ್ವಕಾಲ. ಹಿಂದೆ ದಸರಾ ಎಂದರೆ ಮೈಸೂರು ಎನ್ನುವ ಕಾಲವಿತ್ತು. ಆದರೆ ಇಂದು ಜನಾರ್ದನ ಪೂಜಾರಿಯವರ ಕನಸಿನ ಮಂಗಳೂರು ದಸರಾ ವಿಶ್ವದ ಗಮನ ಸೆಳೆದಿರುವುದು ಸುಳ್ಳಲ್ಲ. ಮಂಗಳೂರಿನ ಅಧಿದೇವತೆ ಮಂಗಳಾದೇವಿ ಸನ್ನಿಧಿಯಲ್ಲಿ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಮುಖವಾಗಿ ಅದ್ದೂರಿ ದಸರಾವನ್ನು ನಾವು ಕಾಣಬಹುದು. ಅಲ್ಲದೆ ಮಂಗಳೂರಿನಾದ್ಯಂತ ಶಾರದಾ ಉತ್ಸವದ ಮೆರವಣಿಗೆ ಸೇರಿದಂತೆ ದಸರಾ ಶೋಭಯಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ. ಶೋಭಾಯಾತ್ರೆಯಲ್ಲಿ ನಮ್ಮ ಸಂಸ್ಕೃತಿ, ಧರ್ಮ, ಪುರಾಣದ ಕಥೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಜೊತೆಗೆ ಹಲವು ಕಲಾ ಪ್ರಕಾರಗಳನ್ನು ನಾವು ಕಾಣಬಹುದು. ಇತ್ತೀಚೆಗೆ ಕುದ್ರೋಳಿ ದಸರಾ ಸಮಿತಿಯ ನಿರ್ಧಾರದ ಒಂದು ವರದಿಯನ್ನು ಓದಿದೆ, ಅದರಲ್ಲಿ ಶೋಭಾಯಾತ್ರೆಯಲ್ಲಿ ದೈವದ ಸ್ತಬ್ಧ ಚಿತ್ರಗಳಿಗೆ ಅವಕಾಶವಿಲ್ಲ. ಅಲ್ಲದೆ ಯಾವುದೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದಿತ್ತು. ಈ ನಿರ್ಧಾರ ಸ್ವಾಗತಾರ್ಹ. ಆದರೆ ಇಂತಹ ಧಾರ್ಮಿಕ ಶೋಭಯಾತ್ರೆಯಲ್ಲಿ…

Read More