ಉತ್ತಮ ವಿಚಾರಧಾರೆಯ ಸೇವಾ ಕಾರ್ಯ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಮತ್ತು ಸಂಘಟನೆ ಬೆಳೆಯಲು ಕಾರಣವಾಗುತ್ತದೆ. ಯಾವುದೇ ರೀತಿಯ ಕಾರ್ಯಯೋಜನೆ ಇರಲಿ ದೃಡ ಮನಸ್ಸು ಮತ್ತು ಶ್ರಮದಿಂದ ಯಶಸ್ಸು ಪಡೆಯಬಹುದು. ಸಮಾಜ ಸೇವೆಯಲ್ಲಿರುವ ನಾವೆಲ್ಲರೂ ಶ್ರಮಜೀವಿಗಳು ಒಗ್ಗಟ್ಟು ಮತ್ತು ಕ್ರೀಯಾಶೀಲ ಉತ್ತಮ ಚಿಂತನೆಯ ಮೂಲಕ ಸಮಾಜಕ್ಕೆ ಮೌಲ್ಯಯುತವಾದ ಕೊಡುಗೆಯನ್ನು ನೀಡಿ ಗೌರವವನ್ನು ಪಡೆಯುತ್ತೇವೆ. ಕ್ರೀಡೆ ಅಥವಾ ಕ್ರಿಕೆಟ್ ಕೂಡಾ ನಮ್ಮ ಜೀವನದ ಹಾಗೆ ಸೋಲು ಗೆಲುವು ಏಳು ಬೀಳು ಏನಿದೆಯೋ ಅದನ್ನು ಸಮಾನವಾಗಿ ಸ್ವೀಕರಿಸಿ ಜೀವನದಲ್ಲಿ ಮುನ್ನಡೆಯಬೇಕು. ಕ್ರೀಡೆಯಿಂದ ಆರೋಗ್ಯ ಭಾಗ್ಯ, ಶಕ್ತಿ ದೊರಕುತ್ತದೆ. ಇಂತಹ ದೊಡ್ಡ ಕೂಟವನ್ನು ಆಯೋಜನೆ ಮಾಡುವುದೆಂದರೆ ಕಠಿನ ಪರಿಶ್ರಮದಿಂದ ಮಾತ್ರ ಸಾದ್ಯ. ಇದಕ್ಕೆ ಬಲಯುತವಾದ ಸಂಘಟನೆ ಮತ್ತು ಒಗ್ಗಟ್ಟು ಮುಖ್ಯ. ಮಾನವ ಮೌಲ್ಯವನ್ನರಿತು ನಾವು ಮಾಡುವ ಯಾವುದೇ ಕಾರ್ಯ ಇರಲಿ ಅದರಿಂದ ಸಾಧನೆಗೆ ಫಲ ಪಡೆಯಬಹುದು. ಸಾಯಿ ಕ್ರಿಕೆಟರ್ಸ್ ನ ವಸಂತ್ ಶೆಟ್ಟಿ ವರ್ಲ್ಡ್ ಬಂಟ್ಸ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡುವ ಮೂಲಕ ಪುಣೆ ಬಂಟರ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು.
ಪುಣೆಯ ಸಾಯಿ ಕ್ರಿಕೆಟರ್ಸ್ ಸಂಸ್ಥೆಯ ವತಿಯಿಂದ ಪುಣೆಯಲ್ಲಿ ಪ್ರಥಮ ಬಾರಿಗೆ ವಿಶ್ವದಲ್ಲಿ ನೆಲೆಸಿರುವ ಬಂಟ್ಸ್ ಸಮುದಾಯದ ಕ್ರಿಕೆಟ್ ಪ್ರೇಮಿಗಳಿಗಾಗಿ ವರ್ಲ್ಡ್ ಬಂಟ್ಸ್ ಸಾಯಿ ಟ್ರೋಪಿ ಕ್ರಿಕೆಟ್ ಟೂರ್ನಮೆಂಟ್ 2024 ಫೆಬ್ರವರಿ 29 ಮತ್ತು ಮಾರ್ಚ್ 1 ರಂದು ಸ್ಪೋರ್ಟ್ ಎಜ್ ಗ್ರೌಂಡ್ ಮಹಾಲಕ್ಷ್ಮಿ ಲಾನ್ಸ್ ಕರಾಡಿ ಇಲ್ಲಿ ನಡೆಯಿತು. ಲೀಗ್ ಮಾದರಿಯಲ್ಲಿ ಎರಡು ದಿನ ನಡೆದ ಈ ಕೂಟದಲ್ಲಿ ಬಂಟ್ಸ್ ಸಂಘ ಪುಣೆ ದಕ್ಷಿಣ ವಲಯ, ಪಿಂಪ್ರಿ ಚಿಂಚ್ವಾಡ್ ಬಂಟ್ಸ್ ಸಂಘ, ಮೌಂಟ್ ಆಂಡ್ ಹೈ, ಗಂಧರ್ವ ವಾರಿಯರ್ಸ್, ಲೀಲಾ ಫಾರ್ಮ್ ಹೌಸ್ ಕಲ್ಯಾ, ಕುಂದಾಪುರ ಟೈಗರ್ಸ್, ತನಿಷ್ಕಾ ಮುಂಬಯಿ, ಸಿದ್ದಿ ವಿನಾಯಕ ಪಿಂಪ್ರಿ ಸೇರಿದಂತೆ ಎಂಟು ತಂಡಗಳು ಭಾಗವಹಿಸಿದ್ದವು. ಸಾಯಿ ಕ್ರಿಕೇಟರ್ಸ್ ನ ಸಂಚಾಲಕ ವಸಂತ್ ಶೆಟ್ಟಿ ಹಿರಿಯಡ್ಕ ಮತ್ತು ಸಮಿತಿಯವರ ನೇತೃತ್ವದಲ್ಲಿ ನಡೆದ ಈ ಕ್ರಿಕೆಟ್ ಟೂರ್ನಮೆಂಟ್ ನ ಆಶಾ ಪ್ರವೀಣ್ ಶೆಟ್ಟಿ ಮತ್ತು ವಿಶ್ವನಾಥ್ ಪೂಜಾರಿ ಕಡ್ತಲ ಜಂಟಿ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಕ್ರಿಕೆಟ್ ಟೂರ್ನಮೆಂಟ್ ನ್ನು ದೀಪ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್ ಅಧ್ಯಕ್ಷ ಸುಭಾಶ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶೇಖರ್ ಶೆಟ್ಟಿ, ಪುಣೆ ತುಳುನಾಡ ಫೌಂಡೇಶನ್ ಗೌರವ ಅಧ್ಯಕ್ಷ ತಾರಾನಾಥ್ ರೈ, ಪುಣೆ ಬಂಟರ ಸಂಘದ ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ ಶೆಟ್ಟಿ, ಉದ್ಯಮಿಗಳಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ಸುಧಾಕರ್ ಶೆಟ್ಟಿ ಪೆಲತ್ತೂರು, ಪ್ರಶಾಂತ್ ಶೆಟ್ಟಿ ಬಾಬಾಸ್ ಕಿಚನ್, ರಕ್ಷಿತ್ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ರಘುರಾಮ್ ರೈ, ಸಾಯಿ ಕ್ರಿಕೆಟರ್ಸ್ ನ ಗೌರವ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರನ್ನು ವಸಂತ್ ಶೆಟ್ಟಿ ಮತ್ತು ಸದಸ್ಯರು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಅತಿಥಿಗಳು ಈ ವರ್ಲ್ಡ್ ಬಂಟ್ಸ್ ಸಾಯಿ ಟ್ರೋಪಿ ಕ್ರಿಕೆಟ್ ಟೂರ್ನಮೆಂಟ್-24ಕ್ಕೆ ಶುಭ ಹಾರೈಸಿ ಪ್ರೋತ್ಸಾಹಕ ನುಡಿಗಳನ್ನಾಡಿದರು. ತಂಡದ ಮಾಲಕರುಗಳನ್ನು ಅತಿಥಿಗಳು ಗೌರವಿಸಿದರು. ಮಾರ್ಚ್ 1ರಂದು ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ, ಪಿಂಪ್ರಿ ಚಿಂಚ್ವಾಡ್ ಬಂಟ್ಸ್ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಪ್ರಮುಖರುಗಳಾದ ಸುಧಾಕರ್ ಶೆಟ್ಟಿ ಪೆಲತ್ತೂರು, ದಿನೇಶ್ ಶೆಟ್ಟಿ ಉಜಿರೆ, ಜಯಾನಂದ ಶೆಟ್ಟಿ, ಮುಂಬಯಿ ಉದ್ಯಮಿ ಗಣೇಶ್ ಶೆಟ್ಟಿ, ಸಾಯಿ ಕ್ರಿಕೆಟರ್ಸ್ ನ ಗೌರವಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಹಿರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರನ್ನು ಸಾಯಿ ಕ್ರಿಕೆಟರ್ಸ್ ವತಿಯಿಂದ ವಸಂತ್ ಶೆಟ್ಟಿ ಮತ್ತು ಸದಸ್ಯರು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ವರ್ಲ್ಡ್ ಬಂಟ್ಸ್ ಸಾಯಿ ಟ್ರೋಪಿ ಕ್ರಿಕೆಟ್ ಟೂರ್ನಮೆಂಟ್ 24ರ ವಿಜೇತ ಸುರೇಶ್ ಶೆಟ್ಟಿ ಗಂಧರ್ವ ಇವರ ಮಾಲಕತ್ವದ ಗಂಧರ್ವ ವಾರಿಯರ್ಸ್ ತಂಡಕ್ಕೆ ನಗದು ಎರಡು ಲಕ್ಷ ಮತ್ತು ಸಾಯಿ ಟ್ರೋಪಿ ಯನ್ನು ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಗಣ್ಯರು ನೀಡಿ ಅಭಿನಂದಿಸಿದರು. ದ್ವಿತೀಯ ಸ್ಥಾನಿಯಾದ ರಕ್ಷಿತ್ ಶೆಟ್ಟಿ ಮಾಲಕತ್ವದ ಮೌಂಟ್ ಆಂಡ್ ಹೈ ತಂಡಕ್ಕೆ ಒಂದು ಲಕ್ಷ ನಗದು ಮತ್ತು ಟ್ರೋಪಿಯನ್ನು ವಿಶ್ವನಾಥ್ ಪೂಜಾರಿ ಕಡ್ತಲ ಮತ್ತು ಅತಿಥಿಗಳು ನೀಡಿ ಗೌರವಿಸಿದರು. ವೈಯುಕ್ತಿಕ ಬಹುಮಾನ ಪಡೆದ ಆಟಗಾರರನ್ನು ಅತಿಥಿಗಳು ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಾಂಧರ್ಭಿಕವಾಗಿ ಮಾತನಾಡಿದರು. ಎರಡು ದಿನಗಳಲ್ಲಿ ನಡೆದ ಈ ಕೂಟದಲ್ಲಿ ಭಾಗವಹಿಸಿದ ಪುಣೆಯ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳನ್ನು ಸಾಯಿ ಕ್ರಿಕೆಟರ್ಸ್ ವತಿಯಿಂದ ಗೌರವಿಸಲಾಯಿತು. ಆಯೋಜಕರಾದ ಸಾಯಿ ಕ್ರಿಕೆಟರ್ಸ್ ಸಂಚಾಲಕ ವಸಂತ್ ಶೆಟ್ಟಿ ಹಿರಿಯಡ್ಕ ಬಸ್ತಿ ಮತ್ತು ಪ್ರಮುಖರಾದ ಪ್ರಶಾಂತ್ ಶೆಟ್ಟಿ ಹಿರಿಯಡ್ಕ ಬಸ್ತಿ, ಅಕ್ಷತ್ ಶೆಟ್ಟಿ ಎರ್ಮಾಳ್, ಸಂದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಬೈಲೂರು, ರಾಮಪ್ರಸಾದ್ ಶೆಟ್ಟಿ, ಸುದೀಪ್ ಪೂಜಾರಿ, ಸಂತೋಷ್ ಶೆಟ್ಟಿ ವಾರಂಗ, ಸಂದೇಶ್ ಶೆಟ್ಟಿ ಪಾಶನ್ ಸಹರಿಸಿದರು. ಮನೀಶ್ ಶೆಟ್ಟಿ ಕಾಂತಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ, ಚಿತ್ರ : ಹರೀಶ್ ಮೂಡಬಿದಿರೆ ಪುಣೆ