Author: admin

ಮಾರ್ಚ್ ೧೭ರಂದು ತುಳುಕೂಟ ಕತಾರ್ ಆಯೋಜಿಸಿದ್ದ “ತುಳುಜಾತ್ರೆ” ಎಂಬ ಮೇಳವು ಅತ್ಯಂತ ಅದ್ಧೂರಿಯಾಗಿ ನೆರವೇರಿತಲ್ಲದೆ ಕತಾರ್‌ನಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಭಾರತಿಯರ ಗಮನವನ್ನು ಸೆಳೆದು ಮೆಚ್ಚುಗೆ ಪಡೆಯಿತು. ಕರುನಾಡು, ಅದರಲ್ಲೂ ಕರಾವಳಿಯ ವಿಧ-ವಿಧವಾದ ತಿಂಡಿ ತಿನಿಸುಗಳು ಹಾಗು ಸಾಂಪ್ರದಾಯಿಕ ಆಟೋಟ ಪಂದ್ಯಗಳು ಸುಮಾರು ಮೂರು ಸಾವಿರ ಮಂದಿ ಯನ್ನು ಯಶಸ್ವಿಯಾಗಿ ಮನೋರಂಜಿಸಿತು. ವೇದಿಕೆಯಲ್ಲಿ ಪ್ರದರ್ಶಿಸಿದ ನಮ್ಮ ದೇಶದ ವಿಭಿನ್ನ ಕಲಾಕೃತಿಗಳು ಪ್ರೇಕ್ಷಕರನ್ನು ಕಾರ್ಯಕ್ರಮದುದ್ದಕ್ಕೂ ಸಳೆದಿಟ್ಟುಕೊಂಡಿದ್ದವು. ಕತಾರ್‌ನ ಡೈನಾಮಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ನಡೆ ಯಿತು. ಇಡೀ ಕಾಂಪ್ಲೆಕ್ಸ್ ರಂಗಮಯ ಗೊಳಿಸಿ, ಅದಕ್ಕೆ ತುಳುನಾಡ ಸಾಂಪ್ರ ದಾಯಕ ಹೊರಪನ್ನು ಅಳವಡಿಸಿ, ಕತಾರ್‌ನಲ್ಲೂ ಭವ್ಯವಾದ ಆಯೋಜನೆ ಸಾಧ್ಯವಿದೆ ಎಂಬುದನ್ನು ಸಾರಿ ಹೇಳುವಂತೆ ಅಲಂಕೃತಗೊಂಡಿತ್ತು. ಕಂಬಳದ ಫೊಟೋ ಬೂತ್! ನಿಜರೂಪಿಕ ತಟ್ಟಿರಾಯ! ಸ್ವಾಗತ ಕೋರುವ ಸುಸಜ್ಜಿತ ಕಮಾನು ಜನರ ಮನಸೂರೆಗೊಂಡವು. ತುಳು ಕೂಟದ ಅಧ್ಯಕ್ಷ ಕಿರಣ್ ಆನಂದ್, ಅತಿಥಿ ರವಿ ಕಟಪಾಡಿ, ರಾಜ್ಯೋತ್ಸವ ಪುರಸ್ಕೃತ ತುಳುಕೂಟ ಕತಾರ್‌ನ ಪೋಷಕ ಹಾಗೂ ಮಾಜಿ ಅಧ್ಯಕ್ಷ, ಡಾ. ಎಂ.…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಡಳಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಆಶೀರ್ವಚನಗೈದು ಮಾತಾಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, “ಬಂಟರು ಸಂಘಟನೆಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ವ್ಯಕ್ತಿ ಯಾವತ್ತೂ ಮೇಲಲ್ಲ ಸಂಘಟನೆ ಮೇಲು. ಸಂಘಟನೆ ಗಟ್ಟಿಯಾದಲ್ಲಿ ವ್ಯಕ್ತಿ ಮತ್ತು ಸಮಾಜ ಎರಡೂ ಬೆಳೆಯುತ್ತದೆ. ಬಂಟರು ಎಲ್ಲಾ ಕ್ಷೇತ್ರದಲ್ಲೂ ಇಂದು ಬೆಳೆಯುತ್ತಿದ್ದಾರೆ. ಸಂಪತ್ತು ಮಾತ್ರವಲ್ಲ ಒಳ್ಳೆಯ ಮನಸು ಕೂಡಾ ಬಂಟರಲ್ಲಿದೆ. ಇದು ಶ್ರೇಷ್ಠವಾದ ಗುಣ. ಅವರಲ್ಲಿ ನಾಯಕತ್ವ ಗುಣ ಇರುವ ಕಾರಣದಿಂದಲೇ ಸಮಾಜದಲ್ಲಿ ಅವರು ಗುರುತಿಸಲ್ಪಡುತ್ತಾರೆ. ಬಂಟರು ಸಂಘಿತರಾದರೆ ದೇಶವನ್ನು ಆಳಲು ಸಮರ್ಥರು” ಎಂದು ಹೇಳಿದರು. ಬಳಿಕ ಮಾತಾಡಿದ ಶ್ರೀ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಮಾತನಾಡಿ, “ಬಂಟ ಸಮಾಜದಲ್ಲಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರು ಹೃದಯದಿಂದ ದಾನ ಮಾಡುತ್ತಾರೋ ಅವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ”…

