Author: admin
ಆಳ್ವಾಸ್ ಕಾಲೇಜಿನಲ್ಲಿ ವಲ್ಕನ್ ಅಕಾಡೆಮಿ ವೆಬ್ಸೈಟ್, ಉತ್ಪನ್ನಗಳ ಅನಾವರಣ ‘ಬದುಕು ನಿರ್ಧರಿಸುವ ಗುಣಮಟ್ಟದ ಶಿಕ್ಷಣ’
ವಿದ್ಯಾಗಿರಿ: ‘ಶಿಕ್ಷಣ ಎಲ್ಲರಿಗೂ ದೊರೆಯಲೇಬೇಕಾದ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಯ ಬದುಕನ್ನು ನಿರ್ಧರಿಸುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ವಲ್ಕನ್ ಅಕಾಡೆಮಿ ಹಮ್ಮಿಕೊಂಡಿದ್ದ ವೆಬ್ಸೈಟ್ ಹಾಗೂ ಉತ್ಪನ್ನಗಳ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿದ್ಯಾಥಿಗಳು ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗಿರಲು ಸಾಧ್ಯ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾತ್ವಿಕ್ ಈ ಮೂಲಕ ಪ್ರಯತ್ನಿಸಿದ್ದಾರೆ’ ಎಂದರು. ಸ್ವಯಂಭೂ ಸಂಸ್ಥಾಪಕ ಡಾ.ಸಂಗೀತಾ ಜಿ. ಕಾಮತ್ ಮಾತನಾಡಿ, ‘ವಲ್ಕನ್ ಅಕಾಡೆಮಿ ಪ್ರಯತ್ನವು ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯ ಸಮಸ್ಯೆಗೆ ಪರಿಹಾರವಾಗಲಿದೆ’ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಇಂಗ್ಲಿಷ್ ಕಲಿಕೆ ಸುಲಲಿತಗೊಳಿಸಲು ಪ್ರಯತ್ನಿಸುವುದು ಅಭಿನಂದನೀಯ’ ಎಂದರು. ವಲ್ಕನ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಸಾತ್ವಿಕ್ ಕೆ.ಜೆ, ‘ಜ್ಞಾನವಂತರು ಇದ್ದಾರೆ. ಆದರೆ, ಕೆಲಸದ ಕುರಿತು ಪ್ರೀತಿ ಅವಶ್ಯ. ವೃತ್ತಿಪರ ಹಾಗೂ ವ್ಯಾವಹಾರಿಕ ಇಂಗ್ಲಿಷ್ ಅಭಿವೃದ್ಧಿಗೆ ಇದು…
ಫೆ. 10 ರಂದು ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಎಮ್. ಜಿ. ಎಮ್. ಕಾಲೇಜ್ನ ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಾಮಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಹತ್ತನೇ ತರಗತಿಯಿಂದ ಬೀಳ್ಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ದೀಪವನ್ನು ನೀಡಿ ಹಾರೈಸಿ ಮಾತನಾಡಿ ಅನುಭವಗಳು ನಮ್ಮ ಜೀವನದ ಶ್ರೇಷ್ಠ ಶಿಕ್ಷಕ. ಹೇಡಿಗಳಿಗೆ ಈ ಭೂಮಿಯ ಮೇಲೆ ಬದುಕಲು ಅರ್ಹತೆಗಳಿಲ್ಲ, ಬರುವುದನ್ನೆಲ್ಲಾ ಎದುರಿಸಿ ಧೈರ್ಯವಾಗಿ ಮುನ್ನಡೆಯಬೇಕು. ನಮ್ಮನ್ನು ಹೊಗಳದೆ ಇತರರನ್ನು ತೆಗಳದೆ ಹೊಂದಾಣಿಕೆಯಿಂದ ಜೀವನವನ್ನು ನಡೆಸಬೇಕೆಂದರು. ಜಿ ಎಮ್ನ ಹಳೆ ವಿದ್ಯಾರ್ಥಿ, ಸೈಬರ್ ಭದ್ರತಾ ಸಲಹೆಗಾರ ಪ್ರಿತ್ವೇಶ್ ಕೆ ಮಾತನಾಡಿ ಇದು ನನಗೆ ಹೆಮ್ಮೆಯ ಕ್ಷಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವೇ ನನ್ನ ಸಾಧನೆಯ ಅಡಿಗಲ್ಲು. ಸೋಲಿನ ಪಾಠದೊಂದಿಗೆ ನಮ್ಮ ಗುರಿಯ ಕಡೆಗೆ ಗಮನ ಹರಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಕಲಿಕೆಯಲ್ಲಿ ಮುಂದಿರುವುದು ಮಾತ್ರವೇ ದೊಡ್ಡ ಸಾಧನೆಯಲ್ಲ, ಜೀವನದಲ್ಲಿ…
ಮೂಡುಬಿದಿರೆ: ಸ್ಥೂಲಕಾಯತೆಯು ಹೆಚ್ಚುವರಿ ದೇಹದ ಕೊಬ್ಬಿನಿಂದ ಗುರುತಿಸಲ್ಪಟ್ಟ ದೀರ್ಘಕಾಲದ ಸ್ಥಿತಿಯಾಗಿದೆ. ಇದು ಕೇವಲ ಸೌಂದರ್ಯ ಖಾಯಿಲೆಯಲ್ಲ. ಇದರಿಂದಾಗಿ ಆರೋಗ್ಯ ಸಂಬಂಧಿತ ಅಪಾಯಗಳಾದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಖಾಯಿಲೆಗಳು, ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯದ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ ತಿಳಿಸಿದರು. ನಿರಾಮಯ ಆಸ್ಪತ್ರೆಯ ತಂಡದಿಂದ ಮೂಡಬಿದಿರೆಯ ಸಹಕಾರಿ ಸೇವಾ ಸಂಘ ಸಹಯೋಗದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸ್ಥೂಲಕಾಯ ಚಿಕಿತ್ಸೆಯು ಹಿತಮಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಯನ್ನು ಒಳಗೊಂಡಿರುತ್ತದೆ. ಸ್ಥೂಲಕಾಯತೆಯ ಪ್ರಮುಖ ಕಾರಣವನ್ನು ಪರೀಕ್ಷಿಸಿ ಆಯುರ್ವೇದ ಚಿಕಿತ್ಸಾ ವಿಧಾನವಾದ ಪಂಚಕರ್ಮ ಹಾಗೂ ಇನ್ನಿತರ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ದೇವಸ್ಥಾನದ ಪ್ರದಾನ ಅರ್ಚಕರಾದ…
ಮೂಡುಬಿದಿರೆ: ನಾನೊಬ್ಬ ಸೇನಾಧಿಪತಿ. ನಾನೆಂದು ರಾಜನಾಗಲೂ ಬಯಸಲ್ಲ. ಸೇನೆಯ ಸಂಪೂರ್ಣ ಜವಾಬ್ದಾರಿ ಸೇನಾಧಿಪತಿಯದ್ದು. ಅಂತೆಯೆ ನಮ್ಮ ಮೇಲೆ ಭರವಸೆ ಇಟ್ಟು ಬಂದಂತಹ ಮಕ್ಕಳನ್ನು ಗುರಿಯೆಡೆಗೆ ಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮುಂಡ್ರುದೆಗುತ್ತು ಅಮರನಾಥ್ ಶೆಟ್ಟಿ ( ಕೃಷಿಸಿರಿ) ವೇದಿಕೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಆರೋಗ್ಯ, ಕುಟುಂಬ ಎಂದೂ ನನಗೆ ಮೊದಲ ಆದ್ಯತೆಯಾಗಲು ಸಾಧ್ಯವಿಲ್ಲ. ನಮ್ಮನ್ನು ನಂಬಿ ಬಂದ ಮಕ್ಕಳಿಗೆ ನನ್ನ ಮೊದಲ ಪ್ರಾಶಸ್ತ್ಯ. ನಾನು ಸ್ವತಃ ಸ್ಫರ್ಧಾಳು ಆಗದೆ ವಿನಾ, ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ತಯಾರು ಮಾಡಿಸಲು ಸಾಧ್ಯವಿಲ್ಲ. ನನ್ನ ಮತ್ತು ಮಕ್ಕಳ ಸಂಬಂಧ ಕುಂಬಾರ ಹಾಗೂ ಮಡಿಕೆಯಂತೆ. ಕುಂಬಾರ ಹೇಗೆ ಮಣ್ಣನ್ನು ಹದಗೊಳಿಸಿ ಮಡಿಕೆಗೆ ಸುಂದರರೂಪ ಕೊಡುತ್ತಾನೋ, ಅಂತೆಯೆ ನಿಮ್ಮನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರುಗೊಳಿಸುವಲ್ಲಿ ನಾವೆಲ್ಲ ಶ್ರಮ ಹಾಕುತ್ತೆವೆ. ಈ ಹಂತದಲ್ಲಿ…
