Author: admin
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 9 ಮಂದಿ ಸಾಧಕಿಯರಿಗೆ ಸಾವಿತ್ರಿ ಸತ್ಯವಾನ್ ಸಾಧಕ ಮಹಿಳೆ-2023 ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಕಿ ಪೂರ್ಣಿಮಾ ಶೆಣೈ, ಸಾಹಿತಿ ಚೈತ್ರಾ ಕಬ್ಬಿನಾಲೆ, ನಾಟಿ ವೈದ್ಯೆ ಜಯಂತಿ ಮಾಳ, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಕೃಷಿ ಕ್ಷೇತ್ರದ ಸಾಧಕಿ ಸುಮಲತಾ ಮಾಳ, ಸಂಗೀತ ಕ್ಷೇತದ ಸಾಧಕಿ ಆರತಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ಸುರಕ್ಷಾ ಸೇವಾಶ್ರಮದ ಆಯೇಷಾ ಭಾನು, ಶಿಕ್ಷಕಿ ಗೀತಾ ಎಸ್ ಹೆಗ್ಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 12 ರವಿವಾರದಂದು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಸಾವಿತ್ರಿ ಸತ್ಯವಾನ್ ಟ್ರಸ್ಟ್ (ರಿ.) ಅಧ್ಯಕ್ಷೆ ಡಾ ಮಮತಾ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್ ಮಿನಿ ಹಾಲ್‌ನಲ್ಲಿ ನಡೆದ ನಗರದ ಕನ್ನಡ ಲೇಖಕಿಯರ ಬಳಗ ‘ ಸೃಜನಾ’ ದ ಸಭೆಯಲ್ಲಿ 2023 ರಿಂದ 2025 ರವರೆಗಿನ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಚಾಲಕಿಯಾಗಿ ಶೀಮತಿ ಪದ್ಮಜಾ ಮಣ್ಣೂರ್ , ಕಾರ್ಯದರ್ಶಿಯಾಗಿ ಶೀಮತಿ ಲತಾ ಸಂತೋಷ್ ಮುದ್ದುಮನೆ, ಕೋಶಾಧಿಕಾರಿಯಾಗಿ ಡಾ. ದಾಕ್ಷಾಯಣಿ ಯಡಹಳ್ಳಿ ಆಯ್ಕೆಯಾದರು.ಸಹ ಸಂಚಾಲಕಿಯಾಗಿ ಡಾ. ಜಿ.ಪಿ. ಕುಸುಮ ,ಜೊತೆ ಕಾರ್ಯದರ್ಶಿಯಾಗಿ ಕುಸುಮ ಚಂದ್ರ ಪೂಜಾರಿ,ಜೊತೆ ಕೋಶಾಧಿಕಾರಿಯಾಗಿ ಶೀಮತಿ ಸರೋಜಾ ಅಮಾತಿಯವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಪುಷ್ಪ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದರು. ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯೆಯರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಅವರು ಬಳಗವು ನೂತನ ಪದಾಧಿಕಾರಿಗಳ ಅಧಿಕಾರಾವಧಿ ಯಲ್ಲಿ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಹಾರೈಸಿದರು. ಸಲಹಾ ಸಮಿತಿಯ ಸದಸ್ಯೆ, ನಗರದ ಹಿರಿಯ ಲೇಖಕಿ ಡಾ.ಸುನೀತಾ ಶೆಟ್ಟಿಯವರು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸದೃಢ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ. ಇಂದು ಎಲ್ಲರ ಸಹಕಾರ ಪ್ರೋತ್ಸಾಹದಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳೆದು ನಿಂತಿದೆ. ಯಕ್ಷಗಾನವನ್ನು ಒಂದು ಉನ್ನತ ಮತ್ತು ಗೌರವ ಸ್ಥಾನಕ್ಕೆ ಕೊಂಡೊಯ್ಯಲು ಪಟ್ಲ ಸತೀಶ ಶೆಟ್ಟಿಯವರ ಕೊಡುಗೆಯೂ ದೊಡ್ಡದಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು. ನಗರದ ಎಂಪೇರ್ ಮಾಲ್ ನಲ್ಲಿ ನಡೆದ ಪಟ್ಲಾಶ್ರಯ ಯೋಜನೆಯಲ್ಲಿ ಐದು ಮಂದಿ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ತಲಾ ಎರಡು ಲಕ್ಷ ರೂಪಾಯಿಯ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ ಏಳು ವರ್ಷಗಳಿಂದ ಸುಮಾರು ಎಂಟೂವರೆ ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕೆಲಸ ಮಾಡಿದೆ ಎಂದರು. ಸಮಾರಂಭದಲ್ಲಿ ಬಡಗುತಿಟ್ಟಿನ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್, ಕಟೀಲು ಮೇಳದ ಕಲಾವಿದ ಶ್ರೀಧರ ಪಡ್ರೆ, ಕಟೀಲು ಮೇಳದ ಸುಖೇಶ್ ಹೆಗ್ಡೆ, ಹವ್ಯಾಸಿ ಮಹಿಳಾ…
ದೇಹದ ಭಾಗಗಳಿಗೆ ಕಾಡುವ ಕಾಯಿಲೆಗೆ ಕರಿಬೇವು ಮನೆಮದ್ದು ; ಜಠರ ಮತ್ತು ತಲೆ ಕೂದಲಿನ ಸಮಸ್ಯೆಗೆ ಕರಿಬೇವು ಔಷಧೀಯ ಸಸ್ಯಜನ್ಯ ಸಂಪತ್ತು….!
