ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ಎ. 21ರಂದು ಸಂಜೆ ಎಕ್ಕಾರು ಸವಾರಿ, ಕಟ್ಟೆ ಪೂಜೆ, ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ, ರಥ ಬಲಿ, ರಾತ್ರಿ ರಥೋತ್ಸವ, ಎ. 22ರಂದು ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕದ ಉತ್ಸವ, ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರ ತೂಟೆದಾರ (ತೆಂಗಿನ ಗರಿಗಳನ್ನು ಒಟ್ಟಗೂಡಿಸಿ ಕಟ್ಟಿ ಬೆಂಕಿ ಉರಿಸಿ ಪರಸ್ಪರ ಎಸೆಯುವ ಹರಕೆ ಸೇವೆ) ಪ್ರಾರಂಭ ಆಗಿ ಬಳಿಕ ರಥಬೀದಿಯಲ್ಲಿ ತೂಟೆದಾರ ನಡೆದ ಬಳಿಕ ಓಕುಳಿ ಸ್ನಾನ ಪ್ರಸಾದ ವಿತರಣೆ ನಡೆಯಿತು.
ಜಳಕದ ಬಲಿ ಸಂದರ್ಭ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ, ಚಿನ್ನದ ರಥೋತ್ಸವ, ಧ್ವಜಾವರೋಹಣ, ಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.
ತಂತ್ರಿಗಳಾದ ವೇದವ್ಯಾಸ ತಂತ್ರಿ ಹಾಗೂ ಕೃಷ್ಣರಾಜ ತಂತ್ರಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಅಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ¤ೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಆನುವಂಶಿಕ ಮೊಕ್ತೇಸರ ಹಾಗೂ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಅತ್ತೂರುಬೈಲು ವೆಂಕಟರಾಜ ಉಡುಪ, ವಾಸುದೇವ ಶಿಬರಾಯ, ಜಯರಾಮ ಉಡುಪ ಮೂಡುಮನೆ, ಬಿಪಿನ್ಪ್ರಸಾದ್ ಶೆಟ್ಟಿ ಕೊಡೆತ್ತೂರು ಗುತ್ತು, ಪ್ರಬಂಧಕ ಮೋಹನ ರಾವ್ ಮೊದಲಾದವರಿದ್ದರು.