ತುಳುನಾಡ ಪೌಂಡೇಶನ್ ಪುಣೆ ವತಿಯಿಂದ ಮಾರ್ಚ್ 3ರಂದು ಕ್ರಾಸ್ ಬಾರ್ ಮಲ್ಟಿಸ್ಪೋರ್ಟ್ಸ್ ಮೈದಾನ ಸಿಂಹಘಡ್ ರೋಡ್ ಪುಣೆ ಇಲ್ಲಿ ತುಳು ಕನ್ನಡಿಗರಿಗಾಗಿ ಆಯೋಜಿಸಿದ ಪ್ರಥಮ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಅಭಿಜಿತ್ ಶೆಟ್ಟಿ ನೇತೃತ್ವದ ಕಟೀಲ್ ವಾರಿಯರ್ಸ್ ತಂಡ ಜಯಗಳಿಸಿ ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡಿತು. ಅಂತಿಮ ಹಣಾಹಣಿಯಲ್ಲಿ ಸಾಯಿ ಕ್ರಿಕೆಟರ್ಸ್ ಹಾಗೂ ಕಟೀಲ್ ವಾರಿಯರ್ಸ್ ತಂಡಗಳು ಸೆಣಸಿದ್ದು ವಸಂತ್ ಶೆಟ್ಟಿ ನೇತೃತ್ವದ ಸಾಯಿ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನಿಯಾಗಿ ರನ್ನರ್ ಆಫ್ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟರ್ ಆಗಿ ವೈಬಿಪಿ ವಾರಿಯರ್ಸ್ ತಂಡದ ಅಭಿನಂದನ್ ಶೆಟ್ಟಿ ಹಾಗೂ ಆರ್ ಕೆ ತಂಡದ ಜಯಲಕ್ಷ್ಮೀ, ಬೆಸ್ಟ್ ಬೌಲರ್ ಆಗಿ ಕಟೀಲ್ ವಾರಿಯರ್ಸ್ ತಂಡದ ಅಖಿಲ್ ಮತ್ತು ತುಳುನಾಡು ತಂಡದ ಖುಷಿ ಶೆಟ್ಟಿ, ಬೆಸ್ಟ್ ಫೀಲ್ಡರ್ ಬಹುಮಾನವನ್ನು ಕಟೀಲ್ ವಾರಿಯರ್ಸ್ ತಂಡದ ಸುವಿತ್ ಶೆಟ್ಟಿ ಹಾಗೂ ಚಾನೆಲ್ ತಂಡದ ಶ್ರೇಯಾ ಶೆಟ್ಟಿ ಪಡೆದುಕೊಂಡರೆ ಸಾಯಿ ಕ್ರಿಕೆಟರ್ಸ್ ತಂಡದ ಸಂದೀಪ್ ಶೆಟ್ಟಿ, ಕಟೀಲ್ ವಾರಿಯರ್ಸ್ ತಂಡದ ಸ್ನೇಹಾ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು, ಅಧ್ಯಕ್ಷ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿ, ಆಶಾ ಗ್ರೂಪ್ ಆಫ್ ಹೋಟೆಲ್ಸ್ ನ ಭಾಸ್ಕರ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಪುರುಷೋತ್ತಮ ಶೆಟ್ಟಿ, ಸದಾಶಿವ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರೇಮಾ ಪುರುಷೋತ್ತಮ ಶೆಟ್ಟಿ, ಶಮಿತಾ ವಸಂತ್ ಶೆಟ್ಟಿ, ದೇವಕಿ ಶೆಟ್ಟಿ, ಉಮಾ ಶೆಟ್ಟಿ, ಲತಾ ಆರ್ ಗೌಡ, ಸುಜಾತ ಡಿ ಶೆಟ್ಟಿ, ರಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಂದ್ಯಾಟದ ಪ್ರಾಯೋಜಕರಾಗಿ ಪ್ರವೀಣ್ ಶೆಟ್ಟಿ ಕ್ವಾಲಿಟಿ, ತಾರಾನಾಥ ರೈ ಮೇಗಿನಗುತ್ತು, ರೋಹನ್ ಪುರುಷೋತ್ತಮ ಶೆಟ್ಟಿ, ವಿಶ್ವನಾಥ ಪೂಜಾರಿ, ಪ್ರೇಮಾ ಪುರುಷೋತ್ತಮ ಶೆಟ್ಟಿ, ಸುಧಾಕರ ಸಿ ಶೆಟ್ಟಿ, ರಾಕೇಶ್ ಶೆಟ್ಟಿ ಹೋಟೆಲ್ ರಾಧಾಕೃಷ್ಣ, ಸಮಿತಾ ವಿ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಗಣೇಶ್ ಪೂಂಜಾ, ವಿಂದಿ ಪೂಜಾರಿ, ಸುಜಯ್ ಶೆಟ್ಟಿ, ಅಖಿಲ್ ಶೆಟ್ಟಿ, ವಿಶಾಲ್ ಶೆಟ್ಟಿ ನಿಟ್ಟೆ, ಪ್ರಸಾದ್ ಪೂಜಾರಿ, ರವಿರಾಜ್ ಶೆಟ್ಟಿ, ಗಣೇಶ್ ಶೆಟ್ಟಿ, ವಿನೀತ್ ಪೂಜಾರಿ ಹಾಗೂ ಸಮಿತಿ ಸದಸ್ಯರು ಸಹಕಾರ ನೀಡಿದರು.
ಮಾಜಿ ನಗರಸೇವಕ ರಘುನಾಥ ಗೌಡ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸುಧಾಕರ ಸಿ ಶೆಟ್ಟಿ, ಸುರೇಶ್ ಶೆಟ್ಟಿ ಗಂಧರ್ವ, ನರಸಿಂಹ ದೇವಾಡಿಗ, ರಘುರಾಮ ರೈ, ಜಗದೀಶ್ ಶೆಟ್ಟಿ ಎಲ್ ಐ ಸಿ, ಸಂದೇಶ್ ಪೂಜಾರಿ, ರಾಜೇಶ್ ಪೂಜಾರಿ ಪಂದ್ಯಾವಳಿಗೆ ಆಗಮಿಸಿ ಶುಭ ಹಾರೈಸಿದರು.
ಕೆ ಎಚ್ ಎಸ್ ಕನ್ನಡ ಮಾಧ್ಯಮದ ಐವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ವಿನೀತ್ ಪೂಜಾರಿ, ಉಪಾಧ್ಯಕ್ಷ ವಿಕೇಶ್ ರೈ ಶೇಣಿ ಹಾಗೂ ಸಮಿತಿ ಸದಸ್ಯರು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.
ಚಿತ್ರ, ವರದಿ : ಕಿರಣ್ ರೈ ಕರ್ನೂರು