ಮುಂಬಯಿ ಮಹಾನಗರದಲ್ಲಾಗಲೀ ಯಾ ಉಪನಗರಗಳಲ್ಲಾಗಲೀ ಸಂಘ ಸಂಸ್ಥೆಗಳ ಯಾವುದೇ ಸಮಾರಂಭವನ್ನು ನಡೆಸುವಾಗ ಅಂತಹ ಸಮಾರಂಭಗಳಲ್ಲಿ ನಾಟಕ ಯಾ ಸಾಂಸ್ಕೃತಿಕ ವೈಭವ ಇದ್ದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಲ್ಲಿ ಸಂದೇಹವಿಲ್ಲ. ಮಾರ್ಚ್ ತಿಂಗಳ 23 ರಂದು ತುಳು ಸಂಘ, ಬೊರಿವಲಿಯ 13ನೇ ವಾರ್ಷಿಕೋತ್ಸವ ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೊರಿವಲಿ ಸಂಸ್ಕೃತಿ ಕೇಂದ್ರ, ಬೊರಿವಲಿ (ಪ.) ಮುಂಬಯಿ ಇಲ್ಲಿ ತುಳು ಸಂಘ, ಬೊರಿವಲಿಯ ಗೌರವ ಅಧ್ಯಕ್ಷರೂ ಜನಪ್ರಿಯ ಉದ್ಯಮಿಯು ಆದ ಡಾ. ವಿರಾರ್ ಶಂಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳು ಸಂಘ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಿದ್ದು ದಿ. ಯು ಆರ್ ಚಂದರ್ ರಚಿಸಿದ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದಿಂದ “ಜಾನಪದ ವಿಭೂಷಣ” ಪ್ರಶಸ್ತಿ ಪುರಸ್ಕೃತ ಕರುಣಾಕರ ಕೆ ಕಾಪು ಇವರು ನಿರ್ದೇಶಸಿದ ನಾಟಕ “ಕಲ್ಕುಡ-ಕಲ್ಲುರ್ಟಿ” ಸಮಯದ ಅಭಾವವಿದ್ದರೂ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಪ್ರದರ್ಶನಗೊಂಡಿತು. ತೆರೆದ ತುಂಬಿದ ಸಭಾಂಗಣದಲ್ಲಿ ಮೌನವಾಗಿ ನಾಟಕವನ್ನು ವೀಕ್ಷಿಸುತ್ತಿದ್ದ ಕಲಾಭಿಮಾನಿಗಳು ನಾಟಕಕಾರರಿಗೆ ಹೆಚ್ಚಿನ ಕುತೂಹಲ ತಂದಿತ್ತು. ಅಭಿನಯ ಮಂಟಪದ ಅನುಭವಿ ಕಲಾವಿದರು ಈ ನಾಟಕದಲ್ಲಿ ಪಾತ್ರವಹಿಸಿದ್ದು ನಾಟಕವು ಜನಾಕರ್ಷಣೆಯಲ್ಲಿ ಯಶಸ್ಸಿಯಾಗಿತ್ತು.
ಕಲ್ಕುಡ-ಕಲ್ಲುರ್ಟಿ ತುಳು ಜಾನಪದ ಐತಿಹಾಸಿಕ ನಾಟಕದಲ್ಲಿ ಶಂಬು ಕಲ್ಕುಡನಾಗಿ ಕರುಣಾಕರ ಶೆಟ್ಟಿ ಹೆಬ್ರಿ ಅಭಿನಯಿಸಿದರೆ, ಚಲನ ಚಿತ್ರ ನಟ ಅಶೋಕ್ ಕುಮಾರ್ ಕಾರ್ನಾಡ್ ಬೀರ ಕಲ್ಕುಡನಾಗಿ ಮೆರೆದಿದ್ದಾರೆ. ಭೈರವ ಅರಸು ಶೈಲೇಶ್ ಪುತ್ರನ್, ಬುದ್ಧಿಚಂದ್ರ (ಮಂತ್ರಿ) ನಾಗಿ ನವೀನ್ ಸುವರ್ಣ ಬೇಂಗ್ರೆ, ಯುವರಾಜ ಗುಣಕೀರ್ತಿಯ ಪಾತ್ರದಲ್ಲಿ ಸಚಿನ್ ದೇವಾಡಿಗ ಪಡುಬಿದ್ರಿ, ನಾಗಪ್ಪ ಮತ್ತು ಕಲ್ಲುಟ್ಟಿ ಉದ್ಭವ ಸಚಿನ್ ಪೂಜಾರಿ ಭಿವಂಡಿ, ಕಲ್ಕುಡ ಉದ್ಭವ ಕರುಣಾಕರ ಪೂಜಾರಿ, ಈಶ್ವರನಾಗಿ ಶ್ರೀಕಾಂತ್ ಶೆಟ್ಟಿ ಸೂಡ, ಬೀರ ಕಲ್ಕುಡನ ತಾಯಿ ಇರವಡೆ ಪಾತ್ರದಲ್ಲಿ ವಿಜಯಲಕ್ಷ್ಮಿ ಉದ್ಯಾವರ, ಸತ್ಯಮ್ಮನಾಗಿ ವೀಣಾ ಸುವರ್ಣ, ರಾಣಿ ರೂಪಮತಿಯಾಗಿ ದೀಕ್ಷ ದೇವಾಡಿಗ, ನಾಗಮ್ಮನಾಗಿ ಕು. ದೀಕ್ಷಾ ಪೂಜಾರಿ, ಸಣ್ಣ ಬೀರ ಮಾ. ಶ್ರೇಯಸ್ ಶೆಟ್ಟಿ, ಸಣ್ಣ ಸತ್ಯಮ್ಮಳಾಗಿ ಬೀಬಿ ಭೂಮಿ ಬಿ. ಶೆಟ್ಟಿ ಉತ್ತಮವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.
ಸಂಭಾಷಣೆ ಯಾ ಅಭಿನಯದಲ್ಲಿ ಹಾಗೂ ದೀಪ ಸಂಯೋಜನೆಯಲ್ಲಿ ಯಾವುದೇ ಕುಂದು ಕೊರತೆ ಕಂಡು ಬಾರದೆ ಅಭಿಮಾನಿಗಳಿಗೆ ಮನದಟ್ಟುವಂತೆ ನೀಡಿದ ಸಮಯವಕಾಶದ ಒಳಗೆ ನಾಟಕವನ್ನು ಯಶಸ್ಸಿಯಾಗಿ ಪ್ರದರ್ಶಿಸುವಲ್ಲಿ ಈಗಾಗಲೇ ಮುಂಬಯಿ ಮಾತ್ರವಲ್ಲ ದೇಶದ ಇತರೆಡೆ ನೂರಾರು ತುಳು ಕನ್ನಡ ನಾಟಕವನ್ನು ನಿರ್ದೇಶಿಸಿ ಅಪಾರ ಅನುಭವವನ್ನು ಹೊಂದಿದ ಅಭಿನಯ ಮಂಟಪದ ನಿರ್ದೇಶಕ ಕರುಣಾಕರ ಕೆ. ಕಾಪು ಇವರ ಪ್ರತಿಭೆಯನ್ನು ಮೆಚ್ಚಲೇ ಬೇಕಾಗಿದೆ. ಇದಕ್ಕೆ ಅವರ ತಂಡದ ಪ್ರೋತ್ಸಾಹವೂ ಇದೆ.
ಕಲ್ಕುಡ-ಕಲ್ಲುರ್ಟಿ ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಿದವರು ಅನೇಕರು. ಅದರಲ್ಲಿ ಮುಖ್ಯವಾಗಿ ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ ಶೆಟ್ಟಿ ಮೂಡುಬಿದ್ರೆ, ಧನೀಶ್ ಕೆ ಕೋಟ್ಯಾನ್, ರಾಮಚಂದ್ರ ಕೋಟ್ಯಾನ್, ಭಾಸ್ಕರ ಎಂ ಶೆಟ್ಟಿ ಅತ್ತೂರು, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಪ್ರಮೀಳಾ ಶೆಟ್ಟಿ, ಗೀತಾ ಎಲ್ ದೇವಾಡಿಗ, ಪ್ರತಿಮಾ ಬಂಗೇರ, ಮೇಕಪ್ ಮಂಜುನಾಥ ಶೆಟ್ಟಿಗಾರ್, ಸಂಗೀತದಲ್ಲಿ ಗೌತಮ್ ದೇವಾಡಿಗ ಮೂರೂರು, ತಾಂತ್ರಿಕ ವರ್ಗದಲ್ಲಿ ಅಶೋಕ್ ಕುಮಾರ್ ಕೊಡ್ಯಡ್ಕ, ತುತ್ತೈತ್ತ ನಾಗೇಶ್ ಪೊಳಲಿ, ನೃತ್ಯ ಸಂಯೋಜನೆ ಶ್ರಾವ್ಯಾ ಶೆಟ್ಟಿ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಈ ನಾಟಕವು ಜನಮೆಚ್ಚಿಗೆ ಪಡೆದಿದೆ ಅನ್ನುವುದರಲ್ಲಿ ಸಂದೇಹವಿಲ್ಲ.
ಈಶ್ವರ ಎಂ. ಐಲ್