ಕಿನ್ನಿಗೋಳಿ ಸಮೀಪದ ಏಳಿಂಜೆ ಕೋಂಜಾಲುಗುತ್ತು ಮನೆತನದ ನವೀಕೃತ ಧರ್ಮ ಚಾವಡಿಯಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಫೆಬ್ರವರಿ 29 ರಿಂದ ಮೊದಲ್ಗೊಂಡು ಮಾರ್ಚ್ 2 ರ ತನಕ ಜರಗಲಿದೆ. ಫೆಬ್ರವರಿ 29 ರಂದು ಸಂಜೆ ಶಿಲ್ಪಿಗಳಿಂದ ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರಗಲಿವೆ.
ಮಾರ್ಚ್ 1 ರಂದು ಬೆಳಿಗ್ಗೆ ಕುಟುಂಬಿಕರಿಂದ ನಾಗಬನದಲ್ಲಿ ಆಶ್ಲೇಷಾ ಬಲಿ, ಬಳಿಕ ಗಣಪತಿ ಹೋಮ, ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ದೈವ ದರ್ಶನ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದು ಮಧ್ಯಾಹ್ನ 1 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಮಾರ್ಚ್ 2 ಶನಿವಾರದಂದು ರಾತ್ರಿ 8.00 ಕ್ಕೆ ಅನ್ನಸಂತರ್ಪಣೆ ಹಾಗೂ ಶ್ರೀ ಮಹಿಷಂದಾಯ, ಧೂಮಾವತಿ ಬಂಟ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಏಳಿಂಜೆ ಕೋಂಜಾಲುಗುತ್ತು ಪರಿವಾರದ ಪರವಾಗಿ ದಿವಾಕರ ಎಸ್.ಶೆಟ್ಟಿ, ಏಳಿಂಜೆ ದೇವಳದ ಆಡಳಿತ ಮೊಕ್ತೇಸರರೂ ಆಗಿರುವ ಪ್ರಭಾಕರ್ ಎಸ್. ಶೆಟ್ಟಿ, ಅನಿಲ್ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.