Author: admin
ನಮ್ಮ ಧರ್ಮವನ್ನು ಪರಿಪಾಲನೆ ಮಾಡಿ ಹಿತವನ್ನು ಕಾಪಾಡಿ ಧರ್ಮ ರಕ್ಷಣೆ ಮಾಡಿದರೆ ದೇವರು ನಮ್ಮನ್ನು ಕಾಪಾಡುತ್ತಾರೆ .ನಾವು ಯಾವುದನ್ನೂ ಪವಿತ್ರ ಭಾವನೆಯಿಂದ ನೋಡುವೆವೋ ಮತ್ತು ಭಕ್ತಿಯ ಸಂಕೇತದ ಸಂಬಂದ ಇರುತ್ತದೋ ಅದುವೇ ಧರ್ಮ .ಹಾಗೆಯೇ ಪವಿತ್ರವಾದ ಸಂಬಂದಗಳು ಅನೇಕ ಬಗೆಯಲ್ಲಿರಬಹುದು ,ಅದು ಪ್ರಕ್ರತಿ, ಜಲ, ವಾಯು ,ಆಕಾಶ, ಭೂಮಿಯೊಂದಿಗೂ ಇರಬಹುದು ಅವುಗಳಲ್ಲಿ ಪೂಜೆ ಎಂಬುದು ಮುಖ್ಯವಾದುದು .ಇಂದು ಇಲ್ಲಿ ನಾವು ಆಚರಿಸುವ ತೆನೆ ಹಬ್ಬ ಎಂದರೆ ಕೂಡಾ ಇದು ನಾವು ಪ್ರಕೃತಿಯೊಂದಿಗಿನ ಪೂಜೆಗೆ ಸಂಬಂದ ಪಟ್ಟದ್ದು .ಸ್ತ್ರೀ ಪ್ರಧಾನವಾದ ಸಮಾಜದಲ್ಲಿ ನವರಾತ್ರಿಯ ಶುಭ ಪರ್ವದಲ್ಲಿ ಇದರ ಆಚರಣೆಗೆ ಪ್ರಾಮುಖ್ಯತೆ ಇದೆ .ನಾವು ತುಳುನಾಡಿಗರು ಎಲ್ಲಿ ಹೋದರು ನಮ್ಮ ಸಂಪ್ರದಾಯ ,ಸಂಸ್ಕ್ರತಿಯನ್ನು ಬಿಟ್ಟವರಲ್ಲ .ಇಲ್ಲಿ ತುಳುನಾಡಿನ ಭಕ್ತಿ ಭಾವದ ಮನೆ ತುಂಬಿಸುವ ತೆನೆ ಹಬ್ಬದ ವೈಭವ ಮೂಡಿ ಬಂದಿದೆ, ಇಂತಹ ಧರ್ಮದ ಚೌಕಟ್ಟಿನಲ್ಲಿ ನಡೆಯುವ ಆಚರಣೆಗಳಿಗೆ ಮಹತ್ವವಿದೆ ಎಂದು ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ನುಡಿದರು…
ನಾನು ನನ್ನದು ಎಂಬ ಸ್ವಾರ್ಥವಿಲ್ಲದೇ ನಾವು ನಮ್ಮದು ಎಂಬ ಭಾವನೆ ಮೂಡಿಸುವ ಸಂಸ್ಥೆ ಚಿಣ್ಣರಬಿಂಬ- ಶೇಖರ್ ಪೂಜಾರಿ ಮುಂಬಯಿ:- ಇನ್ನು ಮುಂದೆ ಚಿಣ್ಣರ ಬಿಂಬದ ಬಳಗದಲ್ಲಿ ನಾವೂ ಇರುತ್ತೇವೆ, ನಾವೂ ಕೂಡಾ ಚಿಣ್ಣರ ಬಿಂಬದ ಕುಟುಂಬದಂತೆ ನಾವೂ ನಿಮ್ಮ ಜೊತೆಗೆ ಇರುತ್ತೇವೆ. ಚಿಣ್ಣರ ಬಿಂಬ ಇದರ 2023-2024ನೇ ಸಾಲಿನ ಸಾಕಿನಾಕ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವು ಸೆಪ್ಟೆಂಬರ್ 3 ರಂದು ಭಾನುವಾರ ಮಧ್ಯಾಹ್ನ ಸಮತ ವಿದ್ಯಾ ಮಂದಿರ್ ಸಾಕಿನಾಕದಲ್ಲಿ ಸುಂದರವಾಗಿ ಜರುಗಿತು. ಉದ್ಘಾಟಕರಾದ ರಾಜು ಮೆಂಡನ್, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆಯಲ್ಲಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮುಖ್ಯ ಅತಿಥಿಯಾಗಿ ಆಗಮಿಸಿದ ದಿನೇಶ್ ದೇವಾಡಿಗ, ಕೇಂದ್ರ ಸಮಿತಿಯ ಸದಸ್ಯರಾದ ರಮೇಶ್ ರೈ, ಸವಿತಾ ಶೆಟ್ಟಿ, ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ದೇವಿಕಾ ಶೆಟ್ಟಿ, ರಾಜವರ್ಮ ಜೈನ್, ಶಿಬಿರ ಮುಖ್ಯಸ್ಥೆ ಉಷಾ ಶೇರುಗಾರ್ ವೇದಿಕೆಯಲ್ಲಿದ್ದರು. ಚಿಣ್ಣರ ಬಿಂಬಕ್ಕೆ ಈಗ ಇಪ್ಪತ್ತು ವರುಷ …
