Author: admin
ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲ್ಲೆಯುಳ್ಳ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಮನ್ಮಹಾರಥೋತ್ಸವ ಕಾರ್ಯಕ್ರಮ ಇದೇ ಬರುವ ಫೆ.5 ಮತ್ತು 6 ರಂದು ನಡೆಯಲಿದ್ದು ಆ ಪ್ರಯುಕ್ತ ಜಾತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಯವ ಉದ್ದೇಶದಿಂದ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ವತಿಯಿಂದ 4ದಿನಗಳ ಕಾಲ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಿತ್ರ ವೃಂದದ ವತಿಯಿಂದ ನಡೆಯುವ 47ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಫೆ.3 ಶುಕ್ರವಾರ ಸಂಜೆ 6.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ದೊರಕಲಿದ್ದು ಅದೇ ದಿನ ಸೇವಾ ಸಂಗಮ ಶಿಶು ಮಂದಿರ ಕೋಟ ಬಾಲ ಗೋಕುಲ ಪುಟಾಣಿಗಳಿಂದ ಕಾರ್ಯಕ್ರಮ ವೈವಿದ್ಯ ,ರಾತ್ರಿ 9.00ಕ್ಕೆ ಶಿವಾನಿ ಮ್ಯುಸಿಕಲ್ ಇವರಿಂದ ಸಂಗೀತ ರಸಮಂಜರಿ, ಫೆ.4ರಂದು ಶನಿವಾರ ಸಂಜೆ 7ಗ ಹಿರೇಮಹಾಲಿಂಗೇಶ್ಚರ ಮಿತ್ರವೃಂದ ಮಕ್ಕಳಿಂದ ನೃತ್ಯ ಸಿಂಚನ,ರಾತ್ರಿ 9ಕ್ಕೆ ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ಅಗೋಚರ, ಫೆ.5ರಂದು ರಥೋತ್ಸವದ ಅಂಗವಾಗಿ ಮಹಾ ಅನ್ನಸಂತರ್ಪಣೆ ಹಾಗೂ ರಥೋತ್ಸವದಲ್ಲಿ ವಿಶೇಷ ಆಕರ್ಷಕ…
ಮೂಲತಃ ಮೃದು ಸ್ವಭಾವದ ವ್ಯಕ್ತಿ, ಯಶ್ ಶೆಟ್ಟಿ ಜ್ವಲಂತಂನಲ್ಲಿ ಅಘೋರ ಪಾತ್ರದ ನಂತರ ಪ್ರಸಿದ್ಧಿಯಾದರು. ಅಂದಿನಿಂದ ಅವರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಶ್ ಶೆಟ್ಟಿ ತಮ್ಮ ನಿಜ ಜೀವನದ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಪಾತ್ರಗಳನ್ನು ಚಿತ್ರಿಸಲು ಇಷ್ಟಪಡುತ್ತಾರಂತೆ. ಸೂಜಿದಾರ, ಮತ್ತು ಧರಣಿ ಮಂಡಲ ಮದ್ಯದೊಳಗೆ ಚಲನಚಿತ್ರಗಳಲ್ಲಿ ಪೋಷಕ ನಟನೆಗಳಿಗೆ ಹೆಸರುವಾಸಿಯಾಗಿದ್ದಾರೆ. ನಾನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಓದಿದಾಗ ನೆಗೆಟಿವ್ ಪಾತ್ರಗಳತ್ತ ನನ್ನ ಒಲವು ಶುರುವಾಯಿತು. ನಾಟಕಗಳಲ್ಲಿ ನಟಿಸುವಾಗ, ಸಕಾರಾತ್ಮಕ ಪಾತ್ರಗಳಿಗಿಂತ ಭಿನ್ನವಾಗಿ, ನಕಾರಾತ್ಮಕ ಪಾತ್ರಗಳು ವೈವಿಧ್ಯಮಯ ಭಾವನೆಗಳನ್ನು ಹೊರಹಾಕಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ನಾನು ಭಾವಿಸಿದೆ ಎನ್ನುತ್ತಾರೆ ಯಶ್ ಶೆಟ್ಟಿ. ವಜ್ರಮುನಿ ಮತ್ತು ಪ್ರಕಾಶ್ ರಾಜ್ ಅವರಂತಹ ಬಹುಮುಖ ನಟರ ದೊಡ್ಡ ಅಭಿಮಾನಿ ಯಶ್ ಶೆಟ್ಟಿ. ಕೆರಿಯರ್‌ನಲ್ಲಿ ನಾನು ಪ್ರಕಾಶ್ ರಾಜ್ ಅವರನ್ನು ಅನುಸರಿಸುತ್ತೇನೆ. ಅವರು ಕೇವಲ ಖಳನಾಯಕನ ಪಾತ್ರದಲ್ಲಿ ಪ್ರಸಿದ್ಧರಾಗಿರುವ ನಟನ ಅತ್ಯುತ್ತಮ ಉದಾಹರಣೆಯಾಗಿದ್ದಾರೆ, ಆದರೆ ಕುಟುಂಬದ ಸದಸ್ಯ ಮತ್ತು ಸ್ನೇಹಿತ…
