ಐಲೇಸಾ ದಿ ವಾಯ್ಸ್ ಆಫ್ ಓಷನ್ (R)ಮತ್ತು ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.), ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ರೂಪಕಲಾ ಆಳ್ವ ರಚನೆಯ “ಶಿವಸುಗಿಪು”- ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ತುಳು ಭಕ್ತಿಗೀತೆಗಳ ಬಿಡುಗಡೆ ಕಾರ್ಯಕ್ರಮ ದಿನಾಂಕ 07.03.2024, ಗುರುವಾರ, ಸಂಜೆ 7:30ರಿಂದ 9:30 ರ ವರೆಗೆ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದೆ.
26 ವರ್ಷಗಳ ಹಿಂದೆ ಧ್ವನಿಸುರುಳಿ ಮೂಲಕ ಹೊರಬಂದಿದ್ದ ಈ ಹಾಡುಗಳು ಮತ್ತೆ ದೃಶ್ಯ ಸಂಯೋಜನೆಯೊಂದಿಗೆ ನವೀನವಾಗಿ ಮೂಡಿಬರಲಿದ್ದು, ದೇಗುಲದ ಪ್ರಧಾನ ಅರ್ಚಕರಾದ ಶ್ರೀ ಶ್ರೀನಿವಾಸ ಭಟ್ ಆಶೀರ್ವಚನ ಮಾಡಲಿರುವರು.
ಶ್ರೀ ರವಿ ಶೆಟ್ಟಿ ಮೂಡಂಬೈಲು ಮ್ಯಾನೇಜಿಂಗ್ ಡೈರೆಕ್ಟರ್, ಎಟಿಎಸ್, ಕತಾರ್ ಅಧ್ಯಕ್ಷತೆ ವಹಿಸಿ, ನ್ಯಾಯವಾದಿ ಹಾಗೂ ನಾಟಕಕಾರರಾದ ಶ್ರೀ ಶಶಿರಾಜ್ ಕಾವೂರು ಹಾಡುಗಳ ಬಿಡುಗಡೆ ಮಾಡಲಿರುವರು. ಶ್ರೀಮತಿ ಯಶೋದಾ ಮೋಹನ್ ಕಾವೂರು ಹಾಡುಗಳ ಪರಿಚಯ ಮಾಡಲಿದ್ದು, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾೈರು, ಹಿರಿಯ ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಹಿರಿಯ ಸಂಗೀತ ಸಂಯೋಜಕ ಶ್ರೀ ವಸಂತ ಕದ್ರಿ, ಖ್ಯಾತ ಸಿನಿಮಾ ಗಾಯಕ ಐಲೇಸಾದ ಶ್ರೀ ರಮೇಶ್ ಚಂದ್ರ, ಖ್ಯಾತ ಕೀಬೋರ್ಡ್ ವಾದಕ ಶ್ರೀ ಮುರಲೀಧರ್ ಕಾಮತ್ ಜೊತೆಯಾಗುವರು. ಗೋಪಾಲ್ ಪಟ್ಟೆಯವರು ತಾಂತ್ರಿಕ ಸಹಕಾರ ನೀಡಲಿದ್ದು ಐಲೇಸಾದ ಎಲ್ಲಾ ಅಭಿಮಾನಿ ಬಂಧುಗಳು ಪ್ರೀತಿಯಿಂದ ಭಾಗವಹಿಸಬೇಕೆಂದು ಎಂದು ಸಂಚಾಲಕ ಸುರೇಂದ್ರ ಮಾರ್ನಾಡು ವಿನಂತಿಸಿದ್ದಾರೆ.