ಹಲವು ವರ್ಷಗಳಿಂದ ಸಮಾಜಮುಖಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮೀರಾ ರೋಡಿನ ಹೆಸರಾಂತ ಸಂಸ್ಥೆ ನವತರುಣ ಮಿತ್ರ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ಜು. 29ರ ಶನಿವಾರದಂದು ನಡೆಯಲಿದೆ. ಇಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಸಭಾಂಗಣದಲ್ಲಿ ಸಂಜೆ 4 ರಿಂದ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಲಿದೆ. ಈ ಪ್ರಯುಕ್ತ ಹೇರಂಜಾಲು ಯಕ್ಷ ಬಳಗ ಹಾಗೂ ಟೀಮ್ ಉತ್ಸಾಹಿ ಬೆಂಗಳೂರು ಕಲಾವಿದರಿಂದ ಶ್ರೀ ಶ್ರೀನಿವಾಸ ಕಲ್ಯಾಣ ಎಂಬ ಕನ್ನಡ ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಹೆರಂಜಾಲು ಗೋಪಾಲ್ ಗಾಣಿಗ, ಪಲ್ಲವ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಅನುರುದ್ಧ ಹೆಗಡೆ ವರ್ಗಾಸರ, ಚೆಂಡೆಯಲ್ಲಿ ಸುಜನ್ ಹಾಲಾಡಿ, ಮುಮ್ಮೇಳದಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಶ್ರೀಧರ ಭಟ್ ಕಾಸರಗೋಡು, ಪ್ರಕಾಶ್ ಮೊಗವೀರ ಕಿರಾಡಿ, ವೆಂಕಟೇಶ ಹೆಗಡೆ, ನಾಗಶ್ರೀ ಜಿ.ಎಸ್. ನಿಹಾರಿಕ ಭಟ್, ಶ್ರೀಕಾಂತ್ ರಟ್ಟಾಡಿ, ಸುಶಾಂತ್ ಶೆಟ್ಟಿ ಅಚ್ಲಾಡಿ, ನಾಗಭೂಷಣ್ ನಾಯ್ಕ್ ಮೊದಲಾದವರು ರಂಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ – ತುಳು…
ಬಂಟರ ಸಂಘ ಮುಂಬಯಿ ಇದರ ಮೀರಾ – ಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಜೂ.26 ರ ಬುಧವಾರ ಮಧ್ಯಾಹ್ನ ಮೀರಾರೋಡ್ ಪೂರ್ವದ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಶನಲ್ ಹೋಟೆಲ್ ಸಮೀಪದ ಮಹಾಜನ್ ವಾಡಿಯಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಞೆ ದಿ. ಲತಾ ಮಂಗೇಷ್ಕರ್ ನಾಟ್ಯ ಸಭಾಗೃಹದಲ್ಲಿ ಯಕ್ಷಗಾನ ವೇಷಧಾರಿ ಮಹಾಬಲೇಶ್ವರ ಭಟ್ ಕ್ಯಾದಗಿ ಅವರ ವಿನೂತನ ಶೈಲಿಯ ಪುಷ್ಪಕ ಯಾನ ‘ಏಕವ್ಯಕ್ತಿ ನವರಸಾಭಿವ್ಯಕ್ತಿ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನೀಡಿದ ಮಹಾಬಲೇಶ್ವರ ಭಟ್ ಕ್ಯಾದಗಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸನ್ಮಾನಿಸಿದರು. ಬಳಿಕ ಮಾತನಾಡಿ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನು ಒಳಗೊಂಡ ಯಕ್ಷಗಾನ ಶಾಸ್ತ್ರೀಯ ಕಲೆ, ಭಾರತೀಯ ಸಂಸ್ಕೃತಿಯ ರೂಪಕಗಳನ್ನು ಸಾಕ್ಷಾತ್ಕರಿಸುವಲ್ಲಿ ಯಶಸ್ಸು ಕಂಡಿದೆ ಎಂದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಪಶ್ಚಿಮ ವಲಯ ಸಮನ್ವಯಕಾರ ಶಶಿಧರ ಕೆ. ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ವಸಾಯಿ…
ದಾನಶೀಲತೆಯಿಂದ ಸದೃಢ, ಸಮರ್ಥ, ನೆಮ್ಮದಿಯ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಲೈಫ್ ಲೈನ್ ಫೀಡ್ಸ್ ನ ಆಡಳಿತ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗ್ಡೆ ತಿಳಿಸಿದರು. ಚಿಕ್ಕಮಗಳೂರಿನ ಐಡಿಎಸ್ ಜಿ ಸರ್ಕಾರ ಕಾಲೇಜಿಗೆ ಲೈಫ್ ಲೈನ್ ಸಂಸ್ಥೆ ವತಿಯಿಂದ 50 ಲಕ್ಷ ರೂ. ಗಳ ಪೀಟೋಪಕರಣ ಕೊಡುಗೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ದಾನ ನೀಡುವಲ್ಲಿ, ಜನಸೇವೆಯಲ್ಲಿ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ವಿದ್ಯಾಭ್ಯಾಸದ ನಂತರ ದುಡಿಮೆಯ ಸಂದರ್ಭದಲ್ಲಿ ಲಾಭದ ಸ್ವಲ್ಪ ಭಾಗವನ್ನಾದರೂ ದೇಶಕ್ಕಾಗಿ ಕೊಡುವುದರ ಮೂಲಕ ದೇಶವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿಸಿದರು. ಈ ಕಾಲೇಜಿನ ಮುಂಭಾಗದಲ್ಲಿ ಓಡಾಡುವಾಗ ಕಾಂಪೌಂಡ್ ಒಳಗಿರುವುದಕ್ಕಿಂತ ರಸ್ತೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವುದನ್ನು ಗಮನಿಸಿದ್ದು, ಕೊಠಡಿ ಹಾಗೂ ಪೀಟೋಪಕರಣಗಳ ಕೊರತೆಯಿಂದ ಎರಡು ಪಾಳಿಯಲ್ಲಿ ಕಾಲೇಜು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂತು. ಇಲ್ಲಿ ಬಂದು ನೋಡಿದಾಗ ಒಟ್ಟು 380 ಡೆಸ್ಕ್ ಗಳ ಅವಶ್ಯಕತೆ ಕಂಡು ಬಂತು. 30 ಲಕ್ಷ ರೂ. ಅಂದಾಜಿನಲ್ಲಿ ಡೆಸ್ಕ್ ವ್ಯವಸ್ಥೆ ಮಾಡಿಕೊಡುವ ಭರವಸೆ…
ಮೇನಾಲ ಕಾಲೋನಿ-ಜಲಧರ ಕಾಲನಿಗಳ ಸೃಷ್ಟಿಕರ್ತ-ಅದಮ್ಯ ಚೇತನ ಮರೆಯಾದ ಕರ್ನಾಟಕ ಕರಾವಳಿಯ ಮೇನಾಲದ ಮಾಣಿಕ್ಯ ಜಲಧರ ಶೆಟ್ಟಿ
ಮುಂಬಯಿ (ಆರ್‍ಬಿಐ), ಮೇ.06: ಜೀವನದಲ್ಲಿ ನಾವು ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು. ಸಂತೋಷಕ್ಕೆ ಕರೆದರೆ ಮಾತ್ರ ಹೋಗಬೇಕು. ಕಷ್ಟಕ್ಕೆ ಕೇಳದೆ ಕೊಡಬೇಕು. ಇಷ್ಟಕ್ಕೆ ಕೇಳಿದರಷ್ಟೇ ಕೊಡಬೇಕು. ಇದೆಯೆಂದು ತೋರಿಸ ಬಾರದು. ಇಲ್ಲವೆಂದು ಸಾರಲೂ ಬಾರದು. ಇದ್ದೂ ಇಲ್ಲದಂತೆ ಇರಬೇಕು. ಸತ್ತರೂ ಬದುಕಿದಂತಿರಬೇಕು ಎಬಂತೆ ಬದುಕಿನಲ್ಲಿ ನುಡಿದಂತೆ ನಡೆದು ಬದುಕಿದವರು ಮೇನಾಲ ಎಳ್ನಾಡ್‍ಗುತ್ತು ಜಲಧರ ಶೆಟ್ಟಿ. ನಾವು ಯಾರದ್ದೋ ಅಭಿಮಾನಿಗಳಾಗುವ ಮೊದಲು ನಮ್ಮೊಳಗಿನ ಒಳ್ಳೆಯತನದ ಅಭಿಮಾನಿಗಳು ಆಗಬೇಕು ಅಂತಹ ಅಭಿಮಾನ ನನಗೆ ಅವರಲ್ಲಿದೆ. ನಾವು ಯಾರದ್ದೋ ಗುಲಾಮರಾಗುವ ಮೊದಲು ನಮ್ಮೊಳಗಿನ ಶ್ರದ್ದೆಗೆ, ಭಕ್ತಿಗೆ ಗುಲಾಮರಾಗಬೇಕು ಅಂತಹ ಭಕ್ತಿ ನನಗೆ ಅವರ ಮೇಲಿದೆ. ಸ್ವಾತಂತ್ರ ್ಯ ಕಾಲದಲ್ಲಿ ಮಹಾತ್ಮ ಗಾಂಧಿಜೀ ಅವರಿಂದ ಪ್ರೇರಿತರಾಗಿ ಹರಿಜನ ಕಾಲನಿಯನ್ನೇ ನಿರ್ಮಿಸಿ ಕೊಟ್ಟವರು. ತನ್ನ ಭೂಮಿ ಹಾಗೂ ಸ್ವಂತ ಖರ್ಚಿನಿಂದ ಹಲವು ಮನೆಗಳನ್ನು ನಿರ್ಮಿಸಿ ಕೊಟ್ಟವರು, ಯಾವುದೇ ಜಾತಿಯ ಪ್ರಲೋಭನೆಗೆ ಒಳಗಾಗದೆ ದೇವಸ್ಥಾನ, ಮಸೀದಿ, ಚರ್ಚ್ ಅಂತ ಬೇಧ ಭಾವನೆ ತೋರದೆ ತನ್ನ ಆಸ್ತಿಯ ಹಲವು ಭಾಗಗಳನ್ನು ದಾನ ನೀಡಿದವರು.…
ಅನುಭವಿ ಮತ್ತು ಹೊಸಮುಖಗಳ ನಡುವಿನ ಕಾದಾಟವು ಈ ಕ್ಷೇತ್ರದ ರೋಚಕತೆಯನ್ನು ಹೆಚ್ಚಿಸಿದೆ. ಕಳೆದ 4 ಚುನಾವಣೆಗಳಲ್ಲಿ ಹಾವು-ಏಣಿ ಆಟದಂತಿದ್ದ ಬೈಂದೂರಲ್ಲಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ. ದಿನೇ ದಿನೇ ಕಣದ ಚಿತ್ರಣ ಬದಲಾಗುತ್ತಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬಿಜೆಪಿಯಿಂದ ಹೊಸ ಮುಖ, ಆರೆಸ್ಸೆಸ್ ಕಟ್ಟಾಳು ಗುರುರಾಜ್ ಗಂಟಿಹೊಳೆ ಸೆಣಸುತ್ತಿದ್ದಾರೆ. ಇಲ್ಲಿ 2004 ರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸೋಲು-ಗೆಲುವು ಹಾವು-ಏಣಿ ಆಟದಂತಿದೆ. 