Author: admin
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಯಕ್ಷಸಿರಿ ಬಂಟರ ಸಂಘ ಸುರತ್ಕಲ್ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭವು ಎಪ್ರಿಲ್ 14 ರಂದು ಗುರುವಾರ ಸಂಜೆ 4 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪಂಚ ಯಕ್ಷಗಾನ ಮೇಳಗಳ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಾಧವ ಭಂಡಾರಿ ಕುಳಾಯಿ, ಸುರತ್ಕಲ್ ಅಗರಿ ಸಂಸ್ಥರಣಾ ವೇದಿಕೆಯ ಅಧ್ಯಕ್ಷ ಅಗರಿ ರಾಘವೆಂದ್ರ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೇಂದ್ರಿಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಯಕ್ಷಗುರು ರಾಕೇಶ್ ರೈ ಅಡ್ಕ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಚಾಲಕರು ತಿಳಿಸಿದ್ದಾರೆ.
ನಮ್ಮ ಭಾರತವು ಹಬ್ಬಗಳಲ್ಲಿ ಅರಳುವ ದೇಶ. ಅದರಲ್ಲೂ ದೀಪಾವಳಿ ಎಂದರೆ ಎಲ್ಲೆಡೆ ಸಾಲು ಸಾಲು ದೀಪಗಳ ರಂಗು ರಂಗಿನ ಹಣತೆಗಳು ಉರಿದು ಬಣ್ಣದ ಬೆಳಕು ಹರಿಸಿ ಚೆಲುವ ಸೂಸುವ ಸೊಬಗು. ಜಗಮಗ ಪಟಾಕಿಗಳು ನಕ್ಷತ್ರಲೋಕ ಸೃಷ್ಟಿಸಿ ಬದುಕಿನಲ್ಲಿ ಬಣ್ಣದ ಬೆಳಕು ಹರಿಸುತ್ತದೆ. ಹೊಂಬಣ್ಣದ ಬೆಳಕು ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಹಲವು ವೈವಿಧ್ಯತೆಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಮನೆ ಮನಗಳ ಬೆಳಗಿಸುವ ಸಂಭ್ರಮದ ಹಬ್ಬವಿದು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ ಬೆಳಕಿನ ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ ಖುಷಿ ತರುವ ಹಬ್ಬ. ತಳಿರು ತೋರಣಗಳ ಮೆರಗು, ಸಿಹಿ ತಿಂಡಿ, ಪಟಾಕಿ ಹಾರಿಸುವ ಸಂಭ್ರಮ, ಬಣ್ಣಬಣ್ಣಗಳಿಂದ ಅಲಂಕೃತಗೊಂಡ ರಂಗೋಲಿಗೂ ದೀಪಾವಳಿಗೂ ಅವಿನಾಭಾವ ನಂಟು. ವಿವಿಧ ಬಗೆಯ ಬಣ್ಣಗಳನ್ನು ತುಂಬಿ ಅಲ್ಲಲ್ಲಿ ಹಣತೆಗಳನ್ನು ಹಚ್ಚಿ ಇಡುವ ರಂಗೋಲಿಗಳ ಚಿತ್ತಾರ, ಹಣತೆ ದೀಪದ ಜಗಮಗ ಹೊಂಬೆಳಕಿನಲ್ಲಿ ಅಮಾವಾಸ್ಯೆಯ…
