Author: admin
ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ನೇತೃತ್ವದಲ್ಲಿ ಫೆ. 3ರಂದು ಐಕಳಬಾವ ಕಂಬಳ ಜರಗಲಿದೆ. ಕಂಬಳವನ್ನು ನಿರಂತರವಾಗಿ ಆಯೋಜಿಸುವ ನಿಟ್ಟಿನಲ್ಲಿ 1 ಕೋಟಿ ರೂ.ಗಳ ಶಾಶ್ವತ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಬೆಳಗ್ಗೆ 8.30ಕ್ಕೆ ಧಾರ್ಮಿಕ ವಿಧಿಯೊಂದಿಗೆ ಕಂಬಳ್ಳೋತ್ಸವ ಆರಂಭಗೊಳ್ಳಲಿದೆ. ಪೂರ್ವಾಹ್ನ 11ಕ್ಕೆ ಐಕಳಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಡಾ| ಕೆ.ಪಿ.ಕೆ. ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅದಾನಿ ಫೌಂಡೇಶನ್ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಕಂಬಳ ಕರೆಗಳನ್ನು ಉದ್ಘಾಟಿಸುವರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಆಸ್ರಣ್ಣ ಶುಭಾಶಂಸನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭಾಗವಹಿಸಲಿದ್ದಾರೆ. ಸಂಜೆಯ ಸಭಾ ಕಾರ್ಯಕ್ರಮವನ್ನು ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಡಾ| ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ…
ಬಂಟರ ಹೆಸರಿನಲ್ಲಿಯೇ ಒಂದು ಶಕ್ತಿ ಸಂಘಟನೆ ಇದೆ. ಯಾವುದು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವ ಗುಣ ಬಂಟರಲ್ಲಿದೆ. ಮುಂಬಯಿ ಬಂಟರ ಸಂಘ ಮಾಡುತ್ತಿರುವ ಸಮಾಜ ಸೇವೆ ಅನನ್ಯವಾದುದು. ದುಡಿದ ಹಣ ಸಮಾಜದ ಹಿತಕ್ಕೆ ಬಳಸಿದರೆ ಸಮಾಧಾನ, ಸಂತೃಪ್ತಿ ಎರಡೂ ಇದೆ. ಸಮಾಜ ಸೇವೆಯೇ ದೇವರ ಸೇವೆ. ಶ್ರದ್ದಾ ಭಕ್ತಿಯಿಂದ ಆ ಕೆಲಸ ಬದುಕಿದಷ್ಟು ಕಾಲ ಪ್ರಾಮಾಣಿಕವಾಗಿ ಮಾಡಿದರೆ ಸಾಕ್ಷಾತ್ಕಾರವಾಗಿ ಎಲ್ಲರ ಸಹಕಾರ ಸಿಗುತ್ತದೆ. ಮುಂಬಯಿ ಬಂಟರ ಸಂಘ ಸಮಾಜ ಬಾಂಧವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ 9 ಪ್ರಾದೇಶಿಕ ಸಮಿತಿ ಹೊಂದಿದ್ದು, ಪ್ರಾದೇಶಿಕ ಸಮಿತಿಯ ಆಧಾರದಿಂದ ತನ್ನ ಕಾರ್ಯಾ ಚಟುವಟಿಕೆಗಳನ್ನು ಸಮಾಜ ಬಾಂಧವರಿಗೆ ತಲುಪಿಸುವಂತೆ ಮಾಡುತ್ತಿದೆ. 2009 ರಲ್ಲಿ ಬಂಟರ ಧೀಮಂತ ನಾಯಕ ಆಗಿನ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ವಸಾಯಿ ದಹಾಣು ಸಮಿತಿಯ 2023-2026ರ ಅವಧಿಯ ನೂತನ ಕಾರ್ಯಾಧ್ಯಕ್ಷರಾಗಿ ಕೊಡುಗೈ ದಾನಿ, ನಗುಮೊಗದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಹಾಗೂ ಪದಾಧಿಕಾರಿಗಳು,…
