Author: admin
ಸಾಮೆತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರವು ಫೆಬ್ರವರಿ 28 ರಂದು ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ, ಜೆ.ಸಿ.ಐ ಪುತ್ತೂರು, ನಮ್ಮ ಶಾಲೆ ಸ.ಹಿ.ಪ್ರಾ. ಶಾಲೆ ಸಾಮೆತ್ತಡ್ಕ ಇದರ ಸಹಭಾಗಿತ್ವದಲ್ಲಿ ಕಾರ್ಯಾಗಾರ ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಸಿಐ ಅಧ್ಯಕ್ಷ ಮೋಹನ್ ಕೆ. ಶುಭ ಹಾರೈಸಿದರು. ಜೆಸಿಐ ತರಬೇತಿ ವಿಭಾಗದ ಉಪಾಧ್ಯಕ್ಷರು ಹಾಗೂ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಶಾಲಾಭಿವೃದ್ಧಿ ಸಮಿತಿಯ ಜವಾಬ್ದಾರಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹಾಗೂ ಪೋಷಕರು ಪ್ರಾರ್ಥಮಿಕ ಹಂತದಲ್ಲಿ ತಮ್ಮ ಮಕ್ಕಳ ಬಗ್ಗೆ ಗಮನ ವಹಿಸಬೇಕು ಎಂಬುದರ ಬಗ್ಗೆ ತಿಳಿಸಿದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ದಿನೇಶ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪವಿತ್ರ,…
ತುಳುನಾಡ ಫೌಂಡೇಶನ್ ಪುಣೆ ವತಿಯಿಂದ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಮಾರ್ಚ್ 3ರಂದು ರವಿವಾರ ಕ್ರಾಸ್ ಬಾರ್ ಮಲ್ಟಿ ಸ್ಪೋರ್ಟ್ಸ್ ಮೈದಾನ, ಸಿಂಹಘಡ್ ರೋಡ್, ಪುಣೆ ಇಲ್ಲಿ ಬೆಳಗ್ಗೆ ಗಂಟೆ 7 ರಿಂದ ಸಂಘದ ಅಧ್ಯಕ್ಷ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಲಿದ್ದು ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಗುವುದು. ತುಳು ಕನ್ನಡಿಗರು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಉಪಾಧ್ಯಕ್ಷರಾಗಿ, ಅಡ್ಯಾರ್ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಪ್ರಸ್ತುತ ಅಡ್ಯಾರ್ ಅರ್ಕುಳ, ನೀರುಮಾರ್ಗ ಬೊಂಡಂತಿಲ, ಮಲ್ಲೂರು ಉಳಾಯಿಬೆಟ್ಟು ಗ್ರಾಮಗಳನ್ನು ಒಳಗೊಂಡ ನೀರುಮಾರ್ಗ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು ಆಯ್ಕೆಯಾಗಿದ್ದಾರೆ. ಬಿಜೆಪಿ ಮಂಗಳೂರು ಉತ್ತರ ಮಂಡಲದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಸಾಕ್ಷಾತ್ ಶೆಟ್ಟಿ ಕಾವೂರು ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಕ್ಷದ ಉಡುಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ, ಉದ್ಯಮಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಇವರು ಹಲವಾರು ಯಶಸ್ವಿ ವಿದ್ಯಾರ್ಥಿ ಹೋರಾಟಗಳನ್ನು ಸಂಘಟಿಸಿ, ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಅನಂತರ ರಾಜಕೀಯ ಪ್ರವೇಶಿಸಿ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಗೋವಿಗಾಗಿ ಮೇವು ಎನ್ನುವ ಯಶಸ್ವಿ ಅಭಿಯಾನವನ್ನು ಸಂಘಟಿಸಿ, ಗೋ ಶಾಲೆಗಳಿಗೆ ವಿವಿಧ ಸಂಘಟನೆಗಳಿಂದ ಮೇವು ಒದಗಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಕರಾವಳಿ ರೈಲ್ವೇ ಹೋರಾಟ ಸಮಿತಿಯ ಪ್ರಮುಖರಾಗಿ, ಬಿಲ್ಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚಿನ ದಿನದಲ್ಲಿ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಯಾವುದು ಸರಿ ಯಾವುದು ತಪ್ಪು ಎಂಬ ಯೋಚನೆ ಕೂಡ ಮಾಡದೆ ಎಲ್ಲದಕ್ಕೂ ಸಾವೊಂದೇ ಪರಿಹಾರ ಎಂಬ ಮಟ್ಟಿಗೆ ಸಮಾಜ ರೂಪುಗೊಳ್ಳುತ್ತದೆ. ಪರೀಕ್ಷೆ ಕಾಪಿ ಮಾಡಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕಿ ಬೈದರೆ, ಹೊರ ನಿಲ್ಲಿಸಿದರೆ ಅದನ್ನೇ ದೊಡ್ಡ ಅವಮಾನ ಎಂದು ಆತ್ಮಹತ್ಯೆ ನಿರ್ಧಾರ ಮಾಡುತ್ತಿದ್ದಾರೆ. ಆದರೆ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಮನೆಯೆಂಬ ಪಾಠ ಶಾಲೆಯಲ್ಲಿ ನೈತಿಕತೆಯ ಶಿಕ್ಷಣ ದೊರೆಯುತ್ತಿತ್ತು. ಆಗ ಮಕ್ಕಳು ಶಿಕ್ಷಕರ ಬಗ್ಗೆ ದೂರು ಹೇಳಲು ಬಂದರೆ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದರು. ಅಮ್ಮ ಮೊಬೈಲ್ ಮುಟ್ಟಬೇಡ ಎಂದಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗುವುದು, ಪ್ರೀತಿ ಪೇಮದ ವಿಚಾರಕ್ಕೆ ಒಪ್ಪಲಿಲ್ಲವೆಂದು, ಇಷ್ಟದ ವಸ್ತು ಕೊಡಿಸಿಲ್ಲವೆಂದು ಇನ್ನೂ ಅನೇಕ ಕಾರಣಕ್ಕೆ ಮಕ್ಕಳು, ಯುವ ಸಮುದಾಯ ಆತ್ಮಹತ್ಯೆ ಮಾಡಿಕೊಳ್ಳುವುದು ವಿಪರ್ಯಾಸ ಎನ್ನಬಹುದು. ಅಧಿಕೃತ ವರದಿಯ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣ ಕಳೆದ…
ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಇನ್ನಾ ಮುಂಡ್ಕೂರು ಮುಲ್ಲಡ್ಕದ ಎರಡು ಕಣ್ಣುಗಳಂತಿದ್ದು, ಈಗ ಕಜೆ ದೇಗುಲ ಸಂಪೂರ್ಣ ಶಿಲಾಮಯಗೊಂಡು ತನ್ನ ಪಾವಿತ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಧಾರ್ಮಿಕ ವಿದ್ವಾಂಸ ಕಡಂದಲೆ ಸ್ಕಂದ ಪ್ರಸಾದ ಭಟ್ ಹೇಳಿದರು. ಅವರು ಸಚ್ಚೇರಿಪೇಟೆಯಲ್ಲಿ ಕಜೆ ಶ್ರೀ ಮಹಾಮ್ಮಾಯಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದು, ಸಚ್ಚೇರಿಪೇಟೆಯ ಮಹಾಮ್ಮಾಯೀ ಕಟ್ಟೆಯ ನವೀಕರಣದ ರೂವಾರಿ ರವೀಂದ್ರ ಡಿ. ಪೂಂಜ ಹಾಗೂ ಅವರ ಪುತ್ರ ರೂಪಲ್ ಆರ್. ಪೂಂಜಾ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಮುಂಬಯಿಯ ಎಲ್.ವಿ. ಅಮೀನ್, ಕಡಂದಲೆ ಹರಿಶ್ಚಂದ್ರ ಶೆಟ್ಟಿ, ಪ್ರಕಾಶ್ ಸಪಳಿಗ, ಸಮಿತಿಯ ಅಧ್ಯಕ್ಷ ರಾಜಾರಾಮ ಶೆಟ್ಟಿ,…