2004ರಲ್ಲಿ ಕಾಂಗ್ರೆಸ್, 2008ರಲ್ಲಿ ಬಿಜೆಪಿ, 2013ರಲ್ಲಿ ಕಾಂಗ್ರೆಸ್ ಹಾಗೂ 2018ರಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಈ ಕಾರಣಕ್ಕೂ ಈ ಬಾರಿಯ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತೆ ಗೆದ್ದರೆ ಸತತ ಗೆಲುವಿನ ಇತಿಹಾಸ ನಿರ್ಮಿಸಿದ ಕೀರ್ತಿ. ಕಾಂಗ್ರೆಸ್ ಗೆದ್ದರೆ ಗೆಲುವಿನ ಹಾವು ಏಣಿ ಆಟವನ್ನು ಮುಂದುವರಿಸಿದ ಹೆಗ್ಗಳಿಕೆ. ಏಳನೇ ಬಾರಿಗೆ ಸ್ಪರ್ಧೆ ಗೋಪಾಲ ಪೂಜಾರಿ 6 ಬಾರಿ ಸ್ಪರ್ಧಿಸಿದ್ದು, 4 ಬಾರಿ ಶಾಸಕರಾಗಿದ್ದು, 2 ಬಾರಿ…
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ಅಭಿಮಾನಿಗಳು, ಉತ್ಸಾಹಿ ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಗುರುವಾರ ಅದ್ದೂರಿ ಪಾದಯಾತ್ರೆ ನಡೆಸಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 9ನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಶ್ರೀ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ, ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್, ಮಿತ್ತಬೈಲು ಮಸೀದಿ, ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ವೈಭವಯುತ ಪಾದಯಾತ್ರೆ ಯೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಸಾಗಿ ಬಂದರು. ಕೊಂಬು, ಚೆಂಡೆ, ವಾದ್ಯಘೋಷ ಮೆರುಗು ತಂದವು. ಋಣ ತೀರಿಸುವುದು ಅಸಾಧ್ಯ ರಮಾನಾಥ ರೈ ಅವರು ಕಾರ್ಯಕರ್ತ ರನ್ನುದ್ದೇಶಿಸಿ ಮಾತನಾಡಿ, ನನ್ನ ಸುದೀರ್ಘ ಜನಸೇವೆಯ ಬದುಕಿನಲ್ಲಿ 9ನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜಿಲ್ಲೆಯಿಂದ ಕಾಂಗ್ರೆಸ್‌ನಿಂದ ಒಬ್ಬನೇ ಆರಿಸಿಬಂದಂತಹ ಕಠಿನ ಪರಿಸ್ಥಿತಿಯಲ್ಲೂ ನನಗೆ ಬೆಂಬಲವಾಗಿ ನಿಂತ…
ಕನ್ನಡ ಸಾಹಿತ್ಯಕ್ಕೆ ನಾನು ಬಂದಿದ್ದು ಆಕಸ್ಮಿಕ. ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ನನಗೆ ಎಂಎಸ್ಸಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಸೀಟು ಸಿಗಲಿಲ್ಲ. ಹಾಗಾಗಿ ಐಚ್ಛಿಕ ಕನ್ನಡ ತೆಗೆದುಕೊಂಡು ಎಂಎ ಪದವಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿಎಂಶ್ರೀ ಪ್ರತಿಷ್ಠಾನ ಎನ್‌ಆರ್ ಕಾಲನಿಯ ಎಂವಿಸಿ ಸಭಾಂಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೀ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಮಾತನಾಡಿ, ವಿವೇಕ ರೈ ಅವರು ಜರ್ಮನಿಯಲ್ಲಿ ಕೂಡ ಕನ್ನಡ ಸಾಹಿತ್ಯದ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಮುಂದಿನ 500 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ವೈಶಿಷ್ಟ ಏನು ಎಂಬುದು ತಿಳಿಯಲಿದೆ ಎಂದರು. ಶಾ ಬಾಲುರಾವ್ ನೆನಪುಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ| ಬೈರಮಂಗಲ ರಾಮೇಗೌಡ, ನಿಕಟಪೂರ್ವ ಅಧ್ಯಕ್ಷ ಡಾ| ಆರ್.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಡಾ| ಪಿ.ವಿ.ನಾರಾಯಣ, ಕಮಲಿನಿ ಬಾಲುರಾವ್ ಮತ್ತಿತರರು ಉಪಸ್ಥಿತರಿದ್ದರು.
‘ನಮ್ಮ ಭವಿಷ್ಯದ ನಿರ್ಮಾತೃ ನಾವೇ’ ವಿದ್ಯಾಗಿರಿ: ‘ನಮ್ಮ ಭವಿಷ್ಯದ ನಿರ್ಮಾತೃಗಳು ನಾವೇ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು. ‘ಪ್ರತಿ ವ್ಯಕ್ತಿಯೂ ತನ್ನ ಜೊತೆಯೇ ತಾನು ಅತಿ ಹೆಚ್ಚು ಸಂವಹನ ನಡೆಸುತ್ತಾನೆ. ಆ ಸಂವಹನದ ಆಧಾರದಲ್ಲಿಯೇ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ, ನಮ್ಮನ್ನು ನಾವೇ ರೂಪಿಸಿಕೊಳ್ಳುತ್ತೇವೆ’ ಎಂದರು. ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಹಿತಿ ಗಳಿಕೆಗಿಂತ ಹೆಚ್ಚು ತಿಳಿವಳಿಕೆ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು. ಸಮಾಜ ಹಾಗೂ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಮೌಲ್ಯಯುತ ಪ್ರಶ್ನೆಗಳನ್ನು ಕೇಳಬೇಕು’ ಎಂದರು. ‘ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿಫುಲ ಅವಕಾಶ ಹೊಂದಿದ್ದು, ವೈಯಕ್ತಿಕ ವಿಕಸನಕ್ಕೆ ಉತ್ತಮ ವೇದಿಕೆ ಹೊಂದಿದೆ’ ಎಂದು ಅವರು ವಿವರಿಸಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನ’ ಕುರಿತು ಮಾತನಾಡಿದ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಧನಂಜಯ ಆಚಾರ್ಯ,…