ಮೂಡುಬಿದಿರೆ: ಪ್ಲಾಸ್ಟಿಕ್ ಅತಿ ಬಳಕೆ ಹಾಗೂ ಅವೈಜ್ಞಾನಿಕ ವಿಲೇವಾರಿಯಿಂದ ಕ್ಯಾನ್ಸರ್ಕಾರಕ ರೋಗಕ್ಕೆ ತುತ್ತಾಗಬಹುದು. ಕ್ಯಾನ್ಸರ್ ಮಾತ್ರವಲ್ಲ, ಹಲವಾರು ರೋಗರುಜಿನಗಳಿಗೆ ಆಗರವಾಗಬಹುದು. ನಿಮಗಿದು ಗೊತ್ತಾ…? ಹಾಗಿದ್ದರೆ ತಡ ಯಾಕೆ ಕಸವನ್ನು ಹಸಿ- ಒಣ ಎಂದು ವಿಂಗಡಣೆ ಮಾಡಿ, ವಿಲೇವಾರಿ ಮಾಡಿ… ಮೂಡುಬಿದಿರೆಯ ವಾರದ ಸಂತೆಯ ಶುಕ್ರವಾರ ಸಂಜೆ ಜನನಿಬಿಡದ ಸ್ವರಾಜ್ಯ ಮೈದಾನ ಹಾಗೂ ಬಸ್ ನಿಲ್ದಾಣದ ಬಳಿ ಪರಿಸರ ಕಾಳಜಿಯನ್ನು ಮೂಡಿಸಿದ್ದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಕ್ತ ಆಯ್ಕೆ ವಿಷಯದ ವಿದ್ಯಾರ್ಥಿಗಳು. ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಕಸ ವಿಲೇವಾರಿ ಮಹತ್ವ, ಪ್ಲಾಸ್ಟಿಕ್ ಅಪಾಯದ ಕುರಿತು ಬೀದಿ ನಾಟಕ ಮಾಡಿದ ವಿದ್ಯಾರ್ಥಿಗಳು ಸೇರಿದ್ದ ಜನರ ಮನ ಸೆಳೆದರು. ಪರಿಸರ ಕಾಳಜಿಯ ಸಂದೇಶ ಸಾರಿದರು. ಅಷ್ಟು ಮಾತ್ರವಲ್ಲ, ಕಸವನ್ನು ಯಾವ ರೀತಿ ವಿಂಗಡಣೆ ಮಾಡಬೇಕು? ಎಲ್ಲಿ ಎಸೆಯಬೇಕು? ನಿರ್ಲಕ್ಷ್ಯದ ಪರಿಣಾಮ ಏನು? ಎಂಬಿತ್ಯಾದಿ ವಿವರಗಳನ್ನು ಸಂಭಾಷಣೆ, ಅಭಿನಯ, ಪ್ರಾತ್ಯಕ್ಷಿಕೆಗಳ ರಂಗ ರೂಪದ ಮೂಲಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದರು. ಆಳ್ವಾಸ್…
ಹುಟ್ಟಿದ ಊರನ್ನು ಬಿಟ್ಟು ಪರ ಊರಿಗೆ ಹೋದ ನಂತರ ನಮ್ಮ ಹುಟ್ಟೂರಿನ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಅಲ್ಲಿಯೂ ಪಸರಿಸುವ ಪ್ರಯತ್ನ ಬಹಳ ಕಷ್ಟಕರವಾದ ಕೆಲಸ. ಸುಮಾರು 3 ವರ್ಷದ ಹಿಂದೆ ಉತ್ತರಮೇರಿಕಾದಲ್ಲಿ ಆರಂಭಗೊಂಡ ನಮ್ಮ ಆಟ ಸಂಸ್ಥೆಯು ತುಳು ಭಾಷೆಯನ್ನು ಉಳಿಸಿ ಬೆಳೆಸುವುದು ಅಷ್ಟೇ ಅಲ್ಲದೇ ತುಳು ಭಾಷೆಯನ್ನು ವರ್ಚುಯಲ್ ಚಾನೆಲ್ ಮೂಲಕ ಆಸಕ್ತರಿಗೆ ಕಲಿಸಲು ಉದ್ದೇಶಿಸಿರುವುದು ನಿಜವಾಗಿಯೂ ಸಂತಸದ ವಿಷಯ ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಪೂರ್ಣಿಮಾ ಶೆಟ್ಟಿಯವರು ಆಟದ “ಬಲೇ ನಮ ತುಳು ಪಾತೆರುಗ” ಉದ್ಘಾಟನೆ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಮಾತನಾಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ ಭಾಷೆ ಎಂಬುದು ಒಂದು ಸಮ್ಮೋಹನ ಕ್ರಿಯೆ, ಕುವೆಂಪು ಅವರು ಮನಕಂಡಂತೆ ಮನಸ್ಸಿನ ಭಾವನೆಯನ್ನು ಇತರರಿಗೆ ವ್ಯಕ್ತಪಡಿಸಬೇಕಾದರೆ ಮಾತೃ ಭಾಷೆ ಅತೀ ಸುಲಭ ಸಾಧನ. ಹಾಗಾಗಿ ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸುತ್ತಾ,…
