ಶ್ರೀ ದುರ್ಗಾಂಬಿಕಾ ಅಮ್ಮನವರ ದೇಗುಲದಲ್ಲಿ ನಡೆಯಲಿರುವ 63 ನೇ ವರ್ಷದ ಏಕಾಹ ಭಜನೋತ್ಸವ ಸಮಿತಿ ಅಧ್ಯಕ್ಷರಾಗಿ ಕಿಶನ್ ಕುಮಾರ್ ರೈ ಪೆರಿಯಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕೃಷ್ಣ ಎಂ.ಆರ್. ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಕೇಶ್ ಪೆಲತ್ತೋಡಿ ಹಾಗೂ ಕೋಶಾಧಿಕಾರಿಯಾಗಿ ಸೀತಾರಾಮ ಗೌಡ ಎ. ಆಯ್ಕೆಯಾದರು.
ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿದ ಆಯ್ಕೆ ಸಭೆಯಲ್ಲಿ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ಮಂಡೆಕರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಯ್ಕ್, ಶ್ರೀ ಶ್ರೀಕಂಠ ಸ್ವಾಮಿ, ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್ ಮೇಲಿನ ಮನೆ, ಉಪನ್ಯಾಸಕ ವಿಶ್ವನಾಥ ರೈ ಪೆರ್ಲ, ಪ್ರಮುಖರಾದ ಪ್ರಕಾಶ್ ಎನ್.ಕೆ., ಅಶೋಕ್ ಕುಮಾರ್ ಪಿ, ಸೀತಾರಾಮ ಗೌಡ ಎ., ಸುಂದರ ಗೌಡ ಎ., ಶ್ರೀ ಕೃಷ್ಣ ಎಂ.ಆರ್., ವಿಗ್ನೇಶ್ ಕೊಠಾರಿ, ರಘುರಾಮ ನಾಯ್ಕ್, ಕುಕ್ಕರೆ ಬೆಟ್ಟು, ಅಜಿತ್ ರೈ ಆರ್ತಿಲ, ಸುಕೇಶ್ ಕುಮಾರ್, ಯಶೋಧರ ಪೂವಳ, ರಾಕೇಶ್, ಹರಿಪ್ರಸಾದ್ ರೈ ಬೆದ್ರಾಜೆ, ವೆಂಕಟೇಶ್ ಆರಿಗ, ಪುರುಷೋತ್ತಮ ಕೆ.ಎಸ್., ಸುರೇಶ್ ದೇಂತಾರ್, ಸದಾನಂದ ಪಿ. ಮತ್ತಿತರರಿದ್ದರು.