Author: admin
ಚುಕ್ಕಿ ಸಂಕುಲ ಆಯೋಜಿಸಿದ ಡಾ. ಕರುಣಾಕರ ಶೆಟ್ಟಿ ಪಣಿಯೂರು (10 ಕೃತಿಗಳು), ಪಾಂಗಾಳ ವಿಶ್ವನಾಥ್ ಶೆಟ್ಟಿ (3 ಕೃತಿಗಳು) ಹಾಗೂ ಶ್ರುತಿ ಅಭಿಷೇಕ್ ಶೆಟ್ಟಿ (1 ಕೃತಿ) ಇವರ ಒಟ್ಟು14 ಕೃತಿಗಳು ಡಿಸೆಂಬರ್ 30 ರಂದು ಥಾಣೆ ಪೂರ್ವದ ವುಡ್ ಲ್ಯಾಂಡ್ ರೆಟ್ರೀಟ್ ನಲ್ಲಿ ಬಿಡುಗಡೆಗೊಂಡವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಚಂದ್ರಹಾಸ್ ಶೆಟ್ಟಿ ವಹಿಸಿದ್ದರು. ಗೌರವ ಅತಿಥಿಗಳಾಗಿ ಆನಂದ್ ಶೆಟ್ಟಿ ಎಕ್ಕಾರು, ಡಿ. ಜಿ. ಬೋಳಾರ್ ಹಾಗೂ ನ್ಯಾಯವಾದಿ ಪದ್ಮನಾಭ ಶೆಟ್ಟಿ ಭಾಗವಹಿಸಿದ್ದರು. ಮುಂಬಯಿಯಲ್ಲಿ ಒಂದೇ ವೇದಿಕೆಯಲ್ಲಿ 14 ಕೃತಿಗಳು ಬಿಡುಗಡೆಗೊಳ್ಳುತ್ತಿರುವುದು ಮುಂಬಯಿ ಸಾಹಿತ್ಯ ಲೋಕಕ್ಕೆ ಒಂದು ಹೆಮ್ಮೆಯ ಸಂಗತಿ. ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಚಂದ್ರಹಾಸ ಶೆಟ್ಟಿ ಅವರು ಸಾಹಿತ್ಯ ಲೋಕ ಒಂದು ಸುಂದರ ಲೋಕ. ಸಾಹಿತಿ ತನ್ನ ಅನುಭವವನ್ನು ಅಕ್ಷರ ರೂಪದಲ್ಲಿ ಲೋಕಕ್ಕೆ ಉಣಬಡಿಸುತ್ತಾನೆ. ಆಧುನಿಕ ಯುಗದಲ್ಲಿ ಸಾಹಿತಿಗಳ ಜವಾಬ್ದಾರಿ ದೊಡ್ಡದು ಎಂದು ಅಭಿಪ್ರಾಯಪಟ್ಟರು. ಕವಿಗಳು ಸಮಾಜವನ್ನು ಸುಧಾರಿಸುವವರು ಎಂಬ ಅನಿಸಿಕೆಯನ್ನು ಡಿ. ಜಿ. ಬೋಳಾರ್ ಅವರು ಹಂಚಿಕೊಂಡರು.…
ಇಂದು ಜನರು ರೋಗ ಮುಕ್ತರಾಗಲು ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹೀಗೆ ಹಲವಾರು ವೈದ್ಯಕೀಯ ಮತ್ತು ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಥಿ ಕೂಡ ಒಂದು. ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇರಿಸಿಕೊಂಡು ಚಿಕಿತ್ಸೆ ನೀಡುವ ಪದ್ಧತಿಯೇ ಪ್ರಕೃತಿ ಚಿಕಿತ್ಸೆ. ಇದು ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ ನೀಡುವ ಮಾರ್ಗವಾಗಿದೆ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆ ಪ್ರಕೃತಿ ಚಿಕಿತ್ಸೆಯ ಮೂಲ ಆಧಾರ ಸ್ತಂಭಗಳಾಗಿವೆ. ನಿಸರ್ಗವೇ ಶ್ರೇಷ್ಠ ಚಿಕಿತ್ಸಕ ಎಂಬ ಅಂಶವೇ ಪ್ರಕೃತಿ ಚಿಕಿತ್ಸೆಯಲ್ಲಿ ಪ್ರಧಾನವಾಗಿದೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಆಹಾರವೇ ಔಷಧವಾಗಿದ್ದು, ಹೊರಗಿನ ಯಾವುದೇ ಔಷಧಗಳನ್ನು ಬಳಸುವುದಿಲ್ಲ. ಇದೊಂದು ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕಜನ್ಯ ಔಷಧಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು,…
ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಅಕ್ಟೋಬರ್ 6 ರಿಂದ 8 ರ ವರೆಗೆ ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ಸೀರೆ, ಆಭರಣಗಳ ಮಾರಾಟ ಮೇಳವನ್ನು ಶ್ರೀಮತಿ ನಿರ್ಮಿತ ಸತೀಶ್ ಶೆಟ್ಟಿ ಪಟ್ಲ ಉದ್ಘಾಟಿಸಿದರು. ಸುರತ್ಕಲ್ ಪರಿಸರದವರಿಗೆ ಇದೊಂದು ಅಪೂರ್ವ ಅವಕಾಶ. ನವನವೀನ ಮಾದರಿಯ ಸೀರೆ, ಸಿದ್ದ ಉಡುಪುಗಳನ್ನು ಖರೀದಿಸುವ ಅವಕಾಶ ಒದಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ನಿರ್ಮಿತ ಸತೀಶ್ ಶೆಟ್ಟಿ ತಿಳಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಉಡುಪಿ- ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಇವರ ಸೀರೆ ಮತ್ತು ಸಿದ್ದ ಉಡುಪುಗಳನ್ನು ಮಹಿಳಾ ವೇದಿಕೆಯ ಆಶ್ರಯದಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಮಾರಾಟ ಮೇಳ ನಡೆದಿದೆ. ಇವರ ಸೀರೆ, ಸಿದ್ದುಉಡುಪುಗಳಿಗೆ ಎಲ್ಲೆಡೆ ಬಹುಬೇಡಿಕೆ ಇದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಅಕ್ಟೋಬರ್ 6 ರಿಂದ 8 ರ ವರೆಗೆ ಮಾರಾಟ ಮೇಳದ ವ್ಯವಸ್ಥೆಯನ್ನು…
“ಬಂಟರ ಯಾನೆ ನಾಡವರ ಮಾತೃ ಸಂಘದ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಬಂಟರು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ ನಡೆಯುವ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ. ಈ ಮೂಲಕ ಎಲ್ಲಾ ಜಾತಿ ಧರ್ಮಗಳ ಜನರ ಮಧ್ಯೆ ಪ್ರೀತಿ, ಸೋದರತೆ ಬೆಳೆದು ಸ್ವಸ್ಥ ಸಾಮರಸ್ಯದ ಸಮಾಜ ನಿರ್ಮಾಣವಾಗಲಿ. ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ. ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈ ಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ” ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ…
ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಸಂಘದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ ಅವರು, “ಆಟಿ ತಿಂಗಳು ತುಳುವರಲ್ಲಿ ಅತ್ಯಂತ ಭಿನ್ನವಾದುದು. ನಮ್ಮ ಪೂರ್ವಜರು ಆಟಿ ತಿಂಗಳನ್ನು ಕಷ್ಟದಿಂದ ಕಳೆಯುತ್ತಿದ್ದರು. ಇಂದಿನ ಕಾಲದಲ್ಲೂ ಯುವಜನತೆ ಆಟಿ ತಿಂಗಳ ಆಚರಣೆ, ಸಂಪ್ರದಾಯವನ್ನು ಮರೆಯದೆ ಇರುವುದು ಶ್ಲಾಘನೀಯ” ಎಂದರು. ಬಳಿಕ ಮಾತಾಡಿದ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್ ಅವರು, “ಆಟಿ ತಿಂಗಳ ಕಷ್ಟ, ವಿಶೇಷವಾದ ತಿಂಡಿ ತಿನಿಸು, ನಮ್ಮ ಹಿರಿಯರ ನೆನಪು ಎಲ್ಲವೂ ಸದಾ ನೆನಪಲ್ಲಿ ಉಳಿಯುವಂತದ್ದು. ಅದನ್ನು ಇಂದು ಮಾತ್ರವಲ್ಲ ಮುಂದಿನ ಪೀಳಿಗೆಯ ಮಕ್ಕಳೂ ಕೂಡಾ ತಿಳಿಯುವಂತಾಗಬೇಕು. ಆಟಿ ತಿಂಗಳ ತುಳುನಾಡಿನ ಆಚರಣೆಗಳು ಮುಂದಿನ ತಲೆಮಾರಿಗೂ ಹೀಗೆಯೇ ಉಳಿಯಬೇಕು” ಎಂದರು. ಪುತ್ತೂರು ಕ್ಷೇತ್ರದ…
ಭಾರತದ ರಂಗಭೂಮಿಯಲ್ಲಿ ಯಕ್ಷಗಾನ ಒಂದು ಹೆಮ್ಮೆಯ ಕಲೆ, ಯಕ್ಷಗಾನ ಸಂಶೋಧನೆಯ ಮೂಲಕ ನೋಡಿದಾಗಲೂ ಯಕ್ಷಗಾನ ವಿಶ್ವಪ್ರಸಿದ್ದಿಯನ್ನು ಪಡೆದ ಕಲೆಯಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹೊಸ ಭಾಷ್ಯೆಯನ್ನು ಬರೆದಿದೆ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ತಿಳಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಸಂಭ್ರಮ 2023 ರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಲ ಭಾಗವತರ ಜನಪ್ರಿಯತೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಮೂಲಕ ತಿಳಿಯಬಹುದು. ಪ್ರಸ್ತಾವಿಕವಾಗಿ ಮಾತನಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ ಯಕ್ಷಗಾನದ ಪಾರಂಪರಿಕೆ, ಸೊಗಡನ್ನು ಉಳಿಸುವ ಪ್ರಯತ್ನವೇ ಯಕ್ಷಗಾನ ಸ್ಪರ್ಧೆಯ ಉದ್ದೇಶವಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಹೇಶ್ ಮೋಟರ್ಸ್ ಸಂಸ್ಥೆಯ ಮಾಲಕ ಜಯರಾಮ ಶೇಖ, ಬಹರೈನ್ – ಸೌದಿ ಘಟಕದ ಅಧ್ಯಕ್ಷ ವಿ…