ಆಳ್ವಾಸ್ ಶಿಕ್ಷಣ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ‘ವಿದ್ಯಾರ್ಥಿಗಳ ಭವಿಷ್ಯಕ್ಕೆ ತ್ಯಾಗ ಮಾಡುವುದೇ ಶಿಕ್ಷಕ ವೃತ್ತಿ’
ವಿದ್ಯಾಗಿರಿ (ಮೂಡುಬಿದಿರೆ): ‘ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮನ್ನು ತ್ಯಾಗ ಮಾಡುವುದೇ ಶಿಕ್ಷಕ ವೃತ್ತಿಯ ಶ್ರೇಷ್ಠತೆ. ಶಿಕ್ಷಕರು ಮಕ್ಕಳ ಬದುಕಿನ ದಾರಿ ದೀಪಗಳು’ ಎಂದು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಶಿಕ್ಷಣ ಕಾಲೇಜಿನ ಅಂತಿಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಜೀವನದಲ್ಲಿ ಹೆಸರು ಅಥವಾ ಇತರರಿಂದ ಗುರುತಿಸಲ್ಪಡಲು ಪೇಚಾಟ ನಡೆಸುವುದು ಮುಖ್ಯವಲ್ಲ. ನಮ್ಮ ನೈಜ ಕೆಲಸ ನಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ’ ಎಂದರು. ‘ಗುರು ಎಂದಾಗ ನಮಗೆಲ್ಲ ನೆನಪಾಗುವುದೇ ನಮ್ಮೆಲ್ಲರ ಮಹಾಗುರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ. ಅವರು ನಮಗೆಲ್ಲ ಆದರ್ಶ. ಶಿಕ್ಷಕರಾಗಿ ನೀವೂ ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆ ಕಂಡುಕೊಳ್ಳಬೇಕು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಪ್ರತಿಯೊಂದು ವೃತ್ತಿಯ ಯಶಸ್ಸಿನ ಹಿಂದೆ ಶಿಕ್ಷಕರು ಇರುತ್ತಾರೆ ಎಂದರು. ವಿದ್ಯಾರ್ಥಿಯೊಬ್ಬ ಜೀವನದಲ್ಲಿ ಸಾಧನೆ ಮಾಡಿ ಬಂದು, ತಮ್ಮ ಶಿಕ್ಷಕರನ್ನು ಗುರುತಿಸಿದರೆ, ಅದುವೇ ಒಬ್ಬ ಶಿಕ್ಷಕನಿಗೆ ಸಿಗುವ ಅತ್ಯುತ್ತಮ…
ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉಡುಪಿ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಧಿ ಟಿ. ಶೆಟ್ಟಿಯವರು ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಬಹುಮಾನ ಪಡೆದಿದ್ದಾರೆ. ಧಾರವಾಡದ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ಶಿಕ್ಷಣ ಸಮಿತಿ ಸಹಯೋಗದಲ್ಲಿ ಗುರುವಾರ ಮತ್ತು ಶುಕ್ರವಾರ ಸನ್ನಿಧಿ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆದಿದ್ದು, ಕುಮಾರಿ ನಿಧಿ ಶೆಟ್ಟಿ ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕುಮಾರಿ ನಿಧಿ ಶೆಟ್ಟಿಯವರನ್ನು ಶಾಲಾ ಆಡಳಿತ ಮಂಡಳಿ ಮೊಗವೀರ ಹಿತ ಸಾಧನ ವೇದಿಕೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ನಿಧಿ ಶೆಟ್ಟಿಯವರು ಕುಂಜೂರು ಕಿನ್ನೋಡಿ ಗುತ್ತು ತಿಮ್ಮಪ್ಪ ಶೆಟ್ಟಿ ಮತ್ತು ಶಾಂತ ಶೆಟ್ಟಿ, ದಂಪತಿಯ ಪುತ್ರಿ.
