ಮಲಾಡ್ ಪೂರ್ವದ ತುಳು ಕನ್ನಡಿಗರು ಒಗ್ಗಟ್ಟಾಗಿ ಬೆಳೆದು ನಿಲ್ಲುವುದಕ್ಕೆ ಶ್ರೀ ವರಮಹಾಲಕ್ಷ್ಮಿ ಸಮಿತಿ ಪೂರಕ ಶಕ್ತಿಯಾಗಿದೆ. ಪರಿಸರದ ತುಳು ಕನ್ನಡಿಗರಲ್ಲಿ ಸಮಾಜ ಸೇವೆಯೊಂದಿಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಒಗ್ಗಟ್ಟಿನಿಂದ ಜಾತಿ, ಭಾಷೆಯನ್ನು ಬದಿಗೊತ್ತಿ ಶಿಸ್ತು ಬದ್ದವಾಗಿ ಎಲ್ಲಾ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇದು ಪೂಜಾ ಸಮಿತಿಯ 14 ವರ್ಷಗಳ ಸೇವಾ ಕಾರ್ಯಗಳ ಸಾಧನೆಯಾಗಿದೆ. ಪರಿಸರದ ಜನ ಸಾಮಾನ್ಯರೊಡನೆ ಪ್ರೀತಿ ವಿಶ್ವಾಸ ಗಳಿಸಿ ಅವರನ್ನೂ ಒಗ್ಗೂಡಿಸುವುದೇ ಒಂದು ಸಾಧನೆ. ಪ್ರತಿಯೊಬ್ಬನ ಬದುಕು ಧರ್ಮದ ಹಾದಿಯಲ್ಲಿ ನಡೆಯಲು ಪೂಜಾ ಕಾರ್ಯಗಳು ಪ್ರೇರಣಾ ಶಕ್ತಿಯಾಗಿದೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿ ಅವರು ನುಡಿದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ೧೪ ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ತಾ. ಅ. ೨೭ ರಂದು ಉತ್ಕರ್ಷ ವಿದ್ಯಾಮಂದಿರದ ಸಭಾಗ್ರಹ ದಪ್ತರಿ ರೋಡ್ ಮಲಾಡ್ ಪೂರ್ವ ಮುಂಬಯಿ ಇಲ್ಲಿ ಜರಗಿದ್ದು ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ದಾನಿಗಳನ್ನು ಗೌರವಿಸಿ ಮಾತನಾಡಿದ ಅವರು ನಮ್ಮ ಸಮಿತಿಯು ಆರ್ಥಿಕವಾಗಿ ಪ್ರಬಲವಾಗಿಲ್ಲವಾದರೂ ಇಲ್ಲಿ ಸೇರಿದ ಸಮಿತಿಯ ಎಲ್ಲಾ ಅಭಿಮಾನಿಗಳೇ ನಮ್ಮ ಸಮಿತಿಯ ಆಸ್ತಿ. ನಮ್ಮ ಮಹಿಳಾ ವಿಭಾಗವು ವರ್ಷಪೂರ್ತಿ ಅನೇಕ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸುತ್ತಾ ಬಂದಿದೆ. ಈ ಸಲದ ಪೂಜಾ ಕಾರ್ಯಕ್ರಮದಲ್ಲಿ ಚಂದ್ರಯಾನದ ಬಗ್ಗೆ ಸೆಲ್ಫಿ ಪೋಯಿಂಟ್ ನ್ನು ಇಡಬೇಕು ಎಂದಾಗ ಕೂಡಲೇ ಯುವ ವಿಭಾಗವು ಅದನ್ನು ಕಾರ್ಯರೂಪಕ್ಕೆ ತಂದಿದ್ದು ಇವರೆಲ್ಲರಿಂದ ನಮ್ಮ ಸಮಿತಿಯು ಶ್ರೀಮಂತವಾಗಿದೆ. ನಮ್ಮ ಉಪ ಸಮಿತಿಗಳ ಸಹಕಾರದಿಂದ ಕಾರ್ಯಾಕಾರಿ ಸಮಿತಿಯ ನಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಪೂಜಾ ಸಮಿತಿಯ ಸಂಸ್ಥಾಪಕ ಸದಸ್ಯ ಮಹಾಬಲ ಆರ್ ಪೂಜಾರಿ, ಓಂ ಶಿವ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್ ಇದರ ಧರ್ಮದರ್ಶಿ ಶಂಕರ್ ಸುವರ್ಣ ಸ್ವಾಮೀಜಿ ಇವರನ್ನು ಪರಿವಾರ ಸಮೇತ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ಸನ್ಮಾನ ಪತ್ರವನ್ನು ಶೋಭ ಲಕ್ಷ್ಮಣ ರಾವ್, ಗೀತ ಜಗನ್ನಾಥ್ ಮೆಂಡನ್ ವಾಚಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಿವ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್ ಇದರ ಧರ್ಮದರ್ಶಿ ಶಂಕರ್ ಸುವರ್ಣ ಸ್ವಾಮೀಜಿಯವರು ಮಾತನಾಡುತ್ತಾ ನಾನು ಧಾರ್ಮಿಕ ಕಾರ್ಯದಲ್ಲಿ ನಿರತನಾಗಿದ್ದರಿಂದ ಈ ತನಕ ಇಲ್ಲಿನ ಪೂಜೆಗೆ ಬರಲಾಗಲಿಲ್ಲ. ಇಲ್ಲಿನ ಕಾರ್ಯಕ್ರಮವನ್ನು ನೋಡಿದಾಗ ಇನ್ನು ಮುಂದೆಯಾದರೂ ಈ ಸಮಿತಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವೆನು. ನಮ್ಮಲ್ಲಿ ಧರ್ಮ ಜಾಗೃತವಾಗಬೇಕಿದ್ದರೆ ಭಗವಂತನ ನಾಮಸ್ಮರಣೆ ನಿರಂತರವಾಗಿರಬೇಕು. ಸಂಪತ್ತಿನ ಸ್ವಲ್ಪ ಪಾಲಾದರೂ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವಾಕಾರರ್ಯಗಳಿಗೆ ವಿನಿಯೋಗಿಸಬೇಕು ಎಂದು ಸನ್ಮಾನಕ್ಕೆ ಕೃತಜ್ನತೆ ಸಲ್ಲಿಸಿದರು.
ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಪೂಜೆಗೆ ಸಹಕಾರ ನೀಡಿದ ದಾನಿಗಳನ್ನು, ಪ್ರಾಯೋಜಕರಾಗಿ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಗೌರವಿಸಲಾಯಿತು. 10 ಮತ್ತು 12ನೇ ಹಾಗೂ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ಪರಿಸರದ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಶಿವಾನಿ ಪ್ರಭು ಅವರು ಮಕ್ಕಳ ಯಾದಿಯನ್ನು ವಾಚಿಸಿದರು. ಪರಿಸರದ ಎರಡು ಅಸಾಯಕ ಕುಟುಂಬಗಳಿಗೆ ಸಹಾಯ ಧನ ನೀಡಿ ಸಹಕರಿಸಲಾಯಿತು. ವೇದಿಕೆಯಲ್ಲಿ ಬಿಲ್ಲವರ ಅಸೋಷಿಯೇಶನ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂತೋಷ್ ಕೆ ಪೂಜಾರಿ, ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್ ಸಾಲಿಗ್ರಾಮ, ಉಪಾಧ್ಯಕ್ಷರಾದ ವಿ. ಕುಮರೇಶ್ ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್, ವೇದಮೂರ್ತಿ ರಮೇಶ್ ವಾಗ್ಲೆ ಡೊಂಬಿವಲಿ ಉಪಸ್ಥಿತರಿದ್ದರು.
ಮಹಿಳೆಯರಿಂದ ಭಜನೆ, ಪುರುಷರು, ಮಹಿಳೆಯರು ಮತ್ತು ಯುವ ವಿಭಾಗದ ಸದಸ್ಯರಿಂದ ಕುಣಿತ ಭಜನೆ ನಡೆಯಿತು. ವೇದಮೂರ್ತಿ ಶ್ರೀ ರಮೇಶ್ ವಾಗ್ಲೆ ಡೊಂಬಿವಲಿಯವರ ಪೌರೋಹಿತ್ಯದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಜೋಗೇಶ್ವರಿ ಶನಿ ಮಂದಿರದ ಪ್ರಧಾನ ಅರ್ಚಕರಾಗಿರುವ ವೈಕುಂಠ ಭಟ್, ಅವರು ಪೂಜಾ ವಿಧಿಯನ್ನು ನೆರವೇರಿಸಿದರು. ನೂರಾರು ಸುಮಂಗಲೆಯರು ಪೂಜೆಯಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ ಬಳಿಕ ಸಮಿತಿಯ ಸಲಹೆಗಾರರೂ ಅಭ್ಯುದಯ ಬ್ಯಾಂಕಿನ ಎಂ. ಡಿ. ಹಾಗೂ ಸಿಇಒ ಪ್ರೇಮನಾಥ್ ಎಸ್. ಸಾಲ್ಯಾನ್ ಇವರ ಪ್ರಾಯೋಜಕತ್ವದಲ್ಲಿ ಮಹಾ ಪ್ರಸಾದ ಅನ್ನ ಸಂತರ್ಪಣೆ ನಡೆಯಿತು. ಸಂಚಾಲಕರಾದ ಪತ್ರಕರ್ತ ಬಿ. ದಿನೇಶ್ ಕುಲಾಲ್ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ, ಸುರೇಂದ್ರ ಶೆಟ್ಟಿ ಹೊಸ್ಮಾರ್, ಸನತ್ ಪೂಜಾರಿ, ನಿತ್ಯಾನಂದ ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ, ಚಂದ್ರಶೇಖರ ಶೆಟ್ಟಿ, ಮೃತ್ಯುಂಜಯ ಪಲ್ಲಿ, ನಿತ್ಯಾನಂದ ಕೋಟ್ಯಾನ್, ನಿತ್ಯಾನಂದ ಪೂಜಾರಿ, ಲಕ್ಷ್ಮಣ್ ರಾವ್, ಶ್ರೀಪತಿ ಪಾಟ್ಕರ್, ಹರೀಶ್ ಶೆಟ್ಟಿ ಪೆರಾರ, ಸೀತಾರಾಮ ಅಮೀನ್, ಗೋಪಾಲ್ ಎಂ ಪೂಜಾರಿ, ಸುರೇಂದ್ರ ಶೆಟ್ಟಿ ಹೊಸ್ಮಾರು, ರಾಮ ಪೂಜಾರಿ, ಜಯ ಪೂಜಾರಿ, ಸೋಮನಾಥ್ ವಾಗ್ಲೆ, ಶಶಿಧರ ಹೆಗ್ದೆ, ಗೋಪಾಲ ಶೆಟ್ಟಿಗಾರ್, ರಘುರಾಮ್ ನಾಯಕ್, ಯೋಗೇಶ್ ಬಂಗೇರ, ಪ್ರತೀಕ್ ಜೆ. ಶೆಟ್ಟಿ, ಹರೀಶ್ ಪೂಜಾರಿ ಕಾರ್ನಾಡ್, ದಿನೇಶ್ ಕಾಮತ್, ಸದಾನಂದ ರಾವ್, ಸೂರಪ್ಪ ಕುಂದರ್, ಉಮೇಶ್ ಸಿ ಪೂಜಾರಿ, ಲಕ್ಷಣ ರಾವ್, ಈಶ್ವರ ಕುಲಾಲ್, ಸದಾನಂದ ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಉಪಕಾರ್ಯಾಧ್ಯಕ್ಷರುಗಳಾದ ಲಲಿತ ಎಸ್ ಗೌಡ, ಗೀತಾ ಜೆ. ಮೆಂಡನ್, , ಕೋಶಾಧಿಕಾರಿ ಶೀಲಾ ಎಂ ಪೂಜಾರಿ, ಜೊತೆ ಕೋಶಾಧಿಕಾರಿ ನಳಿನಿ ಕರ್ಕೇರ, ಜಯಲಕ್ಷ್ಮಿ ನಾಯಕ್, ಜೊತೆ ಕಾರ್ಯದರ್ಶಿ ಶೋಭ ರಾವ್, ಸಲಹಾ ಸಮಿತಿಯ ಸದಸ್ಯರಾದ ಭಾರತಿ ವಾಗ್ಲೆ, ಮೋಹಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಕೋಶಾಧಿಕಾರಿ ದಿಶಾ ಕರ್ಕೇರ, ಸಂಚಾಲಕ ಡಾ. ಸಶಿನ್ ಆಚಾರ್ಯ ಉಪ ಕಾರ್ಯಾಧ್ಯಕ್ಷರುಗಳಾದ ಯೋಗೇಶ್ವರಿ ಗೌಡ, ದಿವ್ಯ ಪೂಜಾರಿ ಅಮೀನ್, ನವೀನ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಜೊತೆ ಕಾರ್ಯದರ್ಶಿ ಪವನ್ ರಾವ್, ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ಪ್ರಣಿತಾ ಶೆಟ್ಟಿ, ಸಾಮಾಜಿಕ ಮಾಧ್ಯಮ ಉಸ್ತುವಾರಿಗಳಾದ ಹರ್ಷ ಕುಂದರ್, ನಿಧಿ ನಾಯಕ್ ಮತ್ತು ಇತರ ಸದಸ್ಯರು ಸಹಕರಿಸಿದ್ದರು.
ಪೂಜೆಯ ಮೂಲಕ ಪರಿಸರದ ಯುವ ಸಮುದಾಯ ಒಗ್ಗಟ್ಟಾಗಿದೆ : ಸಿಎ ಸುರೇಂದ್ರ ಕೆ ಶೆಟ್ಟಿ
ಪೂಜೆಯ ಪ್ರಾರಂಭಕ್ಕಿಂತ ಮೊದಲು ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಸಿ ಎ ಸುರೇಂದ್ರ ಶೆಟ್ಟಿ ಅವರು ಈ ಪರಿಸರದಲ್ಲಿ ಎಲ್ಲಾ ಸಮಾಜ ಬಾಂಧವರು ಪ್ರೀತಿ ವಾತ್ಸಲ್ಯದಿಂದ ಧಾರ್ಮಿಕ ಸೇವೆಯನ್ನು ಮಾಡುತ್ತಾ ಯುವ ಸಮುದಾಯವನ್ನು ಧಾರ್ಮಿಕ ಸೇವೆ ಮಾಡುವುದಕ್ಕೆ ಸ್ಪೂರ್ತಿ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ. ಯುವ ಜನಾಂಗಕ್ಕೆ ಸನಾತನ ಧರ್ಮದ ಜಾಗೃತಿಯ ತಿಳಿಯಪಡಿಸುವುದು ಅಗತ್ಯವಿದೆ ಎಂದು ನುಡಿದರು.