Author: admin
ತುಳುನಾಡಿನಲ್ಲಿ ಬೇಸಾಯ ಕಣ್ಮರೆಯಾಗುತ್ತಿದ್ದಂತೆ ಇದರ ಹಿನ್ನಲೆಯಲ್ಲಿ ಆರಾಧಿಸಲ್ಪಡುತ್ತಿದ್ದ ದೈವಗಳೂ ಕಣ್ಮರೆಯಾಗುತ್ತಿವೆ. ಕಳೆದ 20 ವರ್ಷಗಳ ಹಿಂದೆ ಬೇಸಾಯದ ಗದ್ದೆ ಬದುಗಳಲ್ಲಿ ಕುಣಿಯುತ್ತಿದ್ದ ಈ ದೈವಗಳು ಇಂದು ಕುಣಿಯುತ್ತಿಲ್ಲ. ಅಭಯದ ಮಾತುಗಳನ್ನು ಆಡುತ್ತಿಲ್ಲ, ಅನೇಕ ದೈವಗಳು ಇದ್ದ ಕುರುಹುಗಳೇ ಇಲ್ಲ. ಸಾವಿರದೊಂದು ಭೂತಗಳನ್ನು ನಂಬುತ್ತಿದ್ದ ತುಳುವರ ಪಾಲಿಗೆ ಇಂದು ಕೆಲವು ಮಾತ್ರ ಉಳಿದಿವೆ. ಹಲವು ದೈವಗಳು ರೂಪಾಂತರಗೊಂಡಿವೆ. ಇನ್ನು ಕೆಲವು ಹೆಸರು ಬದಲಾಯಿಸಿಕೊಂಡಿವೆ. ಅನೇಕ ದೈವಗಳ ಭೂತ ಚರಿತ್ರೆ, ಹುಟ್ಟು, ಬೆಳವಣಿಗೆ ಅದಲುಬದಲಾಗಿದೆ. ಪಾಡ್ದನಗಳು ತಮ್ಮ ಮೂಲ ರೂಪಕ್ಕಿಂತ ಭಿನ್ನವಾಗಿವೆ. ದೈವಗಳ ಚರಿತ್ರೆಯಿಂದ ಹಿಡಿದು ಮುಖವರ್ಣಿಕೆ, ಕುಣಿತ, ಮದಿಪು, ಪಾಡ್ದನ, ಎಲ್ಲ ಬಿಟ್ಟು ಬಾರಣೆ(ಆಹಾರ ಸೇವನೆ)ಯ ಸ್ವರೂಪವೂ ಬದಲಾಗಿದೆ. ತುಳುನಾಡಿನ ದೈವಗಳ ಮೇಲೆ ಇತರೆ ಆಚರಣೆಗಳ ಹಿಡಿತ ತೀವ್ರವಾಗುತ್ತಿದೆ. ಇಲ್ಲಿನ ಯಕ್ಷಗಾನ ಮತ್ತು ಕೇರಳದ ‘ತೆಯ್ಯಂ’ಗಳ ಪ್ರಭಾವ ಇನ್ನೂ ಗಾಢವಾಗುತ್ತಿದೆ. ಕೆಲವು ದೈವಗಳಿಗೆ ಅಗತ್ಯಕ್ಕಿಂತ ಹೆಚ್ಚು ಮಾನ್ಯತೆ ಸಿಗುತ್ತಿದ್ದರೆ, ಹಲವು ದೈವಗಳ ಆರಾಧನೆ ಇಲ್ಲವಾಗಿವೆ. ಇದರಲ್ಲಿ ತುಳುನಾಡಿನ ಬೇಸಾಯ ಸಂಬಂಧೀ ದೈವಗಳೇ ಮುಖ್ಯವಾದುವುಗಳು.…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಮುಂಬಯಿಯ ಉದ್ಯಮಿ, ಒಕ್ಕೂಟದ ನಿರ್ದೇಶಕ ಸದಾಶಿವ ಕೆ ಶೆಟ್ಟಿ 50 ಲಕ್ಷ ರೂಪಾಯಿಗಳ ಅನುದಾನದ ಚೆಕ್ಕನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್ – ಸೌದಿ ಘಟಕದ ನೂತನ ಅಧ್ಯಕ್ಷರಾಗಿ ಸೌದಿ ಅರೇಬಿಯಾದಲ್ಲಿರುವ ಹಿರಿಯ ಕನ್ನಡಿಗ ಕರ್ನಿರೆ ಮಾಗಂದಡಿ ನರೇಂದ್ರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಘಟಕದ ಐದನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ನೇಮಕವಾಗಿದ್ದು, ನರೇಂದ್ರ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಘಟಕದ ಸಂಸ್ಥಾಪಕ ಅಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನೂತನ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ನಿಕಟಪೂರ್ವ ಅಧ್ಯಕ್ಷ ಶ್ರೀ ರಾಜೇಶ್ ಬಿ. ಶೆಟ್ಟಿ ನೂತನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು.
ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ತನ್ನ ಸಮಾನ ಮನಸ್ಕ ಅಭಿಮಾನಿ ಬಂಧುಗಳೊಂದಿಗೆ 2015 ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಟ್ರಸ್ಟ್, 8 ವರ್ಷಗಳಲ್ಲಿ ಸರಿಸುಮಾರು 11 ಕೋಟಿಗೂ ಅಧಿಕ ಮೊತ್ತವನ್ನು ವಿವಿಧ ಸೇವಾ ಯೋಜನೆಗಳಿಗಾಗಿ ವೆಚ್ಚ ಮಾಡಿರುತ್ತದೆ. ಈಗಾಗಲೇ ದೇಶ ವಿದೇಶಗಳಲ್ಲಿ ಒಟ್ಟು 38 ಘಟಕಗಳನ್ನು ಹೊಂದಿದ್ದು , ನವೆಂಬರ್ 2ನೇ ತಾರೀಕಿನಂದು 39ನೇ ಘಟಕವು ಗೋವಾದ ಪಣಜಿಯ ಇನ್ಸ್ಟಿಟ್ಯೂಟ್ ಮೆನೆಜಸ್ ಬ್ರಗಾನ್ಙಾ ಸಭಾಗೃಹದಲ್ಲಿ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಭಾರತ ಸರಕಾರದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ನಾಯ್ಕ್ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣ ರವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರು ವಹಿಸಿಕೊಳ್ಳಲಿದ್ದು, ಗೋವಾ ಘಟಕದ…
ನಟ ರೂಪೇಶ್ ಶೆಟ್ಟಿ ಕನ್ನಡದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಆ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಅಧಿಪತ್ರ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರ ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಯನ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ. ಸದ್ಯ ಬಿಗ್‌ಬಾಸ್ ಸೀಸನ್-9 ರಲ್ಲಿ ವಿಜೇತರಾಗಿರುವ ರೂಪೇಶ್ ಶೆಟ್ಟಿ ಇತ್ತೀಚೆಗೆ “ಸರ್ಕಸ್” ಎಂಬ ತುಳು ಚಿತ್ರವನ್ನು ನಿರ್ದೇಶಿಸಿ, ನಾಯಕರಾಗಿ ನಟಿಸಿದ್ದರು. ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ.
ಭಾರತಪ್ಪೆನ ಸಿರಿ ಮಟ್ಟೆಲ ಪುರು ತುಳುವಪ್ಪೆನ ಪಿರಿ ಪೆರ್ಮೆಡ್ ಪೊನ್ನಾಲ್ಮೆದ ಪರತಿರಿ ಪರಪೋಕು ಅಳಿದಾಂತೆ ಮೆರೆಪುನವು. ಬಿರ್ಮೆರೆ ಉಟಾರ್ನೆದ, ಗೆಲ್ಮೆದ ಉದಿಪುದ ಸಾಂಸ್ಕೃತಿಕ ಗದ್ದಿಗೆ ಒಂಜಿ ಪುಡೆಮಿ ಮೇಲ್‌ಡಿತ್ತ್ಂಡವು ತುಳುನಾಡೆನ್ಪಿ ಪುರಪುದ ಪಚ್ಚೆ ತುತ್ತಿ ಮೂಡಾಯಿ ಗಟ್ಟದ ಬರಿಡ್ದ್ ದುಡಿ ಕೊರ್ಪಿ ಪಡ್ಡಾಯಿ ಕಡಲ ಕರೆತ ಪುಣ್ಯ ಮಣ್ಣ್ ಪನ್ಪಿನೆಕ್ ಒವ್ವೆ ಪೊಸ ಗುರ್ತಾರ್ತ ಬೋಡುಂದಿಜ್ಜಿ. ದೈವೊ-ದೇಬೆರ್, ನಾಗೆ-ಬಿರ್ಮೆರ್, ಸಿರಿ-ಕುಮಾರೆರ್, ಬೀರಪುರ್ಸೆರ್ ಕಾತೊಂದು ಬರ್ಪಿ ಪೆರ್ಮೆದ ಬೂಡು. ಆಲೈಪು, ಆಚರಿಪು, ಆರಾದಿಪು, ಆನೊಯ್ಪುದ ನಿಲೆ, ಅಪ್ಪೆ ಕಟ್ಟ್, ತಮ್ಮಲೆನೊಟ್ಟು ಬದ್ಕ್ ಕಟ್ಟುನ ಪೊಲಿ ಪೊಲ್ಸುದ, ಪಲಿ ತಂಗಡಿಗ್ ದಲ್ಯೊ ಹಾಸ್‌ದ್ ಆದರಿಪುನ, ಕಲೆ-ಕಾರ್ನಿಕೊ ದಿಂಜಿದ್ ಉರ್ಕರುನ ಪೇರ ಪರಿಪುದ, ಸುದೆ-ಕಡಲ್, ಕಂಡೊ-ಕಾಂತರೊ, ಮಲೆ-ಬೈಲ್‌ಲ್ ಪೆರ್ಚಿದುಂತಿ ನಾಗನಡೆ, ಸರ್ಪಜಿಡೆ, ಪಂಚ ವರ್ನೊದ, ಪುಂಚೊದ ಸತ್ವೊ ದಿಂಜಿ ಮಣ್ಣ, ಬೀಜು ಗಾಲಿಗ್ ತರೆ ತೂಂಕುನ ಕಮ್ಮೆನ ದಿಂಜಿ ಬಾರರಿತ ಕುರಲ್‌ದ ಪೊರ್ಲ ನಾಡ್ ಸಿರಿಬಾರಿ ಲೋಕೆನ್ಪಿ ಪುಗರ್ತೆದ ತುಳುನಾಡ್. ತುಳುವ ಪರತಿರಿ ಪರಪೋಕುದಂಚಿ ಕಣ್ಣ್…
ಮುಂಬಯಿ ಮಹಾನಗರದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಹಿರಿಯ ಸಂಸ್ಥೆ ಬಂಟರ ಸಂಘ ಮುಂಬಯಿ. ಸುಮಾರು 96 ವರ್ಷಗಳ ಹೆಜ್ಜೆಯ ಪರಾಕ್ರಮದಲ್ಲಿ ದಾಪು ಕಾಲಲ್ಲಿ ಮುನ್ನಡೆಯುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕ್ರತಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿರುವ ಹೆಮ್ಮೆಯ ಮುಂಬಯಿ ಬಂಟರ ಸಂಘ ಮುಂಬಯಿ ತನ್ನ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದೆ. ಮುಂಬಯಿ ಬಂಟರ ಸಂಘದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಧ್ಯಕ್ಷರಾಗಿ ಸೇವೆಗೈದ ದಿ.ಡಾ. ವೆಂಕಟ್ ರಾವ್ ಶೆಟ್ಟಿಯವರಿಂದ ಹಿಡಿದು ಪ್ರಸಕ್ತ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿಯವರವರೆಗೆ ಸುಮಾರು 30 ಅಧ್ಯಕ್ಷರುಗಳನ್ನೊಳಗೊಂಡ ಬಂಟರ ಸಂಘವು ಬಂಟ ಭಾಂದವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸೇವೆಗೈಯ್ಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಬಂಟರ ಸಂಘವು ಮಹಾನಗರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆರಂಭದಲ್ಲಿ ಎರಡು ರಾತ್ರಿ ಶಾಲೆಗಳು ಆ ಬಳಿಕ ಪೊವಾಯಿಯಲ್ಲಿ ಎಸ್. ಎಮ್. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ , ಕುರ್ಲಾ ಪೂರ್ವದ ಬಂಟರ ಭವನದ ಸಮೀಪ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಂಟ…
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಹನುಮ ಜಯಂತಿ ಆಚರಣೆಯು ಎಪ್ರಿಲ್ 6 ರಂದು ಪುಣೆಯ ಸ್ವಾರ್ ಗೇಟ್ ನ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ ಲಕಾಕಿ ಹಾಲ್ ನಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು . ದೀಪ ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೈದು ಪುಣೆ ಬಳಗದ ಗೌರವಾಧ್ಯಕ್ಷರಾದ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮತ್ತು ವಿಬಾಗದ ಅಧ್ಯಕ್ಷೆ ಜಯಲಕ್ಷ್ಮಿ ಪಿ .