ನಿತ್ಯಾನಂದ ಶೆಟ್ಟಿ ಸಂಸ್ಥಾಪಿತ ಸಂಸ್ಥೆ ಈಗ ಗ್ರಾಹಕರ ಆಕರ್ಷಣೆ ಕೇಂದ್ರ. ಸಾಮಾನ್ಯ ಉಪಯೋಗದ ಪಾದರಕ್ಷೆಗಳಿಂದ ಪ್ರಾರಂಭಗೊಂಡು ವಿಶೇಷ ಸಂದರ್ಭಗಳಲ್ಲಿ ಧರಿಸುವ ಆಕರ್ಷಣೆಯ ಪಾದರಕ್ಷೆಗಳು ಶೆಟ್ಟಿ ಅವರ ಶೋರೂಮುಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರ ಅನುಕೂಲತೆಗೆ ಬೇಕಾಗುವ ಎಲ್ಲಾ ವಯೋಮಾನದ ಸಾಮಾನ್ಯ ಜನರಿಂದ ಆರಂಭಗೊಂಡು ಸಿನೇಮಾ ತಾರೆಯರು ಅಪೇಕ್ಷೆ ಪಡುವ ಅಪರೂಪದ ಸಂಗ್ರಹಗಳ ಮಳಿಗೆ ಆರ್ಟಿಸೋನ್ ಇಂದು ಕರ್ನಾಟಕ ಮಾರಾಟ ವಹಿವಾಟು ಸಂಸ್ಥೆಗಳಲ್ಲೇ ಪ್ರತಿಷ್ಠಿತ ಸ್ಥಾನ ಪಡೆದಿದೆ. ವಿವಿಧ ಕಾರಣಗಳಿಂದ ದೈಹಿಕ ಆಂಗಿಕ ವಿಕಲತೆಗಳಿರುವ ಪಾದಗಳಿಗೂ ಸರಿಹೊಂದುವ ಪಾದರಕ್ಷೆಗಳನ್ನು ಹೊಂದಿಸಿ ಕೊಡುವ ಅಪರೂಪದ ಆರ್ಟಿಸೋನ್ ಪಾದರಕ್ಷೆ ಮಾರಾಟ ಸಂಸ್ಥೆಗಳಲ್ಲಿ ವಿಭಿನ್ನ ಆಕರ್ಷಣೆಯಾಗಿದ್ದು ಮಾರುಕಟ್ಟೆಯಲ್ಲಿ ದಿನೇ ದಿನೇ ಇದರ ಬೇಡಿಕೆ ಹೆಚ್ಚುತ್ತಲೇ ಇದೆ.
ಇದೀಗ ಈ ಸಂಸ್ಥೆ ರಾಜ್ಯ ಗಡಿ ಮೀರಿ ಸದ್ದು ಮಾಡುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ನಿರಂತರ ಬೇಡಿಕೆ ಇರುವ ಆರ್ಟಿಸಾನ್ ರಾಷ್ಟ್ರವ್ಯಾಪಿ ಬೇಡಿಕೆಯ ಉತ್ಪನ್ನವಾಗುವ ದಿನ ದೂರವಿಲ್ಲ. ಆಕರ್ಷಕ ವರ್ಣ ವಿನ್ಯಾಸಗಳ ವೈವಿಧ್ಯಮಯ ಗಾತ್ರ ಆಕೃತಿಗಳ ಕಲಾತ್ಮಕ ಪಾದರಕ್ಷೆಗಳು ಆಧುನಿಕ ವಸ್ತ್ರ ವಿನ್ಯಾಸ ಆಧುನಿಕ ಉಡುಗೆ ತೊಡುಗೆಗಳಿಗೆ ಸರಿ ಹೊಂದುವ, ವ್ಯಕ್ತಿಯ ದೈಹಿಕ ಗಾತ್ರಗಳಿಗೆ ತೂಕಗಳಿಗೆ ಸರಿಹೊಂದುವ, ನಾರಿಯರ ಆಭರಣ ಕೇಶ ವಿನ್ಯಾಸ ಮುಖಾಲಂಕಾರಗಳಿಗೆ ಹೊಂದಾಣಿಕೆಯಾಗಬಲ್ಲ, ಎತ್ತರ ಹಿಮ್ಮಡಿ ಹಾಗೂ ಸಮತಟ್ಟಾದ ಪಾದರಕ್ಷೆಗಳು ನಾಲ್ಕೈದು ದಿನ ಮುಂಚಿತವಾಗಿ ಅಳತೆ ನೀಡಿದರೆ ಕ್ಲಪ್ತ ಸಮಯಕ್ಕೆ ನಮ್ಮ ಮನ ಮೆಚ್ಚುವ ಜೋಡಿ ಪಾದರಕ್ಷೆ ನಮ್ಮ ಕೈಸೇರುತ್ತದೆ. ಪಾದರಕ್ಷೆಯ ಗಾತ್ರ ಹೆಚ್ಚು ಕಡಿಮೆ ಆದರೆ ಪಾದ ಬೆರಳುಗಳಲ್ಲಿ ಗಾಯವಾದರೆ ಕೆಲವು ಕಾಯಿಲೆಯವರಿಗೆ ಗಾಯದ ಸೋಂಕು ಉಂಟಾಗಿ ಕಾಲಿಗೇ ಅಪಾಯವಾಗುವ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿ ಪಾದರಕ್ಷೆಯ ಗಾತ್ರ ವಿನ್ಯಾಸ ಮಾಡಿ ಕೊಡಲಾಗುತ್ತದೆ.
ನಿತ್ಯಾನಂದ ಶೆಟ್ಟಿ ಅವರ ಶೋ ರೂಮುಗಳಲ್ಲಿ ಜಾಹೀರಾತು ಗದ್ದಲವಿಲ್ಲದೆ ವೈದ್ಯರ ಶಿಫಾರಸು ಮತ್ತು ಬಾಯಿಯಿಂದ ಬಾಯಿಗೆ ಹರಡುವ ಮೌಖಿಕ ಮೆಚ್ಚುಗೆ ನುಡಿಗಳೇ ಜಾಹೀರಾತುಗಳ ಕೆಲಸ ಮಾಡುತ್ತಿವೆ. ನಡೆಯುವ ನೆಲದ ಎತ್ತು ತಗ್ಗುಗಳಿಗೆ ಸರಿಹೊಂದುವ ದೇಹದ ರಕ್ತ ಪರಿಚಲನೆಯನ್ನು ಸರಾಗಗೊಳಿಸುವ ಕಾಲು ಹುಣ್ಣುಗಳಿದ್ದವರೂ ಸಾಂಗವಾಗಿ ನಡೆಯಲಾಗುವ ಪಾದರಕ್ಷೆ ನಿತ್ಯಾನಂದ ಶೆಟ್ಟಿ ಅವರ ಉದ್ಯಮದ ವಿಶಿಷ್ಟತೆ.
ವಯೋಮಾನ ಅಭಿರುಚಿ ವೃತ್ತಿ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಾದರಕ್ಷೆ ತಯಾರಿಸಿ ಕೊಡುವ ಅತಿ ಅಪರೂಪದ ಚರ್ಮೋದ್ಯೋಗ ಕೈಗಾರಿಕೆ ಎನಿಸಿದೆ. ಇನ್ನು ಮಧುಮೇಹಿಗಳಿಗೆ ಹುಣ್ಣಾದರೆ ಗ್ಯಾಂಗ್ರಿನ್ ಭಯ ಹಾಗೂ ಪಾದದ ಊತ ಉರಿಪಾದ ನರದೋಷ ಇತ್ಯಾದಿ ಹತ್ತಾರು ಕಾಯಿಲೆಗಳ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಗಾತ್ರ ವಿನ್ಯಾಸ ಮಾಡಿ ಕೊಡಲಾಗುತ್ತದೆ. ಹುಬ್ಬಳ್ಳಿಯ ಆರ್ಟಿಸಾನ್ ಪಾದರಕ್ಷೆಯ ಫ್ಯಾಕ್ಟರಿಯಲ್ಲಿ ಮುಂಚಿತ ಅಳತೆ ತೆಗೆಯಲಾಗುತ್ತದೆ. ದೂರವಾಣಿ ಮೂಲಕವೂ ಆರ್ಡರ್ ತೆಗೆದು ಕೊಳ್ಳಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಬಾಳಿಕೆ ಬರುವ ಮನ ಬಯಸುವ ಆರೋಗ್ಯದ ಬಗ್ಗೆ ಗಮನ ವಹಿಸುವ ಪಾದರಕ್ಷೆಗಳು ಬೇಕಾದವರು ಪ್ರಥಮ ಪ್ರಾಶಸ್ತ್ಯ ನೀಡುವ ಪಾದರಕ್ಷೆ ಶೋರೂಮು ಇದ್ದರೆ ಅದು ಆರ್ಟಿಸಾನ್ ಪಾದರಕ್ಷೆಗಳದ್ದು ಎಂದು ನಿಸ್ಸಂಶಯವಾಗಿ ಹೇಳಬಹುದು. ಸಣ್ಣ ಮಟ್ಟದಲ್ಲಿ ವ್ಯಾಪಾರ ಆರಂಭಿಸಿದ ನಿತ್ಯಾನಂದ ಶೆಟ್ಟಿ ಅವರು ಈ ವ್ಯಾಪಾರ ಇಂದು ಬೃಹತ್ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇವರ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಕೆಲವರು ಈಗ ತಮ್ಮದೇ ಆದ ವ್ಯಾಪಾರ ಪ್ರಾರಂಭಿಸಿದವರೂ ಇದ್ದಾರೆ. ಇವರು ತಯಾರಿಸುವ ಪಾದರಕ್ಷೆಗಳ ತಳಭಾಗವನ್ನು ಮೂರು ಪದರುಗಳಲ್ಲಿ ತಯಾರು ಮಾಡಿ ಅಲ್ಲಿನ ಪ್ರತಿಯೊಂದು ಪದರಗಳಿಗೆ ನಡಿಗೆಯನ್ನು ಸುಗಮಗೊಳಿಸಬಲ್ಲ ಮೆತ್ತನೆಯಾಗಿಸುವ ಕಾಲ್ನಡಿಗೆ ಆಯಾಸವೆನಿಸದ ಕಚ್ಚಾ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಅತ್ಯಾಧುನಿಕ ರೀತಿಯ ವೈಜ್ಞಾನಿಕ ಪದ್ಧತಿಯ ಪಾದರಕ್ಷೆ ತಯಾರಿ ಆರ್ಟಿಸಾನ್ ಸಂಸ್ಥೆಯ ವಿಶಿಷ್ಟತೆ.
ಇವರ ಆರ್ಟಿಸಾನ್ ಸಂಸ್ಥೆಯ ಇನ್ನೊಂದು ವಿಶೇಷತೆ ಎಂದರೆ ಮಾರಾಟ ನಂತರದ ಉಚಿತ ಸೇವೆ ಗ್ರಾಹಕರ ದೂರುಗಳಿಗೆ ಸ್ಪಂದಿಸಿ ಪರಿಹಾರ ನೀಡುವುದು. ಹೀಗೆ ಇತರ ಪಾದರಕ್ಷೆ ತಯಾರಿ ಸಂಸ್ಥೆಯಿಂದ ಭಿನ್ನವಾಗಿ ನಿಲ್ಲುವ ಆಧುನಿಕ ಜನ ಜೀವನದ ಅವಶ್ಯಕತೆಗಳನ್ನು ಪೂರೈಸುವ ವೈಯಕ್ತಿಕ ಆರೋಗ್ಯವನ್ನು ಗಮನಿಸಿ ಪಾದರಕ್ಷೆ ಮಾರುವ ಈ ಉದ್ಯಮ ಸಂಸ್ಥೆಯ ಸ್ಥಾಪಕ ರೂವಾರಿ ಯಶಸ್ವಿ ಉದ್ಯಮಿ ನಿತ್ಯಾನಂದ ಶೆಟ್ಟಿ ಅವರನ್ನು ಬಂಟ ಬಾಂಧವರು ಅಭಿನಂದಿಸಲೇ ಬೇಕು ಹಾಗೂ ಅವರ ವ್ಯಾಪಾರದ ಉತ್ಕರ್ಷಕ್ಕೆ ಶುಭ ಹಾರೈಸಬೇಕು.
ಶುಭಂ ಭದ್ರಂ ಮಂಗಲಂ
ಅರುಣ್ ಶೆಟ್ಟಿ ಎರ್ಮಾಳ್