ಐಲೇಸಾ ಸಂಸ್ಥೆ ವತಿಯಿಂದ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ‘ಕೃತಕ ಬುದ್ಧಿಮತ್ತೆ ಮುಂದಿನ ಅನಿವಾರ್ಯತೆ’ ವಿಶೇಷ ಕಾರ್ಯಕ್ರಮವು ಮಾರ್ಚ್ 2 ರಂದು ರಾತ್ರಿ 7.30 ರಿಂದ ನಡೆಯಲಿದೆ. ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಶನ್ ಟೆಕ್ನಾಲಜಿಯ ಸಂಶೋಧನ ವೃತ್ತಿಯ ಯುವ ಪ್ರತಿಭೆ ಪ್ರದ್ಯೋಶ್ ಹೆಗ್ಡೆ ಮತ್ತು ಸಿಂಗಾಪುರದ ಎಚ್ಯೂ ಕನೆಕ್ಷನ್ಸ್ ಪ್ರೈ.ಲಿ. ನ ಫ್ರಿನ್ಸಿಪಲ್ ಕನ್ಸಲ್ಟೆಂಟ್, ಉಡುಪಿ ಮೂಲದ ಉದ್ಯಮಿ ರಾಜೇಶ್ ಆಚಾರ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಲಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ ಆ ವೇಗಕ್ಕೆ ಹೊಂದಿಕೊಂಡು ನಮ್ಮ ವೃತ್ತಿ- ಪ್ರವೃತ್ತಿಗಳನ್ನು ಬದಲಾಯಿಸಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯಗಳಲ್ಲಿ ಒಂದು. ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಯುವ ಮಟ್ಟದಲ್ಲಿ ಮುಂದುವರೆದು ವಿಶ್ವಕ್ಕೆ ಬೆರಗನ್ನು ಹುಟ್ಟಿಸಿತು ಅನ್ನುವುದು ಈಗ ಇತಿಹಾಸ. ಮುಂದಿನ ದಿನಗಳು ತಾಂತ್ರಿಕತೆ ಜತೆಗೆ ಅತ್ಯಂತ ವೇಗವಾಗಿ ಬದಲಾಗುವಂತಹದು. ಯುವ ಜನರ ತುಂಬಿರುವ ಭಾರತ ಈ ಬದಲಾವಣೆಗಳನ್ನು ಅಪ್ಪಿಕೊಳ್ಳುವುದು ಬಲು ಸುಲಭ. ವೃತ್ತಿ ಜತೆಗೆ ಸಂಗೀತ- ಸಾಹಿತ್ಯ ಮೊದಲಾದ ಪ್ರವೃತ್ತಿಯಲ್ಲಿಯೂ ಕೃತಕ ಬುದ್ದಿಮತ್ತೆಯ ಅವಲಂಬನೆ ಅನಿವಾರ್ಯವಾಗಿರುವುದರಿಂದ ಅದಕ್ಕಾಗಿ ಈಗಿಂದೀಗಲೆ ಸಜ್ಜಾಗುವುದು ಅಗತ್ಯ. ಈ ವಿಷಯದಲ್ಲಿ ಒಂದಿಷ್ಟು ವಿಚಾರ ಮಂಡನೆ, ಅನುಭವ ಹಂಚಿಕೆ ಮತ್ತು ಸಂವಾದ ಮೂಲಕ ಜನಜಾಗೃತಿ ಮೂಡಿಸಲು ಐಲೇಸಾದ ಜೂಮ್ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಐಲೇಸಾದ ವಿವೇಕ್ ಮಂಡೆಕರ ನಡೆಸಿಕೊಡಲಿದ್ದಾರೆ.
ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಸಹಕರಿಸಲಿದ್ದಾರೆ. ಉದ್ಯೋಗಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಅವಶ್ಯಕ ಕಾರ್ಯಕ್ರಮವಾಗಿದ್ದು ಪೋಷಕರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಜೂಮ್ ವೇದಿಕೆ ಐಡಿ 81674349733 ಪಾಸ್ ಕೋಡ್: ಐಲೇಸಾ ಮೂಲಕ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಐಲೇಸಾ ಮುಂಬಯಿ ಸಂಚಾಲಕ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.