Author: admin

ಮರೆಯಲಾಗದ ಬಂಟ ಸಮಾಜ ಸೇವಾ ಸಾಧಕರು ಶೀರ್ಷಿಕೆಯಡಿ ಬಂಟರವಾಣಿಯಲ್ಲಿ ಪ್ರಕಟವಾದ ವಿವಿಧ ಕ್ಷೇತ್ರದಲ್ಲಿ ಮಿಂಚಿ‌ ಮರೆಯಾದ ಮಹನೀಯರ ಸಾಧನೆಯ ಹೆಜ್ಜೆಯ ಗುರುತುಗಳು ಅಳಿದರೂ ಉಳಿದವರು ಈ ಕೃತಿ. ಕಾಯ ಅಳಿದರೂ ಕಾಯಕದ ಕೀರ್ತಿ ಉಳಿಯುವುದು ‌ಹೇಗೆ?ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ‌ ಅರಿವನ್ನು ಈ ಕೃತಿ ಓದುಗರಿಗೆ ನೀಡಲಿದೆ. ಬಂಟ ಸಮುದಾಯದ ‌ಹಿರಿಯರು ನಮಗೆ ನಾವೇ ಶಿಲ್ಪಿಗಳು ಆದ ಪರಿಯನ್ನು, ಉನ್ನತಿಯ ಮೆಟ್ಟಿಲೇರಿದ ಶ್ರಮಜೀವಿಗಳ ಬದುಕಿನ ವಿವಿಧ ಮಗ್ಗುಲುಗಳ ಚಿತ್ರಣ ಈ ಕೃತಿಯಲ್ಲಿದೆ. ಸಮಾಜದ ಜನರ ಮನದಲ್ಲಿ ಕುಟುಂಬಿಕರ‌ ಹೃದಯದಲ್ಲಿ ಸದಾ ನೆಲೆ ನಿಂತ ಮಹಾ‌‌ ಸಾಧಕರ ಜೀವನದ ಎತ್ತರ‌ ಬಿತ್ತರಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಮೂಡಿ ಬಂದ ಕೃತಿ ಬಂಟರ ಸಂಘ ಮುಂಬಯಿ ಬಂಟರವಾಣಿಯ ಸಾಹಿತ್ಯ ಸಂಭ್ರಮದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ ಶೆಟ್ಟಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಮರೆಯಾದ ಮಹನೀಯರ ಪರಿಚಯ ಲೇಖನ ರೂಪದಲ್ಲಿ ಬಂಟರವಾಣಿಯ ಕೈ ಸೇರಿದ್ದನ್ನು ಒಂದುಗೂಡಿಸಿ ಕೃತಿರೂಪ ಕೊಟ್ಟು ಬಂಟರ ಸಂಘ ಮುಂಬಯಿ ಈ ಕೃತಿಯನ್ನು ಪ್ರಕಾಶಿಸಿದೆ.…

Read More

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಧಾನಸಭಾ ಚುನಾವಣೆಗೆ ಅರ್ಜಿ ಆಹ್ವಾನಿಸಿದ್ದ ಮಾದರಿಯಲ್ಲಿಯೇ ವಿಧಾನ ಪರಿಷತ್ತಿಗೆ ನಡೆಯಲಿರುವ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ವರ್ಧಾ ಆಕಾಂಕ್ಷಿಗಳು ಕೆಪಿಸಿಸಿಗೆ ಎರಡು ಲಕ್ಷ ರೂಪಾಯಿ ಮತ್ತು ಅರ್ಜಿ ಶುಲ್ಕ ಐದು ಸಾವಿರ ರೂ ಪಾವತಿಸಬೇಕಿದೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ಪಕ್ಷದೊಳಗೆ ಆಕಾಂಕ್ಷಿಗಳ ನಡುವೆ ಭಾರೀ ಸ್ವರ್ಧೆ ಏರ್ಪಟ್ಟಿದ್ದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ವ್ಯಾಪ್ತಿಯನ್ನು ಹೊಂದಿರುವ ನೈಋತ್ಯ ಪದವೀಧರರ ಕ್ಷೇತ್ರದಿಂದ ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಹರಿಪ್ರಸಾದ್ ರೈ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೆಚ್. ಪಿ. ಆರ್. ಫೌಂಡೇಶನ್ ಮುಖ್ಯಸ್ಥರಾಗಿರುವ ಹರಿಪ್ರಸಾದ್ ರೈ ಅವರು ಪುತ್ತೂರು, ಮಂಗಳೂರು, ಸೊರಬ ಮತ್ತು ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.…

Read More

ಪ್ರತಿಯೊಬ್ಬರೂ ಸೇವಕರಾಗಿದ್ದು, ಕೆಲಸ ಕಾರ್ಯಕ್ಕಾಗಿ ಸಮಿತಿಗಳನ್ನು ಮಾಡಲಾಗಿದೆ. ಎಲ್ಲರೂ ನಮ್ಮವರೆಂದು ಭಾವಿಸಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಸೇವಕತನದ ರುಚಿ ಲಕ್ಷ್ಮೀ ಹನುಮಂತನಿಗೆ ಮಾತ್ರ ಗೊತ್ತು. ಎಲ್ಲರೂ ಒಂದಾಗಿ ರಥವನ್ನು ಎಳೆಯುವ ಕೆಲಸವಾಗಲಿ. ಗ್ರಾಮ ಗ್ರಾಮದಲ್ಲಿ ಜಾಗೃತಿಯ ಕಾರ್ಯ ರಥೋತ್ಸವದ ಮೂಲಕ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಜ.14 ರಂದು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ.18 ಮತ್ತು ಫೆ.19 ರಂದು ನಡೆಯುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಜವಾಬ್ದಾರಿಗಳನ್ನು ಸೇವಾ ಮನೋಭಾವದಲ್ಲಿ ನಡೆಸುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಜಾತ್ರೆ ಯಾತ್ರೆಯಲ್ಲಿ ತುಳುವಿನ ಮಂಥನ ನಡೆಯಲಿದೆ. ಪ್ರತಿಯೊಬ್ಬರು ಸಹಾಯಕರಾದಾಗ ಉತ್ತಮ ರೀತಿಯ ಕಾರ್ಯಕ್ರಮ ನಡೆಯಲು ಸಾಧ್ಯ. ರಾಮಾಯಣದ ಜೀವಾಳ ಹನುಮಂತನಾಗಿದ್ದು, ಸೇವೆಗೆ ಇನ್ನೊಂದು ಹೆಸರಾಗಿದ್ದಾನೆ. ರಾಮಾಯಣ, ಮಹಾಭಾರತ ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ. ರಾಮಮಂದಿರ ನಿರ್ಮಾಣ ರಾಜಕೀಯವಲ್ಲ.…

Read More

ಗುರುಪುರ ಬಂಟರ ಮಾತೃ ಸಂಘ ಯುವ ವಿಭಾಗ ವತಿಯಿಂದ ಜರಗುವ ಬಂಟ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಸಂಘದ ಕಛೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗಮಾರ್ ಗುತ್ತು ವಹಿಸಿದ್ದರು. ಸಭೆಯಲ್ಲಿ ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ಜಯರಾಂ ಶೆಟ್ಟಿ ವಿಜೇತ, ಯುವ ವಿಭಾಗದ ಕಾರ್ಯದರ್ಶಿ ಪ್ರಖ್ಯಾತ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಾಜಕುಮಾರ್ ಶೆಟ್ಟಿ, ಸುದರ್ಶನ್ ಶೆಟ್ಟಿ, ನಾಗರಾಜ್ ರೈ ತಿಮಿರಿ ಗುತ್ತು, ಶಿವರಾಜ್ ಶೆಟ್ಟಿ, ಸಂದೀಪ್ ಆಳ್ವ, ಕೃಷ್ಣಕಾಂತ್ ಶೇಣವ, ರಘುಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Read More

ಮುಂಬಯಿ, ಆ.27: ಜೀವನದ ಅನುಭವ ಲೇಖನಿ ರೂಪದಲ್ಲಿ ಬರುವುವೇ ಸಾಹಿತ್ಯವಾಗಿದೆ. ಬದುಕಿನ ಜಂಜಾಟವನ್ನ ಅತೀ ಹೆಚ್ಚು ಎದುರಿಸುವ ಹೆಣ್ಣು ತನ್ನನ್ನು ತಾನು ಸ್ವತಂತ್ರಗೊಳಿಸಿ ತನ್ನ ಭಾವನೆಯನ್ನು ಒಂದು ರೂಪದಲ್ಲಿ ಹೊರಗೆ ತರಬೇಕು ಎಂದು ಕಾತರಿಸುತ್ತಿರುವಾಗ ಅವಳಿಗೆ ಸಿಕ್ಕಿದಂತಹ ಬರವಣಿಗೆಯ ಹಾದಿಯೇ ಸಾಹಿತ್ಯ. ಪ್ರಸ್ತುತ ಪ್ರತಿಭಾನ್ವಿತ ಸಾಹಿತಿಗಳು ಮರೆಯಾಗುತ್ತಾರೋ ಅನ್ನುವ ಸಂದೇಹ ನನ್ನನ್ನು ಕಾಡುತ್ತಿದೆ. ಆದರೆ ಅದಾಗದಂತೆ ಸೃಜನದಂತಹ ಸಂಘಟನೆ ಇನ್ನಷ್ಟು ಕೆಲಸ ಮುನ್ನಡೆಸಲಿ ಎಂದು ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಇದರ ಕೆಬಿಇಎಸ್ ವಿದ್ಯಾಲಯದ ಪ್ರಾಂಶುಪಾಲೆ ಅಮೃತಾ ಅಜಯ್ ಶೆಟ್ಟಿ ತಿಳಿಸಿದರು. ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಕಿರು ಸಭಾಗೃಹದಲ್ಲಿ ಬೃಹನ್ಮುಂಬಯಿಯಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ಆಯೋಜಿಸಿ ದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಅಮೃತಾ ಶೆಟ್ಟಿ ಮಾತನಾಡಿದರು. ಮುಂಬಯಿ ಕನ್ನಡ ಸಂಘ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿನ ಪದ್ಮಜಾ ಮಣ್ಣೂರ, ಡಾ| ದಾಕ್ಷಾಯಿಣಿ ಯಡಹಳ್ಳಿ, ಶಾರದಾ…

