ಪುತ್ತೂರು ತಾಲೂಕು ಯುವ ಬಂಟರ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ಡಾ. ಹರ್ಷಕುಮಾರ್ ರೈ ಮಾಡಾವು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ರಂಜಿನಿ ಶೆಟ್ಟಿ ಮತ್ತು ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿಯಾಗಿ ಶಿವಶ್ರೀ ರಂಜನ್ ರೈ ದೇರ್ಲ ಆಯ್ಕೆಗೊಂಡಿದ್ದಾರೆ. ಫೆ.15 ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಂತೆ ಈ ಆಯ್ಕೆಯನ್ನು ಸಂಘದ ಸಲಹೆಗಾರ ಚುನಾವಣಾಧಿಕಾರಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಚುನಾವಣಾಧಿಕಾರಿಯವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು. ಜೊತೆ ಕಾರ್ಯದರ್ಶಿಯಾಗಿ ಶುಭಾ ರೈ, ಸಂಘಟನಾ ಸಂಚಾಲಕರಾಗಿ ಸಂದೇಶ್ ರೈ ಡಿ, ಧಾರ್ಮಿಕ ಸಂಚಾಲಕರಾಗಿ ಮನ್ಮಥ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪುತ್ತೂರು ನಗರ ವಲಯದ ನಿಹಾಲ್ ಪಿ ಶೆಟ್ಟಿ, ಉಪ್ಪಿನಂಗಡಿ ವಲಯದ ಸತೀಶ್ ಎನ್ ಶೆಟ್ಟಿ, ಪಾಣಾಜೆ ವಲಯದ ಜಿ.ಕೆ. ಕಾರ್ತಿಕ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ನೆಟ್ಟಣಿಗೆ ಮುಡ್ನೂರು, ಕಡಬ, ಬೆಳಂದೂರು, ನೆಲ್ಯಾಡಿ ವಲಯಕ್ಕೆ ಹಾಗೂ 9 ಮಂದಿ ಸಂಘಟನಾ ಕಾರ್ಯದರ್ಶಿಗಳು, 9 ಮಂದಿ ಸಹ ಕಾರ್ಯದರ್ಶಿಗಳು (ಮಹಿಳೆಯರಿಗೆ ಮಾತ್ರ), ಹಾಗೂ 9 ಮಂದಿ ಸಂಚಾಲಕರನ್ನು ಹೊಸ ಸಮಿತಿ ಸಭೆಯಲ್ಲಿ ವಲಯವಾರು ಪ್ರಾತಿನಿಧ್ಯದನ್ವಯ ನೇಮಕ ಮಾಡಬೇಕಾಗಿದ್ದು, ಅದನ್ನು ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ. ಫೆ. 14 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಫೆ.15 ರಂದು ಬೆಳಿಗ್ಗೆ ನಾಮಪತ್ರ ಪರಿಶೀಲನೆ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.
ತಾಲೂಕು ಯುವ ಬಂಟರ ಸಂಘದ ನೂತನ ಅಧ್ಯಕ್ಷ ಪದಾಧಿಕಾರಿಗಳನ್ನು ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಿತ ಸಂಘದ ಹಿರಿಯರು ಹೂಗುಚ್ಛ ನೀಡುವ ಮೂಲಕ ಗೌರವಿಸಿದರು. ಈ ಸಂದರ್ಭ ಬಂಟರ ಮಾತೃ ಸಂಘದ ಸಹ ಸಂಚಾಲಕ ಜಯಪ್ರಕಾಶ್ ರೈ, ತಾಲೂಕು ಬಂಟರ ಸಂಘದ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಮಹಿಳಾ ಸಂಘದ ಮಾಜಿ ಕೋಶಾಧಿಕಾರಿ ವತ್ಸಲಾ ಪಿ ಶೆಟ್ಟಿ, ಗೌತಮ್ ರೈ ಸಾಂತ್ಯ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಯುವ ಬಂಟರ ಸಂಘದ ರವಿಪ್ರಸಾದ್ ಶೆಟ್ಟಿ, ರವಿಚಂದ್ರ ರೈ ಕುಂಬ್ರ, ಭಾಸ್ಕರ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಸಂತಾಪ:
ಫೆ.14 ರಂದು ನಿಧನರಾದ ಸಂಘದ ಪದಾಧಿಕಾರಿಯಾಗಿದ್ದ ಕರುಣಾಕರ್ ರೈ ಬಾಲ್ಯೊಟ್ಟು ಫೆ.15 ರಂದು ನಿಧನರಾದ ಹಿನ್ನಲೆಯಲ್ಲಿ ಸಂಘದ ವತಿಯಿಂದ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.