Read More

“ಒಳ್ಳೆಯತನಕ್ಕೆ ಹಣದ ಅವಶ್ಯಕತೆ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ” ಎಂಬ ಮಾತಿದೆ. ಪುತ್ತೂರು ತಾಲ್ಲೂಕಿನಲ್ಲಿ ತಿಮ್ಮಪ್ಪಣ್ಣ ಎಂದೇ ಖ್ಯಾತರಾಗಿರುವ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ ತಮ್ಮ ಸರಳತೆ ಸಜ್ಜನಿಕೆಯಿಂದಾಗಿ ಜನಾನುರಾಗಿಯಾದವರು. ಪ್ರತಿಷ್ಠಿತ ಬೆಳಿಯೂರು ಗುತ್ತು ದಿ. ವೆಂಕಪ್ಪ ಶೆಟ್ಟಿ ಮತ್ತು ಕೊಂಡೆಮಾರು ದಿ. ಉಮ್ಮಕ್ಕೆ ಶೆಡ್ತಿ ದಂಪತಿಗಳ ಮಕ್ಕಳಲ್ಲಿ ಮುದ್ದಿನ ಒಬ್ಬನೇ ಗಂಡು ಮಗುವಾಗಿ ಜನಿಸಿದ ಇವರು ಆ ಕಾಲದ ಬಿಎಸ್ಸಿ ಪದವೀಧರರು. ಕುಟುಂಬದ ಕೃಷಿಯ ಜೊತೆಗೆ ಸಮಾಜ ಸೇವೆಯನ್ನು ಹವ್ಯಾಸವಾಗಿಸಿಕೊಂಡ ಇವರು ಪುತ್ತೂರಿನ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ದುಡಿದು ಈ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು. ಪ್ರಸ್ತುತ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು ಪುತ್ತೂರಿನ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು. ಅಡಿಕೆ ಬೆಳೆಗಾರರಾಗಿರುವ ಶ್ರೀಯುತ ತಿಮ್ಮಪ್ಪ ಶೆಟ್ಟಿ ಎರಡು ಅವಧಿಗೆ ಕ್ಯಾಂಪ್ಕೋ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಮಂಗಳೂರು ಬಂಟರ…

