Author: admin
ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಹಿರಿಯ ಸಾಹಿತಿ, ಸಹಕಾರಿ ರತ್ನ ಪ್ರಶಸ್ತಿ ವಿಜೇತರಾದ ದಂಬೆಕ್ಕಾನ ಸದಾಶಿವ ರೈ ಯವರ ರಚಿಸಿದ ‘ಬಂಟ ಮದುವೆ’ ಎಂಬ ಪುಸ್ತಕ ರಚನೆಗಾಗಿ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಂಟರ ಆಚಾರ, ವಿಚಾರಗಳನ್ನು ಸಮಾಜಕ್ಕೆ ಪರಿಚಯಿಸುವ ಮಾಹಿತಿಯನ್ನೊಳಗೊಂಡ ‘ಬಂಟ ಮದುವೆ’ ಪುಸ್ತಕ ಸಮಾಜಕ್ಕೆ ನೀಡಿದ ಉತ್ತಮ ಕೊಡುಗೆ ಎನ್ನುವ ಕಾರಣಕ್ಕೆ ಅವರನ್ನು ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕರಾದ ಕಾವು ಹೇಮಾನಾಥ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.
ಬಂಟರ ಸಂಘ ಪುತ್ತಿಗೆ ನೇತೃತ್ವದಲ್ಲಿ ‘ಆಟಿದ ಕೂಟ’ ಕಾರ್ಯಕ್ರಮವು ಪುತ್ತಿಗೆ ಎಜೆಬಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹೇರಂಬ ಇಂಡಸ್ಟ್ರಿಸ್ ಮುಂಬಯಿ ಇದರ ಸಿಎಂಡಿ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತನಾಡಿ, ತುಳುನಾಡಿನ ಸಾಂಸ್ಕೃತಿಕತೆಯನ್ನು ಈ ಆಟಿದ ಕೂಟದಲ್ಲಿ ಅನಾವರಣ ಮಾಡಿದ್ದು, ತುಂಬಾ ಸಂತಸದ ವಿಚಾರವಾಗಿದೆ. ಬಂಟ ಸಮಾಜವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಬಂಟರ ಸಂಘ ಬಹುಮುಖ್ಯವಾಗಿದೆ ಎಂದರು. ಇದೇ ವೇಳೆ ಬಂಟ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಗ್ರಾಮದ ಅಜಲು ದೈವ ನರ್ತಕರಿಂದ ‘ಆಟಿ ಕಳಂಜ’ ನರ್ತನ ನಡೆದಿದ್ದು, ಇದು ಕಾರ್ಯಕ್ರಮದ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವಿದ್ಯಾಗಿರಿ: ಮಣಿಪುರದಲ್ಲಿ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಯಿತು. ಕಾಲೇಜಿನಲ್ಲಿ ನಡೆದ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಸಂಗ್ರಹಿಸಿದ ಸುಮಾರು 1 ಲಕ್ಷ ರೂಪಾಯಿಯನ್ನು ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ (ಮೊಯಿರಾಂಗ್ ನ್ಯಾಯವ್ಯಾಪ್ತಿಯಲ್ಲಿರುವ ಕುಂಬಿ ಪ್ರದೇಶ), ತೌಬಲ್ ಜಿಲ್ಲೆ ಮತ್ತು ಕಾಕ್ಚಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು. 7 ಪರಿಹಾರ ಶಿಬಿರಗಳಿಗೆ ತಲಾ 10 ಸಾವಿರ ರೂಪಾಯಿ, 2 ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ 10 ಸಾವಿರ ರೂಪಾಯಿ ಮತ್ತು 3 ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್ ಬ್ರಷ್, ಮಸೂರ, ನೀರಿನ ಬಾಟಲಿ ಇತ್ಯಾದಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜರುಗಿದ ಆಳ್ವಾಸ್ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಹತ್ತಕ್ಕೂ ಅಧಿಕ ಆಹಾರ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಆ ಸಂಧರ್ಭದಲ್ಲಿ ವಿವಿಧ ಮಳಿಗೆಗಳಿಂದ ಗಳಿಸಿದ ಲಾಭವನ್ನು ಒಟ್ಟು ಗೂಡಿಸಿ ಮಣಿಪುರ ಸಂತ್ರಸ್ತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗಿದೆ.…
ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ವಿಚಾರಗೋಷ್ಠಿಯು ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹ, ಬಾವುದಾಜಿ ರಸ್ತೆ, ಮಾಟುಂಗಾ ಪೂರ್ವ ಮುಂಬಯಿ ಇಲ್ಲಿ ಜೂನ್ 10 ರಂದು ಶನಿವಾರ ಸಂಜೆ 4 ಗಂಟೆಯಿಂದ ನಡೆಯಲಿದೆ. ಅಂದು ಮುಖ್ಯ ಅತಿಥಿಯಾಗಿ ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಆಗಮಿಸಲಿದ್ದಾರೆ. ಕಥಾ ಸಾಹಿತ್ಯದಲ್ಲಿ ಮಹಿಳಾ ಚಿತ್ರಣ ಎಂಬ ವಿಚಾರಗೋಷ್ಠಿಯ ವಿಷಯ ಮಂಡನೆಗೆ ಇಂಗ್ಲಿಷ್ ಕಥೆಗಳ ಬಗ್ಗೆ ಶ್ಯಾಮಲಾ ಮಾಧವ ಸಾಹಿತಿ, ಖ್ಯಾತ ಅನುವಾದಕಿ, ತಮ್ಮ ಅನುಭವದ ಸಾರವನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ ಕಥೆಗಳಲ್ಲಿನ ಒಳ ಹೊರನೋಟದ ಬಗ್ಗೆ ಸಾ. ದಯಾ ಕವಿ, ಸಾಹಿತಿ, ರಂಗನಿರ್ದೇಶಕ, ನಟ ಮಾತನಾಡಲಿದ್ದಾರೆ. ಮರಾಠಿ ಕಥೆಗಳಲ್ಲಿನ ವಿಚಾರ ವಿಷಯಗಳನ್ನು ಕನ್ನಡ ಮರಾಠಿ ಸಾಹಿತಿ, ಖ್ಯಾತ ಅನುವಾದಕಿ ಅಕ್ಷತಾ ಪ್ರಸಾದ್ ದೇಶಪಾಂಡೆ ವಿಷಯ ಮಂಡಿಸಲಿದ್ದಾರೆ. ಸಾಹಿತ್ಯ ಹಾಗೂ ಕನ್ನಡ ಅಭಿಮಾನಿಗಳಿಗೆ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆದರದ ಸ್ವಾಗತ ಕೋರಿದೆ.
ನಾಗರ ಹಾವಿನ ಕಡಿತಕ್ಕೆ ಒಳಗಾದ ತಾಯಿಗೆ ಪುತ್ರಿಯೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಅಪರೂಪದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಕೂಡ ಆಗಿರುವ ಶ್ರಮ್ಯಾ ರೈ ಈ ಸಾಹಸಿ. ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆ, ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಾಯಿಯಿಂದಲೇ ವಿಷ ಹೀರಿದಳು! ಕೆಯ್ಯೂರಿನ ತನ್ನ ಮನೆಯ ಸನಿಹದಲ್ಲೇ ಇರುವ ತಾಯಿ ಮನೆಗೆ ಶ್ರಮ್ಯಾಳ ತಾಯಿ, ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಹೋಗಿದ್ದರು. ಅಲ್ಲಿ ಪಂಪ್ ಸ್ವಿಚ್ ಹಾಕಲೆಂದು ಮಮತಾ ರೈ ಅವರು ತೋಟಕ್ಕೆ ತೆರಳಿದ್ದರು. ಸ್ವಿಚ್ ಹಾಕಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿ ನಾಗರಹಾವನ್ನು ತುಳಿದಿದ್ದು, ಹಾವು ಅವರಿಗೆ ಕಚ್ಚಿತ್ತು. ಅವರು ತತ್‌ಕ್ಷಣ ಮನೆಗೆ ಮರಳಿ ಕೆಲಸದಾಳಿನ ಸಹಾಯದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಬೈ ಹುಲ್ಲು ಕಟ್ಟಿದ್ದರು.…
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕುಂಭಾಭಿಷೇಕ ಜರಗಲಿದ್ದು, ಈ ಹಿನ್ನೆಲೆಯಲ್ಲಿ ಹೊರಕಾಣಿಕೆ ಸಮರ್ಪಣೆ ಜರಗಿತು. ಶ್ರೀ ಕ್ಷೇತ್ರ ಕಮಲಶಿಲೆಯ ಕೂಡುವಳಿಕೆಯ ವಿವಿಧ ಗ್ರಾಮಗಳಿಂದ ಭಕ್ತರು ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಿದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಅವರು ಕ್ಷೇತ್ರದಲ್ಲಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಹ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರು ಭಟ್, ಅರ್ಚಕರು, ಸಿಬಂದಿ ಉಪಸ್ಥಿತರಿದ್ದರು. ಮಾ. 