ಪಡುಬಿದ್ರಿ ಬಂಟರ ಸಂಘದ ವತಿಯಿಂದ ಸಮಾಜದ ಆರ್ಥಿಕ ದುರ್ಬಲರಿಗೆ, ಆಶಕ್ತರಿಗೆ, ಅನಾರೋಗ್ಯ, ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು 20 ಲಕ್ಷ ರೂ ಸಹಾಯಧನವನ್ನು ಅಕ್ಟೋಬರ್ 1ರ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ವಿತರಿಸಲಾಗುವುದೆಂದು ಬಂಟರ ಸಂಘದ ಅಧ್ಯಕ್ಷರಾದ ಡಾ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ಸಮಾಜದ ವೃದ್ದರಿಗೆ ನಮ್ಮ ಸಂಘವು ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು 6ಎಕರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ಎಂಬ ವೃದ್ದಾಶ್ರಮ ನಿರ್ಮಿಸಿರುವ ಯೋಜನೆ ಹಾಕಿಕೊಳ್ಳಲಾಗಿದೆ. ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದಲ್ಲಿ ಆರ್ಥಿಕ ಸಬಲೀಕರಣ ಮತ್ತು ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೋ -ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತದೆ. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿ ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ. ಮುಂಬೈ ಬಂಟರ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯರ ಸಭೆಯು ಸೆಪ್ಟೆಂಬರ್ 4 ರಂದು ಮುಲ್ಕಿ ಬಳಿಯ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿ ಸಭೆಯ ನಿರ್ಣಯವನ್ನು ದಾಖಲು ಮಾಡಲಾಯಿತು ಹಾಗೂ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮತ್ತು ಮಂಜೂರಾತಿ ಪಡೆಯಲಾಯಿತು. ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿಯವರಿಂದ ತೆರವಾದ ಸ್ಥಾನಕ್ಕೆ ಚಂದ್ರಹಾಸ ಶೆಟ್ಟಿ ರಂಗೋಲಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ಸ್ವಾಗತಿಸಿ ವರದಿ ಮಂಡಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿಯವರು ಲೆಕ್ಕಪತ್ರ ಮಂಡಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜದ ಅಭಿವೃದ್ದಿ ಮತ್ತು ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ದಾನಿಗಳು…
ಕ್ರೀಡಾ ಕ್ಷೇತ್ರದ ಪ್ರೋತ್ಸಾಹ, ಸಾಧನೆ, ಅವಿರತ ಚಟುವಟಿಕೆಗಳಿಂದ ಸಮಾಜದ ಗಮನ ಸೆಳೆದಿರುವ ಉದ್ಯಮಿ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಅತ್ತೂರು ಸದಾನಂದ ಶೆಟ್ಟಿ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಿದರು. ಎ ಸದಾನಂದ ಶೆಟ್ಟಿ ಅವರು ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಕ್ರೀಡಾ ಪೋಷಕರಾಗಿ, ಯಶಸ್ವಿಯಾಗಿದ್ದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿಕೊಡುವ ಮೂಲಕ ಅವರ ಬದುಕಿಗೆ ನೆರಳಾದವರು. ಮಂಗಳೂರಿನಲ್ಲಿ ತಮ್ಮ ಉದ್ಯಮಶೀಲತೆ, ಕಠಿನ ಶ್ರಮದಿಂದಾಗಿ ಹೋಟೆಲ್ ಉದ್ಯಮದಲ್ಲಿ ಯಶಸ್ಸನ್ನು ಕಂಡವರು. 