Author: admin
ಯಕ್ಷಗಾನದ ಸಿಡಿಲಮರಿ, ಶತ ಧಿಗಿಣಗಳ ಸರದಾರ ಖ್ಯಾತಿಯ ಪುತ್ತೂರು ಡಾ| ಶ್ರೀಧರ ಭಂಡಾರಿ ಅವರ ಸಂಸ್ಮರಣೆ ಹಾಗೂ “ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಸಮಾರಂಭವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರವಿವಾರ ನಡೆಯಿತು. ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನ ರಂಗದಲ್ಲಿ ತನ್ನದೇ ಆದ ಶೈಲಿಯನ್ನು ತೋರಿಸಿಕೊಟ್ಟು ಕಲೆಯನ್ನು ಇನ್ನೊಂದು ಪೀಳಿಗೆಗೆ ವರ್ಗಾಯಿಸಿ ಅವರಲ್ಲಿ ಅಭಿರುಚಿ ಮೂಡಿಸಿದ ಮಹಾನ್ ಕಲಾವಿದ ಡಾ| ಶ್ರೀಧರ ಭಂಡಾರಿ ಎಂದು ಸ್ಮರಿಸಿದರು. ವ್ಯಕ್ತಿಯ ಕಾಲಾನಂತರ ವರ್ಷ ದಿಂದ ವರ್ಷಕ್ಕೆ ನೆನಪು ಮಾಸುತ್ತದೆ. ಆದರೆ ಶ್ರೀಧರ ಭಂಡಾರಿ ಅವರ ನೆನಪು ವರ್ಷದಿಂದ ವರ್ಷಕ್ಕೆ ಹೆಚುತ್ತಿರುವುದು ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಸೇವೆಯ ಫಲ ಎಂದರು. ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕಲಾವಿದನ ಬದುಕು ಸಮೃದ್ಧ ಬದುಕು ಎಂಬು ದನ್ನು ತೋರಿಸಿಕೊಟ್ಟಿರುವ ಶ್ರೀಧರ ಭಂಡಾರಿ ಅವರು ಹಳ್ಳಿಯ ಮೂಲೆ ಯಿಂದ ವಿಶ್ವಕ್ಕೆ ಯಕ್ಷಗಾನದ…
ಹೊಸದಿಲ್ಲಿಯಲ್ಲಿ ಜರಗಿದ ವಾರ್ಷಿಕ ಎನ್‌ಸಿಸಿ ರ್ಯಾಲಿಯಲ್ಲಿ ಭಾಗವಹಿಸಿದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಎನ್‌ಸಿಸಿ ನೌಕಾದಳದ ಕೆಡೆಟ್ ಆಶ್ನ ರೈ ಅವರು ಅ. ಭಾ. ಮಟ್ಟದ ಅತ್ಯುತ್ತಮ ಕೆಡೆಟ್ ಅವಾರ್ಡ್ (ಚಿನ್ನದ ಪದಕ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದರು. ಆಶ್ನ ರೈ ಅವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರಿಗೆ ಎನ್‌ಸಿಸಿ ಸೇರಬೇಕೆಂಬ ಆಸಕ್ತಿ. ಕೆನರಾ ಸಿಬಿಎಸ್‌ಇ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿರುವಾಗ ಎನ್‌ಸಿಸಿಗೆ ಸೇರಿದ್ದರು. ಬಳಿಕ ಇದೇ ಕ್ಷೇತ್ರದಲ್ಲಿ ಮುಂದುವರಿದಿದ್ದರು. ಈ ಹಿಂದೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎನ್‌ಸಿಸಿ ರ್ಯಾಲಿಗೆ ಆಯ್ಕೆಯಾಗಿದ್ದರು. ಆಶ್ನ ರೈ ಅವರು ಮಂಗಳೂರಿನ ಕದ್ರಿ ಕಂಬಳದ ಉದ್ಯಮಿ ರಾಮಣ್ಣ ರೈ ಮತ್ತು ಶಿಕ್ಷಕಿ ಅಕ್ಷತಾ ರೈ ದಂಪತಿ ಪುತ್ರಿಯಾಗಿದ್ದಾರೆ.