Read More

ಮೂಡುಬಿದಿರೆ: ‘ಸ್ವಯಂ (ವೈಯಕ್ತಿಕ) ಕುರಿತು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವವನೇ ಸ್ವಯಂ ಸೇವಕ’ ಎಂದು ಜವನೆರ್ ಬೆದ್ರ ಪ್ರತಿಷ್ಠಾನದ ಅಧ್ಯಕ್ಷ ಅಮರ್ ಕೋಟೆ ಹೇಳಿದರು. ಆಳ್ವಾಸ್ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ‘ಅಭಿವ್ಯಕ್ತಿ ವೇದಿಕೆ’ಯ 2024ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಶರೀರ ಇರುವುದೇ ಪರೋಪಕಾರ ಮಾಡಲು. ದೇಹವು ಸಮಾಜ ಸೇವೆ ಮಾಡಿದಾಗ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಸೇವೆಯಲ್ಲಿ ದೊಡ್ಡದು, ಸಣ್ಣದು ಎಂಬುದಿಲ್ಲ. ಅಸಹಾಯಕರೊಬ್ಬರಿಗೆ ರಸ್ತೆ ದಾಟಲು ಕೈ ಹಿಡಿದು ನೆರವು ನೀಡುವುದು, ಬಸ್‍ನಲ್ಲಿ ಹಿರಿಯರಿಗೆ ಕುಳಿತುಕೊಳ್ಳಲು ಅನುವು ಮಾಡುವುದೂ ಮಾದರಿ ಸಮಾಜಸೇವೆ ಎಂದು ವಿವರಿಸಿದರು. ಭಗವತ್‍ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ, ಲಾಭದ ನಿರೀಕ್ಷೆ ಇಲ್ಲದೇ ನಾವು ನಮ್ಮ ಕರ್ಮಗಳನ್ನು ಮಾಡಬೇಕು. ಮುಂದೊಂದು ದಿನ ಪ್ರತಿಫಲ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು. ಸೇವೆ ಮಾಡಲು ಸಮೂಹವೇ ಬೇಕಾಗಿಲ್ಲ. ನಮ್ಮ ಸಾಮಥ್ರ್ಯ, ಇತಿಮಿತಿಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡಬೇಕು. ಬದ್ಧತೆಯಿಂದ ಸೇವೆ ಮಾಡಿದರೆ,…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023 ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ವಹಿಸಿದರು. ತಾಲೂಕು ಅದ್ಯಕ್ಷ ಕೃಷ್ಣ ಕುಮಾರ್ ರವರು ಕನಕದಾಸರ ಕುರಿತ ಜೀವನ ಚರಿತ್ರೆ ವಿಸ್ತಾರವಾಗಿ ವಿವರಿಸಿ ಗುಣಗಾನ ಮಾಡಿದರು. ಮುಖಂಡರುಗಳಾದ ಉಡುಪಿ ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಷನ್‌ ಡಿಸೋಜ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಪಾಂಗಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಅಟೋ ಮಾಲಕರ ಮತ್ತು ಚಾಲಕರ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಗೌರವ ಅಧ್ಯಕ್ಷೆ ಗುಣವತಿ, ಕೋಶಾಧಿಕಾರಿ ಸುನಂದಾ ಟೀಚರ್, ಮುಖಂಡರುಗಳಾದ ಗುಲಾಬಿ, ಸಾದನಾ, ಹೇಮಾ‌, ನಳಿನಿ, ಸುಕನ್ಯಾ, ಗೌತಮ್…

