Author: admin
ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡು, ಜಯಕರ್ನಾಟಕ ಸಂಘಟನೆಯಲ್ಲಿ ದಿವಂಗತ ಮುತ್ತಪ್ಪ ರೈ ಅವರ ಗರಡಿಯಲ್ಲಿ ಪಳಗಿ, ಯುವ ಉದ್ಯಮಿಯಾಗಿ ಸಮಾಜಸೇವೆ ಮಾಡುತ್ತಿರುವ ಸಹಕಾರಿ ಧುರೀಣ ಜಯರಾಮ ರೈ ಅವರ ಪುತ್ರ, ಬಿಜೆಪಿ ಮುಖಂಡ, ಕ್ರೀಡಾ ಪೋಷಕ ಸಹಜ್ ರೈ ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಯೋಗ ಕೂಡಿಬರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ದಿನಾಂಕ 31.12.2023 ರಂದು ನಡೆಯಲಿರುವ ಕ್ಯಾಂಪ್ಕೋ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯು 25.12.2023 ರಿಂದ 30.12.2023ರ ವರೆಗೆ ಆನ್ಲೈನ್ (Online) ತರಗತಿಯನ್ನು ನಡೆಸಲಿದ್ದು, ಈ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ತರಗತಿಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತರಗತಿಗಳು ರಾತ್ರಿ ಆನ್ಲೈನ್ ಮೂಲಕ 7.00 ರಿಂದ 9.00 ರವರೆಗೆ 2 ಗಂಟೆಗಳ ಅವಧಿಯದ್ದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಕೋರಲಾಗಿದೆ. ವಿದ್ಯಾಮಾತಾ ಅಕಾಡೆಮಿ ಹಿಂದೂಸ್ತಾನ್ ಕಾಂಪ್ಲೆಕ್ಸ್, ಎ.ಪಿ.ಯಂ.ಸಿ ರೋಡ್, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು – 574201 PH: 96204 68869 / 9148935808 ಸುಳ್ಯ ಶಾಖೆ: ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್, ಕಾರ್ ಸ್ಟ್ರೀಟ್ ಸುಳ್ಯ – 574239 PH: 9448527606
ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನವೆಂಬರ್ 4 ಮತ್ತು 5ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್ಶಿಫ್ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 20ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಚಂದನ್ ಯಾದವ್ (ಪ್ರಥಮ), ಅಂಕಿತ್ ದೇಶ್ವಾಲ್ (ದ್ವಿತೀಯ), ಆಸಿಫ್ ಖಾನ್ (ತೃತೀಯ), ಸುನಿಲ್ ಕುಮಾರ್ (4ನೇ ಸ್ಥಾನ), ಅಕ್ಷಯ್ ಕುಮಾರ್ (5ನೇ ಸ್ಥಾನ), ಅರವಿಂದ್ ಯಾದವ್ (6ನೇ ಸ್ಥಾನ) ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್ (ಪ್ರಥಮ), ಬಸಂತಿ ಕುಮಾರಿ (ದ್ವಿತೀಯ), ಕೆ.ಎಂ.ಸೋನಿಯಾ (ತೃತೀಯ), ಚೈತ್ರಾ ದೇವಾಡಿಗ (4ನೇ ಸ್ಥಾನ), ದಿಶಾ ಬೋರ್ಶೆ (6ನೇ ಸ್ಥಾನ), ಕೆ.ಎಂ. ಅಂಜಲಿ (7ನೇ ಸ್ಥಾನ) ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ.
