Author: admin
ಗೋಪಿತಲಾಬ್ ಒಂದು ಪುರಾತನ ಸುಂದರ ಸರೋವರ. ಗುಜರಾತಿನ ಗೋಪಿಪುರ ಪ್ರದೇಶದಲ್ಲಿ ಅಂದರೆ ದ್ವಾರಕಾದಿಂದ 20 ಕಿ.ಮಿ ದೂರದಲ್ಲಿರುವ ಗೋಪಿ ತಲಾಬ್ ಶ್ರೀಕೃಷ್ಣ ಮನಸಾರೆ ಮೆಚ್ಚಿದ ಜನಪ್ರೀಯ ಮನರಂಜನಾ ತಾಣವಾಗಿತ್ತು ಯುವ ಪ್ರೇಮಿಗಳಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರೇಮಿಗಳಿಗಿಂತ ಭಕ್ತಾದಿಗಳೇ ಹೆಚ್ಚು ಕಾಣಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಸ್ಥಳಿಯರು. ಈ ತಲಾಬ್ ನಲ್ಲಿ ಗೋಪಿಕೆಯರು ಮತ್ತು ಭಗವಾನ್ ಶ್ರಿ ಕೃಷ್ಣ ಜೊತೆಯಾಗಿ ನೀರಾಟ ಆಡುತ್ತಿದ್ದರಂತೆ. ಶ್ರೀ ಕೃಷ್ಣ ಪ್ರ ತಿವರ್ಷ ಶ್ರಾವಣ ಮಾಸದ ಏಕಾದಶಿಯಂದು ದೇವಾದಿ ದೇವತೆಗಳೊಂದಿಗೆ ಗೋಪಿ ತಲಾಬ್ ನಲ್ಲಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾನೆ ಎಂಬ ನಂಬಿಕೆ ಇಂದಿಗೂ ಇಲ್ಲಿನ ಭಕ್ತರು ಭಕ್ತಿಯಿಂದ ನಂಬುತ್ತಾರೆ. ಶ್ರಿ ಕೃಷ್ಣ ಗೋಪಿಕೆಯರಿಗೆ ನಾನು ನಿಮ್ಮನ್ನು ಸೇರಲು ಇಲ್ಲಿಗೆ ಪ್ರತಿವರ್ಷ ಬರುತ್ತೇನೆ. ಯಾರು ಇಲ್ಲಿ ಪುಣ್ಯ ಸ್ನಾನ ಮಾಡುತ್ತಾರೊ ಅವರು ಖಂಡಿತಾ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಫಲ ಅನುಭವಿಸುತ್ತಾರೆ ಎಂದು ವರವಿತ್ತಿದ್ದನಂತೆ. ಶ್ರೀ ಕೃಷ್ಣ ವಿಶ್ವಕರ್ಮನಿಗೆ ಕಮಲದ ಹೂವಿನಿಂದ ಈ ಕೊಳ ಅಥವಾ…
ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ ಆಶ್ರಯದಲ್ಲಿ ಶ್ರೀ ಸಿದ್ದಿ ವಿನಾಯಕ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಓಂಕಾರ ನಗರ ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ಸೆಪ್ಟಂಬರ್ 16 ರಂದು ಬಂಟ ಯುವ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನು ಒಳಗೊಂಡ ಯುವ ಸಮುದಾಯವನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಇದಾಗಿದೆ. ಸಭೆಯ ಪೂರ್ವಭಾವಿ ಸಭೆಯು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಸಮ್ಮೇಳನ ಸಮಿತಿಯ ಉಸ್ತುವಾರಿ ಅಶ್ವತ್ತಾಮ ಹೆಗ್ಡೆ ಅವರು ಮಾತನಾಡಿ, ಸೆಪ್ಟಂಬರ್ 16 ಭಾನುವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ, ಬಳಿಕ ವಿಚಾರಗೋಷ್ಠಿ, ಸಾಧಕರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ದಿಗ್ಗಜರೊಂದಿಗೆ ಪಟ್ಟಾಂಗ ಕಾರ್ಯಕ್ರಮ ನಡೆಯಲಿದೆ ಎಂದರು. ಇಡೀ ದಿನ ಯುವ ಜನತೆಗಾಗಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಿನಿ ತಾರೆಯರು ಭಾಗವಹಿಸಲಿದ್ದಾರೆ. ಸಂಜೆ ಆಕರ್ಷಕ ರಸಮಂಜರಿ ಆಯೋಜಿಸಲಾಗಿದೆ. ಸುಮಾರು 3,000 ಮಂದಿ ಬಂಟ ಯುವಕ ಯುವತಿಯರು…
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಅಭಿನಂದಿಸಲಾಯಿತು. ವಿರಾಜಪೇಟೆಯ ನಿವಾಸದಲ್ಲಿ ಭೇಟಿಯಾದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಮತ್ತು ಪದಾಧಿಕಾರಿಗಳು ಕರಾವಳಿಯ ಕಲೆ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಶುಭ ಹಾರೈಸಿದರು. ಸಂಘದ ಪ್ರಮುಖ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಾಸಕರಿಗೆ ನೀಡಲಾಯಿತು. ಸಮುದಾಯದ ಬೆಳವಣಿಗೆ ಜತೆಗೆ ಎಲ್ಲಾ ವರ್ಗದವರನ್ನು ಜತೆ ಸೇರಿಸಿಕೊಂಡು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವಂತೆ ಪೊನ್ನಣ್ಣ ಸಲಹೆ ನೀಡಿದರು. ಜಿಲ್ಲಾ ಸಹಕಾರ್ಯದರ್ಶಿ ಮನೋಜ್ ಶೆಟ್ಟಿ, ನಿರ್ದೇಶಕರಾದ ಬಾಲಕೃಷ್ಣ (ಅಪ್ಪು) ರೈ, ಸತೀಶ್ ರೈ ಫಾರೆಸ್ಟ್ ವ್ಯಾಲಿ, ಪ್ರಭು ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ ನೀಲುಮಾಡು, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ನೀತ ರೈ, ಸದಸ್ಯರಾದ ಜಗನ್ನಾಥ ರೈ ಈ ಸಂದರ್ಭ ಇದ್ದರು.
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಏಪ್ರಿಲ್ 14ರಿಂದ 21ರ ವರೆಗೆ ನಡೆಯಲಿದೆ. ಏಪ್ರಿಲ್ 13 ರಂದು ರಾತ್ರಿ ದೊಡ್ಡ ರಂಗಪೂಜೆ, ಅಂಕುರಾರೋಪಣ ಎ.14ರಂದು ಹಗಲು ಧ್ವಜಾರೋಹಣ ರಾತ್ರಿ ಉತ್ಸವ ಬಲಿ, ಎ.15ರಂದು ಪ್ರಾತಃ ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಪಂಚಾಂಗ ಪಠಣ, ಎ.16ರ ರಾತ್ರಿ ಉತ್ಸವ ಬಲಿ, ಮೂಡುಸವಾರಿ, ಎ. 17ರಂದು ಪ್ರಾತಃ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಎ.18ರಂದು ಹಗಲು ಭ್ರಾಮರೀವನದಲ್ಲಿ ಪ್ರತಿಷ್ಠಾ ವರ್ಧಂತಿ, ರಾತ್ರಿ ಬೆಳ್ಳಿ ರಥೋತ್ಸವ ಉತ್ಸವ ಬಲಿ, ಎ. 19 ರಂದು ಹಗಲು ಬ್ರಹ್ಮಸನ್ನಿದಿಯಲ್ಲಿ ಪರ್ವ ರಾತ್ರಿ ಉತ್ಸವ ಬಲಿ, ಪಡುಸವಾರಿ, ಎ. 20ರಂದು ಹಗಲು ಬ್ರಹ್ಮರಥೋತ್ಸವ ರಾತ್ರಿ ಉತ್ಸವ ಬಲಿ, ಶ್ರೀ ಭೂತಬಲಿ, ಶಯನ, ಎ. 21ರಂದು ಪ್ರಾತಃ ಕವಾಟೋದ್ಘಾಟನೆ ರಾತ್ರಿ ಅವಭೃಥ (ಆರಾಟ) ನಡೆಯಲಿದೆ.
ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಪ್ರಯುಕ್ತ ಮಾ. 21ರಂದು ಮಧ್ಯಾಹ್ನ ರಥಾರೋಹಣ ಸಂಪನ್ನಗೊಂಡಿತು. ವರ್ಷಾವಧಿ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರೀ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಕಂಬ್ಲಕಟ್ಟ ಶ್ರೀ ಶಿವರಾಜ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಜರಗಿದವು. ನಿತ್ಯಪೂಜೆ, ನಿತ್ಯಬಲಿ, ಪಲ್ಲಪೂಜೆ, ರಥಶುದ್ಧಿಗಳ ಬಳಿಕ ರಥಾರೋಹಣ ನಡೆಯಿತು. ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಿ. ಭವಾನಿಶಂಕರ ಹೆಗ್ಡೆ ಹಾಗೂ ದೇವಸ್ಥಾನದ ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಭಟ್, ಕೃಷ್ಣಾಪುರ ಶಾಖಾ ಮಠದ ವೇ| ಮೂ| ಶ್ರೀನಿವಾಸ ಉಪಾಧ್ಯಾಯ, ಬ್ರಹ್ಮಸ್ಥಾನದ ಪಾತ್ರಿ ಸುರೇಶ್ ರಾವ್, ಗುರಿಕಾರ ಮುರುಡಿ ಜಗದೀಶ ರಾವ್, ನಡಾÕಲು ಗುತ್ತು ಶ್ರೀನಾಥ್ ಹೆಗ್ಡೆ, ಶೇಖರ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ ಪೇಟೆಮನೆ, ವಿಜಯ ಹೆಗ್ಡೆ, ಗುತ್ತಿನಾರ್ ಕೃಷ್ಣ ಶೆಟ್ಟಿ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿಬಾಲ್, ಮಿಥುನ್ ಹೆಗ್ಡೆ, ನವೀನ್‌ಚಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,…
ಯಕ್ಷಗಾನದ ಸಿಡಿಲಮರಿ, ಶತ ಧಿಗಿಣಗಳ ಸರದಾರ ಖ್ಯಾತಿಯ ಪುತ್ತೂರು ಡಾ| ಶ್ರೀಧರ ಭಂಡಾರಿ ಅವರ ಸಂಸ್ಮರಣೆ ಹಾಗೂ “ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಸಮಾರಂಭವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರವಿವಾರ ನಡೆಯಿತು. ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನ ರಂಗದಲ್ಲಿ ತನ್ನದೇ ಆದ ಶೈಲಿಯನ್ನು ತೋರಿಸಿಕೊಟ್ಟು ಕಲೆಯನ್ನು ಇನ್ನೊಂದು ಪೀಳಿಗೆಗೆ ವರ್ಗಾಯಿಸಿ ಅವರಲ್ಲಿ ಅಭಿರುಚಿ ಮೂಡಿಸಿದ ಮಹಾನ್ ಕಲಾವಿದ ಡಾ| ಶ್ರೀಧರ ಭಂಡಾರಿ ಎಂದು ಸ್ಮರಿಸಿದರು. ವ್ಯಕ್ತಿಯ ಕಾಲಾನಂತರ ವರ್ಷ ದಿಂದ ವರ್ಷಕ್ಕೆ ನೆನಪು ಮಾಸುತ್ತದೆ. ಆದರೆ ಶ್ರೀಧರ ಭಂಡಾರಿ ಅವರ ನೆನಪು ವರ್ಷದಿಂದ ವರ್ಷಕ್ಕೆ ಹೆಚುತ್ತಿರುವುದು ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಸೇವೆಯ ಫಲ ಎಂದರು. ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕಲಾವಿದನ ಬದುಕು ಸಮೃದ್ಧ ಬದುಕು ಎಂಬು ದನ್ನು ತೋರಿಸಿಕೊಟ್ಟಿರುವ ಶ್ರೀಧರ ಭಂಡಾರಿ ಅವರು ಹಳ್ಳಿಯ ಮೂಲೆ ಯಿಂದ ವಿಶ್ವಕ್ಕೆ ಯಕ್ಷಗಾನದ…
ಹೊಸದಿಲ್ಲಿಯಲ್ಲಿ ಜರಗಿದ ವಾರ್ಷಿಕ ಎನ್‌ಸಿಸಿ ರ್ಯಾಲಿಯಲ್ಲಿ ಭಾಗವಹಿಸಿದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಎನ್‌ಸಿಸಿ ನೌಕಾದಳದ ಕೆಡೆಟ್ ಆಶ್ನ ರೈ ಅವರು ಅ. ಭಾ. ಮಟ್ಟದ ಅತ್ಯುತ್ತಮ ಕೆಡೆಟ್ ಅವಾರ್ಡ್ (ಚಿನ್ನದ ಪದಕ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದರು. ಆಶ್ನ ರೈ ಅವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರಿಗೆ ಎನ್‌ಸಿಸಿ ಸೇರಬೇಕೆಂಬ ಆಸಕ್ತಿ. ಕೆನರಾ ಸಿಬಿಎಸ್‌ಇ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿರುವಾಗ ಎನ್‌ಸಿಸಿಗೆ ಸೇರಿದ್ದರು. ಬಳಿಕ ಇದೇ ಕ್ಷೇತ್ರದಲ್ಲಿ ಮುಂದುವರಿದಿದ್ದರು. ಈ ಹಿಂದೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎನ್‌ಸಿಸಿ ರ್ಯಾಲಿಗೆ ಆಯ್ಕೆಯಾಗಿದ್ದರು. ಆಶ್ನ ರೈ ಅವರು ಮಂಗಳೂರಿನ ಕದ್ರಿ ಕಂಬಳದ ಉದ್ಯಮಿ ರಾಮಣ್ಣ ರೈ ಮತ್ತು ಶಿಕ್ಷಕಿ ಅಕ್ಷತಾ ರೈ ದಂಪತಿ ಪುತ್ರಿಯಾಗಿದ್ದಾರೆ.
