ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ ಘಟಕದ ದ್ವಿತೀಯ ವಾರ್ಷಿಕ ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ ಸಂಭ್ರಮವು ಮಾ.24 ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅಪರಾಹ್ನ 2ರಿಂದ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ. ಆರ್. ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಸುವರ್ಣ ಕರುನಾಡ ಸನಾತನ ಸಂಸ್ಕೃತಿಯ ಮೇರು ಕಲಾಪ್ರಕಾರಗಳಾದ ಜಾನಪದ ಸಿರಿಸಿಂಚನ, ಗಾಯನ,ನರ್ತನ, ಚಿಂತನ – ಮಂಥನ, ಸಮಗ್ರ ಸಂಗಮ ಕಾರ್ಯಕ್ರಮಗಳ ‘ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ’ ಸಂಭ್ರಮವು ನಡೆಯಲಿದ್ದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ 6 ರಿಂದ ಸಂಸ್ಥೆಯ ಪ್ರಶಸ್ತಿ ಪ್ರಧಾನ, ಸಮಾರೋಪ ಸಮಾರಂಭವು ಮಹಾರಾಷ್ಟ ಘಟಕ ಅಧ್ಯಕ್ಷ ಡಾ.ಆರ್. ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಕಾರ್ಯಾಧ್ಯಕ್ಷ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ ಬೋರಲಿಂಗಯ್ಯ, ಗೌರವ ಅತಿಥಿಯಾಗಿ ಹಿರಿಯ ಸಾಹಿತಿ, ಕಾದಂಬರಿಗಾರರಾದ ಮಿತ್ರಾ ವೆಂಕಟ್ರಾಜ್ ಭಾಗವಹಿಸಲಿದ್ದಾರೆ. ಸೈಂಟ್ ಆಗ್ನೇಸ್ ಕಾಲೇಜ್ ಮಂಗಳೂರು ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ನಾಟಕಕಾರ, ಜಾನಪದ ರಂಗ ನಿರ್ದೇಶಕ ಕರುಣಾಕರ ಕೆ. ಕಾಪು ಅವರಿಗೆ ‘ಜಾನಪದ ವಿಭೂಷಣ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. ಅಲ್ಲದೇ ಆಶಕ್ತ ಕಲಾವಿದರಿಗೆ ಸಹಾಯಹಸ್ತ ಬಹುಮಾನ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಸಂಭ್ರಮದಲ್ಲಿ ಮಹಾರಾಷ್ಟ್ರದ ಹೆಸರಾಂತ ತಂಡಗಳಿಂದ ಜಾನಪದ ಸಮೂಹ ನೃತ್ಯ ಸ್ಪರ್ಧೆ, ಕರ್ನಾಟಕ ಜಾನಪದ ಪರಿಷತ್ ಮಹಾರಾಷ್ಟ ಘಟಕದ ಸಮಿತಿಯ ಸದಸ್ಯ ಬಳಗದಿಂದ ಜಾನಪದ ಸಮೂಹ ಗಾಯನ ಸಿಂಚನ, ಕಿರು ನಾಟಕ, ತಾಳಮದ್ದಳೆ, ಅಂಕ ಆಯನ, ಸಿರಿ ಸಿಂಚನಗಳ ಜಾನಪದ ಸಿಂಚನ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ಆಮಂತ್ರಿತ ತಂಡದಿಂದ ವಿವಿಧ ಸಂಗೀತ – ನೃತ್ಯ ವಿನೋದಾವಳಿಗಳು ನಡೆಯಲಿವೆ. ಸಂಸ್ಥೆಯ ಉಪಾಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಪಕ್ಕಳ, ಗೌರವ ಕೋಶಾಧಿಕಾರಿ ಗಣೇಶ್ ಜಿ. ನಾಯ್ಕ್, ಜತೆ ಕಾರ್ಯದರ್ಶಿ ಪದ್ಮನಾಭ ಸಸಿಹಿತ್ಲು, ಜತೆ ಕೋಶಾಧಿಕಾರಿಯಾಗಿ ಕುಸುಮಾ ಸಿ.ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನಿತಾ ಯು. ಶೆಟ್ಟಿ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಸೇವಾ ನಿರತರಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾದ ಎನ್. ಪೃಥ್ವಿರಾಜ್ ಮುಂಡ್ಕೂರು, ಪಿ. ಧನಂಜಯ ಶೆಟ್ಟಿ ಕರ್ನೂರು ಮೋಹನ್ ರೈ, ನಾರಾಯಣ ಶೆಟ್ಟಿ ನಂದಳಿಕೆ, ನವೀನ್ ಶೆಟ್ಟಿ ಇನ್ನಬಾಳಿಕೆ, ಲ. ಕೃಷ್ಣಯ್ಯ ಹೆಗ್ಡೆ, ಬಾಲಕೃಷ್ಣ ಡಿ. ಶೆಟ್ಟಿ, ಲ. ಮುರಳೀಧರ ಹೆಗ್ಡೆ, ಕಮಲಾಕ್ಷ ಜಿ. ಸರಾಫ್, ನ್ಯಾಯವಾದಿ ಆರ್. ಎಂ. ಭಂಡಾರಿ, ನ್ಯಾಯವಾದಿ ವಸಂತಿ ಕುಂದರ್, ಸಿಎ ಸುದೇಶ್ ಶೆಟ್ಟಿ, ಸುಶೀಲಾ ಎಸ್. ದೇವಾಡಿಗ, ವಿನಯಾ ಪೂಜಾರಿ, ಲಲಿತಾ ಪ್ರಭು ಅಂಗಡಿ, ಸರೋಜಿನಿ ಸಾಲ್ಯಾನ್, ಶಿವರಾಮ ಎನ್. ಶೆಟ್ಟಿ ಸಹಕರಿಸುತ್ತಿದ್ದಾರೆ.
ತುಳು-ಕನ್ನಡಿಗರು, ಕಲಾಭಿಮಾನಿಗಳು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಪಕ್ಕಳ, ಮಾಧ್ಯಮ ಸಂಯೋಜಕ ಎನ್. ಪೃಥ್ವಿರಾಜ್ ಮುಂಡ್ಕೂರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.