17ರ ಶುಕ್ರವಾರ ಬೆಳಗ್ಗೆ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹದಿಂದ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಪೂರ್ವಾಹ್ನ 9.30ಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಗಮನ. ಪೂರ್ಣಕುಂಭ ಸ್ವಾಗತ. 10.30ಕ್ಕೆ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರಿಂದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕುಂಭಾಭಿಷೇಕ. ಮಹಾಪೂಜೆ. 11ಕ್ಕೆ ಸಭಾ…
ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗ ಮಂಗಳೂರು ಕೇಂದ್ರ ಸ್ಥಳದಲ್ಲಿತ್ತು. ಆದರೆ ಈಗ ಉಡುಪಿ ಪ್ರತ್ಯೇಕ ಜಿಲ್ಲೆಯಾದ ಮೇಲೆ ಮಂಗಳೂರು ಜಿಲ್ಲಾ ಕೇಂದ್ರವಾಗಿಯೇ ಉಳಿದಿದ್ದರೂ ಅದು ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿರದೆ ದಕ್ಷಿಣ ಕನ್ನಡದ ಒಂದು ಮೂಲೆಯಲ್ಲಿದೆ. ಹಾಗಾಗಿ ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳ ಅಂಚಿನಲ್ಲಿರುವ ಹಳ್ಳಿಗಳ ಜನಗಳಿಗೆ ಮಂಗಳೂರಿನ ಜಿಲ್ಲಾ ಸರಕಾರೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವುದು ಕಷ್ಟವಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಆಸ್ಪತ್ರೆಯು ಬಹಳ ದೊಡ್ಡದಾಗಿದ್ದು ಸಾವಿರ ಹಾಸಿಗೆಗಳ ಸೌಲಭ್ಯ ಹೊಂದಿದೆ. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಇದೇ ವೆನ್ಲಾಕ್ ಆಸ್ಪತ್ರೆ ಟೀಚಿಂಗ್ ಹಾಸ್ಪಿಟಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ಸರ್ಕಾರೀ ಸಾರ್ವಜನಿಕ ಆಸ್ಪತ್ರೆಯೆಂದರೆ ಅದು ಪುತ್ತೂರಿನ ಆಸ್ಪತ್ರೆಯೇ..! ಲೆಕ್ಕದಲ್ಲಿ ಇದನ್ನು ಎರಡನೆಯ ಅತೀ ದೊಡ್ಡ ಆಸ್ಪತ್ರೆ ಅಂತ ಕರೆಯಬಹುದೇ ವಿನಃ ಗಾತ್ರದಲ್ಲಾಗಲೀ, ಸೌಲಭ್ಯಗಳಲ್ಲಾಗಲೀ ನಮ್ಮ ಪುತ್ತೂರಿನ ಸರಕಾರೀ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯ ಹತ್ತನೇ ಒಂದು ಭಾಗದಷ್ಟೂ…
ಬೈಂದೂರು-ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ನಡೆದ ಕಾಲೇಜು ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ “ಯುವಕರು ಸಮಯ ಪಾಲನೆಯ ಮಹತ್ವವನ್ನು ಅರಿಯಬೇಕು. ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಜೀವನವನ್ನು ಮುನ್ನಡೆಸಬೇಕು” ಎಂದು ಹೇಳಿದರು. ಈ ಸಂದರ್ಭ ಬೈಂದೂರು ಅಂಜಲಿ ಹಾಸ್ಪಿಟಲ್ ನ ಡಾ.ಅಣ್ಣಪ್ಪ ಶೆಟ್ಟಿ, ಹರ್ಷ ಮಾಡರ್ನ್ ಡಯಾಗ್ನೊಸ್ಟಿಕ್ಸ್ ಸರ್ವಿಸಸ್ ಮಂಗಳೂರು ಆಡಳಿತ ನಿರ್ದೇಶಕರಾದ ಡಾ.ಪ್ರಿಯದರ್ಶಿನಿ, ಉಪ ಅರಣ್ಯಾಧಿಕಾರಿ ಶ್ರೀಧರ್.ಪಿ,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಡಾ. ರವಿ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಬೈಂದೂರು, ಉಪ ಪ್ರಾಂಶುಪಾಲ ಶ್ರೀ ಪದ್ಮನಾಭ, ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಜೆ.ಕೈರಣ್ಣ ಹೊನ್ನಾವರ, ಪ್ರಾಂಶುಪಾಲರಾದ ಶ್ರೀ ಮಂಜುನಾಥ ನಾಯಕ್ ಉಪಸ್ಥಿತರಿದ್ದರು.
ಹಿಂದೆ ಬ್ರಾಹ್ಮ ಪುರೋಹಿತರಿಲ್ಲದೆ ಯೇ ಬಂಟರ ಗುತ್ತಿನಾರರ ಮುಂದಾಳತ್ವದಲ್ಲಿ ಇಂತಹ ಮದುವೆಗಳು ನಡೆಯುತ್ತಿತ್ತು. ಮದುವೆಯ ಮೊದಲು ಮನೆಯಲ್ಲಿ ಮುರ್ತ ನಡೆಯುತ್ತಿತ್ತು. ಆಗ ಗುತ್ತಿನಾರರ ಮಡದಿ ಅಥವಾ ವಧುವಿನ ಸೋದರತ್ತೆ ಹುಡುಗಿಯ ಕೊರಳಿಗೆ ಕರಿಮಣಿ ಹಾಕಿ ಕಾಲಿಗೆ ಕಾಲುಂಗುರ ಇಟ್ಟು ಕೈಬೆರಳಿಗೆ ಒಡ್ಡಿ ಉಂಗುರ ತೊಡಿಸುತ್ತಿದ್ದಳು. ಬಂಟರ ಮದುವೆಗಳಿಗೆ ಪುರೋಹಿತರ ಪ್ರವೇಶ ಇರುತ್ತಿರಲಿಲ್ಲ. ಯಾವುದೇ ವೈದಿಕ ಶಾಸ್ತ್ರಗಳು ಇರುತ್ತಿರಲಿಲ್ಲ. ಬ್ರಾಹ್ಮಣರೂ ಶೂದ್ರರ ವಿವಾಹದಲ್ಲಿ ಪೌರೋಹಿತ್ಯ ವಹಿಸುತ್ತಿರಲಿಲ್ಲ. ಆಗ ನಡೆಯುತ್ತಿದ್ದುದು ಬಂಟ ಮದುವೆ. ಬಂಟ ದಾರೆ ಎಂದೂ ಹೇಳುತ್ತಾರೆ. ವಧು ಹಾಗೂ ವರನ ಬಲಗೈ ಹೆಬ್ಬೆರಳನ್ನು ಹೆಣೆದು ಜೊತೆಯಾಗಿ ಅವರು ಭೂಮಿಯನ್ನು ಮುಟ್ಟಿ ಬೇಕು. ಹೀಗೆ ಮೂರು ಬಾರಿ ಭೂಮಿ/ಮಣ್ಣು ಮುಟ್ಟಿ ಈ ವಿವಾಹಕ್ಕೆ ಭೂಮಿಯನ್ನು ಸಾಕ್ಷಿಯನ್ನಾಗಿಸಬೇಕು. ಮುಂದೆ ಬದಲಾದ ಕಾಲಘಟ್ಟದಲ್ಲಿ ಬ್ರಾಹ್ಮಣ ಪುರೋಹಿತರ ಪ್ರವೇಶ ಆಗುತ್ತದೆ. ಆರಂಭದ ದಿನಗಳಲ್ಲಿ ಪುರೋಹಿತರೂ ಬಂಟರ ಮದುವೆಗೆ ಭೂಮಿಯನ್ನು ಸಾಕ್ಷಿಯನ್ನಾಗಿಸುತ್ತಿದ್ದರು. ಬಂಟರು ಪೃಥ್ವೀ ಪೂಜಕರು ಕ್ಷೇತ್ರ ರಕ್ಷಕರು ಮತ್ತು ಕ್ಷೇತ್ರ ಕಕ್ಷಕರು. ಹೀಗಾಗಿ ಅವರಿಗೆ ಭೂಮಿಯ ಸಾಕ್ಷಿ…
ಬಂಟರ ಸಂಘ ಬೆಂಗಳೂರು ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ್ ರೈ ಅವರಿಗೆ ದಿ. ಡಾ ಜೀವರಾಜ್ ಆಳ್ವ ಸದ್ಧಾವನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಶುಭ ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಉಪಾಧ್ಯಕ್ಷ ಭೋಜರಾಜ್ ಶೆಟ್ಟಿ, ಕಾರ್ಯದರ್ಶಿ ಮಧುಕರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಅಬುಧಾಭಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.