ಬಂಟರ ಸಂಘ ಕಾವೂರು ವತಿಯಿಂದ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿ ಕಾವೂರು ಬಂಟರ ಸಮುದಾಯ ಭವನದ ಭೂಮಿ ಪೂಜೆ ಮತ್ತು ಬಂಟರ ಸಂಘದ ಆಡಳಿತ ಕಚೇರಿ ಹಾಗೂ ಬಯಲು ರಂಗಮಂದಿರದ ಉದ್ಘಾಟನೆ ಬುಧವಾರ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಬಂಟ ಎಂದರೆ ಸುರಕ್ಷಕ ಎಂಬ ಅರ್ಥವಿದೆ. ಹಾಗಾಗಿಯೇ ಧರ್ಮ- ಸಂಕೃತಿಗಳನ್ನು ಉಳಿಸುವ ಜವಾಬ್ದಾರಿ ಬಂಟ ಸಮಾಜಕ್ಕೆ ಇದೆ. ಈ ಸಮುದಾಯ ಭವನ, ವಿದ್ಯಾರ್ಥಿ ಭವನ ನಿರ್ಮಾಣವೂ ಈ ಉದ್ದೇಶಕ್ಕೆ ಪೂರಕವಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಾವೂರು ಬಂಟರ ಸಂಘ ಅದ್ಬುತ ಕಾರ್ಯ ಮಾಡುತ್ತಿದೆ. ಇಷ್ಟು ದೊಡ್ಡ ನಿವೇಶನ ಬೇರೆಲ್ಲೂ ಸಿಕ್ಕಿಲ್ಲ. ಈಗಾಗಲೇ ರಂಗ ಮಂದಿರವನ್ನು ಪೂರ್ಣಗೊಳಿಸಿದ್ದಾರೆ. ಎರಡು ವರ್ಷದಲ್ಲಿ ಸಮುದಾಯ ಭವನ ಪೂರ್ಣಗೊಳಿಸುವ ಗುರಿ ಇರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಡಾ. ಎ ಸದಾನಂದ ಶೆಟ್ಟಿ ಅವರಿಗೆ “ಪೆರ್ಮೆದ ಬಂಟೆ” ಗೌರವ ನೀಡಿ ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ಮುಂಬಯಿಯ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಸಾಯಿರಾಧ ಗ್ರೂಪ್ಸ್ ನ ಆಡಳಿತ ನಿರ್ದೇಶಕ ಮನೋಹರ ಎಸ್.ಶೆಟ್ಟಿ, ಅಭಿಮಾನ್ ಕನ್ ಸ್ಟ್ರಕ್ಷನ್ಸ್ ನ ಸುಷ್ಮಾ ಎಂ.ಮಲ್ಲಿ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಬಿ. ರಮಾನಾಥ ರೈ, ಮನಪಾ ಸದಸ್ಯರಾದ ಅನಿಲ್ ಕುಮಾರ್, ಸುಮಂಗಲಾ ರಾವ್, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಕಟೀಲ್ ಡೆವಲಪರ್ಸ್ ನ ಮಾಲಕ ಗಿರೀಶ್ ಶೆಟ್ಟಿ, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷ ಡಿ. ಸುಧಾಕರ ಶೆಟ್ಟಿ ಮುಗ್ರೋಡಿ, ಸಂಚಾಲಕ ಎಂ.ಎಸ್. ಶೆಟ್ಟಿ ಸರಪಾಡಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅವಿನಾಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರು ಸ್ವಾಗತಿಸಿ ಸುಧಾಕರ ಆಳ್ವ ಪ್ರಸ್ತಾವಿಸಿದರು. ಸುಜಯ ಎಸ್. ಶೆಟ್ಟಿ ವಂದಿಸಿದರು. ಪುರುಷೋತ್ತಮ ಭಂಡಾರಿ, ಪ್ರಿಯಾ ಹರೀಶ್, ನಿತೇಶ್ ಶೆಟ್ಟಿ ನಿರೂಪಿಸಿದರು.