ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಮಾ.9 ರಂದು ರಾತ್ರಿ ದೇವರ ದರ್ಶನ ಬಲಿ ಹಾಗೂ ದೈವಗಳ ನೇಮೋತ್ಸವು ನಡೆಯಿತು.
ವೇ. ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಮಾ. 8 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿ ಹೋಮ, ಕಲಶ ಪೂಜೆ, ಕಳಶಾಭಿಷೇಕ, ನಾಗ ಸನ್ನಿದಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೈವಗಳ ಭಂಡಾರ ತೆಗೆದ ನಂತರ ಶ್ರೀದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿ ಭೂತ, ಗುಳಿಗ ದೈವಗಳ ನೇಮೋತ್ಸವ, ಮಾ.10 ರಂದು ಕಲಶ, ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ, ಲಕ್ಷ್ಮಣ್ ಬೈರಾಡಿ, ಪ್ರಸನ್ನ ಕುಮಾರ್ ಮಾರ್ತ, ಸುಂದರಗೌಡ ನಡುಬೈಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ಡಾ.ರವಿ ಶೆಟ್ಟಿ ನೇಸರ ಕಂಪ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾನೂರ್ಜಿ, ಉಪಾಧ್ಯಕ್ಷರಾದ ಶೇಸಪ್ಪ ಶೆಟ್ಟಿ ಪೋನೊಣಿ, ಉಮೇಶ್ ಅಂಬಟ, ಜಯಪ್ರಸಾದ ಅಂಬಟ, ಉಮೇಶ್ ಗುತ್ತಿನಪಾಲು, ಗಣೇಶ್ ಗೌಡ ಪಜಿಮಣ್ಣು, ಧನಂಜಯ ಕುಲಾಲ್ ಮುಂಡೂರು, ಗೌರವ ಸಲಹೆಗಾರರಾದ ಭಾಸ್ಕರ್ ಆಚಾರ್ ಹಿಂದಾರ್, ಮುರಳೀಧರ ಭಟ್, ಬಂಗಾರಡ್ಕ ವೆಂಕಟೇಶ್ ಅಯ್ಯಂಗಾರ್ ಹಿಂದರ್, ಪ್ರಸನ್ನ ಭಟ್ ಪಂಚವಟಿ, ಸುಧೀರ್ ಶೆಟ್ಟಿ, ನೇಸರ ಕಂಪ, ಬಾಲಕೃಷ್ಣ ಕಣ್ಣಾರಾಯ ಬನಾರಿ, ಹೆಗ್ಗಪ್ಪ ರೈ, ಪೋನೋಣಿ ವಿಠಲ ಭಟ್ ನೀರೋಡಿ, ಶ್ರೀರಂಗ ಶಾಸ್ತ್ರಿ ಮಣಿಲ, ಶ್ರೀಕಾಂತ್ ಆಚಾರ್ ಹಿಂದಾರ್, ಅಶೋಕ್ ಕುಮಾರ್ ಪುತ್ತಿಲ, ರಘುನಾಥ ಶೆಟ್ಟಿ ಪೋನೋಣಿ, ಜಯಪ್ರಕಾಶ್ ರೈ ಚೆಲ್ಯಡ್ಕ, ಶಿವರಾಮ ಅಡಪ ಪೊನೋಣಿ, ಗುಲಾಬಿ ಎನ್ ಶೆಟ್ಟಿ ಕಂಪ,ಸತೀಶ್ ಶೆಟ್ಟಿ ಪೊನೋಣಿ, ಎಂ.ಡಿ ಬಾಲಕೃಷ್ಣ ಪನಿಮಣ್ಣು, ಉದಯ್ ಕುಮಾರ್ ಪನಿಮಣ್ಣು, ಬಾಲಕೃಷ್ಣ ಶೆಟ್ಟಿ ಪಟ್ಟೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ, ಸುಬ್ರಹ್ಮಣ್ಯ ರಾವ್, ಬಾಲಕೃಷ್ಣ ಶೆಟ್ಟಿ ಪಂಜಳ, ದುಗ್ಗಪ್ಪ ಅಜಿಲ, ಭವಾನಿ ಪಜಿಮಣ್ಣು, ರಜನಿ ಕಡ್ಯ, ಪವಿತ್ರ ವಾಣಿ ಮೋಹನ್ ರಾವ್ ಪಜಿಮಣ್ಣು, ಪ್ರಧಾನ ಅರ್ಚಕ ನಾಗೇಶ್ ಕುದ್ರೆತಾಯ, ಪ್ರಬಂಧಕ ಪ್ರಸಾದ್ ಬೈಪಡಿತ್ತಾಯ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ದೇವರ ಜಾತ್ರೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.