Read More

ಜನ-ಗಣ-ಮನಧರ್ಮ- ಸಂಸ್ಕೃತಿ ಪರಶುರಾಮನನ್ನು ಬಲಗೊಳಿಸುವುದೆಂದರೆ ತಾಯಿಯನ್ನು ಮೂಲೆ ಸೇರಿಸುವುದೆಂದೇ ಅರ್ಥ! ಕಾರ್ಕಳದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಥೀಮ್‌ ಪಾರ್ಕ್‌ ತುಳುನಾಡಿನ ಮೂಲನಿವಾಸಿಗಳನ್ನು ಹಾಗೂ ಅವರ ಮೂಲ ಸಂಸ್ಕೃತಿಯನ್ನು ಅಪಮಾನಿಸಲೆಂದೇ ಮಾಡಿರುವ ಒಂದು ಹುನ್ನಾರ… ಈ ನಿಟ್ಟಿನಲ್ಲಿ ಪೀಪಲ್‌ ಮೀಡಿಯಾ.ಕಾಂನಲ್ಲಿ ಹಲವಾರು ವಿದ್ವಾಂಸರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕಂತಿನಲ್ಲಿ ನಾಲ್ವರು ಪ್ರಮುಖ ಚಿಂತಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ- ಸಂ ಮೌಖಿಕ ಪರಂಪರೆಯ ಆಶಯಗಳೇ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ತಿರುಳುಗಳು. ವಾಸ್ತವಿಕವಾಗಿ ಈ ಸಾಂಸ್ಕೃತಿಕ ಪರಂಪರೆಯಲ್ಲಿ ಎಲ್ಲೂ ಪರಶುರಾಮನ ಪ್ರಸ್ತಾಪವಿಲ್ಲ. ಅದು ಇದ್ದರೂ ಮಾತೃಮೂಲಿಯ ವ್ಯವಸ್ಥೆಯನ್ನು ಕೆಡಿಸಿ ಪಿತೃಪ್ರಧಾನ ವ್ಯವಸ್ಥೆಯನ್ನು ಬಲಗೊಳಿಸಲು ತಂದ ಸೇರ್ಪಡೆ. ಇವತ್ತಿಗೂ ನಾವು ಪರಶುರಾಮನನ್ನು ಬಲಗೊಳಿಸುತ್ತೇವೆ ಎಂದರೆ ತಾಯಿಯನ್ನು ಸಂಪೂರ್ಣ ಮೂಲೆ ಸೇರಿಸಲು ತಯಾರಿ ನಡೆಸುತ್ತೇವೆ ಎಂದೇ ಅರ್ಥ. ಜನಪದರ ರಾಮ, ಕೃಷ್ಣ, ಶಿವ, ಬಿರ್ಮೆ ಎಲ್ಲರೂ ಕರಾವಳಿಯ ಒಡನಾಡಿಗಳು, ಅವರೆಂದೂ ನಾವು ಈ ನಾಡಿನ ಸೃಷ್ಟಿಕರ್ತರು ಎಂದು ಎಲ್ಲೂ ಹೇಳಿಕೊಳ್ಳಲಿಲ್ಲ. ಅವರೇ ಹೇಳಿಕೊಳ್ಳದ ಮೇಲೆ ನಮ್ಮ ಜನಪದರು…

Read More

ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಫೆ. 11 ಮತ್ತು 12ರಂದು ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯಲಿದ್ದು, ಫೆ. 11ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮಲ್ಪೆ ಶಂಕರನಾರಾಯಣ ಸಾಮಗ ಪ್ರಧಾನ ವೇದಿಕೆ ಹಾಗೂ ಕೆರೆಮನೆ ಶಿವರಾಮ ಹೆಗಡೆ ವೇದಿಕೆ ಮತ್ತು ಅಳಿಕೆ ರಾಮಯ್ಯ ರೈ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ದಿನ ಹೂವಿನ ಕೋಲು, ದುಬಾೖ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ, ಮಕ್ಕಳಿಂದ ಬಡಗು ತಿಟ್ಟು ಯಕ್ಷಗಾನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಮಹಿಳೆಯರಿಂದ ಯಕ್ಷಗಾನದ ಜತೆಗೆ ಯಕ್ಷ ಶಿಕ್ಷಣದ ಸವಾಲು, ಯಕ್ಷಗಾನ ಕನ್ನಡದ ಅಸ್ಮಿತೆ, ತಾಳಮದ್ದಳೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ. ಎರಡನೇ ದಿನ ಯಕ್ಷಗಾನ ಮತ್ತು ಭಾರತೀಯ ಚಿಂತನೆ, ಮಹಿಳಾ ಯಕ್ಷಗಾನ ಚಿಂತನೆ, ಮೂಡಲಪಾಯದ ಸ್ವರೂಪ ರಚನೆ, ಯಕ್ಷಗಾನ ಪ್ರಸಾರ ಮತ್ತು ಪ್ರಯೋಗ, ವಿವಿಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಗೋಷ್ಠಿಗಳನ್ನು ಲೇಖಕ ರೋಹಿತ್‌ ಚಕ್ರತೀರ್ಥ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ…