ಮಹಿಳಾ ದಿನಾಚರಣೆಯು ಕೇವಲ ಪ್ರಶಂಸೆಗಷ್ಟೇ ಮೀಸಲಾಗಿರಬಾರದು. ಅದು ಸ್ವ ವಿಮರ್ಶೆಗೂ ವೇದಿಕೆಯಾಗಬೇಕು. ಏನದರೂ ತಪ್ಪು, ಲೋಪಗಳು ಕಂಡುಬಂದರೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಅದು ದೊಡ್ಡದೊಂದು ಬದಲಾವಣೆಗೆ ನಾಂದಿ ಹಾಡಿ ನಮ್ಮನ್ನು ನೆಮ್ಮದಿ ಹಾಗೂ ಯಶಸ್ಸಿನತ್ತ ಕೊಂಡೊಯ್ಯಲಿದೆ. ಮಹಿಳೆಯರು ಸದಾ ಗೌರವಿಸಲ್ಪಡುತ್ತಿರಬೇಕು. ಅದಕ್ಕೆ ಬೇಕಾದ ವೇದಿಕೆಯನ್ನು ಎಲ್ಲರೂ ಸೇರಿ ನಿರ್ಮಿಸೋಣ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ. ತಿಳಿಸಿದರು. ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಗಣೇಶ್ ಎಚ್. ಆರ್ ಅವರಿಂದ ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಣ ಯೋಗ ಚಿಕಿತ್ಸಾ ವಿಧಾನದಿಂದ ಮನಸ್ಸು ಹಗುರವಾಗುತ್ತದೆ. ದೇಹ ನಿಯಂತ್ರಣದಲ್ಲಿರುತ್ತದೆ. ಪ್ರಾಣ ಯೋಗ ಮಾಡುವವರಲ್ಲಿ ಶ್ರದ್ಧೆ, ಭಕ್ತಿ ಮುಖ್ಯ ಎಂದು ಗಣೇಶ್ ಎಚ್.ಆರ್. ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಸಮಾರಂಭದಲ್ಲಿ…
ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೈದು ನೂರಾರು ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಸರದಾರ್ತಿಯಾಗಿ ಈಗ ಮಾಡೆಲಿಂಗ್ ಕ್ಷೇತ್ರಕ್ಕೂ ಲಗ್ಗೆಯಿಡುತ್ತಿರುವ ನವಿ ಮುಂಬಯಿಯ ಉದ್ಯಮಿ ಸುಭಾಷ್ ಶೆಟ್ಟಿಯವರ ಸುಪುತ್ರಿ ತನಿಷ್ಕ ಶೆಟ್ಟಿಯವರ ಭವಿಷ್ಯ ಉಜ್ವಲವಾಗಿರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಬಂಟ್ಸ್ ನೌ ಪೇಜ್ ಲೈಕ್ ಮಾಡಿ ಪ್ರೋತ್ಸಾಹಿಸಿ.https://www.facebook.com/buntsnow/
ಯುವ ಬಂಟರ ಸಂಘ ಪುತ್ತೂರು ನೇತೃತ್ವದಲ್ಲಿ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರ ಸ್ಮರಣಾರ್ಥ ಉಚಿತ ದಂತ ತಪಾಸಣಾ ಶಿಬಿರ
ಯುವ ಬಂಟರ ಸಂಘ ಪುತ್ತೂರು ಇವರ ನೇತೃತ್ವದಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು, ಇಂಟರಾಕ್ಟ್ ಕ್ಲಬ್, ರಾಮಕೃಷ್ಣ ಯುವ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಸಹಯೋಗದಲ್ಲಿ ಯುವ ಬಂಟರ ಸಂಘದ ಪೂರ್ವಧ್ಯಕ್ಷರಾದ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಇವರ ಸ್ಮರಣಾರ್ಥ ಉಚಿತ ದಂತ ತಪಾಸಣಾ ಚಿಕಿತ್ಸಾ ಶಿಬಿರ ಅ. 4 ರಂದು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಯುವ ಬಂಟರ ಸಂಘ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಇವರ ಸ್ಮರಣಾರ್ಥ ಮಾಡುವ ಶಿಬಿರ ಅರ್ಥಪೂರ್ಣವಾದುದು. ಇದಕ್ಕೆ ಸಹಕರಿಸಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಖ್ಯ ಅತಿಥಿಯಾಗಿದ್ದ ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಮಾಜಕ್ಕೆ ಉಪಯೋಗವಾಗುವ ಇಂತಹ ಬೇರೆ ಬೇರೆ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಸಾರ್ವಜನಿಕರೆಲ್ಲರೂ ಇದರ ಸದುಪಯೋಗ ಪಡೆಯಲಿ…