ಪುಣೆ ಬಂಟರ ಸಂಘದ ಮಹಾಸಭೆಯು ಇತ್ತೀಚಿಗೆ ಮಾ 21 ರಂದು ಬಂಟರ ಭವನದಲ್ಲಿ ನಡೆದಿದ್ದು ಸಂಘದ ಮುಂದಿನ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಗಾಗಿ 25 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು . ಏಪ್ರಿಲ್ 1 ರಂದು ಈ ಬಗ್ಗೆ ವಿಶೇಷ ಸಭೆಯೊಂದನ್ನು ಬಂಟರ ಭವನದಲ್ಲಿ ಆಯೋಜಿಸಲಾಗಿತ್ತು . ಕಳೆದೆರಡು ವರ್ಷಗಳ ಕಾಲ ಕೊರೋನಾ ಮಹಾಮಾರಿಯಿಂದಾಗಿ ಸಂಘದ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಸಂಘದ ಹೆಚ್ಚಿನ ಕೆಲಸ ಕಾರ್ಯಗಳು ನಡೆದಿರಲಿಲ್ಲ . ಅದಕ್ಕಾಗಿ ಮುಂದಿನ ಅವಧಿಗೆ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರನ್ನು ಸದಸ್ಯರು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿಯವರನ್ನು ಪುನರಾಯ್ಕೆ ಗೊಳಿಸಲಾಯಿತು .ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಉದಯ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು . ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಗಣೇಶ್ ಪೂಂಜಾ ಪುನರಾಯ್ಕೆಗೊಂಡರೆ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಶೇಖರ್ ಸಿ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು . ಈ ಸಂದರ್ಭ ಸಂತೋಷ್ ಶೆಟ್ಟಿಯವರು…
ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನ 19ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಶಾಲೆಯ ಸುಸಜ್ಜಿತ ಕ್ರೀಡಾಂಗಣ ಜಿ ಎಮ್ ಅರೆನಾದಲ್ಲಿ ನವೆಂಬರ್ 4ರಂದು ನಡೆಯಿತು. ಕ್ರೀಡಾಕೂಟದ ಮುಖ್ಯ ಅತಿಥಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಜೀವನ್ ಕುಮಾರ್ ಶೆಟ್ಟಿ ಕ್ರೀಡಾಜ್ಯೋತಿಯನ್ನು ಬೆಳಗಿ, ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಜಿ ಎಮ್ ಸಂಸ್ಥೆಯ ಹೊರಾಂಗಣ ವ್ಯವಸ್ಥೆಯನ್ನು ನೋಡುವಾಗ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದ ಅನುಭವವಾಗುತ್ತಿದೆ. ಕ್ರೀಡೆ ಎಂದರೆ ಒಂದು ವಿಜ್ಞಾನ. ಕ್ರೀಡಾಪಟುಗಳು ಸೈನಿಕರಿದ್ದಂತೆ ಎಂದು ಹೇಳಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಶಂಕರನಾರಾಯಣ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ಸುದೀಪ್ ಶೆಟ್ಟಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಜಿ ಎಮ್ ಕರಾವಳಿಯ ಬಹುದೊಡ್ಡ ವಿದ್ಯಾಸಂಸ್ಥೆ, ಇದು ಶಿಕ್ಷಣ ಕ್ರಾಂತಿಯ ಜೊತೆಗೆ ಕ್ರೀಡೆಗೆ ಒತ್ತು ನೀಡುತ್ತಿದೆ, ಕ್ರೀಡೆಯಿಂದ ಬದುಕನ್ನು ಕಟ್ಟಿಕೊಳ್ಳಬಹುದು ಜೊತೆಗೆ ಆಸ್ಪತ್ರೆಯನ್ನು ನಮ್ಮಿಂದ ದೂರ ಇಡಬಹುದು ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಕ್ರೀಡೆಗಳಿಂದ ಕೌಶಲ್ಯಗಳ ಅಭಿವೃದ್ಧಿ,…
ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಿತ್ರವು ಸೆಪ್ಟಂಬರ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ರಾಮ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ಸಿಐಡಿ ದಯಾ ಖ್ಯಾತಿಯ ದಯಾನಂದ ಶೆಟ್ಟಿ ಅವರು, “ಹಿಂದಿ ಸಿನಿಮಾ ಮತ್ತು ಧಾರವಾಹಿ ಕ್ಷೇತ್ರದಲ್ಲಿ ನಾನು ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನೆಲ್ಲಿ ಹೋದರೂ ತುಳು ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನಾನು ನಟಿಸಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಶುಕ್ರವಾರ ಬಿಡುಗಡೆಯಾಗಲಿದೆ. ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಗ್ರ್ಯಾಂಡ್ ಆಗಿರುವ ಸಿನಿಮಾವನ್ನು ಖಂಡಿತಾ ತುಳುವರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಬಳಿಕ ಮಾತಾಡಿದ ನಟ ಹರೀಶ್ ವಾಸು ಶೆಟ್ಟಿ ಅವರು, “ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್,…
ಸೆ. 04 ಬ್ರಹ್ಮಾವರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾದ ದಿ. ಎನ್ ಎಸ್ ಅಡಿಗರವರ ದಿವ್ಯಾತ್ಮಕ್ಕೆ ಶಾಂತಿಕೋರಲು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಎನ್. ಎಸ್. ಅಡಿಗರು, ಸರಳ ಸಜ್ಜನಿಕೆ, ನಗು ಮುಖದೊಂದಿಗೆ ಸಹಸ್ರಾರು ವಿಧ್ಯಾರ್ಥಿಗಳಿಗೆ ಜ್ಞಾನದ ಸುಧೆಯನ್ನು ಹರಿಸಿದ್ದಾರೆ. ಅವರ ಅಪಾರ ಭಾಷಾ ಪಾಂಡಿತ್ಯ, ಕೆಲಸದಲ್ಲಿ ಲವಲವಿಕೆಯಿಂದ ತೊಡಗಿಕೊಳ್ಳುತ್ತಿದ್ದ ಪರಿ ನಮಗೆಲ್ಲರಿಗೂ ಆದರ್ಶವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಡಿಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾಗಿ ಮಾತನಾಡಿ ಶಿಸ್ತಿಗೆ, ಪರಿಪೂರ್ಣತೆಗೆ ಇನ್ನೊಂದು ಹೆಸರೇ ಅಡಿಗರು. ಅವರು ನನ್ನ ಗುರುಗಳು, ಮಾರ್ಗದರ್ಶಕರೂ ಆಗಿದ್ದರು ಎಂದರು. ನಂತರ ಜಿ ಎಮ್ ಸಂಸ್ಥೆಯನ್ನು ಕಟ್ಟುವಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ನಾವೆಲ್ಲರೂ ಅವರ ಆದರ್ಶಗಳನ್ನು, ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಹ ಸಿಬ್ಬಂದಿವೃಂದ ತಮ್ಮ ಭಾರವಾದ ಮನಸ್ಸಿನಿಂದ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಜಿ…