ಅದೊಂದು ಮುಂಜಾನೆ ಚಳಿಯ ಹೊದಿಕೆಯನ್ನು ಮೆಲ್ಲಗೆ ಸರಿಸಿ ಸೂರ್ಯನ ಹೊಂಗಿರಣಗಳು ಸುತ್ತಲೂ ಆವರಿಸಿದ ಹಸುರ ಹಾಸುಗೆಯನ್ನು ಚುಂಬಿಸುತ್ತಿದ್ದವು. ಹಾಗೇ ವಾತಾವರಣವನ್ನು ಅನುಭವಿಸುತ್ತಾ ನಿಸರ್ಗದ ಮಡಿಲಲ್ಲಿ ಕುಳಿತಿದ್ದಾಗ ಒಂದು ಪುಟ್ಟ ಜೇನುನೊಣ ಹೂವಿನ ಮಕರಂದವನ್ನು ಸವಿಯುತ್ತಾ ಅತ್ತಿಂದಿತ್ತ ಓಡಾಡುತ್ತಿತ್ತು. ಪರೋಕ್ಷವಾಗಿ ವಿಮರ್ಶಿಸಿದರೆ ಜೇನುನೊಣ ಉಪಯೋಗವನ್ನು ಪಡೆಯುವುದರೊಂದಿಗೆ ಹೂವಿನ ಪರಾಗಸ್ಪರ್ಶ ಕ್ರಿಯೆಯ ಮುಖ್ಯ ರೂವಾರಿಯಾಗಿ ಕೆಲಸ ಮಾಡುತ್ತಿದೆ. ಎಲ್ಲಿಯೋ ಇದ್ದ ಜೇನುನೊಣ, ಮತ್ತೆಲ್ಲೋ ಇದ್ದ ಹೂವಿನ ನಡುವೆ ಅದೆಂತಹ ಸಹಜೀವನ, ಅದೇನು ಸಹಕಾರ! ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಕೇವಲ ಮನುಷ್ಯನಿಗೆ ಮಾತ್ರವಲ್ಲ, ನಿಸರ್ಗದ ಪ್ರತೀ ಜೀವಿಗೂ ಅನ್ವಯಿಸುತ್ತದೆ. ಹೂವು-ಜೇನು, ಮನುಷ್ಯ-ಜಾನುವಾರು ಇವೆಲ್ಲದರ ನಡುವೆ ಅದ್ಭುತವಾದ ವಿನಿಮಯ ಪ್ರಕ್ರಿಯೆ ತಿಳಿಯದೆಯೇ ನಡೆದಿರುತ್ತವೆ. ಇಂತಹದೇ ಸಹಜೀವನ ಶಿಲೀಂಧ್ರ ಲೋಕದೊಳಗೂ ನಾವು ಕಾಣಲು ಸಾಧ್ಯ. ಸಹಜೀವನ ಎಂಬುದು ಎರಡು ವಿಭಿನ್ನ ಜಾತಿಗೆ ಸೇರಿದ ಜೀವಿಗಳ ನಡುವಿನ ದೀರ್ಘಕಾಲಿಕ ನಿಕಟವಾದ ಸಂಬಂಧ. ಈ ಜೈವಿಕ ಪ್ರಕ್ರಿಯೆಯಲ್ಲಿ ಎರಡು ಜೀವಿಗಳು ಪರಸ್ಪರ ಪ್ರಯೋಜನಗಳನ್ನು ಪಡೆಯುತ್ತವೆ. ಉದಾಹರಣೆಯೊಂದಿಗೆ ಹೇಳುವುದಾದರೆ…
ಅರಿಯದೆ ಮಾಡಿದ ತಪ್ಪಿಗೂ, ಅರಿತು ಮಾಡಿದ ತಪ್ಪಿಗೂ ಪಶ್ಚಾತ್ತಾಪವನ್ನು ಅನುಭವಿಸಲೇಬೇಕು. ಆದರೆ ಮಾಡದ ತಪ್ಪಿಗೆ ಅನುಭವಿಸುವ ಪಶ್ಚಾತ್ತಾಪ ನಿಜಕ್ಕೂ ಕಷ್ಟ. ಅದು ಕಠಿನ ದಿನಗಳನ್ನು ತಂದೊಡ್ಡುತ್ತದೆ, ಅದೇ ಚಿಂತೆಯಲ್ಲಿ ಕೊರಗುವಂತೆ ಮಾಡಿಬಿಡುತ್ತದೆ. ಇಲ್ಲಿ ಯಾರಾದರೂ ನಿನ್ನ ತಪ್ಪು ಇಂತಹದ್ದು ಎಂದು ಹೇಳಿದರೆ ಸಹಿಸಿಕೊಳ್ಳಬಹುದು. ಆದರೆ ಕೇವಲ ನಮ್ಮಿಂದ ದೂರವಾಗುವ ಪ್ರಯತ್ನದಲ್ಲಿ, ನಮ್ಮ ಬಳಿ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ನಮ್ಮನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವುದು ನಿಜಕ್ಕೂ ಅನ್ಯಾಯ. ಇದಕ್ಕಿಂತ ನಮ್ಮನ್ನು ನಿರ್ಲಕ್ಷಿಸಿ, ನಮ್ಮಷ್ಟಕ್ಕೇ ಬಿಟ್ಟುಬಿಡಬಹುದಲ್ಲವೇ. ಆದರೆ ಸಿಟ್ಟು, ಅಸಹಾಯಕತೆಯ ಭಾವ ಮೂಡಿಸುವ ಈ ಸನ್ನಿವೇಶದಲ್ಲಿ ಮೂಗನಂತೆ ಮೌನವಾಗಿರುವುದೇ ಲೇಸು. ಅವರಿಗೆ ಕಾಲವೇ ಉತ್ತರ ನೀಡುತ್ತದೆ. ಅವರೂ ಪಶ್ಚಾತಾಪ ಪಡುವ ಸಮಯ ಬಂದೇ ಬರುತ್ತದೆ. ಬೇಡವೆಂದು ದೂರ ಹೋದ, ಅವರಿಗೆ ಬೇಡದ ಸಂಬಂಧ ನಮಗೆ ಏಕೆ? ಇದರ ಮಹತ್ವ ಅರಿತು ಮರಳಿ ನಮ್ಮತ್ತ ಬಳಿಕ ಬಂದರೂ ಕಾಲ ಮೀರಿ ಹೋಗಿರುತ್ತದೆ. ಒಮ್ಮೆ ಒಡೆದ ಮನಸ್ಸು, ಒಡೆದ ಗಾಜು, ಒಡೆದ ಕನಸುಗಳನ್ನು ಮತ್ತೊಮ್ಮೆ ಜೋಡಿಸುವ ಪ್ರಯತ್ನಕ್ಕೆ ಹೋಗಬಾರದು.…
ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಹಾಗೂ ಉಡುಪಿ ಜಿಲ್ಲಾ ಆಟೋ ಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಶಾಲಾ ಬಸ್ ಚಾಲಕರಿಗೆ, ನಿರ್ವಾಹಕರಿಗೆ ರಸ್ತೆ ಸುರಕ್ಷತೆ-ರಕ್ಷಣೆಯ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಚಾಲಕರು ಕಾರ್ಯ ನಿರ್ವಹಿಸುವಾಗ ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆಯನ್ನು ತಿಳಿಸಿ, ಎಲ್ಲಾ ಚಾಲಕರಿಗೂ, ನಿರ್ವಾಹಕರಿಗೂ ಸಂಚಾರಿ ನಿಯಮಗಳ ಅರಿವಿರಬೇಕೆಂದರು. ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‍ನ ಕಾರ್ಯದರ್ಶಿ ಕಾಶೀನಾಥ್ ನಾಯಕ್, ಅರವಿಂದ ಮೋಟಾರ್ಸ್ ಪ್ರೈ.ಲಿ.ನ ಮ್ಯಾನೇಜರ್ಸ್ ಮೋಹನ್ ಕೋಡಿಕಲ್, ರಾಜಶೇಖರ್, ರಾಘವೇಂದ್ರ ಪಿ.ಎ. ಆಗಮಿಸಿದ್ದರು. ಅವರು ಸಂಚಾರಿ ನಿಯಮಗಳು, ಸುರಕ್ಷಿತ ವಾಹನ ಚಾಲನೆ, ವಾಹನಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಉತ್ತಮ ಇಂಧನಗಳ ಬಳಕೆ, ವಾಹನಗಳ ನಿಯಂತ್ರಣ, ಬಿ ಎಸ್ 6 ವಾಹನಗಳ ಕುರಿತು…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ವಾರಪೂರ್ತಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಭಾಗವಾಗಿ ಚರ್ಚೆ, ಛದ್ಮವೇಷ ಹಾಗೂ ಕವನ ರಚನೆ ಸ್ಪರ್ಧೆಗಳು ಆಳ್ವಾಸ್ ಕಾಲೇಜಿನಲ್ಲಿ ನಡೆಯಿತು. ಪದವಿ ಪೂರ್ವ ವರೆಗೆ ಹಾಗೂ ಪದವಿ ಮತ್ತು ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಚರ್ಚಾ ಸ್ಪರ್ಧೆಯಲ್ಲಿ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಶೆಟ್ಟಿ ಪ್ರಥಮ, ಆಳ್ವಾಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ಶಶಾಂಕ್ ದ್ವಿತೀಯ ಹಾಗೂ ಶ್ಯಾಮ್ ಪ್ರಸಾದ್ ತೃತೀಯ ಬಹುಮಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ಸೌಂದರ್ಯ ಹಾಗೂ ಕಾಸ್ಮೆಟಿಕ್ಸ್ ಕ್ಷೇತ್ರ ಮಹಿಳೆಯರಿಗೆ ವರದಾನವೇ?, ವಿವಾಹಿತ ಮಹಿಳೆಯರಿಗೆ ವೃತ್ತಿ ಹಾಗೂ ಸಾಂಸಾರಿಕ ಜವಾಬ್ದಾರಿಗಳು, ಚಲನಚಿತ್ರಗಳಲ್ಲಿ ಬಿಂಬಿಸುವ ಮಹಿಳಾ ಚಿತ್ರಣಗಳು ನೈಜತೆ ಸಾರುತ್ತವೆಯೇ? ಹಾಗೂ ಸರ್ಕಾರದ ಮೀಸಲಾತಿ ಹಾಗೂ ಮಹಿಳಾ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆಯೇ? ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆದವು. ಭಾರತೀಯ ಐತಿಹಾಸಿಕ…