ಗೋವಾ ಬಂಟರ ಸಂಘದ 24 ನೇ ವಾರ್ಷಿಕ ಮಹಾಸಭೆ ಹಾಗೂ ಪರಿವಾರ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮವು ಫೆಬ್ರವರಿ 4 ರ ಆದಿತ್ಯವಾರ ಬೆಳಗ್ಗೆ 9.00 ಗಂಟೆಗೆ ಲಕ್ಷ್ಮೀ ಎಂಪಾಯರ್ ಹೋಟೆಲ್, ಮಡ್ ಗಾಂವ್ ರೈಲ್ವೆ ಸ್ಟೇಷನ್ ಎದುರುಗಡೆ, ಗೋವಾ ಇಲ್ಲಿ ಜರಗಲಿದೆ. ಅಂದು ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತಲಿರುವರು. ವಿಭಿನ್ನ ರೀತಿಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯದ ಮೂಲಕ ಸಮಾಜ ಭಾಂಧವರ ಏಳಿಗೆಗೆ ಶ್ರಮಿಸುತ್ತಿರುವ ಗೋವಾ ಬಂಟರ ಸಂಘವು ಅಧ್ಯಕ್ಷರಾದ ಶಶಿಧರ ನಾಯ್ಕ್ ರ ದಕ್ಷ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಿಗ್ಗೆ 8.30 ರಿಂದ 9.00 ರವರೆಗೆ ಉಪಹಾರ, ಅತಿಥಿಗಳ ಸ್ವಾಗತ ಭಾಷಣ, ಕಾರ್ಯದರ್ಶಿಯವರಿಂದ ವರದಿ ವಾಚನ ಹಾಗೂ ವಾರ್ಷಿಕ ಲೆಕ್ಕ ಮಂಡನೆ, ಎಸ್.ಎಸ್., ಎಚ್. ಎಸ್. ಸಿ ಹಾಗೂ ಪದವೀಧರ ಮಕ್ಕಳಿಗಾಗಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಸಮಾಜದ ಸಾಧಕರ ಗುರುತಿಸುವಿಕೆ, ಅತಿಥಿ ಗಣ್ಯರಿಗೆ ಸನ್ಮಾನ, ಮಧ್ಯಾಹ್ನ…
2023 ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾದ ಕುಂದಾಪುರ ತಾಲೂಕು ಯುವ ಬಂಟರ ಸಂಘ ರಿ. ಕುಂದಾಪುರ ಇದರ ದಶಮ ಸಂಭ್ರಮದ ಅಂಗವಾಗಿ ‘ಭಾವೈಕ್ಯ’ ಬಂಟರ ಮಹಾಸಮಾಗಮ ಕಾರ್ಯಕ್ರಮ ಫೆಬ್ರವರಿ 11 ಭಾನುವಾರ ಪೂರ್ವಾಹ್ನ 9.30 ಕ್ಕೆ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಕ್ರೀಡಾಂಗಣ, ಯುವ ಮೆರಿಡಿಯನ್ ಸಂಕೀರ್ಣ, ಕೋಟೇಶ್ವರ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ‘ವಿದ್ಯಾದೀವಿಗೆ’ ಯೋಜನೆಯಡಿ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ‘ನವಚೇತನ’ ಯೋಜನೆಯಡಿ ವಿಶೇಷ ಚೇತನರಿಗೆ ಪ್ರೋತ್ಸಾಹಧನ, ಬಂಟರ ಸಾಂಸ್ಕೃತಿಕ ಸಂಭ್ರಮ, ರಾಷ್ಟ್ರಮಟ್ಟದ ಬಂಟರ ಸಮೂಹ ನೃತ್ಯ ಸ್ವರ್ಧೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಬಂಟ ಯುವ ಸಾಧಕರಿಗೆ ಸನ್ಮಾನ, ಉಚಿತ ವಿಶೇಷ ಅರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಹಾಗೂ ಕಣ್ಣಿನ ತಪಾಸಣಾ ಶಿಬಿರ, ನಾಡಿನ ಜನಪ್ರಿಯ ಗಾಯಕ ಗಾಯಕಿಯರಿಂದ ಸಂಗೀತ ಸಂಜೆ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಬಂಟರ ಸಾಂಸ್ಕೃತಿಕ ಸಂಭ್ರಮ, ರಾಷ್ಟ್ರಮಟ್ಟದ ಬಂಟರ ಸಮೂಹ ನೃತ್ಯ…
