ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮೂಲಕ ಧಾರ್ಮಿಕ ಶೃದ್ಧಾ ಕೇಂದ್ರಗಳಲ್ಲಿ ಅರಳಿ, ರುದ್ರಾಕ್ಷಿ, ಪಾರಿಜಾತ, ಬಿಲ್ವಪತ್ರೆ, ಶಮಿ ಮುಂತಾದ ದೇವವೃಕ್ಷಗಳ ಗಿಡಗಳ ನೆಡುವ ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು. ಶ್ರೀ ಕ್ಷೇತ್ರದ ಉದ್ಯಾನವನದಲ್ಲಿ ರುದ್ರಾಕ್ಷಿ ಗಿಡವನ್ನ ನೆಟ್ಟು ಮಾತನಾಡಿದ ಹೆಗ್ಗಡೆಯವರು ಭಾರತ ದೇಶ ಬೆಟ್ಟ, ಗುಡ್ಡ, ಗಿಡ, ಮರ ಹೀಗೆ ಪ್ರತಿಯೊಂದರಲ್ಲಿಯೂ ಮುಖ್ಯವಾಗಿ ಪ್ರಕೃತಿಯಲ್ಲೇ ದೇವರನ್ನು, ದೈವತ್ವವನ್ನು ಕಂಡು ಆರಾಧಿಸಿದ ಪರಂಪರೆ ಇರುವ ದೇಶ, ಈ ನಿಟ್ಟಿನಲ್ಲಿ ಪ್ರತೀ ಶ್ರದ್ಧಾ ಕೇಂದ್ರಗಳಲ್ಲಿಯೂ ದೇವವೃಕ್ಷಗಳ ಗಿಡಗಳನ್ನ ನೆಡುವ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಯೋಚನೆ ಶ್ಲಾಘನಾರ್ಹ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಶೆಟ್ಟಿ ಗಿಳಿಯಾರು, ಹೆಗ್ಗಡೆಯವರ ಆಪ್ತಕಾರ್ಯದರ್ಶೀ ಎ.ವಿ. ಶೆಟ್ಟಿ, ಧನಕೀರ್ತಿ ಅರಿಗ, ಸಂದೀಪ್ ರೈ ಧರ್ಮಸ್ಥಳ, ಟೀಮ್ ಅಭಿಮತದ ಸಂಯೋಜಕರಾದ ರಾಘವೇಂದ್ರ ರಾಜ್ ಸಾಸ್ಥಾನ, ಜೀವನ್ ಶೆಟ್ಟಿ ಅಯೋಧ್ಯಾ, ಶರತ್ ಶೆಟ್ಟಿ ವಡ್ಡರ್ಸೆ, ನಿಖಿಲ್ ನಾಯಕ್ ತೆಕ್ಕಟ್ಟೆ, ಸಂದೀಪ್ ದೇವ್ ಮುಂತಾದವರು ಉಪಸ್ಥಿತರಿದ್ದರು.