Read More

ಬಂಟ ಸಮಾಜದ ಧೀಮಂತ ರಾಜಕಾರಣಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಆದಂತಹ ಬೆಳ್ಳಿಪಾಡಿ ಮನೆತನದ ರಮಾನಾಥ್ ರೈ ಕೂಡಾ ಒಬ್ಬರು. ಭಗವಂತ ರಮಾನಾಥ್ ರೈ ಅವರಿಗೆ ಜನರ ಸೇವೆ ಮಾಡಲು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ.

Read More

ಅಂದು ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಅಧ್ಯಾಪಕರು ಕೊಡುತ್ತಿದ್ದ ಶಿಕ್ಷೆಗಳನ್ನು ಒಮ್ಮೆ ನೆನಪಿಗೆ ತಂದುಕೊಳ್ಳೊಣವೇ? ನಮ್ಮಲ್ಲಿ ನಾಗರ ಬೆತ್ತದ ರುಚಿಯನ್ನು ಕಾಣದವರು ಇರಲಿಕ್ಕಿಲ್ಲ. ಇನ್ನು ಕುರ್ಚಿ ಕೂರುವುದು, ಬಸ್ಕಿ ಹೊಡೆಯುವುದು, ಕಿವಿ ಹಿಂಡುವುದು, ಕೈ ಗಂಟಿಗೆ ಬೀಳುವ ಪೆಟ್ಟು… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶಿಕ್ಷೆಗಳ ಸಂಖ್ಯೆ ಬೆಟ್ಟದಂತೆ ಬೆಳೆಯುತ್ತ ಹೋಗುತ್ತದೆ. ಆಗ ನೀಡುತ್ತಿದ್ದ ಶಿಕ್ಷೆಯಲ್ಲಿಯೂ ಒಂದು ನೀತಿ ಇರುತ್ತಿತ್ತು. ಜೊತೆಗೆ ಮುಂದೆಂದೂ ಅಂತಹ ತಪ್ಪನ್ನು ಮಾಡಿದೆ ಇರುವಂತೆ ಶಿಕ್ಷೆಗಳು ಸದಾ ನಮಗೆ ಎಚ್ಚರಿಕೆ ನೀಡುತ್ತಿದ್ದವು. ಹಾಗಾಗಿಯೇ ನಮ್ಮಲ್ಲಿ ಒಂದಿಷ್ಟು ಶಿಸ್ತು, ಗೌರವ, ವಿಧೇಯತೆ, ಸಮಯಪಾಲನೆ, ಮನೆಗೆಲಸ ಮತ್ತು ತರಗತಿಗಳಲ್ಲಿ ಕೊಟ್ಟ ಕೆಲಸಗಳನ್ನು ಕಾಲಕಾಲಕ್ಕೆ ಪೂರ್ಣಗೊಳಿಸುವುದು ಇಂತಹ ಉತ್ತಮ ಮೌಲ್ಯಗಳು ತನ್ನಿಂದ ತಾನೇ ಬೆಳೆಯುತ್ತಿದ್ದವು (ಶಿಕ್ಷೆಗೆ ಹೆದರಿ ರೂಢಿಸಿಕೊಳ್ಳುತ್ತಿದ್ದೆವು ಎನ್ನಿ!) ಇದರ ಜೊತೆಗೆ ಇನ್ನೊಂದಿಷ್ಟು ಅಗತ್ಯ ವಿಷಯಗಳಾದ… ಪುಸ್ತಕಗಳನ್ನು ಸುಂದರವಾಗಿ ಇಟ್ಟುಕೊಳ್ಳುವುದು; ನಮ್ಮ ತರಗತಿಯನ್ನು ಸ್ವಚ್ಛಗೊಳಿಸುವುದು; ಕುಡಿಯುವ ನೀರು ತುಂಬಿಸಿಡುವುದು; ಆಟದ ಮೈದಾನ ಹಾಗೂ ಶಾಲೆಯ ಆವರಣದ ಸ್ವಚ್ಛತೆ (ಈಗ ಇವೆರಡೂ…

Read More

‘ಹೆಣ್ಣು, ಮಣ್ಣಿಗೆ ಗೌರವ ನೀಡುವ ತುಳು ಸಂಸ್ಕೃತಿ’ ವಿದ್ಯಾಗಿರಿ: ‘ತುಳುನಾಡು ಮಾತೃ ಪ್ರಧಾನವಾಗಿದ್ದು, ಇಲ್ಲಿ ಹೆಣ್ಣು ಮತ್ತು ಮಣ್ಣಿಗೆ ಹೆಚ್ಚಿನ ಗೌರವ ಇದೆ’ ಎಂದು ಸಾಹಿತಿ ಹಾಗೂ ಸಂಶೋಧಕರಾದ ಡಾ.ಇಂದಿರಾ ಹೆಗ್ಗಡೆ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಮ್ಮಿಕೊಂಡ ‘ಸಂಸ್ಕೃತಿ ಚಿಂತನ ಕಾರ್ಯಕ್ರಮ’ದಲ್ಲಿ ಅವರು ‘ಆದಿ ಆಲಡೆಗಳು’ ಕುರಿತು ಮಾತನಾಡಿದರು. ತುಳುನಾಡು ಹೊರತು ಪಡಿಸಿದರೆ, ಅಸ್ಸಾಂ ಹಾಗೂ ಕೇರಳ ರಾಜ್ಯದಲ್ಲಿ ನಾವು ಮಾತೃಪ್ರಧಾನ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಯಾವುದೇ ಆಚರಣೆ ಮಾಡುವ ಮೊದಲು, ಅದರ ಆಶಯ ಹಾಗೂ ಅಂತಸತ್ವ ಅರಿತುಕೊಳ್ಳಬೇಕು. ಕುರುಡಾಗಿ ಪಾಲಿಸಬಾರದು ಎಂದರು. ‘ತುಳುನಾಡಿನ ಸಂಸ್ಕೃತಿಯಲ್ಲಿ ‘ಪುನರ್ಜನ್ಮ’ದ ಪರಿಕಲ್ಪನೆ ಇಲ್ಲ. ನಮ್ಮ ಕೆಲಸವನ್ನು ಪರಿಪೂರ್ಣವಾಗಿ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಆಗ ಅತೃಪ್ತಿಗೆ ಅವಕಾಶವೇ ಇಲ್ಲ’ ಎಂದರು. ನಿಮ್ಮ ಸುತ್ತಲೂ ಸೃಷ್ಟಿಯಾಗುವ ಭ್ರಮಾ ಲೋಕದಿಂದ ಹೊರಬನ್ನಿ. ಮಾತು, ಬರಹಕ್ಕಿಂತ ಹೆಚ್ಚಾಗಿ ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಯಾವುದೇ ಹೇರಿಕೆಯ…

