ಸತತ ಮೂರನೇ ಬಾರಿಗೆ ಪುತ್ತೂರು ನಗರ ಸಭಾ ಸದಸ್ಯರಾಗಿ ಆಯ್ಕೆಯಾದ ಭಾಜಪ ಸಂಘ ಪರಿವಾರದ ಜನಪ್ರಿಯ ಪ್ರಭಾವಿ ಕಾರ್ಯಕರ್ತ ಶ್ರೀ ರಮೇಶ್ ರೈ ನೆಲ್ಲಿಕಟ್ಟೆಯವರು ತನ್ನ ನಿಸ್ವಾರ್ಥ ಜನಪರ ಸೇವೆ ಹಾಗೂ ಪಾರದರ್ಶಕ ಸಂಘಟನೆಗಳಿಂದ ಜನಪ್ರಿಯರಾಗಿದ್ದಾರೆ. ತನ್ನ ಪರಿಸರದ ಸಮಾಜ ಬಾಂಧವರ ಸರ್ವಾಂಗೀಣ ಪ್ರಗತಿಯ ಕನಸು ಕಂಡು ಕಾರ್ಯಪ್ರವೃತ್ತರಾಗಿರುತ್ತಾರೆ. ದೇಶದ ಪ್ರಧಾನಿ ಮೋದಿಯವರ ಕನಸಿನ ಭಾರತ ಕಟ್ಟುವಲ್ಲಿ ಪ್ರಾಮಾಣಿಕ ಭ್ರಷ್ಟಾಚಾರ ರಹಿತ ಸೇವಾನಿರತ ರೈಯವರು ಸುತ್ತ ಮುತ್ತಲಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಳ್ಯದಲ್ಲಿ ಮಂಗಳಾ ಮೋಟಾರ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಭಾವದಿಂದ ಬೆರೆಯುವ ವಿಶೇಷ ಗುಣ ಹೊಂದಿರುವ ಇವರು ತನ್ನ ವಿಶೇಷ ಜನಪ್ರಿಯತೆಯ ಪರಿಣಾಮ ಸ್ವರೂಪ ಎಂಬಂತೆ ಇದೀಗ ಮೂರನೇ ಬಾರಿಗೆ ಪುತ್ತೂರು ನಗರಾಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ. ತನ್ನ ಉದ್ಯಮ ರಾಜಕೀಯ ಸಾಮಾಜಿಕ ಜೀವನದ ಜೊತೆಗೆ ಓರ್ವ ಆದರ್ಶ ಕುಟುಂಬ ವತ್ಸಲನಾಗಿಯೂ ಪರಿವಾರ ವರ್ಗದ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಿದ್ದಾರೆ . ಭವಿಷ್ಯದಲ್ಲಿ ರಮೇಶ್ ರೈ ಅವರ ರಾಜಕೀಯ, ಸಾಮಾಜಿಕ ಜೀವನ ಉಜ್ವಲವಾಗಲಿ. ಇನ್ನಷ್ಟು ಸ್ಥಾನಮಾನ ಅಧಿಕಾರಗಳು ರೈ ಅವರನ್ನು ಅರಸಿಕೊಂಡು ಬರಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು