ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸoಕೀರ್ಣದಲ್ಲಿ ಒಕ್ಕೂಟದ ಮಹಾ ನಿರ್ದೇಶಕರಾದ ಶ್ರೀ ತೋನ್ಸೆ ಆನಂದ ಶೆಟ್ಟಿಯವರು ಕೊಡುಗೆಯಾಗಿ ನಿರ್ಮಿಸುತ್ತಿರುವ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಇದರ ಕಾಮಗಾರಿಯನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ವೀಕ್ಷಣೆ ಮಾಡಿದರು.
ಕಾಮಗಾರಿಯ ಕಂಟ್ರಾಕ್ಟರ್ ಶ್ರೀ ಗುರುಪ್ರಸಾದ್ ಶೆಟ್ಟಿ, ಇಂಜಿನಿಯರ್ ಶ್ರೀ ಹರೀಶ್ ಶೆಟ್ಟಿ ಹಾಗೂ ಒಕ್ಕೂಟದ ಇಂಜಿನಿಯರ್ ಶ್ರೀ ಜೀವನ್ ಕೆ. ಶೆಟ್ಟಿ ಮುಲ್ಕಿಯವರ ಉಪಸ್ಥಿತಿಯಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರು ಪರಿಶೀಲನೆ ನಡೆಸಿ ನಿರ್ಮಾಣಗಾರರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಕಾಮಗಾರಿ ವೇಗ ಪಡೆದುಕೊಳ್ಳಲು ಸಲಹೆ ನೀಡಿದರು.