Author: admin

ಹಿರಿಯಡ್ಕ ಬಂಟರ ಸಂಘ(ರಿ.) ಹಿರಿಯಡ್ಕ ಇದರ ವಾರ್ಷಿಕ ಸಮ್ಮಿಲನ ಸಮಾರಂಭವು ಹಿರಿಯಡ್ಕದಲ್ಲಿ ನಿತೀಶ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಮಣಿ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಮಾಜಿ ಅಧ್ಯಕ್ಷರೂ ನಿವೃತ್ತ ಮುಖ್ಯೋಪಧ್ಯಾಯರೂ ಆಗಿರುವ ಕುದಿ ವಸಂತ ಶೆಟ್ಟಿ ಉದ್ಘಾಟಕರ ವ್ಯಕ್ತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯಡ್ಕದಲ್ಲಿ ಸಾರ್ಥಕ 45 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿರುವ ದೇವದಾಸ್ ಕಾಮತ್ ಸುಧಾ ದೇವದಾಸ್ ಕಾಮತ್, ಹಾಗೂ ಉದಯೋನ್ಮಖ ಲೇಖಕಿ ನೀತಾ ರಾಜೇಶ್ ಶೆಟ್ಟಿ, ಕ್ರೀಡಾ ಸಾಧಕಿ ಸ್ವಸ್ತಿ ಶೆಟ್ಟಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಸಂಘದ ಪ್ರಥಮ ಅಧ್ಯಕ್ಷರಾದ ವಿಶ್ವನಾಥ ರೈ ಮಾತನಾಡಿದರು, ಸಂಘದ ಉಪಾಧ್ಯಕ್ಷರಾದ ರವೀಂದ್ರನಾಥ್ ಶೆಟ್ಟಿ ಸ್ವಾಗತಿಸಿದರು. ಸಂಜನಾ ರೈ ಹಾಗೂ ಸುರೇಶ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂದ್ಯಾ ಶೆಟ್ಟಿ ವಂದಿಸಿದರು. ನೀತಾ ರಾಜೇಶ್ ಶೆಟ್ಟಿ…

Read More

ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದ ಹೊಸ ಆಡಳಿತ ಮಂಡಳಿ ಏಪ್ರಿಲ್ 2 ರಂದು ಮಲಬಾರ್ ದೇವಸ್ವಂ ಬೋರ್ಡಿನ ಅಧಿಕಾರಿ ರಘು ಹಾಗೂ ಊರ ಹತ್ತು ಸಮಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮತ್ತು ಕಾನೂನು ಬದ್ಧವಾಗಿ ನೂತನ ಸಮಿತಿ ಅಧಿಕಾರ ವಹಿಸಿಕೊಂಡಿತು. ಮುಂದಿನ ಮೊಕ್ತೇಸರರಾಗಿ ಉದ್ಯಮಿ, ಸಮಾಜಸೇವಕ ತಾರಾನಾಥ ರೈ ಪಡ್ಡoಬೈಲು ಗುತ್ತು, ಟ್ರಸ್ಟಿಗಳಾಗಿ ರಘುರಾಮ ರೈ ಕಟ್ಟತ್ತಾಡೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ ಆಯ್ಕೆಯಾದರು.

Read More

ಬ್ಯಾಂಕಿಂಗ್‌ ಉದ್ಯಮದ ಉಗಮ ಸ್ಥಾನ, ತೊಟ್ಟಿಲು, ತವರೂರು ಎಂದೇ ಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್‌ ದಿಗ್ಗಜರುಗಳಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಅವಿಸ್ಮರಣೀಯ. ಒಬ್ಬ ವ್ಯಕ್ತಿ ಸಮಾಜಕ್ಕೆ ಸಲ್ಲಿಸಿದ ಮಹತ್ವದ ಸೇವೆಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿಯೂ ಇದೊಂದು ಪ್ರಬುದ್ಧ ಸಿದ್ಧಾಂತವೆಂದರೂ ತಪ್ಪಾಗಲಾರದು. ಅವರ ಜನ್ಮ ದಿನ ಇರುವುದು ಏಪ್ರಿಲ್ ತಿಂಗಳಲ್ಲಿ. (ಎಪ್ರಿಲ್‌ 30) ಅವರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ. 1962 ರಿಂದ 1979ರವರೆಗೆ ವಿಜಯ ಬ್ಯಾಂಕ್‌ನ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿ ಬ್ಯಾಂಕ್‌ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್‌ ಚೇತನ. ಇಂದು ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡಾ ದೊಂದಿಗೆ ವಿಲೀನವಾದರೂ ಸುಂದರಾಮ ಶೆಟ್ಟಿ ಹೆಸರು ಬ್ಯಾಂಕ್‌ನೊಂದಿಗೆ ಅಚ್ಚಳಿಯದೇ ಉಳಿದಿದೆ. ರಾಜಮರ್ಜಿಯ ಸಮೃದ್ಧ ಮನೆತನದಲ್ಲಿ ಹುಟ್ಟಿದರೂ ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯ ಸುಂದರರಾಮ ಶೆಟ್ಟಿ ಅವರಿಗಿತ್ತು. ಅವರಿಗೆ ಬ್ಯಾಂಕ್‌ನ ಲಾಭವನ್ನು ಹೆಚ್ಚಿಸುವುದೊಂದೇ ಉದ್ಯಮದ ಉದ್ದೇಶವಾಗಿರಲಿಲ್ಲ. ಉದ್ಯಮವು ಸಮಾಜದ ಅನೇಕರಿಗೆ ಉದ್ಯೋಗಾವಕಾಶಗಳನ್ನು ನೀಡುವುದರೊಂದಿಗೆ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Read More

ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು. ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ…

Read More

ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ 7 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮನೋರಂಜನೆಯಂಗವಾಗಿ “ಸುಧನ್ವಾರ್ಜುನ “ಯಕ್ಷಗಾನ ಪ್ರದರ್ಶನವು ಫೆ.12 ರಂದು ರವಿವಾರ ಸಂಜೆ ಗಂಟೆ 3 ರಿಂದ ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ನ ದಿ . ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಡ್ತಲ, ಬಂಟ್ಸ್ ಅಸೋಸಿಯೇಷನ್ ಪುಣೆ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ತುಳುಕೂಟದ ಗೌರವಾಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು, ಶ್ರೀ ಗುರುದೇವಾ ಸೇವಾ ಬಳಗದ…

Read More

ಜಗತ್ತಿನಲ್ಲೇ ಪಶ್ಚಿಮ ಘಟ್ಟಗಳೆಂದರೆ ಅದು ಜೀವವೈವಿಧ್ಯದ ಆಗರ. ಇಲ್ಲಿರುವ ಜೀವಸಂಕುಲಗಳ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ಇಲ್ಲಿನ ಸಸ್ಯ ಸಂಕುಲಗಳ ವೈವಿಧ್ಯತೆ ಕೂಡ. ಪಶ್ಚಿಮಘಟ್ಟಗಳ ದಟ್ಟವಾದ ಶೋಲಾ ಅರಣ್ಯಗಳ ಮಧ್ಯೆ ಮಧ್ಯೆ ಕಂಡುಬರುವ Montane grassland ಅನ್ನುವ ವಿಶಿಷ್ಟ ಬಗೆಯ ಹುಲ್ಲುಗಾವಲುಗಳ ಈ ವ್ಯವಸ್ಥೆ ತುಂಬಾ ಅಪರೂಪದ ಭೂಲಕ್ಷಣವಾಗಿದೆ. ದಟ್ಟಾರಣ್ಯದ ಮಧ್ಯೆ ಅಲ್ಲಲ್ಲಿ ಹುಲ್ಲುಗಾವಲುಗಳು ಕಂಡುಬರುವುದರಿಂದ ಇದನ್ನು ಭೂ ವಿಜ್ಞಾನಿಗಳು ಶೋಲಾ ಮೊಸಾಯಿಕ್ ಅಂತ ಕರೆಯುತ್ತಾರೆ. ಬಹುಶಃ ನಮ್ಮ ಕೊಯ್ಲದ ಸುಮಾರು ಏಳುನೂರು ಎಕರೆಯಷ್ಟು ವಿಶಾಲವಾದ ಈ ಹುಲ್ಲುಗಾವಲು ಕೂಡ ಪಶ್ಚಿಮ ಘಟ್ಟದ ಈ ಶೋಲಾ ಮೊಸಾಯಿಕ್ ನ ಭಾಗವೇ. ಕೊಯ್ಲದ ಈ ಹುಲ್ಲುಗಾವಲೀಗ ನಾಗರಿಕ ಸಮಾಜದ ಮಧ್ಯೆಯೇ ಇರುವುದರಿಂದ ಮತ್ತು ಸರ್ವಋತು ರಸ್ತೆಗಳು, ವಿದ್ಯುಚ್ಛಕ್ತಿ ಇತ್ಯಾದಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇರುವ ಸ್ಥಳವಾದುದರಿಂದ ಅಧ್ಯಯನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಜಾಗವಾಗಿದೆ. ಇಲ್ಲಿ ಈಗ ಪಶುವೈದ್ಯಕೀಯ ಕಾಲೇಜು ಹೇಗೂ ಸ್ಥಾಪನೆಯಾಗಿರುವುದರಿಂದ ಇದನ್ನೊಂದು ಉನ್ನತ ಅಧ್ಯಯನ ಕೇಂದ್ರವನ್ನಾಗಿ, ತೋಟಗಾರಿಕಾ,…