ನಮ್ಮ ಆಹಾರದಲ್ಲಿ ದಿನವೂ ಇರಲಿ ಕರಿಬೇವು….!” ಆರೋಗ್ಯ ಸಮಸ್ಯೆ ನಿವಾರಣೆಗೆ ಎಂದೂ ಕಾಡುವುದಿಲ್ಲ ದೇಹದ ಉಷ್ಣತೆಯ ಕಾವು….!” ಕರಿಬೇವು ಔಷಧೀಯ ಸಸ್ಯ…! ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಕರಿಬೇವು ದೇಹದಲ್ಲಿನ ಪ್ರತಿಕೂಲ ಪರಿಸ್ಥಿತಿ ಹಾಗೂ ಜಠರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದರೊಂದಿಗೆ, ಮನುಷ್ಯನ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳನ್ನು ನೀಡುವಲ್ಲಿ ಸಹಕರಿಯಾಗುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಇರುವುದರಿಂದ ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ನಿವಾರಣೆ, ಹಾಗೂ ಅತಿ ಉಷ್ಣವದಂತಹ ಜಾಗದಲ್ಲಿನ ಭಾಗಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸುವುದರ ಮೂಲಕ ಕರಿಬೇವು ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದಿನಬಳಕೆ ವಸ್ತುಗಳಲ್ಲಿ ಕರಿಬೇವು ಅಗ್ರಪಂತಿಯಲ್ಲಿ ಇರುವುದರಿಂದ ಕೃಷಿಕರು ಎಚ್ಚೆತವಾಗಿ ತಮ್ಮ ಹಿತ್ತಲು ಗಿಡಗಳಲ್ಲಿ ಕರಿಬೇವನ್ನು ಬೆಳೆಸಿ ಇತರರಿಗೆ ಮಾದರಿ ಕೂಡ ಆಗಿದ ಉದಾರಣೆ, ರಾಜ್ಯದ ವಿವಿಧ ಭಾಗದಲ್ಲಿದೆ ಕರಿಬೇವು ನಮ್ಮ ಹಿತ್ತಲಗಳಲ್ಲಿ ಒಂದು ವೈಜ್ಞಾನಿಕ ಉಪಯೋಗಗಳಲ್ಲಿ ದೈನಂದಿನ ಅಡುಗೆ ಪದಾರ್ಥದಲ್ಲಿ ಕರಿಬೇವು…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‍ಗೆ …29ನೇ ವರ್ಷವಾಗಿದ್ದು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ‘ಆಳ್ವಾಸ್ ವಿರಾಸತ್ 2023’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ‘ಆಳ್ವಾಸ್ ವಿರಾಸತ್ 2023’ ಕ್ಕೆ ದಿನಾಂಕ ನಿಗದಿಯಾಗಿದ್ದು ಡಿಸೆಂಬರ್ 14ರಂದು ಪ್ರಾರಂಭವಾಗಿ 17ರಂದು ಮುಕ್ತಾಯಗೊಳ್ಳಲಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ನಾಲ್ಕು ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಜರುಗಲಿದೆ. ಪ್ರತಿದಿನ ಮುಸ್ಸಂಜೆ 6.00 ಗಂಟೆಗೆ ಪ್ರಾರಂಭವಾಗುವ ಈ ಉತ್ಸವವು ರಾತ್ರಿ 9.30ಕ್ಕೆ ಮುಕ್ತಾಯಗೊಳ್ಳುತ್ತವೆ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ವಿ ರಾಸತ್ ಕಾರ್ಯಕ್ರಮಗಳು ನಡೆಯಲಿದೆ. ಇದು ಬೃಹತ್ ವೇದಿಕೆಯಿದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂಥಾ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಡಿಸೆಂಬರ್ 14,…
ಬಹುಮುಖ ಪ್ರತಿಭೆಯ ಖ್ಯಾತ ನೃತ್ಯ ನಿರ್ದೇಶಕ ನವೀನ್ ಶೆಟ್ಟಿ ಪ್ರಸ್ತುತ ತುಳು, ಕನ್ನಡ, ಕೊಂಕಣಿ ಮುಂತಾದ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಗಮನ ಸೆಳೆಯುತ್ತಿರುವ ಬಹುಮುಖ ಪ್ರತಿಭೆ ನವೀನ್ ಶೆಟ್ಟಿ. ರೂಪೇಶ್ ಶೆಟ್ಟಿ ಜತೆಗೆ ಆರಂಭದಿಂದಲೂ ಇರುವ ಇವರು ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಗಾರರಾಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್‌ಬಾಸ್‌ಗೆ ಹೋಗಿದ್ದಾಗ ಅವರ ಎಲ್ಲ ವ್ಯವಹಾರಗಳನ್ನೂ ಸಮರ್ಥವಾಗಿ ನಿಭಾಯಿಸಿದವರು. ಇವರ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ. ಶಿವಾನಂದ ಶೆಟ್ಟಿ ಮತ್ತು ಶೋಭಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಇವರು ಆರಂಭದ ಶಿಕ್ಷಣವನ್ನು ಕಾಸರಗೋಡಿನ ಕೂಡ್ಲು ಹೈಸ್ಕೂಲ್‌ನಲ್ಲಿ ಮುಗಿಸಿ ಬಳಿಕ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದು ಬೊಕ್ಕಪಟ್ಣ ಕಾಲೇಜಿನಲ್ಲಿ ಪಿಯುಸಿ ಹಾಗೂ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪದವಿ ಮುಗಿಸಿದರು. ಆಗಲೇ ಅವರಿಗೆ ನೃತ್ಯ ಮತ್ತು ಸಿನೆಮಾದಲ್ಲಿ ಅಪಾರ ಆಸಕ್ತಿ. ಮಂಗಳೂರಿಗೆ ಬಂದ ಬಳಿಕ ಆ ಆಸಕ್ತಿ ಮತ್ತಷ್ಟು ಚಿಗುರಿತು, ಬೆಳೆಯಿತು. ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು, ದುಬಾಯಿಯಲ್ಲಿ ಸ್ವಲ್ಪ ಕಾಲ ಉದ್ಯೋಗ ಮಾಡಿದ ಅವರು ಬಳಿಕ ಊರಿಗೆ ಮರಳಿದರು. ಪತ್ನಿ…
ಸುಮಾರು ಮೂವತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ. 11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ. ಜೂ. 12ರಂದು ಅಮ್ಮನ ಗದ್ದುಗೆ…
ಮನುಷ್ಯನ ಜೀವನದಲ್ಲಿ ಸುಖ- ದುಃಖ, ಲಾಭ-ನಷ್ಟ, ನಗು- ಅಳು ಎಲ್ಲವೂ ಸಹಜ. ಇವೆಲ್ಲವೂ ಒಳಗೊಂಡಿದ್ದರೆ ಅದು ಜೀವನ. ಯಾವನೇ ವ್ಯಕ್ತಿಯಾಗಲೀ ತನ್ನ ಬದುಕಿನುದ್ದಕ್ಕೂ ಕೇವಲ ಸುಖ ಅಥವಾ ಕೇವಲ ದುಃಖವನ್ನೇ ಕಂಡಿದ್ದರೆ ಆತನ ಜೀವನದ ನಿಜಾ ರ್ಥದಲ್ಲಿ ಬರಡು. ಇವೆರಡೂ ಸಮ್ಮಿಳಿತ ಗೊಂಡಿದ್ದರೆ ಆ ಬದುಕಿಗೂ ಒಂದು ಅರ್ಥ. ಹಾಗೆಂದು ಸಂಕಷ್ಟಗಳು ಎದುರಾದವೆಂದು ಕೊರಗುವುದಾಗಲೀ ಸುಖಮಯವಾಗಿದೆ ಎಂದು ಹಿಗ್ಗುವುದಾಗಲೀ ಸರಿಯಲ್ಲ. ಸಮಸ್ಯೆ, ಕಷ್ಟಗಳು ಎದುರಾದಾಗ ಅದನ್ನು ಎದುರಿಸುವ ಛಾತಿಯನ್ನು ನಾವು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಮನೋಭಾವದಿಂದ ಮುನ್ನಡೆದಲ್ಲಿ ಯಶಸ್ಸನ್ನು ಕಾಣಬಹುದು. ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಾಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೊಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ…
ಚಂದನವನದಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಸುಂದರ ಮುದ್ದು ಮುಖದ ಚೆಲುವೆ ನಟಿ ಶಿಲ್ಪಾ ಆರ್ ಶೆಟ್ಟಿ. ಒಳ್ಳೆ ನಿರ್ಮಾಣ ಸಂಸ್ಥೆ ಅಥವಾ ಪಾತ್ರವು ಶಕ್ತಿಶಾಲಿಯಾಗಿದ್ದರೆ ಎಲ್ಲದಕ್ಕೂ ಸೈ ಎಂದು ಪ್ರಸಕ್ತ ಚಿತ್ರರಂಗಕ್ಕೆ ಬರುವ ಕಲಾವಿದೆಯರು ಹೇಳುವುದುಂಟು. ಅಪರೂಪ ಎನ್ನುವಂತೆ ನಮ್ಮ ಕರ್ನಾಟಕ ಸಂಸ್ಕ್ರತಿ ಬಿಂಬಿಸುವಂತ ಪಾತ್ರಗಳು ಬಂದರೆ ಮಾಡುತ್ತೇನೆ. ಯಾವುದೇ ದೊಡ್ಡ ಬ್ಯಾನರ್ ಸಿಗುತ್ತದೆ ಅಂಥ ಬೇರೆ ತರಹದ ರೋಲ್ ಮಾಡಲಾರೆ. ಇದು ಹೊಸ ಪ್ರತಿಭೆ ಮಂಗಳೂರು ಮೂಲದ ನಿರಾಡಂಬರ ಚೆಲುವೆ ಶಿಲ್ಪಾ ಆರ್ ಶೆಟ್ಟಿ ಅವರ ಖಡಕ್ ನುಡಿಗಳು. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿ, ಆದರ್ಶ ಗೃಹಿಣಿಯಾಗಿದ್ದುಕೊಂಡು ಹಲವಾರು ತುಳು ನಾಟಕಗಳಲ್ಲಿ ನಟಿಸಿ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್, ಶ್ರೀನಗರ ಕಿಟ್ಟಿ ಅಭಿನಯದ ಗೌಳಿ, ಕಿಶೋರ್ ಡಿ ಶೆಟ್ಟಿ ನಿರ್ಮಾಣದ ಅಕ್ಷಮ್ಯ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಗತ ವೈಭವ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿಲ್ಪಾ ಅವರು ಹಲವಾರು ತುಳು ಚಿತ್ರಗಳಲ್ಲೂ ಅಭಿನಯಿಸಿದ್ದು…
ನಮ್ಮ ಸಂಘದ ಮೂಲಕ ಪ್ರತೀ ವರ್ಷ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು ನಮ್ಮ ಸಂಘದ ಕ್ರೀಡಾ ಸಮಿತಿ ಈ ಕಾರ್ಯಕ್ರಮವನ್ನು ಬಹಳ ಶಸ್ತುಬದ್ಧವಾಗಿ ಆಯೋಜಿಸುತ್ತಿದ್ದು ಅಭಿನಂದನೀಯವಾಗಿದೆ . ಇಂದಿನ ಬದಲಾದ ಕಾಲಘಟ್ಟದಲ್ಲಿ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು ಮುಖ್ಯವಾಗಿ ಯುವ ಪೀಳಿಗೆಗೆ ಉತ್ಸಾಹ ತುಂಬುವಲ್ಲಿ ಪೂರಕವಾಗಿದೆ . ನಮ್ಮ ದಿನನಿತ್ಯದ ಜೀವನದಲ್ಲಿ ನಡಿಗೆ ,ಯೋಗ ,ವ್ಯಾಯಾಮ ,ಪ್ರಾಣಾಯಾಮಗಳನ್ನೂ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನ ಶೈಲಿ ಬದಲಾಗುವುದರೊಂದಿಗೆ ನಮ್ಮ ದೈಹಿಕ ,ಮಾನಸಿಕ ಆರೋಗ್ಯದೊಂದಿಗೆ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ಕೊಡುಗೆ ನೀಡುವಂತಾಗುತ್ತದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು . ಅವರು ಜ . ೧೫ ರಂದು ನಗರದ ಎಸ್ . ಪಿ . ಕಾಲೇಜು ಮೈದಾನದಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದಿನ ಕ್ರೀಡಾಕೂಟದಲ್ಲಿ ಮಕ್ಕಳು ಉತ್ಸಾಹಪೂರ್ಣವಾಗಿ ಕ್ರೀಡಾಸ್ಪರ್ಧೆಗಳಲ್ಲಿ…