ಶೆಟ್ಟಿ ಯವರು ಹನುಮ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು ,ನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದೆಸ್ಯೆಯರು ಹಾಗು ಬಳಗದ ಸದಸ್ಯರಿಂದ ,ದಾಮೋದರ ಬಂಗೆರರವರ ಮಾರ್ಗದರ್ಶನದಲ್ಲಿ ಬಳಗದ ಭಜನಾ ಮಂಡಳಿಯ ಭಜನೆ ನಡೆಯಿತು .ಸೇರಿದ ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲಿಸವನ್ನು ಪಠಿಸಿದರು ,ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಶ್ರೀ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ,ವೀಣಾ ಪಿ .ಶೆಟ್ಟಿ…
ಗುರ್ಮೆ ಸುರೇಶ್ ಶೆಟ್ಟರ ಬಗ್ಗೆ ಎಷ್ಟು ಬರೆದರೂ, ಮಾತಾಡಿದರೂ ಕಡಿಮೆ. ಸರ್ವರನ್ನೂ ಪ್ರೀತಿಯಿಂದ, ಆಪ್ತತೆಯಿಂದ ಮಾತಾಡಿಸುವ ಸುರೇಶಣ್ಣ ಒಂದು ರೀತಿಯಲ್ಲಿ ಹಸುವಿನಂತವರು ಅಥವಾ ಹಸುಗೂಸಿನಂತವರು. ಕೊಟ್ಟ ಕೊಡುಗೆಯ ನೆನಪಿಡದ ದಾನಿ ಸುರೇಶಣ್ಣ. ವಿಧಾನಸೌಧದ ವಿಧಾನ ಮಂಡಲದಲ್ಲಿ ಸುರೇಶಣ್ಣನಂತಹ ಜ್ಞಾನಿಗಳು, ವಾಕ್ಪಟುಗಳು, ಸಜ್ಜನರು ಇದ್ದಾಗಲೇ ಅದಕ್ಕೊಂದು ಗೌರವ. ನಿನ್ನೆ ಯಾರೋ ಕಾಪುವಿನಲ್ಲಿ ಜಾತಿ ಲೆಕ್ಕಾಚಾರದ ಬಗ್ಗೆ ಮಾತಾಡುತ್ತಿದ್ದರು. ನಾನು ಹೇಳಿದೆ ಸುರೇಶಣ್ಣನ ಜಾತಿಯೇ ಬೇರೆ, ಅವರದ್ದು ಮಾನವೀಯತೆಯ ಮೌಲ್ಯವನ್ನು ಒಪ್ಪಿ ಅಪ್ಪಿಕೊಂಡ ಜಾತಿ. ಅದು ಪಕ್ಷಾತೀತ ನೆಲೆಯಲ್ಲಿಯೂ ಚಾಚಿಕೊಂಡಿದೆ. ಕಾಪು ಸುರೇಶಣ್ಣನ ಹುಟ್ಟೂರು. ಕಾಪುವಿನ ಜನರಿಗೆ ಅದೊಂದು ಅಸ್ಮೀತೆ. ವಿನಯ್ ಕುಮಾರ್ ಸೊರಕೆ ಎಷ್ಟೇ ಆದರೂ ಪುತ್ತೂರಿನವರು. ಪುತ್ತೂರಿನ ಸೊರಕೆಯವರಿಗಿಂತ ಹುಟ್ಟೂರಿನ ಸುರೇಶಣ್ಣನನ್ನೇ ಕಾಪು ಕ್ಷೇತ್ರದ ಜನ ನೆಚ್ಚಿಕೊಳ್ಳುತ್ತಾರೆ. ಅಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸುರೇಶಣ್ಣನನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ. ಇಡೀ ಬಿಜೆಪಿ ಒಂದು ಕುಟುಂಬವಾಗಿ ಹಗಲಿರುಳು ಶ್ರಮಿಸುತ್ತಿದೆ. ಇನ್ನು ಜಾತಿ ಲೆಕ್ಕಕ್ಕೆ ಬರುವುದಾದರೆ ಅಲ್ಲಿ ಬಿಲ್ಲವ ಮತಗಳೇ ಮುಖ್ಯ. ಬಿಜೆಪಿ…
ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು. 1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ. ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು…