Author: admin
ಮುಂಬಯಿಯ ಉದ್ಯಮಿ ಹೇರಂಭ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಕೂಳೂರು ಕನ್ಯಾನ ರಘುರಾಮ ಶೆಟ್ಟಿಯವರು ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ನೂತನ ವಿಶ್ವಸ್ಥರಾಗಿ ನೇಮಕಗೊಂಡಿದ್ದಾರೆ. ಮುಂಬಯಿಯ ಖ್ಯಾತ ಉದ್ಯಮಿ, ಸಮಾಜ ಸೇವಕ ಪುಣೆ ಬಂಟರ ಸಂಘದ ಕಲ್ಪವೃಕ್ಪ ಸಮಾಜಕಲ್ಯಾಣ ಯೋಜನೆಯ ವಿಶ್ವಸ್ಥರಾದ ಕನ್ಯಾನ ಸದಾಶಿವ ಶೆಟ್ಟಿಯವರ ಸಹೋದರನಾದ ರಘುರಾಮ ಶೆಟ್ಟಿಯವರು ಇತ್ತೀಚಿಗೆ ಪುಣೆ ಬಂಟರ ಭವನಕ್ಕೆ ಭೇಟಿ ನೀಡಿದ್ದು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಪೇಕ್ಷೆಯ ಮೇರೆಗೆ ಸಂಘದ ಅಧ್ಯಕ್ಷರ ದೂರದೃಷ್ಟಿ ಹಾಗೂ ಸಮಾಜ ಪರ ಚಿಂತನೆಗಳು ಹಾಗೂ ಸಂಘದ ಮುಖಾಂತರ ನಡೆಯುತ್ತಿರುವ ಸಮಾಜಮುಖಿ ಯೋಜನೆಗಳನ್ನು ಮೆಚ್ಚಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಂಘದ ಭವಿಷ್ಯದ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದ್ದಾರೆ. ಅವರನ್ನು ಸಂತೋಷ್ ಶೆಟ್ಟಿಯವರು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಿದರು. ಈ ಸಂದರ್ಭ ಪುಣೆಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಹೆಜಮಾಡಿ…
ಅಭಿನಯ ಕಲೆಯಾದ ನಾಟಕವು ಸಾಮಾಜಿಕ ಶೋಷಣೆ, ದೌರ್ಜನ್ಯ, ಮೂಢ ನಂಬಿಕೆಗಳ ವಿರುದ್ಧ ಮೌನ ಕ್ರಾಂತಿ ಮಾಡುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಂಡಿರುವ ರಂಗಭೂಮಿ ರಂಗೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬುಧವಾರ ವಾರ್ಷಿಕ ಸ್ಮರಣ ಸಂಚಿಕೆ “ಕಲಾಂಜಲಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅಭಿನಯ ಕಲೆ ಜೀವನದಲ್ಲಿ ಅತ್ಯಗತ್ಯ. ಇದು ಕರಗತವಾದಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಾನವನ ಬಾಲ್ಯ, ಪ್ರೌಢಾವಸ್ಥೆ, ದಾಂಪತ್ಯ, ವೃತ್ತಿ ಜೀವನ, ವೃದ್ಧಾಪ್ಯ ಹೀಗೆ ಎಲ್ಲ ಕಾಲಘಟ್ಟದಲ್ಲೂ ಅಭಿನಯ ಕಲೆಯ ಪ್ರಭಾವ ಹೆಚ್ಚಿದೆ. ನಾಟಕ ಸಾಮಾಜಿಕ ಜಾಗೃತಿ ಉಂಟು ಮಾಡುತ್ತಿದೆ. ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್. ಎಸ್.ಬಲ್ಲಾಳ್, ಸಿನೆಮಾ ಕಲಾವಿದರಿ ಗಿಂತ ರಂಗಭೂಮಿ ಕಲಾವಿದರದಲ್ಲಿ ಹೆಚ್ಚಿನ ಪ್ರತಿಭೆ ಇರುತ್ತದೆ. ಯುವ ಜನತೆಯಲ್ಲಿ ರಂಗಭೂಮಿಯ ಬಗ್ಗೆ…
” ಮನುಷ್ಯನ ಮೆದುಳಿನ ಬ್ರೈನ್ ಸ್ಟೋಕ್ ಮತ್ತು ತಡೆಗಟ್ಟುವಂತಹ ವಿಧಾನ ಹಾಗೂ ಸಂರಕ್ಷಣೆಯ ಪಾತ್ರ…!” ” ಮನುಷ್ಯನ ಕೇಂದ್ರಬಿಂದು ಮೆದುಳು ಪರಿಚಲನೆ ಮತ್ತು ಬ್ರೈನ್ ಸ್ಟ್ರೋಕ್ ಸಾಧಕ ಬಾಧಕಗಳ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ…!” -ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ,ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)’ m:9632581508 ಮನುಷ್ಯನ ಪ್ರತಿಯೊಂದು ಅಂಗಗಳು ತಮ್ಮದೇ ಆದಂತಹ ಕಾರ್ಯಗಳು ನಿರ್ವಹಿಸುತ್ತದೆ. ಅದೇ ರೀತಿಯಾಗಿ ನಮ್ಮ ಮೆದುಳಿನ ಕ್ರಿಯೆಗಳು ದೇಹದಲ್ಲಿನ ವಾತಾವರಣವನ್ನ ಸೃಷ್ಟಿಸುವುದರಿಂದ ದೇಹದಲ್ಲಿನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದ್ದು, ಅವು ತನ್ನ ದಿನದ ಕಾರ್ಯವನ್ನು 24 ಗಂಟೆಯೂ ನಿರ್ವಹಿಸುತ್ತದೆ. ಅದಲ್ಲದೆ ನಮ್ಮ ಮೆದುಳಿನ ಭಾಗ ದೇಹದ ಕೇಂದ್ರ ಬಿಂದು ಆದ್ದರಿಂದ ಮೆದುಳಿನ ಸಂರಕ್ಷಣೆ ನಾವು ಯಾವ ರೀತಿ ಕೈಗೊಳ್ಳಬೇಕು ಮತ್ತು ಮೆದುಳಿನ ಸಂರಕ್ಷಣೆಯಿಂದ ಮನುಷ್ಯನ ಯಾವ್ಯಾವ ಭಾಗಗಳಿಗೆ ಒಳಿತನ್ನ ನೀಡುತ್ತದೆ ಅದಲ್ಲದೆ ನಿಷ್ಕಲ್ಮಶಕ್ತಿಯನ್ನು ಹೊಂದಿರುವಂತಹ ಮೆದುಳು, ಯಾವ ರೀತಿ ದೇಹ ರಚನೆಯನ್ನ ನಿರ್ಮಾಣ ಮಾಡುತ್ತದೆ. ಎನ್ನುವುದು ತಿಳಿಯುವುದು ಅತ್ಯಗತ್ಯ ಅದರಲ್ಲಿ ಮನುಷ್ಯನ ವಿವಿಧ…
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಯಕ್ಷಸಿರಿ ಬಂಟರ ಸಂಘ ಸುರತ್ಕಲ್ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭವು ಎಪ್ರಿಲ್ 14 ರಂದು ಗುರುವಾರ ಸಂಜೆ 4 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪಂಚ ಯಕ್ಷಗಾನ ಮೇಳಗಳ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಾಧವ ಭಂಡಾರಿ ಕುಳಾಯಿ, ಸುರತ್ಕಲ್ ಅಗರಿ ಸಂಸ್ಥರಣಾ ವೇದಿಕೆಯ ಅಧ್ಯಕ್ಷ ಅಗರಿ ರಾಘವೆಂದ್ರ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ನ ಕೇಂದ್ರಿಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಯಕ್ಷಗುರು ರಾಕೇಶ್ ರೈ ಅಡ್ಕ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಚಾಲಕರು ತಿಳಿಸಿದ್ದಾರೆ.
ನಮ್ಮ ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಮಹಾನಗರ ಮುಂಬಯಿಯಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿ ವಿಶೇಷರ ಸಾಲಿನಲ್ಲಿ ಗುರುತಿಸಲ್ಪಡುವ ಹೆಸರು ನವೀನ್ ಶೆಟ್ಟಿ ಇನ್ನ ಬಾಳಿಕೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನ ಬಾಳಿಕೆ ಎಂಬ ಪ್ರತಿಷ್ಠಿತ ಬಂಟ ಕುಟುಂಬದ ವಿಠಲ ಶೆಟ್ಟಿ ಮತ್ತು ಅಡ್ವೆ ಕೆಳಗಿನ ಮನೆ ಶ್ರೀಮತಿ ಸುಲೋಚನಾ ವಿ.ಶೆಟ್ಟಿ ದಂಪತಿಯರ ಮೂವರು ಮಕ್ಕಳಲ್ಲಿ ದ್ವಿತೀಯರಾಗಿ ಜನಿಸಿದ ನವೀನ್ ಅವರು ಅಡ್ವೆ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಇನ್ನದ ಎಂ.ವಿ.ಶಾಸ್ತ್ರಿ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಪೂರೈಸುವ ಉದ್ದೇಶದಿಂದ 1987 ರಲ್ಲಿ ತನ್ನ ಸೋದರತ್ತೆಯ ಜೊತೆ ಮುಂಬಯಿಗೆ ಆಗಮಿಸಿ, ತನ್ನ ಸಂಬಂಧಿಯೋರ್ವರ ಹೋಟೆಲಿನಲ್ಲಿ ದುಡಿಯುತ್ತಾ ಹೋಟೆಲ್ ಉದ್ಯಮ ಕುರಿತ ಮಹತ್ತರ ಅನುಭವ ಸಂಪಾದಿಸಿದರು. ಶಿವ್ಡಿಯ ಲಕ್ಷ್ಮಿ ಹೋಟೆಲ್ ಮಾಲಕರು ಇವರ ಸಂಬಂಧಿಕರಾದ ಕಾರಣ ಕೆಲಕಾಲ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಪ್ರೀತಿ ವಿಶ್ವಾಸ ಗಳಿಸಿಕೊಂಡರು. ಇದು ಅವರಿಗೆ ತನ್ನ ಮುಂದಿನ…
ನಮ್ಮ ಭಾರತವು ಹಬ್ಬಗಳಲ್ಲಿ ಅರಳುವ ದೇಶ. ಅದರಲ್ಲೂ ದೀಪಾವಳಿ ಎಂದರೆ ಎಲ್ಲೆಡೆ ಸಾಲು ಸಾಲು ದೀಪಗಳ ರಂಗು ರಂಗಿನ ಹಣತೆಗಳು ಉರಿದು ಬಣ್ಣದ ಬೆಳಕು ಹರಿಸಿ ಚೆಲುವ ಸೂಸುವ ಸೊಬಗು. ಜಗಮಗ ಪಟಾಕಿಗಳು ನಕ್ಷತ್ರಲೋಕ ಸೃಷ್ಟಿಸಿ ಬದುಕಿನಲ್ಲಿ ಬಣ್ಣದ ಬೆಳಕು ಹರಿಸುತ್ತದೆ. ಹೊಂಬಣ್ಣದ ಬೆಳಕು ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಹಲವು ವೈವಿಧ್ಯತೆಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಮನೆ ಮನಗಳ ಬೆಳಗಿಸುವ ಸಂಭ್ರಮದ ಹಬ್ಬವಿದು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ ಬೆಳಕಿನ ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ ಖುಷಿ ತರುವ ಹಬ್ಬ. ತಳಿರು ತೋರಣಗಳ ಮೆರಗು, ಸಿಹಿ ತಿಂಡಿ, ಪಟಾಕಿ ಹಾರಿಸುವ ಸಂಭ್ರಮ, ಬಣ್ಣಬಣ್ಣಗಳಿಂದ ಅಲಂಕೃತಗೊಂಡ ರಂಗೋಲಿಗೂ ದೀಪಾವಳಿಗೂ ಅವಿನಾಭಾವ ನಂಟು. ವಿವಿಧ ಬಗೆಯ ಬಣ್ಣಗಳನ್ನು ತುಂಬಿ ಅಲ್ಲಲ್ಲಿ ಹಣತೆಗಳನ್ನು ಹಚ್ಚಿ ಇಡುವ ರಂಗೋಲಿಗಳ ಚಿತ್ತಾರ, ಹಣತೆ ದೀಪದ ಜಗಮಗ ಹೊಂಬೆಳಕಿನಲ್ಲಿ ಅಮಾವಾಸ್ಯೆಯ…
ಪಡುಬಿದ್ರಿ ಬಂಟರ ಸಂಘದ ವತಿಯಿಂದ ಸಮಾಜದ ಆರ್ಥಿಕ ದುರ್ಬಲರಿಗೆ, ಆಶಕ್ತರಿಗೆ, ಅನಾರೋಗ್ಯ, ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು 20 ಲಕ್ಷ ರೂ ಸಹಾಯಧನವನ್ನು ಅಕ್ಟೋಬರ್ 1ರ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ವಿತರಿಸಲಾಗುವುದೆಂದು ಬಂಟರ ಸಂಘದ ಅಧ್ಯಕ್ಷರಾದ ಡಾ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ಸಮಾಜದ ವೃದ್ದರಿಗೆ ನಮ್ಮ ಸಂಘವು ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು 6ಎಕರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ಎಂಬ ವೃದ್ದಾಶ್ರಮ ನಿರ್ಮಿಸಿರುವ ಯೋಜನೆ ಹಾಕಿಕೊಳ್ಳಲಾಗಿದೆ. ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದಲ್ಲಿ ಆರ್ಥಿಕ ಸಬಲೀಕರಣ ಮತ್ತು ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೋ -ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತದೆ. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿ ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ. ಮುಂಬೈ ಬಂಟರ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯರ ಸಭೆಯು ಸೆಪ್ಟೆಂಬರ್ 4 ರಂದು ಮುಲ್ಕಿ ಬಳಿಯ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿ ಸಭೆಯ ನಿರ್ಣಯವನ್ನು ದಾಖಲು ಮಾಡಲಾಯಿತು ಹಾಗೂ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮತ್ತು ಮಂಜೂರಾತಿ ಪಡೆಯಲಾಯಿತು. ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿಯವರಿಂದ ತೆರವಾದ ಸ್ಥಾನಕ್ಕೆ ಚಂದ್ರಹಾಸ ಶೆಟ್ಟಿ ರಂಗೋಲಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ಸ್ವಾಗತಿಸಿ ವರದಿ ಮಂಡಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿಯವರು ಲೆಕ್ಕಪತ್ರ ಮಂಡಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜದ ಅಭಿವೃದ್ದಿ ಮತ್ತು ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ದಾನಿಗಳು…
ಕ್ರೀಡಾ ಕ್ಷೇತ್ರದ ಪ್ರೋತ್ಸಾಹ, ಸಾಧನೆ, ಅವಿರತ ಚಟುವಟಿಕೆಗಳಿಂದ ಸಮಾಜದ ಗಮನ ಸೆಳೆದಿರುವ ಉದ್ಯಮಿ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಅತ್ತೂರು ಸದಾನಂದ ಶೆಟ್ಟಿ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಿದರು. ಎ ಸದಾನಂದ ಶೆಟ್ಟಿ ಅವರು ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಕ್ರೀಡಾ ಪೋಷಕರಾಗಿ, ಯಶಸ್ವಿಯಾಗಿದ್ದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿಕೊಡುವ ಮೂಲಕ ಅವರ ಬದುಕಿಗೆ ನೆರಳಾದವರು. ಮಂಗಳೂರಿನಲ್ಲಿ ತಮ್ಮ ಉದ್ಯಮಶೀಲತೆ, ಕಠಿನ ಶ್ರಮದಿಂದಾಗಿ ಹೋಟೆಲ್ ಉದ್ಯಮದಲ್ಲಿ ಯಶಸ್ಸನ್ನು ಕಂಡವರು. 1992ರಲ್ಲಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣವಿತ್ತರು. ಅವರು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿದವರು. ಚಿಕ್ಕಂದಿನಿಂದಲೇ ಕ್ರೀಡೆ, ಆಟೋಟಗಳತ್ತ ಆಕರ್ಷಿತರಾದವರು. ಉದ್ಯಮಿಯಾಗಿರುವಾಗಲೂ ಸದಾ ಹತ್ತು ಹಲವು ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವುದು, ಪ್ರೋತ್ಸಾಹ ನೀಡುವ ಮೂಲಕ ಆ ಕ್ಷೇತ್ರಕ್ಕೆ ಇನ್ನಿಲ್ಲದ ಕೊಡುಗೆ ನೀಡಿದ್ದಾರೆ. 1985ರಲ್ಲಿ…
ಜಾಗತಿಕವಾಗಿ ಇಂದು ಯೋಗಕ್ಕೆ ಭಾರೀ ಮನ್ನಣೆ ಸಿಕ್ಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಹಿರಿದಾಗಿದ್ದು, ಪ್ರಪಂಚದ ಸುಮಾರು 30 ಕೋಟಿಗೂ ಹೆಚ್ಚು ಮಂದಿ ಯೋಗ ಮಾಡುತ್ತಿದ್ದಾರೆ ಎಂದರೆ ಅಚ್ಚರಿ ಎನಿಸದೇ ಇರದು. ಇಂದು ಯೋಗ ಧರ್ಮ, ದೇಶ, ಸಂಪ್ರದಾಯಗಳನ್ನು ಮೀರಿ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಯೋಗಕ್ಕೆ ಸಂಬಂಧಿಸಿದ ಪೂರಕ ಉದ್ಯಮವೂ ಬೆಳೆದು ನಿಂತಿದೆ. 2015ರ ಜೂ.21ರಂದು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಣೆ ಶುರು ಮಾಡಿತು. ಇಂದು ಅಮೆರಿಕ, ಚೀನಾ, ಇಂಗ್ಲೆಂಡ್, ಆಸ್ಟ್ರೇಲಿಯ, ಕೆನಡಾ ಆದಿಯಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.90ರಷ್ಟು ದೇಶಗಳು ಯೋಗದಿನ ಆಚರಿಸುತ್ತಿವೆ. ಅಷ್ಟೇ ಅಲ್ಲ, ಯೋಗವನ್ನು ಜೀವನದ ಒಂದು ಭಾಗವಾಗಿ ಅನುಸರಿಸುತ್ತಿವೆ. ಯೋಗದ ಮೂಲ ಭಾರತ. ಸುಮಾರು 5 ಸಾವಿರ ವರ್ಷಗಳ ಹಿಂದೆ ಆರಂಭವಾದ ಈ ಯೋಗ, ಭಾರತದಲ್ಲೇ ಹೆಚ್ಚು ಪ್ರಸಿದ್ಧಿಯಾಗಿತ್ತು. ಇದನ್ನು ಜಾಗತಿಕ…