ಬಾಳ ತೊತ್ತಾಡಿ ಶ್ರೀ ನಾಗ ಬ್ರಹ್ಮ ಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ಸಂಪೂರ್ಣಗೊಂಡಿದ್ದು ಮೇ 2 ರಿಂದ ಮೇ 7 ರ ತನಕ ಶ್ರೀ ದೇವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ದೇವರ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭೀಷೇಕ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿವೆ. ಮೇ 2 ರಂದು ತೋರಣ, ಉಗ್ರಾಣ ಮುಹೂರ್ತ, ಕುಣಿತ ಭಜನೆ, ಮೇ.4 ರಂದು ಶ್ರೀ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠೆ, ಮೇ. 5 ರಂದು ನಾಗದರ್ಶನ,ಮೇ.7 ರಂದು ಬ್ರಹ್ಮ ಕಲಶಾಭಿಷೇಕ ಹಾಗೂ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.
ಸಹಕಾರಿ ವ್ಯವಸಾಯಿಕ ಸಂಘ ನಿ. ಶಿರ್ವ ಇಲ್ಲಿಯ ಪ್ರಧಾನ ಕಛೇರಿಯ ಆವರಣದಲ್ಲಿ ನೂತನ ಗೋದಾಮು ಹಾಗೂ ಬಹು ಸೇವಾ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು 21.02.2022 ರಂದು ಜರಗಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಕುತ್ಯಾರು ಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರಗಿತು. ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, DCC ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಜೇಶ್ ರಾವ್, ಸಹಕಾರ ಸಂಘಗಳ ಸಹಾಯಕ ನಿಭಂದಕರಾದ ಶ್ರೀ ಅರುಣ್ ಕುಮಾರ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ರಾಮರಾಯ ಪಾಟ್ಕರ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ಎಸ್ ಆಚಾರ್ಯ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯೋಗಿನಿ ಶೆಟ್ಟಿಯವರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವನ್ನು ವೇದ ಮೂರ್ತಿ ಶ್ರೀನಿವಾಸ ಭಟ್ ಶಿರ್ವ ಅವರು ನೆರವೇರಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಾರಿಜ ಪೂಜಾರ್ತಿಯವರು ಸ್ವಾಗತಿಸಿದರು ಹಾಗೂ ಮುಖ್ಯ…
ಮಲ್ಪೆ ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ – 2023 ಜರುಗಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಮಾತನಾಡಿ, “ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ. ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಯುವಕರು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ವೀರ ಮಾರುತಿ ಫ್ರೆಂಡ್ಸ್ ಸಾಧನೆ ಶ್ಲಾಘನೀಯ” ಎಂದರು. ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನವೆಂಬರ್ ದಿನಾಂಕ 18 ಮತ್ತು 19 ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾದ “ಉದ್ಯೋಗ ಮೇಳ” ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಅತಿಥಿಯಾಗಿ ಭಾಗವಹಿಸಿದ ಸಂದರ್ಭ ವೇದಿಕೆಯಲ್ಲಿ ನೆರೆದಿರುವ ಗಣ್ಯತಿ ಗಣ್ಯರು ಗೌರವದಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಡಾ. ಕೆ. ವಿದ್ಯಾಕುಮಾರಿ, ಎಂ.ಆರ್.ಜಿ. ಗ್ರೂಪ್ಸ್ ನ ಆಡಳಿತ ನಿರ್ದೇಶಕ ಶ್ರೀ ಕೆ. ಪ್ರಕಾಶ್ ಶೆಟ್ಟಿ, ಶಾಸಕರಾದ ಸನ್ಮಾನ್ಯ ಶ್ರೀ ಸಿ. ಟಿ. ರವಿ, ಶ್ರೀ ಯಶ್ ಪಾಲ್ ಸುವರ್ಣ, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಪ್ರಸಾದ್ ರಾಜ್ ಕಾಂಚನ್, ಶ್ರೀ ಮನೋಹರ್ ಶೆಟ್ಟಿ ಸಾಯಿರಾಧ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ವಿಜಿತ್ ಶೆಟ್ಟಿ, ಶ್ರೀ ಉಪೇಂದ್ರ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಶ್ರೀ ಕಾರ್ತಿಕ್ ಶೆಟ್ಟಿ…