ಮಹಾರಾಷ್ಟ್ರದ ಪ್ರತಿಷ್ಠಿತ ಜಾತೀಯ ಸಂಘ ಸಂಸ್ಥೆಗಳಲ್ಲೊಂದಾದ ಬೋಂಬೆ ಬಂಟ್ಸ್ ಅಸೋಸಿಯೇಷನ್ ಪ್ರತೀ ವರ್ಷ ವಿಶಿಷ್ಠ ರೀತಿಯಲ್ಲಿ ಆಯೋಜಿಸಿಕೊಂಡು ಬಂದಂತೆ ಈ ವರ್ಷದ ಬಂಟ ಕ್ರೀಡೋತ್ಸವ ಫೆಬ್ರವರಿ 11 ರಂದು ರಾಜೆ ಸಂಭಾಜಿ ಮೈದಾನ, ವೀರ ಸಾವರ್ಕರ್ ಮಾರ್ಗ್, ಮುಲುಂಡ್ (ಪೂರ್ವ) ಮುಂಬಯಿ ಇಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 6 ರ ತನಕ ನಡೆಯಲಿರುವ ಈ ಅದ್ದೂರಿ ಕ್ರೀಡೋತ್ಸವದಲ್ಲಿ ರಾಜಕೀಯ, ಚಿತ್ರರಂಗದ ಅನೇಕ ದಿಗ್ಗಜರು ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಲಿದ್ದಾರೆ. ಈ ಕೂಟದಲ್ಲಿ ಪುರುಷರ ಕಬಡ್ಡಿ ಪಂದ್ಯವೂ ನಡೆಯಲಿದ್ದು, ಮಹಿಳೆಯರು ಮತ್ತು ಪುರುಷರಿಗಾಗಿ ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯವನ್ನು ಏರ್ಪಡಿಸಲಾಗಿದೆ. ವಿವಿಧ ಪಂದ್ಯಗಳ ವಿಜೇತರುಗಳಿಗೆ ಸುಮಾರು 5 ಲಕ್ಷ ರೂಪಾಯಿಗಿಂತಲೂ ಹೆಚ್ಚು ನಗದು ಬಹುಮಾನವನ್ನು ವಿತರಿಸಲಾಗುವುದು. ಸ್ವರ್ಧೆಯ ವಿವರಗಳ ಮಾಹಿತಿಗಾಗಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಯೆಯ್ಯಾಡಿ ಸುರೇಶ್ ಶೆಟ್ಟಿಯವರನ್ನು ಮೊಬೈಲ್ ನಂಬರ್ 9892169914 ಮತ್ತು ಅನಿತಾ ಎಸ್. ರೈಯವರನ್ನು 7028863600 ರ ಮುಖೇನ ಸಂಪರ್ಕಿಸಬಹುದಾಗಿದೆ ಎಂದು ಪ್ರತಿಕಾ…
ಮೀರಾ ದಹಾಣೂ ಬಂಟ್ಸ್ ವತಿಯಿಂದ ಪ್ರತೀ ವರ್ಷ ನಡೆಯುವ ಕ್ರೀಡಾಕೂಟದ ಮೊದಲ ಹಂತದಲ್ಲಿ ಫುಟ್ಬಾಲ್ ಪಂದ್ಯಾಟವು ಇದೇ ಬರುವ ಫೆಬ್ರವರಿ 4 ರ ರವಿವಾರದಂದು ಬೊಯಿಸರ್ ಪೂರ್ವದ ‘ಬೊಯಿಸರ್ ಸ್ಕೋರ್ ಸ್ಪೋರ್ಟ್ಸ್ ಮಾನ್’ನಲ್ಲಿ ಜರಗಲಿದೆ. ಅಂದು ನಡೆಯಲಿರುವ ಪುಟ್ಬಾಲ್ ಪಂದ್ಯಾಟದಲ್ಲಿ ಮೀರಾರೋಡ್ ನಿಂದ ದಹಾಣೂ ತನಕದ ವಲಯದ ಎಲ್ಲಾ ಬಂಟ ಕ್ರೀಡಾಪಟುಗಳ ತಂಡಗಳು ಭಾಗವಹಿಸಲಿದ್ದು, ಪಂದ್ಯಾಟವು ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ಹಲವಾರು ಕ್ರೀಡೆಗಳು ಫೆಬ್ರವರಿ 10 ರಂದು ವಿರಾರ್ ನ ಹಳೇ ವಿವಾ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ಗಂಟೆ 7 ರಿಂದ ಆರಂಭಗೊಳ್ಳಲಿದೆ. ಮಹಾರಾಷ್ಟ್ರದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಪಂದ್ಯಾಟಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪಂದ್ಯಾಟವನ್ನು ಯಶಸ್ವಿಗೊಳಿಸುವಲ್ಲಿ ಭಾಗಿಯಾಗಬೇಕೆಂದು ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ವಿದ್ಯಾಗಿರಿ (ಮೂಡುಬಿದಿರೆ): ‘ಕಾಲೇಜುಗಳ ಹೊರ ನೋಟವನ್ನು ಹೋಲಿಕೆ ಮಾಡುವ ಬದಲು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಗಮನಿಸಿ. ಆ ಫಲಿತಾಂಶದ ಹಿಂದಿನ ಪರಿಶ್ರಮವನ್ನು ಹೋಲಿಕೆ ಮಾಡುವುದು ಉತ್ತಮ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.ಆಳ್ವಾಸ್ ಕಾಲೇಜಿನ ಮುಂಡ್ರೆದುಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಗುರುವಾರ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕರ – ಶಿಕ್ಷಕರ ಸಭೆ’ಯಲ್ಲಿಅವರು ಮಾತನಾಡಿದರು. ‘ಕರ್ನಾಟಕದಲ್ಲಿ ಹಲವಾರು ವಿದ್ಯಾಸಂಸ್ಥೆಗಳಿವೆ. ಆದರೆ, ಹೆಚ್ಚಿನ ಸಂಸ್ಥೆಗಳಲ್ಲಿ 1 ರಿಂದ 12 ನೇ ತರಗತಿಗೆ ಪೂರಕವಾಗುವ ವಾತಾವರಣ ಮತ್ತು ಸಮಗ್ರ ವ್ಯವಸ್ಥೆಯನ್ನು ಕಲ್ಪಿಸಿಲ್ಲ . ನಮ್ಮ ಪ್ರತಿಷ್ಠಿತ ಸಂಸ್ಥೆಯನ್ನು ಇಲ್ಲಿನ ಇತರ ಕಾಲೇಜುಗಳೊಂದಿಗೆ ಹೋಲಿಕೆ ಮಾಡುವುದು ದೊಡ್ಡ ತಪ್ಪು. ನಮ್ಮ ಸಂಸ್ಥೆಯಲ್ಲಿ ಎನ್ಸಿಆರ್ಟಿ ಪಠ್ಯಕ್ರಮದ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಗುರಿ ಸಾಧಿಸುವ ಛಲದ ಹಾಗೂ ಪರಿಶ್ರಮವನ್ನು ರೂಪಿಸಲಾಗುತ್ತದೆ ಎಂದರು. ನಮ್ಮ ಸಂಸ್ಥೆಯಲ್ಲಿ ಒಟ್ಟು 22 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅದರಲ್ಲಿ…
ಕರ್ನಾಟಕದ ದಕ್ಷಿಣ ಭಾಗದಲ್ಲಿ ಒಬ್ಬ ಭಕ್ತನಿದ್ದ. ಆತನ ತಾಯಿಗೆ ವಯಸ್ಸಾಗಿತ್ತು. ಆಕೆ ಕಾಶಿಗೆ ಹೋಗಿ ವಿಶ್ವನಾಥನ ಮಡಿಲಲ್ಲಿ ಸಾಯಬೇಕು ಅಂತ ಬಯಸುತ್ತಾ ಇದ್ದಳು. ತನ್ನ ಇಡೀ ಜೀವನದಲ್ಲಿ ಏನನ್ನು ಕೇಳಿರದ ಆಕೆ ತನ್ನ ಮಗನ ಹತ್ತಿರ ಇದನ್ನೊಂದು ಕೇಳಿಯೇ ಬಿಟ್ಟಳು. ನನ್ನನ್ನು ಕಾಶಿಗೆ ಕರೆದುಕೊಂಡು ಹೋಗು, ನನಗೂ ವಯಸ್ಸಾಗಿದೆ. ನಾನು ಅಲ್ಲಿ ಹೋಗಿ ಸಾಯಬೇಕು ಅಂತ. ಹಾಗಾಗಿ ಇವನು ತನ್ನ ವೃದ್ಧ ತಾಯಿಯನ್ನು ಕರೆದುಕೊಂಡು ಹೊರಟ. ದಕ್ಷಿಣ ಕರ್ನಾಟಕದಿಂದ ಕಾಶಿವರೆಗೆ ಕಾಡಿನ ದಾರಿಯಲ್ಲಿ ನಡೆಯೋದು ಅಂದರೆ, ಅದು ತುಂಬಾನೇ ದೂರ. ವಯಸ್ಸಾಗಿದ್ದರಿಂದ ನಡೆದು ನಡೆದು ತಾಯಿ ಅಸ್ವಸ್ಥಗೊಳ್ಳುತ್ತಾಳೆ. ಹಾಗಾಗೀ ತಾಯಿಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೊರಟನು. ನಡೆದಿದ್ದರಿಂದ ಆತನ ಶಕ್ತಿಯೂ ಕುಂದುತ್ತಾ ಬರುತ್ತಿತ್ತು. ಮುಂದೆ ಹೋಗೋಕೆ ಅವನಿಗಿದ್ದ ಒಂದೇ ಒಂದು ದಾರಿ ಎಂದರೆ ಶಿವ ಶಿವ ಎಂದು ಜಪಿಸೋದು. ಈ ಒಂದು ಪ್ರಯತ್ನದಲ್ಲಿ ನನ್ನನ್ನು ಸೋಲೋಕೆ ಬಿಡಬೇಡ, ನನ್ನ ತಾಯಿ ನನ್ನ ಬಳಿ ಕೇಳಿದ ಏಕೈಕ ವಿಚಾರವಿದು. ಇದನ್ನು ಪೂರೈಸೋ…