Read More

ಪುತ್ತೂರಿನ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದ ಮಾಜಿ ತಹಶೀಲ್ದಾರ್‌ ಕೋಚಣ್ಣ ರೈ ಚಿಲ್ಮೆತ್ತಾರು (85) ಮಂಗಳೂರಿನಲ್ಲಿ ಮಾ 27 ರಂದು ಇಹಲೋಕ ತ್ಯಜಿಸಿದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪುತ್ರಿಯರಾದ ವಿಜಯ ಹಾಗು ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ| ಮಂಜುನಾಥ್‌ ರೈ ಹಾಗೂ ಅಪಾರ ಬಂಧು ಮಿತ್ರರೂ ಅಭಿಮಾನಿಗಳನ್ನು ಆಗಲಿದ್ದಾರೆ. ಕೋಚಣ್ಣ ರೈಯವರ ಪತ್ನಿ ದಿ. ಮುಂಡಾಲ ಗುತ್ತು ಸುಗುಣ ರೈ. ಕೋಚಣ್ಣ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಬಿರುದು ನೀಡಿ ಗೌರವಿಸಿದೆ. ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಹವಾದ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಹೆಗ್ಗಳಿಕೆ ಕೋಚಣ್ಣ ರೈ ಅವರದು, ಬೆಳ್ತಂಗಡಿಯಲ್ಲಿ ಸಾವಿರಾರು ದೀನ ದಲಿತರಿಗೆ ಅತ್ಯಂತ ಸುಲಭವಾಗಿ ಹಾಗೂ ಸುಲಲಿತವಾಗಿ ನಿವೇಶನದ ಹಕ್ಕು ಪತ್ರವನ್ನು ಒದಗಿಸಿದವರು ಇವರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕ್ರೆ ಜಾಗವನ್ನು…

Read More

ಸಿನಿಮಾ ನಿರ್ಮಾಪಕರು, ಹೋಟೆಲ್ ಉದ್ಯಮಿಗಳು, ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿರುವಂತಹ ಉಪೇಂದ್ರ ಆರ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.

Read More

‘ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ’ ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೇತೃತ್ವದಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ರೆಡ್‍ಕ್ರಾಸ್ ಮಂಗಳೂರು, ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಎಚ್‍ಡಿಎಫ್‍ಸಿ ಬ್ಯಾಂಕ್ ಮೂಡುಬಿದಿರೆಯ ಸಹಯೋಗದಲ್ಲಿ ಶುಕ್ರವಾರ ಆಳ್ವಾಸ್ ಕಾಲೇಜಿನಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 449 ಯುನಿಟ್ ರಕ್ತದಾನ ಮಾಡಿದರು. ಶಿಬಿರ ಉದ್ಘಾಟಿಸಿದ ಗೇಲ್ ಪೆಟ್ರೋ ಕೆಮಿಕಲ್ಸ್‍ನ ವೈದ್ಯಕೀಯ ಸಲಹಾ ಅಧಿಕಾರಿ, ಡಾ ಜೆ ಎನ್ ಭಟ್, ದೇಶದಲ್ಲಿ 4 ಕೋಟಿ ರಕ್ತದಾನಿಗಳ ಅವಶ್ಯಕತೆ ಇದ್ದು, 4.5 ಲಕ್ಷ ದಾನಿಗಳು ಮಾತ್ರ ಇದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ಒಬ್ಬ ವ್ಯಕ್ತಿ ಯೌವನದಿಂದ ಒಟ್ಟು ಸುಮಾರು 80ರಿಂದ 90 ಬಾರಿ ರಕ್ತದಾನ ಮಾಡಬಹುದು. ಪುರುಷರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದ ಅವರು, ನಾನು 36 ಬಾರಿ ರಕ್ತದಾನ ಮಾಡಿದ್ದೇನೆ ಎಂದರು. ರಕ್ತದಾನವೂ ದೇಶಪ್ರೇಮ. ಬದ್ಧತೆಯಿಂದ ರಕ್ತದಾನ ಮಾಡಿ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ,…

Read More