Read More

ತ್ರಿರಂಗ ಸಂಗಮ ಮುಂಬಯಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಮೋಹನ ಸುವರ್ಣ ಸಂಭ್ರಮ” ಕಾರ್ಯಕ್ರಮವು ಅಕ್ಟೋಬರ್ 8 ರಂದು ದುಬೈನಲ್ಲಿ ಯಶಸ್ವಿಯಾಗಿ ಜರುಗಿತು. ದುಬೈಯ ಎಮಿರೇಟ್ಸ್‌ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡಿಗರು ಮತ್ತು ಮಹಾರಾಷ್ಟ್ರದ ರಾಜ್ಯದಿಂದ ತುಳು ಕನ್ನಡಿಗರು ಉಪಸ್ಥಿತರಿದ್ದರು. ಮುಂಬಯಿ ಬಂಟರ ಸಂಘದ ಮಾಜಿ‌ ಅಧ್ಯಕ್ಷರಾದ ಬಿ ವಿವೇಕ್ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಭವಾನಿ ಶಿಪ್ಪಿಂಗ್ ನ ಸಿಎಮ್ ಡಿ ಕುಸುಮೋಧರ ಶೆಟ್ಟಿಯವರು ಮುಖ್ಯ ಅತಿಥಿಯಾಗಿದ್ದರು. ಮುಂಬಯಿಯ ಪ್ರಸಿದ್ದ ಜ್ಯೋತಿಷಿ ಅಶೋಕ್ ಪುರೋಹಿತ್ ಆಶೀರ್ವಚನವಿತ್ತರು. ಎಮ್ ಸಿ ಎ ಯ ಮಾಜಿ ಜೊತೆ ಕಾರ್ಯದರ್ಶಿ ಡಾ.ಪಿ ವಿ ಶೆಟ್ಟಿ, ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಯುಎಇಯ…

Read More

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ರಮಾನಾಥ ಹೆಗ್ಡೆ (72) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31 ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

Read More

ಸಾಧಿಸಬೇಕು ಎಂಬ ಛಲ ಅಛಲವಾಗಿರಲು ಸಾಧನೆಯ ಶಿಖರದ ಪಯಣ ಸುಖಕರವಾಗಿಸುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಿಂತವರು ಮಹೇಶಣ್ಣ. ‘ಯಾರು ಕೇಳಲಿ ಎಂದು ನಾನು ಹಾಡುವುದಲ್ಲ’ ಎಂಬ ಡಾ.ಜಿ ಎಸ್ ಶಿವರುದ್ರಪ್ಪನವರ ಸ್ಪೂರ್ತಿದಾಯಕ ಕವಿವಾಣಿಯಂತೆ ಅದ್ಯಾರೋ ನನ್ನ ಗುರುತಿಸಿ ಮಾನ ಸಮ್ಮಾನ ಮಾಡುತ್ತಾರೆ? ಪ್ರಚಾರದ ಅಬ್ಬರದಲ್ಲಿ ನನ್ನ ಮುಳುಗಿಸುತ್ತಾರೆ? ಎಂದು ಮಹೇಶಣ್ಣ ಸಮಾಜ ಸೇವೆಗೆ ಇಳಿದವರಲ್ಲ. ತನ್ನಷ್ಟಕ್ಕೆ ತನ್ನಿಷ್ಟಕ್ಕೆ ಎಂಬಂತೆ ಕ್ಷಣ ಕ್ಷಣವೂ ನೊಂದವರ ಬದುಕಿಗೆ ನಂದಾ ದೀಪವಾದವರು. ಕಲಿಯಬೇಕು ಎಂಬ ಆಸೆ ಹೊತ್ತ ಬಡ ಮಕ್ಕಳ ಭವಿಷ್ಯ ರೂಪಿಸುವಲ್ಲಿಯೇ ತನ್ನ ನೋವುಗಳನ್ನು ಮರೆತು ಅಲ್ಲಿ ಖುಷಿಯನ್ನು ಕಂಡು ಕೊಂಡವರು. ಬಂಟರ ಸಂಘದ ಎಸ್ ಎಮ್ ಶೆಟ್ಟಿ ಶಾಲಾ ಕಾಲೇಜಿನಲ್ಲಿ ಶಿಕ್ಷಣ ಬಯಸಿದ ಬಂಟರ ಮಕ್ಕಳೊಂದಿಗೆ ಇನ್ನಿತರ ಜಾತಿ ಪಂತದವರ ಮಕ್ಕಳಿಗೂ ಅಲ್ಲಿ ಕಲಿಯಲು ಪ್ರೋತ್ಸಾಹಿಸಿದರು. ಮಾತ್ರವಲ್ಲ ಅವರಿಗೆ ಧನ ಸಹಾಯದ ಅಗತ್ಯ ಕಂಡು ಬಂದಾಗ ಉದಾರ ದಾನಿಯಾದರು. ಇತ್ತೀಚೆಗೆ ನಾನು ನನ್ನ ಮಕ್ಕಳೊಂದಿಗೆ ಇಲ್ಲೇ ಪರಿಸರದ ಒಂದು ಹೋಟೆಲಿಗೆ ಊಟಕ್ಕೆ ಹೋಗಿದ್ದೆ. ಕೆಲವು…

Read More