ವಿದ್ಯಾಗಿರಿ: ‘ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ಪರಿಸರ ಹಸಿರು ಹೆಚ್ಚಿಸಿ’ ಎಂದು ಇಂಧನ ಮತ್ತು ಜೌಗು ಪ್ರದೇಶ ಸಂಶೋಧನಾ ತಂಡದ ಸಂಯೋಜಕ, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನದ ವಿಜ್ಞಾನಗಳ ಕೇಂದ್ರ (ಸಿಇಎಸ್) ದಲ್ಲಿನ ಪರಿಸರ ಮಾಹಿತಿ ವ್ಯವಸ್ಥೆಯ (ಇಎನ್ವಿಐಎಸ್) ಸಂಚಾಲಕ ಡಾ ಟಿ. ವಿ. ರಾಮಚಂದ್ರ ಹೇಳಿದರು.ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ‘ವಿಶ್ವ ತೇವಭೂಮಿ ದಿನ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದರಿಂದ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ, ಸಾಧ್ಯವಾದಷ್ಟು ಪಾಲಿಥಿನ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು. ಮುಂದಿನ 16ನೇ ಕೆರೆ (ಲೇಕ್)ಸಮ್ಮೇಳನದ ಸ್ವಚ್ಛತಾ ಕಾರ್ಯವನ್ನು ಆಳ್ವಾಸ್ ಆಳ್ವಾಸ್ನಲ್ಲಿ ನಡೆಸಲಾಗುತ್ತಿದ್ದು, ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ.ಚಿತ್ರಕಲೆಯ ಸ್ಪರ್ಧೆಯನ್ನು ನಡೆಸುತ್ತಿದ್ದೇವೆ. ನನ್ನ ದೇಶದ ಪ್ರತಿಯೊಂದು ಮಗು ಉಜ್ವಲವಾಗಬೇಕು ಮತ್ತು ಪ್ರತಿ ಮಗು ಪರಿಸರ ಸಾಕ್ಷರಾಗಿರಬೇಕು ಎಂದು ಉದ್ದೇಶವನ್ನು…
ವಿದ್ಯಾಗಿರಿ(ಮೂಡುಬಿದಿರೆ): ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ನಾಲ್ಕು ದಿನಗಳ ಕಾಲ ನಡೆದ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 29ನೇ ವಿರಾಸತ್ ಗೆ ಭಾನುವಾರ ರಾತ್ರಿ ತೆರೆ ಬಿತ್ತು. ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು. ಇದಕ್ಕೂ ಮೊದಲು ಕಿರು ರಥದಲ್ಲಿ ಗಣಫತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥಯಾತ್ರೆಯಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. 15 ಅರ್ಚಕರು ಮಂತ್ರ ಘೋಷ ಮಾಡಿದರು. ತಟ್ಟಿರಾಯ, ಅಪ್ಸರೆಯರು, ಕಳಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ…