ಯಾವುದೇ ಕ್ರೀಡಾ ಸಾಧನೆಗೆ ತರಬೇತಿ ಅತ್ಯಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಿಪಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಹಾಗೂ ನಿವೃತ ಕಸ್ಟಮ್ಸ್ ಸೂಪರಿಂಟೆಂಡೆಂಟ್ ರೋಹಿತ್ ಹೆಗ್ಡೆ ಎರ್ಮಾಳು ಹೇಳಿದರು. ಅದಮಾರು ಮೂಡುಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ಮನೆ ಬಳಿ ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಮತ್ತು ಬಂಟರ ಕ್ರೀಡಾ ವಿಭಾಗಗಳ ಆಶ್ರಯದಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುಣೆಯ ಉದ್ಯಮಿ, ಸಮಾಜಸೇವಕ ಪೂನಾ ಗೇಟ್ ಹೋಟೆಲ್ ನ ಸಿಎಮ್ ಡಿ ಎರ್ಮಾಳು ಪುಚ್ಚೋಟ್ಟು ಬೀಡು ಬಾಲಚಂದ್ರ ಎಲ್. ಶೆಟ್ಟಿ, ಅಸ್ಫನ್ ಎಸ್ಇಝಡ್ ಸೀನಿಯರ್ ಜನರಲ್ ಮ್ಯಾನೇಜರ್ ಅಶೋಕ್ ಶೆಟ್ಟಿ, ಬಂಟರ ಸಂಘದ ಪೂರ್ವಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ, ಉದ್ಯಮಿ…
ಸರಕಾರವು ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಇಂದು ಸರಕಾರವೇ ಹುಡುಕಿ ಪ್ರಶಸ್ತಿಯನ್ನು ನೀಡುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಸದವರಿಗೂ ಪ್ರಶಸ್ತಿ ಒಲಿಯುತ್ತಿದೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಕುಳಿತು ಪ್ರಶಸ್ತಿಯ ಬಗ್ಗೆ ಒಂದಿಷ್ಟೂ ನಿರೀಕ್ಷೆಯಲ್ಲಿಲ್ಲದ ಮಂದಿಗೆ ಪ್ರಶಸ್ತಿಯು ಒಲಿದು ಬಂದಾಗ ಅವರಿಗಾಗುವ ಆನಂದ ಊಹಿಸಲೂ ಅಸಾಧ್ಯ. ಈ ಗೌರವಗಳ ಮೂಲಕ ವಿವಿಧ ಕ್ಷೇತ್ರಗಳು ಶ್ರೀಮಂತವಾಗುವುದರೊಂದಿಗೆ ಸಾಂಸ್ಕೃತಿಕವಾಗಿಯೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇಂದು ಸಮಾಜದ ಮುಂದಿರುವ ದೊಡ್ಡ ಸವಾಲು ನೈತಿಕ ಮೌಲ್ಯಗಳ ಕುಸಿತ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಪರಾಧದ ಸುದ್ದಿಗಳು ಸಮಾಜದ ನಿದ್ರೆ ಕೆಡಿಸುತ್ತಿವೆ. ಇಂಥ ಅಪರಾಧಗಳನ್ನು ಮಟ್ಟಹಾಕಲು ಎಲ್ಲ ಪ್ರಯತ್ನಗಳನ್ನೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮಾಡುತ್ತಿವೆ. ಇಲಾಖೆಗಳ ಈ ಪ್ರಯತ್ನಗಳ ನಡುವೆ ಅಪರಾಧಗಳನ್ನು ಕಡಿಮೆ ಮಾಡುವ ಮನೋ ಭಾವವನ್ನು ಸಮಾಜದಲ್ಲಿ ಮೂಡಿಸಲು ಸಾಧ್ಯವೇ? ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳ ಮೂಲಕ ಈ ಪ್ರಯತ್ನ ಗಳನ್ನು ಒಂದು ಹಂತದಲ್ಲಿ ಮಾಡಬಹುದು. ಇದರೊಂದಿಗೆ ತಮ್ಮ ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದವರನ್ನು…
