ಪ್ರತಿ ವರ್ಷದಂತೆ ಈ ವರ್ಷವೂ ಕಂಬಳ ಪ್ರಿಯರು ಕಾತರದಿಂದ ನಿರೀಕ್ಷಿಸುವ ಕಟಪಾಡಿ ಬೀಡು ಪಡುಕರೆ ಮೂಡುಕರೆ ಜೋಡು ಕರೆ ಕಂಬಳವು ಇದೇ ಬರುವ 24.2.2024 ರಂದು ಕಟಪಾಡಿ ಬೀಡು ಕಂಬಳ ಗದ್ದೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭಗೊಂಡು ಜಿಲ್ಲೆಯ ಪ್ರತಿಷ್ಠಿತ ಮನೆತನಗಳ ಹಾಗೂ ಬಲು ಪ್ರಸಿದ್ಧಿ ಪಡೆದ ಓಟದ ಕೋಣಗಳ ಯಜಮಾನರ ಭಾಗವಹಿಸುವಿಕೆಯಲ್ಲಿ ವಿಜೃಂಭಣೆಯಿಂದ ಜರಗಲಿದೆ.
ಇದರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಕಟಪಾಡಿ ಬೀಡು ಗೋವಿಂದ ದಾಸ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಜರುಗಲಿದ್ದು ಜಿಲ್ಲಾ ಲಯನ್ ಗವರ್ನರ್ ಡಾ. ಎ. ರವೀಂದ್ರನಾಥ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು ಉಳಿದಂತೆ ಡಾ.ಕೆ ವಿದ್ಯಾ ಕುಮಾರಿ IAS ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ ಕರ್ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ಸರಕಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಮಾನ್ಯ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ, ಯಶಪಾಲ್ ಎ ಸುವರ್ಣ ಮಾನ್ಯ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ, ವಿ. ಸುನೀಲ್ ಕುಮಾರ್ ಮಾನ್ಯ ಶಾಸಕರು ಕಾರ್ಕಳ ವಿಧಾನಸಭಾ ಕ್ಷೇತ್ರ, ಶ್ರೀ ಗುರುರಾಜ್ ಗಂಟಿಹೊಳೆ ಬೈಂದೂರು ವಿಧಾನಸಭಾ ಕ್ಷೇತ್ರ, ಶ್ರೀ ಉಮಾನಾಥ ಕೋಟ್ಯಾನ್ ಮಾನ್ಯ ಶಾಸಕರು ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ, ಶ್ರೀ ಅಶೋಕ್ ರೈ ಮಾನ್ಯ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಡಾ.ಭರತ್ ಶೆಟ್ಟಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರು, ರಾಜೇಶ್ ನಾಯ್ಕ್ ಮಾನ್ಯ ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಶ್ರೀ ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರು, ಶ್ರೀ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ಸರಕಾರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ಉಳಿದಂತೆ ವಿಶೇಷ ಆಹ್ವಾನಿತರಾಗಿ ಡಾ.ಎಂ ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಮಾರಾಟಗಾರ ಮಹಾ ಮಂಡಲ ಬೆಂಗಳೂರು, ಕಿಶೋರ್ ಆಳ್ವ ಅಧ್ಯಕ್ಷರು ಆದಾನಿ ಫೌಂಡೇಷನ್ ದಕ್ಷಿಣ ಭಾರತ, ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯದರ್ಶಿ ಬಿಜೆಪಿ ಕರ್ನಾಟಕ, ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷರು ಜಿಲ್ಲಾ ಕಂಬಳ ಸಮಿತಿ, ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡ ಕಾರ್ಯದರ್ಶಿ ಜಿಲ್ಲಾ ಕಂಬಳ ಸಮಿತಿ, ಮಟ್ಟಾರ್ ರತ್ನಾಕರ ಹೆಗ್ಡೆ ಮಾಜಿ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸಮಿತಿ, ರವಿ ಶೆಟ್ಟಿ ಸಿಎಂಡಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಮುಂಬಯಿ, ಪ್ರಕಾಶ್ ಶೆಟ್ಟಿ ಅಧ್ಯಕ್ಷರು ಎಂಆರ್ ಜಿ ಗ್ರೂಪ್ಸ್ ಬೆಂಗಳೂರು, ಕರುಣಾಕರ ಶೆಟ್ಟಿ ಆಡಳಿತ ನಿರ್ದೇಶಕ ಪೆನಿನ್ಸುಲಾ ಗ್ರೂಫ್ ಆಪ್ ಹೋಟೇಲ್ಸ್ ಮುಂಬಯಿ, ಕೆ ಎಂ ಶೆಟ್ಟಿ ವಿ.ಕೆ.ಗ್ರೂಫ್ ಆಫ್ ಮುಂಬಯಿ, ಸದಾಶಿವ ಶೆಟ್ಟಿ, ಬಿ. ರಮಾನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ, ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರಕಾರ, ಅಭಯಚಂದ್ರ ಜೈನ್ ಮಾಜಿ ಸಚಿವರು ಕರ್ನಾಟಕ ಸರಕಾರ, ಕುಯಿಲಾಡಿ ಸುರೇಶ್ ನಾಯಕ್ ಮಾಜಿ ಜಿಲ್ಲಾಧ್ಯಕ್ಷ ಉಡುಪಿ ಭಾಜಪ, ಡಾ. ರೋಶನ್ ಕುಮಾರ್ ಶೆಟ್ಟಿ ಸಹ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಬಿಜೆಪಿ ವಿಭಾಗ ಪ್ರಭಾರಿ ಮಂಗಳೂರು ವಿಭಾಗ, ಪ್ರಮೋದ್ ಮಧ್ವರಾಜ್ ಮಾಜಿ ಸಚಿವ ಕರ್ನಾಟಕ ಸರಕಾರ, ಮಿಥುನ್ ರೈ, ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಮನೋಹರ ಎಸ್ ಶೆಟ್ಟಿ ಸಾಯಿ ರಾಧಾ ಗ್ರೂಪ್ ಉಡುಪಿ, ಪುರುಷೋತ್ತಮ ಪಿ ಶೆಟ್ಟಿ ಉಜ್ವಲ್ ಡೆವಲಪರ್ಸ್ ಉಡುಪಿ, ಶಿವಪ್ರಸಾದ್ ಹೆಗ್ಡೆ ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ, ಜಯರಾಜ್ ಹೆಗ್ಡೆ ಮಾಜಿ ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ಸಮಿತಿ, ಭಾಸ್ಕರ ಶೆಟ್ಟಿ ಸಾಂತೂರು ಮಾಜಿ ಅಧ್ಯಕ್ಷರು ಬಂಟರ ಸಂಘ ಪಡುಬಿದ್ರಿ ಇವರುಗಳು ಉಪಸ್ಥಿತರಿರುವರು.
ರೋಹಿತ್ ಹೆಗ್ಡೆ ಎರ್ಮಾಳ್ ಅವರು ಅಧ್ಯಕ್ಷರಾಗಿರುವ ಕಂಬಳ ಸಮಿತಿಯ ವ್ಯವಸ್ಥಾಪಕರು ಶ್ರೀ ಗೋವಿಂದ ದಾಸ ಶೆಟ್ಟಿ ಅವರಾಗಿದ್ದು, ಸುಭಾಶ್ ಬಲ್ಲಾಳ್ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ್ ಶೆಟ್ಟಿ ಎಂ ಆರ್ ಜಿ ಗ್ರೂಪ್ ಬೆಂಗಳೂರು, ಅಶೋಕ್ ರೈ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು, ಲಯನ್ ಡಾ. ಎ.ರವೀಂದ್ರನಾಥ್ ಶೆಟ್ಟಿ ಕಟಪಾಡಿ, ಯಶಪಾಲ್ ಸುವರ್ಣ ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕರು, ಸುರೇಶ್ ಶೆಟ್ಟಿ ಗುರ್ಮೆ ಕಾಪು ವಿಧಾನಸಭಾ ಕ್ಷೇತ್ರ ಶಾಸಕರು, ಪಾಂಡು ಓಟದ ಕೋಣ ನಂದಳಿಕೆ, ಬೊಲ್ಲ ಧೋನಿ ಓಟದ ಕೋಣ ಬೆಳಪು ಗುತ್ತು, ತಾಟೆ ಓಟದ ಕೋಣ ಇರುವೈಲು ಪಾಣಿಲ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. ತುಳು ನಾಡಿನ ಸಂಸ್ಕೃತಿ ಜಾನಪದ ಪರಂಪರೆಯ ಪ್ರತೀಕವಾದ ಕಂಬಳವನ್ನು ಪರಿಸರದ ಅತಿ ಪ್ರತಿಷ್ಠಿತ ಸಂಘ ಸಂಸ್ಥೆಗಳು ಹಾಗೂ ಪ್ರಾಯೋಜಕ ಸಂಯೋಜಕರ ಆತ್ಮೀಯರು ಅಭಿಮಾನಿಗಳು ತ್ರಿಕರಣಪೂರ್ವಕ ಸಹಕಾರ ನೀಡಲಿದ್ದು, ಕಟಪಾಡಿ ಬೀಡು ಜೋಡುಕರೆ ಕಂಬಳ ಮತ್ತೊಮ್ಮೆ ಇತಿಹಾಸ ನಿರ್ಮಿಸಲಿದೆ.
ಕಂಬಳ ಪ್ರೇಮಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕಂಬಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸಮಿತಿ ಸದಸ್ಯರು ಹಿತೈಷಿಗಳು ಬಂಧುಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಜೈ ತುಳು ನಾಡ್