ಪುಣೆ ತುಳುಕೂಟದ ವತಿಯಿಂದ ವಾರ್ಷಿಕ ದಸರಾ ಪ್ರಯುಕ್ತ ದುರ್ಗಾ ಪೂಜೆ ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅ 19 ರಂದು, ಪುಣೆಯ ಕರ್ವೆ ನಗರದ ಹೋಟೆಲ್ ರತ್ನಾ ಅರ್ಚಿಡ್ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿವಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು. ಪುಣೆ ತುಳುಕೂಟದ ಅಧ್ಯಕ್ಷ ಮೋಹನ ಶೆಟ್ಟಿ ಎಣ್ಣೆಹೊಳೆ ಯವರ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ ಮತ್ತು ತುಳುಕೂಟದ ಪದಾದಿಕಾರಿಗಳು ಮತ್ತು ಪುಣೆಯ ವಿವಿದ ಸಂಘ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಈ ನವರಾತ್ರಿಯ ಉತ್ಸವದ ಧಾರ್ಮಿಕ ಕಾರ್ಯಕ್ರಮದ ಪೂಜಾ ಕಾರ್ಯವು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್ ರವರ ಪೌರೋಹಿತ್ಯದಲ್ಲಿ ದುರ್ಗಾ ಪೂಜೆ ನೆರವೇರಿತು, ಪೂಜಾ ವಿದಿ ವಿಧಾನಗಳನ್ನು ಮದಂಗಲ್ ಆನಂದ್ ಭಟ್ ದಂಪತಿಗಳು ನೆರವೇರಿಸಿದರು . ಪುಣೆಯ ಶ್ರೀ ಗುರುದೇವ ಚಿಣ್ಣರ ಬಳಗದ ಮಕ್ಕಳಿಂದ, ಪುಟಾಣಿಗಳಿಂದ ಭಜನೆ ಮತ್ತು, ತುಳುಕೂಟ ಪುಣೆಯ ಎಲ್ಲಾ ಸದಸ್ಯ, ಸದಸ್ಯೆಯರಿಂದ…
“ಪರಿಣಾಮಕಾರಿ ನಾಯಕತ್ವ ಗುಣ ಹಾಗೂ ಮುನ್ನುಗ್ಗುವ ಪ್ರವೃತ್ತಿಯಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಬಂಟ ಸಮಾಜದವರು ಮುಖ್ಯವಾಹಿನಿಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವುದು ಅತ್ಯಗತ್ಯ,” ಎಂದು ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು. ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ಭಾನುವಾರ ಪಡುಬಿದ್ರಿ ಬಂಟರ ಸಂಘ ಮತ್ತು ಬಂಟ್ಸ್ ವೇಲ್ಫರ್ ಟ್ರಸ್ಟ್ ವತಿಯಿಂದ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ನಡೆದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಶಕ್ತರಿಗೆ ನೆರವು ವಿತರಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಪಡುಬಿದ್ರಿ ಬಂಟರ ಸಂಘದ ಈ ಕಾರ್ಯಕ್ರಮ ಅನುಕರಣೀಯ. ಸಮಾಜದ ಸರ್ವರೂ ಇದನ್ನು ಪ್ರೋತ್ಸಾಹಿಸಬೇಕು. ಅ.28, 29ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು.” ಎಂದರು. ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, “ಒಗ್ಗಟ್ಟಿನ…
ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಬಂಟರ ಸಭಾಂಗಣದಲ್ಲಿ ನಡೆಯಿತು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃ ಸಂಘದ ನಿರ್ದೇಶಕರಾದ ಭೂತುಗುಂಡಿ ಕರುಣಾಕರ ಶೆಟ್ಟಿ, ಪ್ರಮೋದ ರಾಜಕುಮಾರ್ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಸಂಘದ ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ, ದಯಾನಂದ ಆರ್ ಶೆಟ್ಟಿ, ಸುರೇಶ್ ಶೆಟ್ಟಿ ಗುಳಿಬೆಟ್ಟು, ಆಶಾ ಬಿ.ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ಜ್ಯೋತಿ ಕೆ.ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ, ರಮೇಶ್ ಶೆಟ್ಟಿ, ಸತ್ಯನಾರಾಯಣ ಪೂಜಾ ಸಮಿತಿ ಸಂಚಾಲಕ ಉದಯ ಶೆಟ್ಟಿ…
ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 5-09-2023 ರಂದು ಶಿಕ್ಷಕರ ದಿನಾಚರಣೆಯನ್ನು ಬಹಳ ಸಡಗರದಿಂದ ಆಚರಣೆ ಮಾಡಲಾಯಿತು. ಬೆಳಿಗ್ಗೆ 8:30 ಕ್ಕೆ ವಿದ್ಯಾರ್ಥಿಗಳು ಆರತಿ ಬೆಳಗುವುದರ ಮೂಲಕ ಪುಷ್ಪಗುಚ್ಛಗಳನ್ನು ನೀಡಿ ಶಿಕ್ಷಕರನ್ನು ಸ್ವಾಗತಿಸಿದರು. ನಂತರ ಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಧಾಕರ ಎಸ್ ಶೆಟ್ಟಿ ಅವರು ಶಿಕ್ಷಕರ ದಿನಾಚರಣೆಯನ್ನು ಕುರಿತು ಮಾತನಾಡಿದರು. ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಪ್ರಮುಖ ಉದ್ದೇಶವೇ ಶಿಕ್ಷಕರ ಮಹತ್ವವನ್ನು ಸಾರುವುದು ಜೊತೆಗೆ ಶಿಕ್ಷಣದಲ್ಲಿ ಯುವ ಜನತೆಗೆ ಪ್ರೋತ್ಸಾಹಿಸುವುದು. ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗಿಸುವವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ. ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ…
ಅದು 1999ರ ಮೇ ತಿಂಗಳ ಕೊನೆಯ ದಿನಗಳು. ಭಾರತೀಯ ಸೇನೆಯಲ್ಲಿ ಒಂದು ವರ್ಷದ ತರಬೇತಿ, ಸುಮಾರು 6 ತಿಂಗಳುಗಳ ಕರ್ತವ್ಯ ಮುಗಿಸಿ ಮೊದಲ ಬಾರಿಗೆ 36 ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದೆ. ರೈಲಿನ ಪ್ರಯಾಣ ಎಲ್ಲಾ ಸೇರಿ ಸುಮಾರು 7 ದಿನ ಕಳೆದಿರಬಹುದು. ಇದ್ದಕ್ಕಿದ್ದಂತೆ ಸೇನೆಯಿಂದ ಒಂದು ಟೆಲಿಗ್ರಾಂ ಬಂತು. ತತ್ಕ್ಷಣ ಶ್ರೀನಗರಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗುವುದು, ಇಷ್ಟೇ ಬರೆದಿತ್ತು. ಯಾಕೆ-ಏನು ಎಂದು ಗೊತ್ತಿಲ್ಲ. ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದೆ. ಶ್ರೀನಗರಕ್ಕೆ ತಲುಪುವವರೆಗೂ ‘ಕಾರ್ಗಿಲ್ ಯುದ್ಧ’ ನಡೆಯಲಿದೆ ಎನ್ನುವ ಸಣ್ಣ ಸುಳಿವೂ ಕೂಡಾ ಸಿಕ್ಕಿರಲಿಲ್ಲ. ಅದರ ಅನಂತರ ನಡೆದಿರುವುದು ಎಲ್ಲ ಇತಿಹಾಸ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯವರಾದ ಉಳ್ಳಾಲ ಪಿಲಾರು ಮೇಗಿನ ಮನೆಯ ಪ್ರವೀಣ್ ಶೆಟ್ಟಿ ಅವರು ಕಾರ್ಗಿಲ್ ಯುದ್ಧದ ತಮ್ಮ ಅನುಭವದ ಬಗ್ಗೆ ಮಾತನಾಡಲು ಆರಂಭಿಸಿದ್ದು ಹೀಗೆ. ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತೀಯ ಸೇನೆಯಲ್ಲಿದ್ದ ಹೆವಿ ಮೋಟಾರ್ ರೆಜಿಮೆಂಟ್ನ ಯೋಧ ಪ್ರವೀಣ್. ಅದರಲ್ಲೂ ಅತೀ ಕಿರಿಯ ವಯಸ್ಸಿನ…
ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದಿಗೆ ಜನಸಾಮಾನ್ಯರ ಬಹುತೇಕ ಬೇಡಿಕೆಗಳಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಪೂರಕವಾಗಿ ಸ್ಪಂಧಿಸಿದ್ದಾರೆ. ಅವರದ್ದೇ ಹಾದಿಯಲ್ಲಿ ಮುಂದುವರಿಯುತ್ತಾ ಕಾಪುವಿನ ಸುಂದರ ಭವಿಷ್ಯಕ್ಕಾಗಿ ದೂರದರ್ಶಿತ್ವದ ಯೋಜನೆಗಳುಳ್ಳ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ನೀಲ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯ ಸಾಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ವಿನಂತಿಸಿದ್ದಾರೆ. ಕಾಪು ಪುರಸಭಾ ವ್ಯಾಪ್ತಿಯ ಕರಾವಳಿ ವಾರ್ಡ್, ಪೊಲಿಪುಗುಡ್ಡೆ, ಭಾರತ್ನಗರ, ಕಲ್ಯ, ದಂಡತೀರ್ಥ, ಕೋತಲಕಟ್ಟೆ, ಕೈಪುಂಜಾಲು, ಕಾಪು ಪರಿಸರದಲ್ಲಿ ಮತಯಾಚನೆ ನಡೆಸಿ, ಜೇಸಿ ಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಮಹತ್ವಾಕಾಂಕ್ಷಿಯ ಜನೋಪಯೋಗಿ ಜನ ಸೇವಾ ಕಾರ್ಯಕ್ರಮಗಳು ಬಿಜೆಪಿಯ ಗೆಲುವಿಗೆ ಪೂರಕವಾಗಲಿವೆ. ಅದರ…
ಶ್ರೀ ಕೃಷ್ಣನಗರಿ ಉಡುಪಿಯ ರಥಬಿದಿಯಲ್ಲಿ ತಿಂಗಳ ಹಿಂದೆ ಸಾಗುತ್ತಾ ಇದ್ದೆ. ತಾಳೆ ಹಣ್ಣು ತುಂಬಿದ ಕೈಗಾಡಿಯೆದುರು ಹಿರಿಯ ಕಿರಿಯರು ತಾಳೆ ಸೊಳೆ ತಿನ್ನುವುದಕ್ಕೆ ಸೇರಿದ್ದರು. ಆರೋಗ್ಯದಾಯಕ ನೈಸರ್ಗಿಕ ಆಹಾರದ ಮಹತ್ವಕ್ಕೆ ಕೊಡಬೇಕಾದ ಕಾಲ ಘಟ್ಟವಿದು. ದೇಹದಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸಿಕೊಳ್ಳವುದರ ಮಹತ್ವದ ಅರಿವು ಇಂದು ಜನಸಾಮಾನ್ಯರಿಗೆ ಆಗಿದ್ದು, ತಾಳೆಹಣ್ಣು ತಿನ್ನುವುದರಲ್ಲಿ ಮುಗಿಬಿದ್ದರೊ ಎನಿಸಿತು. ಸರಿ ನಾನು ಹೋಗಿ ತಿಂದೆ. ಬಿಸಿಲ ಬೇಗೆಯಿಂದ ಧಣಿವಾರಿಸಿಕೊಳ್ಳಲು ಜನ ತಂಪು ಪದಾರ್ಥಗಳನ್ನೇ ಬಯಸುತ್ತಿದ್ದು ಅದರಲ್ಲಿ ಆರೋಗ್ಯಕ್ಕೆ ಹಿತಕರ ತಾಟಿನಿಂಗು ಪ್ರಮುಖ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಪ್ರಿಲ್ ಆರಂಭದಲ್ಲಿ ಕೊಯ್ಲಿಗೆ ಬಂದರೆ ಜೂನ್ ಜುಲೈವರೆಗೂ ಲಭ್ಯವಿರುತ್ತದೆ. ಸಾಕಷ್ಟು ಔಷಧೀಯ ಗುಣಗಳ ಪೋಷಕಾಂಶಗಳ ಆಗರವಾಗಿದ್ದು ದೇಹಕ್ಕೆ ಚೈತನ್ಯ ನೀಡುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲದೆ ಇದ್ದ ಈ ಹಣ್ಣು ಇತ್ತೀಚೆಗೆ ಕೆಲ ವರ್ಷಗಳಿಂದ ಜನ ಮುಂಚಿತವಾಗಿ ನಿಗದಿಗೊಳಿಸಿ ತರಿಸಿಕೊಂಡು ತಿನ್ನುತ್ತಾರೆ. ದಾಹ ತಣಿಸುವ ತಾಟಿಹಣ್ಣು ಬೇಸಿಗೆಯಲ್ಲಿ ಮಾತ್ರವಲ್ಲ ವರ್ಷದ 12 ತಿಂಗಳಲ್ಲಿ ಬೇಡಿಕೆ ಇದ್ದು ಕೇವಲ ನೀರಡಿಕೆ ಇಂಗಿಸುವುದಕ್ಕಷ್ಟೆ…