1992ರಲ್ಲಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣವಿತ್ತರು. ಅವರು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿದವರು. ಚಿಕ್ಕಂದಿನಿಂದಲೇ ಕ್ರೀಡೆ, ಆಟೋಟಗಳತ್ತ ಆಕರ್ಷಿತರಾದವರು. ಉದ್ಯಮಿಯಾಗಿರುವಾಗಲೂ ಸದಾ ಹತ್ತು ಹಲವು ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವುದು, ಪ್ರೋತ್ಸಾಹ ನೀಡುವ ಮೂಲಕ ಆ ಕ್ಷೇತ್ರಕ್ಕೆ ಇನ್ನಿಲ್ಲದ ಕೊಡುಗೆ ನೀಡಿದ್ದಾರೆ. 1985ರಲ್ಲಿ…
ಜಾಗತಿಕವಾಗಿ ಇಂದು ಯೋಗಕ್ಕೆ ಭಾರೀ ಮನ್ನಣೆ ಸಿಕ್ಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಹಿರಿದಾಗಿದ್ದು, ಪ್ರಪಂಚದ ಸುಮಾರು 30 ಕೋಟಿಗೂ ಹೆಚ್ಚು ಮಂದಿ ಯೋಗ ಮಾಡುತ್ತಿದ್ದಾರೆ ಎಂದರೆ ಅಚ್ಚರಿ ಎನಿಸದೇ ಇರದು. ಇಂದು ಯೋಗ ಧರ್ಮ, ದೇಶ, ಸಂಪ್ರದಾಯಗಳನ್ನು ಮೀರಿ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಯೋಗಕ್ಕೆ ಸಂಬಂಧಿಸಿದ ಪೂರಕ ಉದ್ಯಮವೂ ಬೆಳೆದು ನಿಂತಿದೆ. 2015ರ ಜೂ.21ರಂದು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಣೆ ಶುರು ಮಾಡಿತು. ಇಂದು ಅಮೆರಿಕ, ಚೀನಾ, ಇಂಗ್ಲೆಂಡ್, ಆಸ್ಟ್ರೇಲಿಯ, ಕೆನಡಾ ಆದಿಯಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.90ರಷ್ಟು ದೇಶಗಳು ಯೋಗದಿನ ಆಚರಿಸುತ್ತಿವೆ. ಅಷ್ಟೇ ಅಲ್ಲ, ಯೋಗವನ್ನು ಜೀವನದ ಒಂದು ಭಾಗವಾಗಿ ಅನುಸರಿಸುತ್ತಿವೆ. ಯೋಗದ ಮೂಲ ಭಾರತ. ಸುಮಾರು 5 ಸಾವಿರ ವರ್ಷಗಳ ಹಿಂದೆ ಆರಂಭವಾದ ಈ ಯೋಗ, ಭಾರತದಲ್ಲೇ ಹೆಚ್ಚು ಪ್ರಸಿದ್ಧಿಯಾಗಿತ್ತು. ಇದನ್ನು ಜಾಗತಿಕ…
ಮಾರ್ಚ್ ೧೭ರಂದು ತುಳುಕೂಟ ಕತಾರ್ ಆಯೋಜಿಸಿದ್ದ “ತುಳುಜಾತ್ರೆ” ಎಂಬ ಮೇಳವು ಅತ್ಯಂತ ಅದ್ಧೂರಿಯಾಗಿ ನೆರವೇರಿತಲ್ಲದೆ ಕತಾರ್‌ನಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಭಾರತಿಯರ ಗಮನವನ್ನು ಸೆಳೆದು ಮೆಚ್ಚುಗೆ ಪಡೆಯಿತು. ಕರುನಾಡು, ಅದರಲ್ಲೂ ಕರಾವಳಿಯ ವಿಧ-ವಿಧವಾದ ತಿಂಡಿ ತಿನಿಸುಗಳು ಹಾಗು ಸಾಂಪ್ರದಾಯಿಕ ಆಟೋಟ ಪಂದ್ಯಗಳು ಸುಮಾರು ಮೂರು ಸಾವಿರ ಮಂದಿ ಯನ್ನು ಯಶಸ್ವಿಯಾಗಿ ಮನೋರಂಜಿಸಿತು. ವೇದಿಕೆಯಲ್ಲಿ ಪ್ರದರ್ಶಿಸಿದ ನಮ್ಮ ದೇಶದ ವಿಭಿನ್ನ ಕಲಾಕೃತಿಗಳು ಪ್ರೇಕ್ಷಕರನ್ನು ಕಾರ್ಯಕ್ರಮದುದ್ದಕ್ಕೂ ಸಳೆದಿಟ್ಟುಕೊಂಡಿದ್ದವು. ಕತಾರ್‌ನ ಡೈನಾಮಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ನಡೆ ಯಿತು. ಇಡೀ ಕಾಂಪ್ಲೆಕ್ಸ್ ರಂಗಮಯ ಗೊಳಿಸಿ, ಅದಕ್ಕೆ ತುಳುನಾಡ ಸಾಂಪ್ರ ದಾಯಕ ಹೊರಪನ್ನು ಅಳವಡಿಸಿ, ಕತಾರ್‌ನಲ್ಲೂ ಭವ್ಯವಾದ ಆಯೋಜನೆ ಸಾಧ್ಯವಿದೆ ಎಂಬುದನ್ನು ಸಾರಿ ಹೇಳುವಂತೆ ಅಲಂಕೃತಗೊಂಡಿತ್ತು. ಕಂಬಳದ ಫೊಟೋ ಬೂತ್! ನಿಜರೂಪಿಕ ತಟ್ಟಿರಾಯ! ಸ್ವಾಗತ ಕೋರುವ ಸುಸಜ್ಜಿತ ಕಮಾನು ಜನರ ಮನಸೂರೆಗೊಂಡವು. ತುಳು ಕೂಟದ ಅಧ್ಯಕ್ಷ ಕಿರಣ್ ಆನಂದ್, ಅತಿಥಿ ರವಿ ಕಟಪಾಡಿ, ರಾಜ್ಯೋತ್ಸವ ಪುರಸ್ಕೃತ ತುಳುಕೂಟ ಕತಾರ್‌ನ ಪೋಷಕ ಹಾಗೂ ಮಾಜಿ ಅಧ್ಯಕ್ಷ, ಡಾ. ಎಂ.…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಡಳಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಆಶೀರ್ವಚನಗೈದು ಮಾತಾಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, “ಬಂಟರು ಸಂಘಟನೆಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ವ್ಯಕ್ತಿ ಯಾವತ್ತೂ ಮೇಲಲ್ಲ ಸಂಘಟನೆ ಮೇಲು. ಸಂಘಟನೆ ಗಟ್ಟಿಯಾದಲ್ಲಿ ವ್ಯಕ್ತಿ ಮತ್ತು ಸಮಾಜ ಎರಡೂ ಬೆಳೆಯುತ್ತದೆ. ಬಂಟರು ಎಲ್ಲಾ ಕ್ಷೇತ್ರದಲ್ಲೂ ಇಂದು ಬೆಳೆಯುತ್ತಿದ್ದಾರೆ. ಸಂಪತ್ತು ಮಾತ್ರವಲ್ಲ ಒಳ್ಳೆಯ ಮನಸು ಕೂಡಾ ಬಂಟರಲ್ಲಿದೆ. ಇದು ಶ್ರೇಷ್ಠವಾದ ಗುಣ. ಅವರಲ್ಲಿ ನಾಯಕತ್ವ ಗುಣ ಇರುವ ಕಾರಣದಿಂದಲೇ ಸಮಾಜದಲ್ಲಿ ಅವರು ಗುರುತಿಸಲ್ಪಡುತ್ತಾರೆ. ಬಂಟರು ಸಂಘಿತರಾದರೆ ದೇಶವನ್ನು ಆಳಲು ಸಮರ್ಥರು” ಎಂದು ಹೇಳಿದರು. ಬಳಿಕ ಮಾತಾಡಿದ ಶ್ರೀ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಮಾತನಾಡಿ, “ಬಂಟ ಸಮಾಜದಲ್ಲಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರು ಹೃದಯದಿಂದ ದಾನ ಮಾಡುತ್ತಾರೋ ಅವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ”…