Read More

ನಾವು ಎಲ್ಲಾ ಧರ್ಮದ, ಎಲ್ಲಾ ಮತದ ಬಗ್ಗೆ ಅದೆಷ್ಟೋ ವಿಷಯಗಳನ್ನು ತಿಳಿದವರು. ಆದರೂ ತುಳು ಧರ್ಮ ಇವೆಲ್ಲಕ್ಕಿಂತ ಮೀರಿದ್ದು. ಹಿರಿಯರು ಹಾಕಿದ ಬುನಾದಿಯು ಒಂದಿಂಚು ಮಿಸುಕಾಡದಿದ್ದರೂ ಅಲ್ಲಲ್ಲಿ ಪಾಚಿ ಮಾತ್ರ ಕಟ್ಟಿರುವುದು ಕಾಣುತ್ತದೆ. ಆದರೂ ಕೂಡ ಬಂಡೆಯಷ್ಟೆ ಗಟ್ಟಿಯಾಗಿರುವುದು ನಮ್ಮ ಭಾಗ್ಯ. ತುಳುನಾಡ ಧರ್ಮಕ್ಕೆ ಯಾವುದೇ ಕರ್ತನಿಲ್ಲ, ಯಾವುದೇ ಬರವಣಿಗೆಗಳು ಇಲ್ಲ, ಆದರೂ ತುಳುನಾಡ ಮಣ್ಣಿನ ಜನರ ಕಣ ಕಣದಲ್ಲೂ ಹರಡಿಕೊಂಡಿದೆ. ತುಳುನಾಡ ಧರ್ಮದಲ್ಲಿ ಎಲ್ಲಕ್ಕೂ ಅದರದೇ ಆದ ವೈಜ್ಞಾನಿಕ ಆಧಾರ ಇದೆ. ಈ ಧರ್ಮದಲ್ಲಿ ಎಲ್ಲೂ ಕೂಡ ದುಂದುವೆಚ್ಚದ ಆರಾಧನೆಗಳಿಲ್ಲ. ಮುಖ್ಯವಾಗಿ ತುಳುನಾಡ ಜನರು ಪ್ರಕೃತಿ ಆರಾಧಕರು. ತಮ್ಮೊಂದಿಗೆ ಇರುವ ಪ್ರಾಣಿ ಪಕ್ಷಿಗಳಿಗೆ ದೈವ ದೇವರುಗಳ ಸ್ಥಾನವನ್ನು ಕಲ್ಪಿಸಿ ಜೀವನ ಚಕ್ರದಲ್ಲಿ ಮತ್ತು ನಿಸರ್ಗದ ಉಳಿವಿನಲ್ಲಿ ಪ್ರಾಣಿ ಪಕ್ಷಿಗಳ ಉಳಿವು ಅತೀ ಹೆಚ್ಚಿನದ್ದು ಎಂದು ಸಾರಿದ್ದಾರೆ. ತಮ್ಮಂತೆ ಅವುಗಳು ಜೀವವಿರುವುದನ್ನು ಮನಗಂಡು ಅವುಗಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದಾರೆ. ಉದಾ: ಪಂಜುರ್ಲಿ, ಮೈಸಂದಾಯ, ನಾಗ, ಪಿಲ್ಚಂಡಿ, ನಂದಿ ಇವೆಲ್ಲ ಪ್ರಾಣಿ ಮೂಲದ…

Read More

ಪ್ರತಿಯೊಬ್ಬರ ಆರೋಗ್ಯ ಅವಲಂಬಿತವಾಗಿರುವುದು ಅವರವರು ತೆಗೆದುಕೊಳ್ಳುವ ಆಹಾರದ ಮೇಲೆ. ಸುರಕ್ಷೆಯ ಆಹಾರ ಸೇವನೆಯಿಂದ ನಾವು ಆರೋಗ್ಯವಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಜೂ.7ರಂದು ವಿಶ್ವ ಆಹಾರ ಸುರಕ್ಷ ದಿನವನ್ನು ಆಚರಿಸಲಾಗುತ್ತಿದೆ. ಅಸುರಕ್ಷಿತ‌ ಆಹಾರದಿಂದ ಅನಾರೋಗ್ಯ : ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ಜಾಗತಿಕ ಅಂಕಿಅಂಶಗಳ ಪ್ರಕಾರ ಮಾನವನ ಆರೋಗ್ಯದ ಮೇಲೆ ಅಸುರಕ್ಷಿತ ಮತ್ತು ಕಲುಷಿತ ಆಹಾರ ಸೇವನೆ ಭಾರೀ ಪರಿಣಾಮವನ್ನುಂಟು ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸ ಲಾಗುತ್ತಿದ್ದರೂ ವಿವಿಧ ಕಾರಣಗಳಿಗಾಗಿ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳಿಂದ ಭಾರೀ ಸಂಖ್ಯೆಯ ಜನರು ವಂಚಿತರಾಗಿದ್ದಾರೆ. ಭಾರತದ ಮುಂದಿದೆ ಬಲುದೊಡ್ಡ ಸವಾಲು : ವಿಶ್ವಸಂಸ್ಥೆಯ ಪ್ರಕಾರ ಅಂದಾಜು 195 ಮಿಲಿಯನ್‌ ಜನರು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜತೆಗೆಶೇ. 43ರಷ್ಟು…

Read More