ಕುಂದಾಪುರ ತಾಲೂಕು ಯುವ ಬಂಟರ ಆಶ್ರಯದಲ್ಲಿ ಯುವ ಮೆರಿಡಿಯನ್ ಸಂಕೀರ್ಣ ಕೋಟೇಶ್ವರದ ಕುಂದಾಪುರ ರೂರಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲಿ ಫೆಬ್ರವರಿ 11ರಂದು ನಡೆಯುವ ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇದು ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವ ಮೊದಲ ಬಂಟರ ಸಮಾವೇಶವಾಗಿದ್ದು, ವಿದೇಶಗಳಲ್ಲೂ ಒಳಗೊಂಡಂತೆ ಭಾರತದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಟ ಸಮುದಾಯ ಬಾಂಧವರು ಈ ಮಹಾಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಬೃಹತ್ ಮೈದಾನದಲ್ಲಿ ಕೃಷಿ ಪದ್ಧತಿ ಪ್ರತಿಬಿಂಬಿಸುವ ವಿಶಾಲ ವೇದಿಕೆ ನಿರ್ಮಿಸಲಾಗಿದೆ. ಬಂಟರ ಮಹಾಸಮಾಗಮದ ಅಂಗವಾಗಿ ‘ಬಂಟರ ಸಾಂಸ್ಕೃತಿಕ ಸಂಭ್ರಮ’ ಎಂಬ ರಾಷ್ಟ್ರಮಟ್ಟದ ಬಂಟರ ವೈವಿಧ್ಯಮಯ ಸಮೂಹ ನೃತ್ಯ ಸ್ವರ್ಧೆ ನಡೆಯಲಿದೆ. ಶಿಕ್ಷಣ ಆರೋಗ್ಯ ಅವಕಾಶಗಳಿಂದ ವಂಚಿತರಾದವರಿಗಾಗಿ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಪ್ರಮುಖವಾಗಿ ಆಯೋಜಿಸಲಾಗಿದೆ. ವಿದ್ಯಾದೀವಿಗೆ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ಒಂದು ಸಾವಿರ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ನವಚೇತನ…
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಲಿ., ಮಂಗಳೂರುರವರು ತಮ್ಮ ಮಾನವೀಯ ಕಳಕಳಿಯ ಸೇವೆಗಳ ಅಂಗವಾಗಿ, ಲಯನ್ಸ್ ಕ್ಲಬ್ ಇಂಟರ್ನೇಶನಲ್, ಡಿಸ್ಟ್ರಿಕ್ಟ್ 317ಡಿನ ಲಯನ್ಸ್ ಆರ್ಟಿಫೀಶಿಯಲ್ ಲಿಂಬ್ ಸೆಂಟರ್ನಲ್ಲಿ ದೈಹಿಕ ವಿಕಲ ಚೇತನರಿಗೆ ಕೃತಕ ಅಂಗ ವಿತರಣೆಗೆ ಸಹಾಯ ಧನವನ್ನು ನೀಡಿದರು. ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಆರ್ಟಿಫೀಶಿಯಲ್ ಲಿಂಬ್ ಸೆಂಟರ್ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು, ಲಯನ್ಸ್ ಸೆಂಟರ್ ಫಾರ್ ದಿ ಫಿಸಿಕಲ್ ಹ್ಯಾಂಡಿಕ್ಯಾಪ್ಡ್ ಇದರ ಅಧ್ಯಕ್ಷರಾದ ಖ್ಯಾತ ಎಲುಬು ತಜ್ಞ ಡಾ. ಎಂ. ಶಾಂತಾರಾಮ ಶೆಟ್ಟಿ, ಲಯನ್ಸ್ ಕ್ಲಬ್ನ ಪ್ರಾದೇಶಿಕ ಅಧ್ಯಕ್ಷರಾದ ಶ್ರೀ ಚಂದ್ರಹಾಸ ರೈ, ಲಯನ್ಸ್ ಕ್ಲಬ್ನ ಪದಾಧಿಕಾರಿಗಳಾದ ಎಡ್ವಕೇಟ್ ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀಮತಿ ರಮ್ಯಾ ಸಿ. ರೈ, ಶ್ರೀ ವಿಜಯವಿಷ್ಣು ಮಯ್ಯ, ಶ್ರೀ ಎಚ್. ಗುರುಪ್ರೀತ್ ಆಳ್ವ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ದೈಹಿಕ ವಿಕಲಚೇತನರಿಗೆ ಕೃತಕ ಅಂಗ ವಿತರಣೆಯನ್ನು ಮಾಡಿದರು.