“ಒಳ್ಳೆಯತನಕ್ಕೆ ಹಣದ ಅವಶ್ಯಕತೆ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ” ಎಂಬ ಮಾತಿದೆ. ಪುತ್ತೂರು ತಾಲ್ಲೂಕಿನಲ್ಲಿ ತಿಮ್ಮಪ್ಪಣ್ಣ ಎಂದೇ ಖ್ಯಾತರಾಗಿರುವ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ ತಮ್ಮ ಸರಳತೆ ಸಜ್ಜನಿಕೆಯಿಂದಾಗಿ ಜನಾನುರಾಗಿಯಾದವರು. ಪ್ರತಿಷ್ಠಿತ ಬೆಳಿಯೂರು ಗುತ್ತು ದಿ. ವೆಂಕಪ್ಪ ಶೆಟ್ಟಿ ಮತ್ತು ಕೊಂಡೆಮಾರು ದಿ. ಉಮ್ಮಕ್ಕೆ ಶೆಡ್ತಿ ದಂಪತಿಗಳ ಮಕ್ಕಳಲ್ಲಿ ಮುದ್ದಿನ ಒಬ್ಬನೇ ಗಂಡು ಮಗುವಾಗಿ ಜನಿಸಿದ ಇವರು ಆ ಕಾಲದ ಬಿಎಸ್ಸಿ ಪದವೀಧರರು. ಕುಟುಂಬದ ಕೃಷಿಯ ಜೊತೆಗೆ ಸಮಾಜ ಸೇವೆಯನ್ನು ಹವ್ಯಾಸವಾಗಿಸಿಕೊಂಡ ಇವರು ಪುತ್ತೂರಿನ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ದುಡಿದು ಈ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು. ಪ್ರಸ್ತುತ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು ಪುತ್ತೂರಿನ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು. ಅಡಿಕೆ ಬೆಳೆಗಾರರಾಗಿರುವ ಶ್ರೀಯುತ ತಿಮ್ಮಪ್ಪ ಶೆಟ್ಟಿ ಎರಡು ಅವಧಿಗೆ ಕ್ಯಾಂಪ್ಕೋ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಮಂಗಳೂರು ಬಂಟರ…
ಜನ-ಗಣ-ಮನಧರ್ಮ- ಸಂಸ್ಕೃತಿ ಪರಶುರಾಮನನ್ನು ಬಲಗೊಳಿಸುವುದೆಂದರೆ ತಾಯಿಯನ್ನು ಮೂಲೆ ಸೇರಿಸುವುದೆಂದೇ ಅರ್ಥ! ಕಾರ್ಕಳದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ತುಳುನಾಡಿನ ಮೂಲನಿವಾಸಿಗಳನ್ನು ಹಾಗೂ ಅವರ ಮೂಲ ಸಂಸ್ಕೃತಿಯನ್ನು ಅಪಮಾನಿಸಲೆಂದೇ ಮಾಡಿರುವ ಒಂದು ಹುನ್ನಾರ… ಈ ನಿಟ್ಟಿನಲ್ಲಿ ಪೀಪಲ್ ಮೀಡಿಯಾ.ಕಾಂನಲ್ಲಿ ಹಲವಾರು ವಿದ್ವಾಂಸರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕಂತಿನಲ್ಲಿ ನಾಲ್ವರು ಪ್ರಮುಖ ಚಿಂತಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ- ಸಂ ಮೌಖಿಕ ಪರಂಪರೆಯ ಆಶಯಗಳೇ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ತಿರುಳುಗಳು. ವಾಸ್ತವಿಕವಾಗಿ ಈ ಸಾಂಸ್ಕೃತಿಕ ಪರಂಪರೆಯಲ್ಲಿ ಎಲ್ಲೂ ಪರಶುರಾಮನ ಪ್ರಸ್ತಾಪವಿಲ್ಲ. ಅದು ಇದ್ದರೂ ಮಾತೃಮೂಲಿಯ ವ್ಯವಸ್ಥೆಯನ್ನು ಕೆಡಿಸಿ ಪಿತೃಪ್ರಧಾನ ವ್ಯವಸ್ಥೆಯನ್ನು ಬಲಗೊಳಿಸಲು ತಂದ ಸೇರ್ಪಡೆ. ಇವತ್ತಿಗೂ ನಾವು ಪರಶುರಾಮನನ್ನು ಬಲಗೊಳಿಸುತ್ತೇವೆ ಎಂದರೆ ತಾಯಿಯನ್ನು ಸಂಪೂರ್ಣ ಮೂಲೆ ಸೇರಿಸಲು ತಯಾರಿ ನಡೆಸುತ್ತೇವೆ ಎಂದೇ ಅರ್ಥ. ಜನಪದರ ರಾಮ, ಕೃಷ್ಣ, ಶಿವ, ಬಿರ್ಮೆ ಎಲ್ಲರೂ ಕರಾವಳಿಯ ಒಡನಾಡಿಗಳು, ಅವರೆಂದೂ ನಾವು ಈ ನಾಡಿನ ಸೃಷ್ಟಿಕರ್ತರು ಎಂದು ಎಲ್ಲೂ ಹೇಳಿಕೊಳ್ಳಲಿಲ್ಲ. ಅವರೇ ಹೇಳಿಕೊಳ್ಳದ ಮೇಲೆ ನಮ್ಮ ಜನಪದರು…