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಐಲೇಸಾ ಡಾ. ಸುಧಾ ಮೂರ್ತಿ ಅವರ ಸಾಹಿತ್ಯ ಸಾಧನೆ- ವಿಚಾರ ಸಂಕಿರಣ
ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಆಯೋಜಿಸಿರುವ ವಿಶೇಷ ವಿಚಾರ ಸಂಕಿರಣ ‘ಸುಧಾ ಮೂರ್ತಿ ಅವರ ಸಾಹಿತ್ಯ ಸಾಧನೆ- ಒಂದು ಅವಲೋಕನ’ ಕಾರ್ಯಕ್ರಮವು ಎಪ್ರಿಲ್ 23ರಂದು ಸಂಜೆ 4ರಿಂದ ಝೂಮ್ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ.ಸುಧಾ ಮೂರ್ತಿ ಅವರ ಗಣ್ಯ ಉಪಸ್ಥಿತಿಯಲ್ಲಿ ಅವರ ಕೃತಿಗಳ ಕುರಿತು ಚರ್ಚೆ ನಡೆಸಲಾಗುವುದು. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆ ವಹಿಸಲಿರುವರು. ‘ಸಿರಿತನ ಹಿರಿತನಗಳ ಸಮ್ಮಿಲನದ ಶಕ್ತಿ ಸುಧಾ ಮೂರ್ತಿ’ ಈ ವಿಷಯದ ಕುರಿತು ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಮಾತನಾಡಲಿರುವರು. ಸುಧಾ ಮೂರ್ತಿ ಅವರ ‘ಸಾಹಿತ್ಯ ಸಾಧನೆ’ಯ ಕುರಿತು ಪ್ರತಿಭಾ ರಾವ್, ‘ಪ್ರವಾಸ ಕಥನ’ದ ಕುರಿತು ಸವಿತಾ ಶೆಟ್ಟಿ, ಕಾದಂಬರಿಗಳಾದ ಅತಿರಕ್ತೆಯ ಕುರಿತು ರಾಜಶ್ರೀ ಶೆಟ್ಟಿ, ‘ಮಹಾಶ್ವೇತೆ’ಯ ಕುರಿತು ಶಶಿಕಲಾ ಹೆಗ್ಡೆ, ‘ಋಣ’ದ ಕುರಿತು ಅನಿತಾ ಪೂಜಾರಿ ತಾಕೋಡೆ, , ‘ತುಮುಲ’ದ…
ಬಿಳಿ ಜಂಬೂ ಅಥವಾ ಪನ್ನೇರಳೆ ಹಣ್ಣು ರುಚಿಯಷ್ಟೇ ಆರೋಗ್ಯಕರ; ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣನ್ನು ಒಮ್ಮೆ ತಿಂದು ನೋಡಿ
ಬಿಳಿ ಜಂಬೂ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಜಂಬೂ ಹಣ್ಣು ಎಂದು ಹೆಚ್ಚು ಜನಪ್ರಿಯವಾಗಿರುವ ಈ ಹಣ್ಣನ್ನು ಸಾಮಾನ್ಯವಾಗಿ ಪನ್ನೇರಳೆ ಎಂದು ಕರೆಯುತ್ತಾರೆ. ಹಲವು ಬಾರಿ ನಾವು ಒಂದು ಹಣ್ಣಿನ ವಿಶೇಷತೆಯನ್ನು ಹೇಳುವ ಕಾಲಕ್ಕೆ ಅದರ ಹೆಸರು ಗೊತ್ತಿದ್ದರೂ ಮಾಹಿತಿ ಇಲ್ಲದಂತಾಗುತ್ತದೆ. ಇದಕ್ಕೆ ಕಾರಣ ಆ ಹಣ್ಣಿನ ಹೆಸರು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಾಗಿರುತ್ತದೆ. ಹಾಗೆಯೇ ಬಿಳಿ ಜಂಬೂ ಹಣ್ಣು ಕೂಡ. ಜಂಬೂ ಹಣ್ಣು ಕೆಂಪು, ಬಿಳಿ, ಗುಲಾಬಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯವಿದೆ. ಅದರಲ್ಲೂ ಬಿಳಿ ಬಣ್ಣದ ಜಂಬೂ ಹಣ್ಣು ವಿಶೇಷವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಆಗ್ನೇಯ ಏಷ್ಯಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಬಿಳಿ ಜಂಬೂ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತದೆ. ಇನ್ನು ಕರ್ನಾಟಕ್ಕೆ ಬಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಇನ್ನಿತರ ಭಾಗಗಳಲ್ಲಿ ಈ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ…