ಓರ್ವ ಸುಸಂಸ್ಕೃತ ವಿದ್ಯಾವಂತ, ಸಾಮಾಜಿಕ ಮತ್ತು ಕಲಾ ಸೇವಾ ಮನೋಭಾವ ಕುಟುಂಬದಿಂದ ಬಂದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಬೆಂಗಳೂರು ಮಹಾನಗರ ಪಾಲಿಕೆಯ ಅಪರ ಆಯುಕ್ತರಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸರಳ ಸೌಮ್ಯ ಸ್ವಭಾವದ ಮತ್ತು ಸಕಲರನ್ನೂ, ಸಕಲ ವಯೋಮಾನದವರನ್ನೂ ಪ್ರೀತಿ ಮತ್ತು ಗೌರವದಿಂದ ಕಾಣುವ ನಮ್ಮ ಅಜಿತಣ್ಣ ಇಂದು ಈ ಉನ್ನತ ಮಟ್ಟದ ಹುದ್ದೆಗೆ ನಿಯೋಜನೆಗೊಂಡಿದ್ದು ಸಮಸ್ತ ಜನತೆಗೂ ಮತ್ತು ಬಂಟ ಸಮಾಜ ಬಾಂಧವರಿಗೆ ಬಹಳ ಸಂತಸ ತಂದಿದೆ.
ವಿಶೇಷವೇನೆಂದರೆ ಮೊಟ್ಟ ಮೊದಲ ಬಾರಿಗೆ ಬಂಟ ಸಮಾಜದ ಅಧಿಕಾರಿ ವಿಶೇಷ ಆಸನವನ್ನು ಅಲಂಕರಿಸಿದ್ದಾರೆ. ಇವರು ಮತ್ತು ಇವರ ಕುಟುಂಬದ ಸದಸ್ಯರೆಲ್ಲರಿಗೂ ಭಗವಂತನ ಅನುಗ್ರಹ ಇರಲಿ ಎಂದು ನಮ್ಮೆಲ್ಲರ ಹಾರೈಕೆ.