ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ತುಳುನಾಡ ಜಾತ್ರೆ, ಒಡಿಯೂರು ರಥೋತ್ಸವ ಅಂಗವಾಗಿ ನಡೆದ ‘ಸಿರಿಧಾಮ’ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞರಾದ ಡಾ.ಸುಧಾಕರ ಶೆಟ್ಟಿ ಅವರು ‘ತುಳುನಾಡಿನಲ್ಲಿ ಮಕ್ಕಳ ಅಪೌಷ್ಟಿಕತೆಯಿಂದಾಗುವ ಆತಂಕ, ಅದರ ಪತ್ತೆ ಹಾಗೂ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ವಿರಾರ್ ಶಂಕರ ಶೆಟ್ಟಿ, ಒಡಿಯೂರು ಸೌಹಾರ್ದ ಸೊಸೈಟಿ ಅಧ್ಯಕ್ಷ ಸುರೇಶ್ ರೈ ಹಾಗೂ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
|| ಶ್ರೀ ಗುರುದತ್ತಾತ್ರೇಯೋ ವಿಜಯತೇ ||