ಮೂಡುಬಿದಿರೆ: ಇಂದಿನ ಸಮಾಜ ಅಭಿವೃದ್ಧಿಯತ್ತಾ ಸಾಗುತ್ತಿದೆ, ನಿಜ. ಆದರೆ ಮೂಲಭೂತವಾಗಿ ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ, ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಾದ ಹಾಗೂ ಅಶಕ್ತರಾದ ನಡುವಿನ ಕಂದಕ
ಮಾತ್ರ ಹೆಚ್ಚುತ್ತಲೆ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಸಮಾಜಮುಖಿ ಉಚಿತ ಸೇವೆಗಳು ಸ್ತುತ್ಯರ್ಹ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಯುವವಾಹಿನಿ(ರಿ.) ಮೂಡುಬಿದಿರೆ ಘಟಕ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜರುಗಿದ ಎರಡನೇ ‘ಉಚಿತ ನೇತ್ರ ತಪಾಸಣಾ ಶಿಬಿರ’ ಉದ್ಘಾಟನಾ
ಕಾರ್ಯಕ್ರಮದಲ್ಲಿ ಮತನಾಡಿದರು.
ಸಮಾಜದ ಪರಿಕಲ್ಪನೆಯಲ್ಲಿ ಜರಗುವ ಪ್ರತಿ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇರಲು ಸಹಕಾರಿ. ಆಳ್ವಾಸ್ ಶಿಕ್ಷಣ
ಪ್ರತಿಷ್ಠಾನದ ಪ್ರತಿ ಕಾರ್ಯಕ್ರಮಗಳು ಸದಾ ಇಂತಹ ಯೋಚನೆಗೆ ಪೂರಕವಾಗಿ ನಡೆಯುತ್ತವೆ. ಇಂದು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಎರಡನೇ ಉಚಿತ ನೇತ್ರಾ ತಪಾಸಣಾ ಶಿಬಿರ ಯಶಸ್ವಿಗಾಗಿ ಜರುಗಲಿ. ಮೊದಲ
ಶಿಬಿರದಲ್ಲಿ 125 ಜನರು ಪಾಲ್ಗೊಂಡು, 38 ಜನರಿಗೆ ಉಚಿತ ಕನ್ನಡಕ, 7 ಜನರಿಗೆ ಶಸ್ತ್ರ ಚಿಕಿತ್ಸೆಯ ಸೇವೆಯನ್ನು ನೀಡಲಾಗಿದೆ. ಇಂದು ಇಂತಹ ಮನಸ್ಥಿತಿ ಹಾಗು ಧೋರಣೆಯನ್ನು ಹೊಂದಿರುವ ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ಪ್ರಸಾದ್ ನೇತ್ರಾಲಯ ನಮ್ಮೊಡನೆ ಕೈಜೋಡಿಸಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ವಿವಿಧ ಶಿಬಿರಗಳನ್ನು ಹಮ್ಮಿಕೊಳ್ಳಲು ನಮ್ಮ ಶಿಕ್ಷಣ ಪ್ರತಿಷ್ಠಾನ ಸದಾ ಸಿದ್ದ ಎಂದರು.
ಜಗತ್ತಿನ ಸೌಂದರ್ಯ ಸವಿಯಲು ಕಣ್ಣು ಅತೀ ಮುಖ್ಯ. ಮಾನವನ ದೇಹದಲ್ಲಿ ಮೆದುಳಿನ ನಂತರ ಕಣ್ಣು ಅತೀ ಸೂಕ್ಷ್ಮ ಅಂಗ. ಕಣ್ಣಿನ ಆರೈಕೆಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಕಣ್ಣಿನ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ಮುಂಜಾಗೃತ ಕ್ರಮಗಳು ಅತೀ ಮುಖ್ಯ. ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದರು.
ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ, ನೇತ್ರದಾನ ಮಾಡಲಿಚ್ಚಿಸುವವರಿಗೆ ಅರ್ಜಿ ನೋಂದವಣೆಗೆ ಅವಕಾಶ, ತಪಾಸಣೆ ದಿನವೇ ಕನ್ನಡಕ ನೋಂದಣಿ ಮಾಡುವವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮುಂತಾದ ಸೌಲಭ್ಯಗಳನ್ನು ನೀಡಲಾಯಿತು.ಈ ಶಿಬಿರದಲ್ಲಿ 179 ಸಾರ್ವಜನಿಕರು ಪಾಲ್ಗೊಂಡರು. ಇವರಲ್ಲಿ 93 ಜನರಿಗೆ ಕನ್ನಡಕದ ವ್ಯವಸ್ಥೆಯನ್ನು ಮಾಡಲಾಯಿತು. 33 ಜನರಿಗೆ ಕಣ್ಣಿನ ಪೆÇರೆ ಸರ್ಜರಿಗೆ ನೋಂದಯಿಸಲಾಗಿದೆ. 5 ಜನರು ನೇತ್ರದಾನ ಮಾಡಲು ನೋಂದಾಯಿಸಿಕೊಂಡರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ ಪೂಜಾರಿ ಉದ್ಘಾಟಿಸಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ ಕೋಟ್ಯಾನ್ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ಹನಾ ಶೆಟ್ಟಿ, ಪ್ರಸಾದ್ ನೇತ್ರಾಲಯದ ಡಾ ಶೀತಲ್, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ ಸಜಿತ್ ಎಂ, ಯುವವಾಹಿನಿಯ ಆರೋಗ್ಯ ನಿರ್ದೇಶಕಿ ಅನಿತಾ ಮುಂಡ್ರೊಟ್ಟು ಇದ್ದರು. ಡಾ ನಂದಿನಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೋಧಕ ಸಿಬ್ಬಂಧಿಗಳು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, ಕಿರಿಯ ವೈದ್ಯರುಗಳು ಪಾಲ್ಗೊಂಡರು.