ಮಹಿಳಾ ದಿನಾಚರಣೆಯು ಕೇವಲ ಪ್ರಶಂಸೆಗಷ್ಟೇ ಮೀಸಲಾಗಿರಬಾರದು. ಅದು ಸ್ವ ವಿಮರ್ಶೆಗೂ ವೇದಿಕೆಯಾಗಬೇಕು. ಏನದರೂ ತಪ್ಪು, ಲೋಪಗಳು ಕಂಡುಬಂದರೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಅದು ದೊಡ್ಡದೊಂದು ಬದಲಾವಣೆಗೆ ನಾಂದಿ ಹಾಡಿ ನಮ್ಮನ್ನು ನೆಮ್ಮದಿ ಹಾಗೂ ಯಶಸ್ಸಿನತ್ತ ಕೊಂಡೊಯ್ಯಲಿದೆ. ಮಹಿಳೆಯರು ಸದಾ ಗೌರವಿಸಲ್ಪಡುತ್ತಿರಬೇಕು. ಅದಕ್ಕೆ ಬೇಕಾದ ವೇದಿಕೆಯನ್ನು ಎಲ್ಲರೂ ಸೇರಿ ನಿರ್ಮಿಸೋಣ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ. ತಿಳಿಸಿದರು. ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಗಣೇಶ್ ಎಚ್. ಆರ್ ಅವರಿಂದ ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಣ ಯೋಗ ಚಿಕಿತ್ಸಾ ವಿಧಾನದಿಂದ ಮನಸ್ಸು ಹಗುರವಾಗುತ್ತದೆ. ದೇಹ ನಿಯಂತ್ರಣದಲ್ಲಿರುತ್ತದೆ. ಪ್ರಾಣ ಯೋಗ ಮಾಡುವವರಲ್ಲಿ ಶ್ರದ್ಧೆ, ಭಕ್ತಿ ಮುಖ್ಯ ಎಂದು ಗಣೇಶ್ ಎಚ್.ಆರ್. ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಸಮಾರಂಭದಲ್ಲಿ…
ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೈದು ನೂರಾರು ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಸರದಾರ್ತಿಯಾಗಿ ಈಗ ಮಾಡೆಲಿಂಗ್ ಕ್ಷೇತ್ರಕ್ಕೂ ಲಗ್ಗೆಯಿಡುತ್ತಿರುವ ನವಿ ಮುಂಬಯಿಯ ಉದ್ಯಮಿ ಸುಭಾಷ್ ಶೆಟ್ಟಿಯವರ ಸುಪುತ್ರಿ ತನಿಷ್ಕ ಶೆಟ್ಟಿಯವರ ಭವಿಷ್ಯ ಉಜ್ವಲವಾಗಿರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಬಂಟ್ಸ್ ನೌ ಪೇಜ್ ಲೈಕ್ ಮಾಡಿ ಪ್ರೋತ್ಸಾಹಿಸಿ.https://www.facebook.com/buntsnow/
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಕಾಂಶ ಆಧ್ಯಯನ ವಿಭಾಗದಲ್ಲಿ ‘ಫ್ಯೂಜೊ’ ‘ಆಳ್ವಾಸ್ನಲ್ಲಿ ವೈವಿಧ್ಯ ಆಹಾರದ ಘಮಲು’
ವಿದ್ಯಾಗಿರಿ: ಬ್ರೌನಿ ಕೇಕ್, ಆಮ್ಲಾ ಶಾಟ್ಸ್, ಜಿಂಜರ್ ಜ್ಯೂಸ್, ಸೌತೆಕಾಯಿ ಕೂಲರ್, ಗ್ರೇಪ್ ಮೋಗುಮೊಗು, ಸೌತೆಕಾಯಿ ಸುಶಿ, ಪ್ಯಾನ್ ಕೇಕ್ ಬಾಂಬ್… ಹೀಗೆ ವೈವಿಧ್ಯಮಯ ದೇಸಿ ಹಾಗೂ ಪಾಶ್ಚ್ಯಾತ್ಯ ತಿನಿಸುಗಳ ಘಮಲು ಹಾಗೂ ರುಚಿಯ ಸವಿಯು ಆಹಾರ ಪ್ರಿಯರನ್ನು ಕೈ ಸೆಳೆದು ಕರೆಯುತ್ತಿತ್ತು. ಅದು ಯಾವುದೇ ತಾರಾ ಹೋಟೆಲ್, ಖ್ಯಾತ ಕೇಕ್ ಮಳಿಗೆ ಅಥವಾ ಫುಡ್ ಜಂಕ್ಷನ್‍ಗಳಲ್ಲ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಕಾಂಶ ಆಧ್ಯಯನ ವಿಭಾಗದ ವತಿಯಿಂದ ಕಾಲೇಜಿನ ಅಬ್ದುಲ್ ಕಲಾಂ ಸ್ನಾತಕೋತ್ತರ ಕಟ್ಟಡದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶನಿವಾರ ಹಮ್ಮಿಕೊಂಡ ‘ಫ್ಯೂಜೊ – ಆಹಾರ ಮೇಳ’ದ ಘಮಲು. ಇನ್ಸ್ಟಾಗ್ರಾಂನಲ್ಲಿ ‘ಪುಳಿಮುಂಚಿ ವೈನ್ಸ್’ ಖ್ಯಾತಿ ಪಡೆದ ಹಾಗೂ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೇಸನ್ ಪಿರೇರಾ ಆಹಾರ ಮೇಳವನ್ನು ಉದ್ಘಾಟಿಸಿ ಹಾರೈಸಿದರು. ಬಳಿಕ ವಿವಿಧ ಮಳಿಗೆಗಳ ತಿನಿಸುಗಳನ್ನು ವೀಕ್ಷಿಸಿ, ಸವಿದು ಸಂತಸ ವ್ಯಕ್ತಪಡಿಸಿದರು. ಸೃಜನಾತ್ಮಕವಾಗಿ ಕಾಗದದಿಂದ ತಯಾರಿಸಿದ ‘ಹಿಮ ಪುರುಷ’ (ಸ್ನೋ ಮ್ಯಾನ್) ಆಕರ್ಷಿಸಿತು. ‘ಒಂದು ತಿಂಗಳಿನಿಂದ…
ಯುವ ಬಂಟರ ಸಂಘ ಪುತ್ತೂರು ನೇತೃತ್ವದಲ್ಲಿ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರ ಸ್ಮರಣಾರ್ಥ ಉಚಿತ ದಂತ ತಪಾಸಣಾ ಶಿಬಿರ
ಯುವ ಬಂಟರ ಸಂಘ ಪುತ್ತೂರು ಇವರ ನೇತೃತ್ವದಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು, ಇಂಟರಾಕ್ಟ್ ಕ್ಲಬ್, ರಾಮಕೃಷ್ಣ ಯುವ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಸಹಯೋಗದಲ್ಲಿ ಯುವ ಬಂಟರ ಸಂಘದ ಪೂರ್ವಧ್ಯಕ್ಷರಾದ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಇವರ ಸ್ಮರಣಾರ್ಥ ಉಚಿತ ದಂತ ತಪಾಸಣಾ ಚಿಕಿತ್ಸಾ ಶಿಬಿರ ಅ. 4 ರಂದು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಯುವ ಬಂಟರ ಸಂಘ ದಿ. ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಇವರ ಸ್ಮರಣಾರ್ಥ ಮಾಡುವ ಶಿಬಿರ ಅರ್ಥಪೂರ್ಣವಾದುದು. ಇದಕ್ಕೆ ಸಹಕರಿಸಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಖ್ಯ ಅತಿಥಿಯಾಗಿದ್ದ ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಮಾಜಕ್ಕೆ ಉಪಯೋಗವಾಗುವ ಇಂತಹ ಬೇರೆ ಬೇರೆ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಸಾರ್ವಜನಿಕರೆಲ್ಲರೂ ಇದರ ಸದುಪಯೋಗ ಪಡೆಯಲಿ…
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತೆ ಶ್ರೀ ಮಾತಾನಂದಮಯಿಯವರ ಆಶೀರ್ವಾದದೊಂದಿಗೆ ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಥಾಣೆ (ಮಹಾರಾಷ್ಟ್ರ) ಘಟಕದ ಭಜನಾ ಸತ್ಸಂಗವು ಆಗಸ್ಟ್ 31 ರ ಹುಣ್ಣಿಮೆಯ ಶುಭ ದಿನದಂದು ಥಾಣೆಯ ವರ್ತಕ್ ನಗರದ ಶ್ರೀ ಹನುಮಾನ್ ಮಂದಿರದಲ್ಲಿ ಉದ್ಘಾಟನೆಗೊಂಡಿತು. ಬಳಗದ ಹಿರಿಯರಾದ ವಾಮಯ್ಯ ಬಿ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಮಾಜಿ ಅಧ್ಯಕ್ಷೆ ರೇವತಿ ವಿ ಶೆಟ್ಟಿ, ಅಧ್ಯಕ್ಷೆ ಶ್ವೇತಾ ಸಿ ರೈ, ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಹೆಗ್ಡೆ, ಗುಣಪಾಲ್ ಶೆಟ್ಟಿ ಮತ್ತು ಥಾಣೆಯ ಗುರುಭಕ್ತರು ಉಪಸ್ಥಿತರಿದ್ದು ಭಜನಾ ಸತ್ಸಂಗಕ್ಕೆ ಚಾಲನೆ ನೀಡಲಾಯಿತು.
ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ಅಜಾತ ಶತ್ರು ‘ಶಿಮುಂಜೆ ಪರಾರಿ’ ಎಂಬ ವಿಶಿಷ್ಟ ಕಾವ್ಯ ನಾಮದಿಂದ ಪ್ರಸಿದ್ದಿಯಾದ ತುಳು ಕನ್ನಡ ಕವಿ, ನಾಟಕಗಾರ, ಅನುವಾದಕಾರ, ಅಧ್ಯಾಪಕ ಕಂಠದಾನ ಕಲಾವಿದ ಮತ್ತು ನಟ ಹೀಗೆ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಶಿಮುಂಜೆ ಪರಾರಿ ಸೀತಾರಾಮ ಮುದ್ದಣ್ಣ ಶೆಟ್ಟಿ ಅವರನ್ನು ಈ ಸಾರಿಯ ‘ವಯೋ ಸಮ್ಮಾನ’ದ ಗೌರವಕ್ಕೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆ ಆಯ್ಕೆ ಮಾಡಿದೆ. ಬೆಂಗಳೂರಿನ ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ತನ್ನ ಸ್ಥಾಪನೆಯ ಮೂರನೇ ವರ್ಷವನ್ನು ಇದೇ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ಆ ಪ್ರಯುಕ್ತ ಈ ವಯೋ ಸಮ್ಮಾನ ಗೌರವವನ್ನು ಶಿಮುಂಜೆ ಪರಾರಿಯವರಿಗೆ ಜುಲೈ ತಿಂಗಳ 29 ನೇ ತಾರೀಕಿನಂದು ಸಲ್ಲಿಸುವುದರೊಂದಿಗೆ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರರ ಸಾರಥ್ಯದ ಐಲೇಸಾ ಸಂಸ್ಥೆಯ ವಯೋ ಸಮ್ಮಾನ್ ಗೌರವ ಸಮಿತಿಯು ಅನಂತರಾವ್ ನೇತೃತ್ವದಲ್ಲಿ ಮುಂಬಯಿಯ ಸಾಹಿತಿ ಪೇತ್ರಿ ವಿಶ್ವನಾಥ್…
ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಮಾತ್ರ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕ್ಕೆ ಶಾಂತಿ – ಡಾ. ಇಂದಿರಾ ಹೆಗ್ಡೆ
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತಮ್ಮ ಉಸಿರಿರುವವರೆಗೂ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಶ್ರಮಿಸಿದ್ದಾರೆ. ಮಹಾಜನ ವರದಿಯಲ್ಲೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ವರದಿ ನೀಡಿದೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಲೇಖಕಿ ಡಾ. ಇಂದಿರಾ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಬಸವನಗುಡಿಯ ಬಿಎಂಶ್ರೀ ಪ್ರತಿಮೆಯ ಎದುರು ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಸಂಘಟನೆಗಳು ಆಯೋಜಿಸಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರ ನಂತರವು ಕೆಲ ಕಾಲ ಕಾಸರಗೋಡು ಅಪ್ಪಟ ಕನ್ನಡ ನಾಡಾಗಿತ್ತು. ಕೋರ್ಟ್ ತೀರ್ಪುಗಳು ಕನ್ನಡದಲ್ಲಿ ಬರುತ್ತಿದ್ದವು. ಈಗಲೂ ಅಲ್ಲಿ ನೂರಾರು ಕನ್ನಡ ಶಾಲೆಗಳಿವೆ. ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಮಾತ್ರ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದರು. ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ. ನಂ. ಚಂದ್ರಶೇಖರ ಮಾತನಾಡಿ, ನಮ್ಮಲ್ಲೇ ಇರುವ ಬೆಳಗಾವಿಯನ್ನು ಉಳಿಸಿಕೊಳ್ಳುತ್ತೇವೆ ಎನ್ನುವಂತಹ ವಿರೋಧಾಭಾಸದ ಹೇಳಿಕೆಯನ್ನು ನೀಡುತ್ತಿರುವ ನಾವು ಮಹಾಜನ ವರದಿಯು…
2022-23 ನೇ ಶೈಕ್ಷಣಿಕ ವರ್ಷದ ಸಿಬಿಎಸ್ ಇ ಬೋರ್ಡ್ ನ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪುಣೆ ಚಿಂಚ್ವಾಡ್ ಪೋದಾರ್ ಇಂಟರ್ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ತೃಪ್ತಿ ಹರೀಶ್ ಶೆಟ್ಟಿ ಶೇ . 88 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಈಕೆ ತುಳು ಸಂಘ ಪಿಂಪ್ರಿ- ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಹಾಗೂ ಮಿಜಾರ್ ಕಾಂಬೆಟ್ಟು ಜಯಲಕ್ಷ್ಮಿ ಶೆಟ್ಟಿಯವರ ಪುತ್ರಿ.