ಬಂಟ ಸಮಾಜದಲ್ಲಿ ಹುಟ್ಟಿ ಬಡತನದ ಬೇಗುದಿಯಲ್ಲಿ ದಿನ ಕಳೆಯುತ್ತಿರುವ ಬಡಕುಟುಂಬ ಪ್ರಸ್ತುತ ಕಟಪಾಡಿ ಏಣಗುಡ್ಡೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ಶ್ರೀಮತಿ ಮೂಕಾಂಬಿಕಾ ಶೆಟ್ಟಿ ದಂಪತಿಗಳು ಬದುಕಿನ ಕ್ಷಣಕ್ಷಣವೂ ಕಷ್ಟದಲ್ಲಿ ಕಾಲ ಕಳೆಯುತ್ತಿತ್ತು. ಈ ಕುಟುಂಬ ಪರಿಸರದ ಮನೆಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಕಷ್ಟದ ಬದುಕನ್ನು ಕಟ್ಟಿಕಕೊಂಡಿದ್ದರು. ಹೀಗಿರುವಾಗ ಚಂದ್ರಶೇಖರ ಶೆಟ್ಟಿ ಅವರು ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬಿದ್ದು ಮೊಣಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಬಲುದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭ ಒದಗಿ ಬಂತು. ಅಂತೂ ಇಂತೂ ಇದ್ದವರನ್ನು ಕಾಡಿ-ಬೇಡಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವ ಕುಟುಂಬದ ಪರಿಸ್ಥಿತಿಯನ್ನು ಕಂಡವರು ಈ ವಿಷಯ ಮತ್ತು ಪರಿಸ್ಥಿತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟರ ಗಮನಕ್ಕೆ ತಂದರು.
ತಕ್ಷಣವೇ ಕಾರ್ಯ ಪ್ರವೃತ್ತರಾದ ಹರೀಶ್ ಶೆಟ್ಟರು ಮನೋಹರ ಶೆಟ್ಟಿ ತೋನ್ಸೆ ಇವರನ್ನು ಸಂಪರ್ಕಿಸಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದರು. ಮನೋಹರ್ ಶೆಟ್ಟಿಯವರು ಸಂತೋಷ್ ಶೆಟ್ಟಿ ಚೊಕ್ಕಾಡಿ ಅವರನ್ನು ಜೊತೆಯಾಗಿ ಸಿಕೊಂಡು ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ತಿಳಿಸಿದ ಕ್ಷಣ ಮಾತ್ರದಲ್ಲಿ ಆ ಬಡ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ರೂಪಾಯಿ 25,000 ವನ್ನು ನೀಡುವಂತೆ ತಿಳಿಸಿದರು. ಮಾತ್ರವಲ್ಲದೆ ಈ ಕುಟುಂಬಕ್ಕೆ ಪ್ರತಿ ತಿಂಗಳು ಖರ್ಚು ವೆಚ್ಚಕ್ಕಾಗಿ ರೂ 5000 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಿಗುವಂತೆ ವ್ಯವಸ್ಥೆಯನ್ನು ಕೂಡಾ ಮಾಡಿದರು. ಕಣ್ಣೀರು ಒರೆಸುವ ಕಾರ್ಯಕ್ಕಾಗಿ ಐಕಳ ಹರೀಶ್ ಶೆಟ್ರಿಗೆ ಬಡ ಕುಟುಂಬ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.