ವಿದ್ಯಾಗಿರಿ: ‘ಉದ್ಯೋಗದಲ್ಲಿ ಯಶಸ್ವಿಯಾಗಲು ಕೇವಲ ಕೌಶಲ ಮತ್ತು ತಾಂತ್ರಿಕತೆ ಮಾತ್ರವಲ್ಲ, ಮೌಲ್ಯ ಅತಿ ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಡೆಲಾಯಿಟ್ ಕಂಪೆನಿಯಲ್ಲಿ ಅತ್ಯುತ್ತಮ ವೇತನದ ಉದ್ಯೋಗಕ್ಕೆ ಆಯ್ಕೆಯಾದ ವಿಭಾಗದ ವಿದ್ಯಾರ್ಥಿನಿ ಸುಚಿತಾ ಎಂ. ಅವರಿಗೆ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಮಂಗಳವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಪದವಿಪೂರ್ವ ಶಿಕ್ಷಣದವರೆಗೆ ತೀವ್ರ ಅಸ್ಥೆ ವಹಿಸುತ್ತಾರೆ. ಆದರೆ, ವಿದ್ಯಾರ್ಥಿಗಳ ಪದವಿ ಹಾಗೂ ಉನ್ನತ ಶಿಕ್ಷಣದ ಬಗ್ಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದರು. ನಾವು ಶಿಕ್ಷಣ ಪಡೆಯುವುದು ಯಾಕೆ? ಎಂಬ ಸ್ಪಷ್ಟತೆ ಇದ್ದರೆ, ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ. ಕೇವಲ ಯಶಸ್ಸು ಕಾಣುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಏನನ್ನು ಕೊಡುಗೆ ನೀಡುತ್ತೇವೆ ಎಂಬುದು ಕೂಡ ಮುಖ್ಯ ಎಂದರು .
ಉದ್ಯೋಗ ಮಾಡಲು ಅರ್ಹತೆ ಇದೆ ಎಂಬುದನ್ನು ಎದುರಿನ ವ್ಯಕ್ತಿಗಳಿಗೆ ಸಾಬೀತುಪಡಿಸುವುದಕ್ಕಿಂತ ತನ್ನೊಳಗೆ ಆತ್ಮವಿಶ್ವಾಸ ವೃದ್ಧಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಯಶಸ್ಸು ಎಂಬುದು ನಿರಂತರ ಶ್ರಮದ ಫಲ. ಯಶಸ್ಸು ಅದೃಷ್ಟದಿಂದ ಒಲಿಯುವಂತದ್ದು ಅಲ್ಲ. ಕಠಿಣ ಪರಿಶ್ರಮದಿಂದ ಎಂದರು.
ನಾವು ಯಾವುದಕ್ಕೆ ಅರ್ಹರಾಗಿರುತ್ತೇವೆಯೋ ಅದಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ ತ್ಯಾಗವಿಲ್ಲದೆ ಯಾವುದೇ ಯಶಸ್ಸು ಸಾಧ್ಯವಿಲ್ಲ.
ಇಂದಿನ ಬದುಕನ್ನು ನಾಳೆಗಾಗಿ ಮುಡಿಪಾಗಿ ಇಟ್ಟಾಗ, ಮುಂದಿನ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು. ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ, ವಿದ್ಯಾರ್ಥಿಯ ಪೋಷಕರಾದ ಮಾರುತಿ ಭಟ್ ಹಾಗೂ ಪ್ರತಿಭಾ ಭಟ್ ಹಾಗೂ ಇತರ ವಿದ್ಯಾರ್ಥಿಗಳ ಪೆÇೀಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀನಿಧಿ ನಾಯಕ್ ಸ್ವಾಗತಿಸಿ, ಹಿಬಾ ಫಾತಿಮಾ ನಿರೂಪಿಸಿ, ಸುದೀಕ್ಷಾ ಹೆಗ್ಡೆ ವಂದಿಸಿದರು.